Subscribe to Gizbot

ರಿಲಾಯನ್ಸ್ ಜಿಯೋದಲ್ಲಿ 93 ರೂಗೆ 10GB 4G ಡಾಟಾ ಪಡೆಯುವುದು ಹೇಗೆ?

Written By:

ರಿಲಾಯನ್ಸ್ ಜಿಯೋ 4G ವೆಲ್ಕಮ್ ಆಫರ್‌ ಸಹ ಅನ್‌ಲಿಮಿಟೆಡ್ 4G ಡಾಟಾ, ಕರೆಗಳು ಮತ್ತು ಮೆಸೇಜ್‌ಗಳ ಸೇವೆಯನ್ನು ಈ ವರ್ಷದ ಅಂತ್ಯದ ವರೆಗೆ ನೀಡುತ್ತಿದೆ. ರಿಲಾಯನ್ಸ್ ಜಿಯೋ ಜನವರಿ 1, 2017 ರಿಂದ ಭಾರತದಲ್ಲಿ ಇತರೆ ಟೆಲಿಕಾಂಗಳು ನೀಡುವ ಟ್ಯಾರಿಫ್ ಪ್ಲಾನ್‌ಗಿಂತ ಕಡಿಮೆ ದರದಲ್ಲಿ ಸೇವೆ ನೀಡಲಿದೆ.

ಅಂದಹಾಗೆ ಇಂದಿನ ಲೇಖನದಲ್ಲಿ ರಿಲಾಯನ್ಸ್ ಜಿಯೋ ಬಳಕೆದಾರರಿಗೆ ಕೆಲವು ಆಕರ್ಷಕ ಆಫರ್‌ಗಳ ಮಾಹಿತಿಯನ್ನು ನೀಡುತ್ತಿದ್ದೇವೆ. ಆದರೆ ಈ ಆಫರ್ ರಿಲಾಯನ್ಸ್ ಕಂಮ್ಯೂನಿಕೇಷನ್‌ನಿಂದ ರಿಲಾಯನ್ಸ್ ಜಿಯೋ(Jio) 4G ಸೇವೆಗೆ ವರ್ಗಾವಣೆ ಆಗುವವರಿಗೆ ಮಾತ್ರ. ರೂ.93 ಕ್ಕೆ ರಿಲಾಯನ್ಸ್ ಜಿಯೋದಿಂದ 10GB 4G ಡಾಟಾ ಪಡೆಯುವುದು ಹೇಗೆ ಎಂದು ತಿಳಿಯಿರಿ.

ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌ ಆಗುತ್ತದೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರಿಲಾಯನ್ಸ್ ಬಳಕೆದಾರರಿಗೆ ಲಭ್ಯವಿರುವ ಆಫರ್‌

ರಿಲಾಯನ್ಸ್ ಬಳಕೆದಾರರಿಗೆ ಲಭ್ಯವಿರುವ ಆಫರ್‌

ರಿಲಾಯನ್ಸ್ ಬಳಕೆದಾರರಿಗೆ ಈ ವಿಶೇಷ ಆಫರ್‌ ಲಭ್ಯವಿದೆ. RCom CDMA ಸೇವೆ ಹೊಂದಿರುವವರು, ರಿಲಾಯನ್ಸ್ ಜಿಯೋ 4G ಗೆ ವರ್ಗಾವಣೆ ಆಗುವುದರ ಮುಖಾಂತ ಈ ಆಕರ್ಷಕದ ಆಫರ್‌ ಅನ್ನು ಪಡೆಯಬಹುದು.

