Subscribe to Gizbot

ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಅನ್‌ಲಿಮಿಟೆಡ್ ರಿಲಾಯನ್ಸ್ ಜಿಯೋ ಬಾರ್‌ಕೋಡ್‌ ಜೆನೆರೇಟ್ ಹೇಗೆ?

Written By:

ರಿಲಾಯನ್ಸ್ ಜಿಯೋ ಬಿಗ್ ಟೌನ್‌ಗಳಿಂದ ಸಣ್ಣ ಹಳ್ಳಿಗಳಲ್ಲೂ ಮಾತನಾಡಲ್ಪಡುತ್ತಿರುವ ಟೆಲಿಕಾಂ ಕ್ಷೇತ್ರದ ಹೊಸ ಅಲೆಯ ಹೊಸ ಬ್ರ್ಯಾಂಡ್‌ ಆಗಿದೆ. ಕಾರಣ ಜಿಯೋ ನೀಡುತ್ತಿರುವ ಅನ್‌ಲಿಮಿಟೆಡ್ ಕರೆಗಳು, ಡಾಟಾ, ಮೆಸೇಜಿಂಗ್‌ ಮತ್ತು ಆಪ್‌ ಸೇವೆಗಳು.

ರಿಲಾಯನ್ಸ್ ಜಿಯೋ 4G ಸಿಮ್ ಕಾರ್ಡ್‌ ಅನ್ನು ಜಿಯೋ ಬಾರ್‌ಕೋಡ್‌ನೊಂದಿಗೆ ನೀಡುತ್ತಿದೆ. ಅಂದಹಾಗೆ 4G ಸ್ಮಾರ್ಟ್‌ಫೋನ್‌ ಇರುವ ಯಾರು ಬೇಕಾದರೂ ಬಾರ್‌ಕೋಡ್‌ ಜೆನೆರೇಟ್‌ ಮಾಡಬಹುದು. ಆದರೆ ಒಂದು ಫೋನ್‌ನಲ್ಲಿ ಒಂದೇ ಒಂದು ಬಾರ್‌ಕೋಡ್‌ ಅನ್ನು ಮಾತ್ರ ಜೆನೆರೇಟ್‌ ಮಾಡಲು ಅವಕಾಶವಿದೆ.

ರಿಲಾಯನ್ಸ್ ಜಿಯೋ 4G ಸಿಮ್: 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು

ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಾರ್‌ಕೋಡ್‌ ಅನ್ನು ಜೆನೆರೇಟ್ ಮಾಡಬಹುದೇ? ಎಂದು ಪ್ರಶ್ನೆ ಕೇಳಿದರೆ ನಮ್ಮಿಂದ ಉತ್ತರ 'YES'. ಅಲ್ಲದೇ ಅನ್‌ಲಿಮಿಟೆಡ್ ಬಾರ್‌ಕೋಡ್‌ಗಳನ್ನು ನಿಮ್ಮ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಜೆನೆರೇಟ್‌ ಮಾಡಬಹುದು. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ. ಮುಂದೆ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1ː ಆಂಡ್ರಾಯ್ಡ್ ವರ್ಚುವಲ್‌ ಮಷಿನ್ ಡೌನ್‌ಲೋಡ್‌ ಮಾಡಿ

ಹಂತ 1ː ಆಂಡ್ರಾಯ್ಡ್ ವರ್ಚುವಲ್‌ ಮಷಿನ್ ಡೌನ್‌ಲೋಡ್‌ ಮಾಡಿ

ಅನ್‌ಲಿಮಿಟೆಡ್ ಬಾರ್‌ಕೋಡ್ ಜೆನೆರೇಟ್‌ ಮಾಡಲು Bluestacks ಅಥವಾ Youwave ಅಥವಾ Nox app player ಎಂಬ ವರ್ಚುವಲ್ ಮಷಿನ್ ಇನ್‌ಸ್ಟಾಲ್ ಮಾಡಬೇಕು. ಆದರೆ ನಾವು Nox app player ಇನ್‌ಸ್ಟಾಲ್ ಮಾಡಲು ಸಲಹೆ ನೀಡುತ್ತೇವೆ. ಕಾರಣ ಇದು ಇತರೆ ಆಪ್‌ಗಳಿಗಿಂತ ಬಳಸಲು ಸುಲಭ. ಈ ಆಪ್‌ ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ಸಿಸ್ಟಮ್‌ ಅನ್ನು ಒಮ್ಮೆ ರೀಬೂಟ್ ಮಾಡಿ.

ಹಂತ 2ː Nox app player'ನಲ್ಲಿ ರೂಟ್‌ ಮೋಡ್‌ ಎನೇಬಲ್‌ ಮಾಡಿ

ಹಂತ 2ː Nox app player'ನಲ್ಲಿ ರೂಟ್‌ ಮೋಡ್‌ ಎನೇಬಲ್‌ ಮಾಡಿ

ಈ ಹಂತದಲ್ಲಿ Nox app player'ನಲ್ಲಿ ರೂಟ್‌ ಮೋಡ್‌ ಅನ್ನು ಎನೇಬಲ್ ಮಾಡಿ. Settings>General> Enable Root Mode.

ಹಂತ 3ː ಮೈಜಿಯೋ ಆಪ್‌ ಡೌನ್‌ಲೋಡ್‌ ಮಾಡಿ

ಹಂತ 3ː ಮೈಜಿಯೋ ಆಪ್‌ ಡೌನ್‌ಲೋಡ್‌ ಮಾಡಿ

ಪ್ರೋಸೆಸ್‌ ಮುಂದುವರೆಸಲು 'ಮೈಜಿಯೋ' ಆಪ್‌ ಅನ್ನು ಗೂಗಲ್‌ನಿಂದ ಡೌನ್‌ಲೋಡ್ ಮಾಡಿ. ಆಪ್‌ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಿ ಅಥವಾ Nox app player ಮೂಲಕ ಓಪನ್‌ ಮಾಡಿ.

ಹಂತ 4ː ಎಲ್ಲಾ ಜಿಯೋ ಆಪ್‌ಗಳನ್ನು ಡೌನ್‌ಲೋಡ್ ಮಾಡಿ

ಹಂತ 4ː ಎಲ್ಲಾ ಜಿಯೋ ಆಪ್‌ಗಳನ್ನು ಡೌನ್‌ಲೋಡ್ ಮಾಡಿ

ಮೈಜಿಯೋ ಆಪ್‌ ಓಪನ್‌ ಮಾಡಿ, ಎಲ್ಲಾ ಜಿಯೋ ಆಪ್‌ಗಳನ್ನು ಡೌನ್‌ಲೋಡ್ ಮಾಡಿ. ಎಲ್ಲಾ ಆಪ್‌ಗಳು ಇನ್‌ಸ್ಟಾಲ್‌ ಆಗುವವರೆಗೆ ಕಾಯಿರಿ ನಂತರ ಪುನಃ ಮೈಜಿಯೋ ಆಪ್‌ ಓಪನ್ ಮಾಡಿ. ಈಗ 'Get Jio SIM' ಎಂಬುದನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ, ಬಾರ್‌ಕೋಡ್ ಜೆನೆರೇಟ್‌ಗಾಗಿ ನಿಮ್ಮ ವಿವರಗಳನ್ನು ವೆರಿಫೈ ಮಾಡಿ.

ಹಂತ 5ː Nox app player ರೀಸೆಟ್‌ ಮಾಡಿ

ಹಂತ 5ː Nox app player ರೀಸೆಟ್‌ ಮಾಡಿ

ಬಾರ್‌ಕೋಡ್ ಜೆನೆರೇಟ್‌ ಮಾಡಿದ ನಂತರ, Nox app player ಅನ್ನು ರೀಸೆಟ್ ಮಾಡಬೇಕು. ಪುನಃ ಬಾರ್‌ಕೋಡ್‌ ಜೆನೆರೇಟ್‌ಗಾಗಿ ಮೇಲಿನ ಹಂತಗಳನ್ನು ಫಾಲೋ ಮಾಡಿ. ಪರ್ಯಾಯವಾಗಿ ನೀವು Nox app player IMEI ಅನ್ನು 4G ಸ್ಮಾರ್ಟ್‌ಫೋನ್‌ಗೆ ಬದಲಿಸಬಹುದು. IMEI ಕೊನೆಯ 6 ಸಂಖ್ಯೆಗಳನ್ನು ಮಾತ್ರ ಪ್ರತಿಸಲ ಬದಲಿಸಿ. ಪ್ರೊಸೆಸ್‌ ಸರಳಗೊಳಿಸಲು ನಾವು ಈ ಕೆಳಗಿನ IMEI ರೆಫರ್‌ ಮಾಡಿದ್ದೇವೆ.
IMEI Number: 860152033******

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 Easy Steps to Generate Unlimited Reliance Jio Barcodes with Your PC, Laptop. To know more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot