ಏರ್‌ಟೆಲ್‌ನಲ್ಲಿ ಉಚಿತವಾಗಿ 60 ಜಿಬಿ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

By Shwetha
|

ಭಾರತಿ ಏರ್‌ಟೆಲ್ ಟೆಲಿಕಾಮ್ ಕ್ಷೇತ್ರದಲ್ಲಿ ಅತಿಮುಖ್ಯ ಆಟಗಾರರು ಎಂಬುದಾಗಿ ತನ್ನನ್ನು ಬಣ್ಣಿಸಿಕೊಂಡಿದೆ. ಜಿಯೋ ತನ್ನ ಆಫರ್ ಅನ್ನು ಆಯ್ಕೆಮಾಡಿದ ಹ್ಯಾಂಡ್‌ಸೆಟ್‌ಗಳಲ್ಲಿ ಪ್ರಸ್ತುತಪಡಿಸುತ್ತಿದ್ದರೆ, ಏರ್‌ಟೆಲ್ ಕೂಡ ಇದೇ ಹಾದಿಯಲ್ಲಿ ಬಳಕೆದಾರರು ತಾವು ಬಳಸಿಕೊಳ್ಳುವ ಸ್ಮಾರ್ಟ್‌ಫೋನ್‌ಗಳಲ್ಲೇ ತನ್ನ ಆಫರ್ ಅನ್ನು ಪರಿಚಯಿಸುತ್ತಿದೆ.

ಓದಿರಿ: ರಿಲಾಯನ್ಸ್ ಜಿಯೋ ಆಫರ್ ಕುರಿತು ನೀವು ಅರಿಯದ ಟಾಪ್ ಸತ್ಯಗಳು

ಐಫೋನ್ 6ಎಸ್ ಅನ್ನು ಬಳಸುತ್ತಿರುವ ಬಳಕೆದಾರರು ಸಂಪೂರ್ಣ ಉಚಿತ 4ಜಿ ಡೇಟಾವನ್ನು ತಮ್ಮ ಫೋನ್‌ನಲ್ಲಿ ಬಳಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಆಫರ್ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಓದಿರಿ: ಫೋನ್‌ನಲ್ಲಿ ಜಿಯೋ ಸಿಮ್ ಬಳಸಿದ ಮೇಲೆ ಇತರ ಸಿಮ್ ಬಳಸಲಾಗುವುದಿಲ್ಲವೇ?

ನಿಮ್ಮ ಡಿವೈಸ್ ಆಪಲ್ ಐಫೋನ್ 6ಎಸ್ ಆಗಿರಬೇಕು

ನಿಮ್ಮ ಡಿವೈಸ್ ಆಪಲ್ ಐಫೋನ್ 6ಎಸ್ ಆಗಿರಬೇಕು

ಈ ಹಂತವನ್ನು ಆರಂಭಿಸುವ ಮುನ್ನ ನಿಮ್ಮ ಫೋನ್ ಐಫೋನ್ 6ಎಸ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹಾಗಿದ್ದರೆ ಕೆಳಗಿನ ಹಂತಗಳನ್ನು ಅನುಸರಿಸಿ

ನೀವು ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರು ಆಗಿರಬೇಕು

ನೀವು ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರು ಆಗಿರಬೇಕು

ಈ ಆಫರ್ ಅನ್ನು ಪಡೆದುಕೊಳ್ಳಲು, ನೀವು ಪೋಸ್ಟ್ ಪೇಡ್ ಗ್ರಾಹಕರಾಗಿರಬೇಕು. ನೀವು ಏರ್‌ಟೆಲ್ ಪ್ರಿಪೈಡ್ ಗ್ರಾಹಕರಾಗಿದ್ದಲ್ಲಿ ನಿಮಗೆ ಈ ಆಫರ್ ಅನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಏರ್‌ಟೆಲ್‌ನ ಹೊಸ ಪ್ಲಾನ್ 'ಇನ್‌ಫಿನಿಟಿ ಪ್ಲಾನ್' ಇದು ರೂ 999 ಅಥವಾ ಮೇಲ್ಮಟ್ಟದ ದರದ್ದಾಗಿರಬೇಕು.

ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

ಮೇಲೆ ತಿಳಿಸಿದ ಎರಡೂ ಅನುಕೂಲಗಳನ್ನು ನೀವು ಪಡೆದುಕೊಂಡಿದ್ದೀರಿ ಎಂದಾದಲ್ಲಿ ಈ ಆಫರ್ ಪಡೆದುಕೊಳ್ಳಲು ನೀವು ಅರ್ಹರು. ನಿಮ್ಮ ಐಫೋನ್ 6ಎಸ್‌ನಲ್ಲಿ www.airtellive.com/offers ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಲಿಂಕ್ ಅನ್ನು ಕ್ಲಿಕ್ ಮಾಡುವಾಗ ನೀವು ಏರ್‌ಟೆಲ್ ಇಂಟರ್ನೆಟ್ ಅನ್ನು ಬಳಸಿಕೊಳ್ಳುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ವೈಫೈ ಇಂಟರ್ನೆಟ್ ಅನ್ನು ಕ್ಲಿಕ್ ಮಾಡುವುದು ನಿಮಗೆ ತಪ್ಪನ್ನು ತೋರಿಸುತ್ತದೆ.

ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ

ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ

ವೆಬ್ ಪುಟವನ್ನು ತೆರೆದ ನಂತರ, ಇಲ್ಲಿ ತೋರಿಸಿರುವ ಬಾಕ್ಸ್‌ನಲ್ಲಿ ನಿಮ್ಮ ಏರ್‌ಟೆಲ್ ಪೋಸ್ಟ್‌ ಪೇಡ್ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಬ್‌ಮಿಟ್ ಬಟನ್ ಒತ್ತಿರಿ. ಈ ಆಫರ್‌ಗೆ ನೀವು ಅರ್ಹರು ಎಂದಾದಲ್ಲಿ, ನಿಮ್ಮ ಖಾತೆಗೆ 48 ಗಂಟೆಗಳ ಒಳಗಾಗಿ ಉಚಿತ ಡೇಟಾ ಕ್ರೆಡಿಟ್ ಆಗುತ್ತದೆ.

ತಿಂಗಳಿಗೆ 5ಜಿಬಿ ನೀವು ಪಡೆದುಕೊಳ್ಳುತ್ತೀರಿ

ತಿಂಗಳಿಗೆ 5ಜಿಬಿ ನೀವು ಪಡೆದುಕೊಳ್ಳುತ್ತೀರಿ

ಒಮ್ಮೆಗೆ ನಿಮಗೆ 60 ಜಿಬಿ 4ಜಿ ಡೇಟಾವನ್ನು ಪಡೆದುಕೊಳ್ಳಲಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಿ. ಇದಕ್ಕೆ ಬದಲಾಗಿ ಕಂಪೆನಿಯು ತಿಂಗಳಿಗೆ 5ಜಿಬಿ 4ಜಿ ಡೇಟಾವನ್ನು ಹಸ್ತಚಾಲಿತವಾಗಿ ಘೋಷಿಸುತ್ತದೆ. ಈ ಪ್ರಕ್ರಿಯೆ 12 ತಿಂಗಳುಗಳ ಕಾಲ ನಡೆಯುತ್ತದೆ.

Best Mobiles in India

English summary
Check out the full procedure to know how to avail that offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X