 ರೂ.93 ಕ್ಕೆ 10GB 4G ಡಾಟಾ ಪಡೆಯಿರಿ

ರೂ.93 ಕ್ಕೆ 10GB 4G ಡಾಟಾ ಪಡೆಯಿರಿ

ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ 10GB 4G ಡಾಟಾವನ್ನು RCom CDMA ಗ್ರಾಹಕರಿಗೆ ನೀಡುತ್ತಿದೆ. ಆದರೆ RCom CDMA ಗ್ರಾಹಕರು ಜಿಯೋ ಸೇವೆಗೆ ವರ್ಗಾವಣೆ ಆಗಬೇಕು. ಈ ಸೇವೆ ರೂ.93 ಕ್ಕೆ ಸಿಗಲಿದ್ದು, 9 ರೂಪಾಯಿಗೆ 1GB 4G ಡಾಟಾ ನಿಖರವಾಗಿ ಸಿಗಲಿದೆ. ಈ ಆಫರ್ ನೆಟ್‌ವರ್ಕ್ ವೃತ್ತಗಳ ಆಧಾರದಲ್ಲಿ ರೂ.97 ಸಹ ಆಗಬಹುದು.

 ಶೇ.90 ರಷ್ಟು RCom CDMA ಗ್ರಾಹಕರು ಈಗಾಗಲೇ 4G ಸೇವೆ ಆಯ್ಕೆ ಮಾಡಿಕೊಂಡಿದ್ದಾರೆ

ಶೇ.90 ರಷ್ಟು RCom CDMA ಗ್ರಾಹಕರು ಈಗಾಗಲೇ 4G ಸೇವೆ ಆಯ್ಕೆ ಮಾಡಿಕೊಂಡಿದ್ದಾರೆ

ಅಂದಹಾಗೆ ಈ ಆಫರ್ ಅನ್ನು ರಿಲಾಯನ್ಸ್ ಜಿಯೋ ಪ್ರಕಟಣೆಗೊಳಿಸಿದೆ. RCom CDMA ಗ್ರಾಹಕರು ಶೇ.90 ರಷ್ಟು ಅಂದರೆ, 8 ದಶಲಕ್ಷ ಸಬ್‌ಸ್ಕ್ರೈಬರ್‌ಗಳು ರಿಲಾಯನ್ಸ್ ಜಿಯೋ 4G ನೆಟ್‌ವರ್ಕ್‌ ಆಯ್ಕೆ ಮಾಡಿಕೊಂಡಿದ್ದಾರೆ.

 ಅತಿ ಅಗ್ಗದ ಬೆಲೆಯಲ್ಲಿ 4G ಡಾಟಾ ಎಂಜಾಯ್‌ ಮಾಡಿ

ಅತಿ ಅಗ್ಗದ ಬೆಲೆಯಲ್ಲಿ 4G ಡಾಟಾ ಎಂಜಾಯ್‌ ಮಾಡಿ

ರಿಲಾಯನ್ಸ್ ಜಿಯೋ ರೂ.93 ರಿಂದ ರೂ. 97 ಕ್ಕೆ 10GB 4G ಆಫರ್‌ ಅತೀ ಅಗ್ಗದ ಬೆಲೆಯ ಸೇವೆ ಆಗಿದೆ. ಈ ಆಫರ್‌ನಿಂದ ಜಿಯೋ ಇತರೆ ಟೆಲಿಕಾಂಗಳನ್ನು ಹಿಂದಿಕ್ಕಿದೆ.

CDMA ಸೇವೆ ಇನ್ನೂ ವಿಸ್ತರಣೆ ಆಗಲಿದೆ

CDMA ಸೇವೆ ಇನ್ನೂ ವಿಸ್ತರಣೆ ಆಗಲಿದೆ

ರಿಲಾಯನ್ಸ್ CDMA ಸೇವೆಯನ್ನು ದೇಶದ ಎಲ್ಲಾ ಭಾಗಗಳಲ್ಲೂ ಆರಂಭಿಸಲು ಯೋಜನೆ ರೂಪಿಸಿದೆ. ಇದರಿಂದ CDMA ಬಳಕೆದಾರರು ರಿಲಾಯನ್ಸ್ ಜಿಯೋ 4G ಸೇವೆ ಬೆನಿಫಿಟ್‌ ಪಡೆಯಲು ವರ್ಗಾವಣೆ ಆಗಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's How to Get 10 GB 4G Data from Reliance Jio at Just Rs. 93. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot