ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇದುವರೆಗೂ ತಿಳಿಯದ ಹಿಡೆನ್‌ ಫೀಚರ್ ಯಾವುವು ಗೊತ್ತೇ?

By Suneel
|

ದಿನದ 24 ಗಂಟೆಗಳಲ್ಲಿ ಮಲಗುವ ಸಮಯ ಹೊರತು ಪಡಿಸಿ, ಉಳಿದ ಎಲ್ಲಾ ಸಮಯದಲ್ಲೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಬಹುಸಂಖ್ಯಾತರು ಬಳಸುತ್ತಾರೆ. ಆದ್ರೆ ಇದುವರೆಗೂ ಸಹ ನಾವು ಇಂದು ತಿಳಿಸುತ್ತಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿನ ಹಿಡೆನ್‌ ಸೆಟ್ಟಿಂಗ್ಸ್‌ಗಳನ್ನು ಯಾರು ಬಳಸಿಲ್ಲ.

ಅತಿಹೆಚ್ಚು ಉಪಯೋಗವಾಗುವ ಆಂಡ್ರಾಯ್ಡ್‌ನಲ್ಲಿನ ಈ ರಹಸ್ಯ ಫೀಚರ್‌ಗಳನ್ನು ಇಂದಿನ ಲೇಖನದಲ್ಲಿ ಓದಿರಿ.

ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ 2 ಹಿಂಭಾಗ ಕ್ಯಾಮೆರಾಗಳುಳ್ಳ ಟಾಪ್ 6 ಸ್ಮಾರ್ಟ್‌ಫೋನ್‌ಗಳು!

ಮ್ಯಾಗ್ನಿಫಿಕೇಷನ್‌ ಗೆಸ್ಚರ್ (ವರ್ಧನೆಯ ಸಂಯೋಜನೆಗಳು)

ಮ್ಯಾಗ್ನಿಫಿಕೇಷನ್‌ ಗೆಸ್ಚರ್ (ವರ್ಧನೆಯ ಸಂಯೋಜನೆಗಳು)

ಮ್ಯಾಗ್ನಿಫಿಕೇಷನ್‌ ಗೆಸ್ಚರ್ ಗೂಗಲ್‌ ಮ್ಯಾಪ್ ಅನ್ನು ಮೂರು ಪಟ್ಟು ಜೂಮ್ ಇನ್‌ ಮತ್ತು ಜೂಮ್‌ ಔಟ್‌ ಮಾಡಿ ನೋಡಿದರು ಗುಣಮಟ್ಟ ಕಡಿಮೆಯಾಗುದಂತೆ ದೃಶ್ಯ ತೋರಿಸುತ್ತದೆ. ಈ ಫೀಚರ್ ಜೂಮ್ ಮಟ್ಟವನ್ನು ಪ್ಯಾನ್‌ ಮಾಡಲು ಅವಕಾಶ ನೀಡುತ್ತದೆ. ಮ್ಯಾಗ್ನಿಫಿಕೇಷನ್‌ ಗೆಸ್ಚರ್ ಫೀಚರ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎನೇಬಲ್ ಮಾಡಲು Settings > Accessibility > Magnification gestures ಕ್ಲಿಕ್‌ಮಾಡಿ ಆನ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೆಕ್ಸ್ಟ್-ಟು-ಸ್ಪೀಚ್‌ ಔಟ್‌ಪುಟ್‌

ಟೆಕ್ಸ್ಟ್-ಟು-ಸ್ಪೀಚ್‌ ಔಟ್‌ಪುಟ್‌

'ಟೆಕ್ಸ್ಟ್-ಟು-ಸ್ಪೀಚ್‌' ಫೀಚರ್‌ ಸಹ ಆಂಡ್ರಾಯ್ಡ್ ಓಎಸ್‌ನ ಆಕ್ಸೆಸಿಬಿಲಿಟಿ ಸೆಟ್ಟಿಂಗ್‌ನಲ್ಲಿ ಹಿಡೆನ್‌ ಆಗಿದೆ. ಅಂದಹಾಗೆ ನಿಮ್ಮ ಆದ್ಯತೆಯ ಭಾಷೆಯನ್ನು ಡೌನ್‌ಲೋಡ್ ಮಾಡಿ, ನಂತರ ನೀವು ಗೂಗಲ್‌ನಲ್ಲಿ ಟೆಕ್ಸ್ಟ್‌ ಟೈಪಿಸುವ ಬದಲು ಗೂಗಲ್‌ಗೆ ಹೇಳಿ ಅಷ್ಟೆ.

ಡಿಸ್‌ಪ್ಲೇ ಬಣ್ಣ ಹೊಂದಾಣಿಕೆ

ಡಿಸ್‌ಪ್ಲೇ ಬಣ್ಣ ಹೊಂದಾಣಿಕೆ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಆಕ್ಸೆಸಿಬಿಲಿಟಿ ಸೆಟ್ಟಿಂಗ್ಸ್‌ನಲ್ಲಿ ಹಿಡೆನ್‌ ಆಗಿರುವ ಇನ್ನೊಂದು ಫೀಚರ್‌ ಎಂದರೆ ಅದು 'ಡಿಸ್‌ಪ್ಲೇ ಬಣ್ಣ ಹೊಂದಾಣಿಕೆ'. ಕೆಲವು ಕಾರಣದಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಡೀಪಾಲ್ಟ್ ಡಿಸ್‌ಪ್ಲೇ ಕಲರ್‌ ಅನ್ನು ಇಷ್ಟಪುಡುವುದಿಲ್ಲ ಎಂದಾದಲ್ಲಿ, ಜಸ್ಟ್ ಓಪನ್‌ Settings > Accessibility settings > colour inversion and colour correction ಇದನ್ನು ಅಡ್‌ಜಸ್ಟ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LED ನೋಟಿಫಿಕೇಶನ್ ಕಸ್ಟಮೈಸ್

LED ನೋಟಿಫಿಕೇಶನ್ ಕಸ್ಟಮೈಸ್

ಅಂದಹಾಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ LED ನೋಟಿಫಿಕೇಶನ್ ಅನ್ನು ಕಸ್ಟಮೈಸ್‌ ಮಾಡಬಹುದು. ಈ ಫೀಚರ್ ಅನ್ನು ಕೆಲವು ಸ್ಮಾರ್ಟ್‌ಫೋನ್‌ಗಳು ಮಾತ್ರ ಆಫರ್‌ ಮಾಡಿವೆ. ಕೆಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಡಿಸ್‌ಪ್ಲೇ ಸೆಟ್ಟಿಂಗ್ಸ್‌ನಲ್ಲಿ ಹಿಡೆನ್‌ ಆಗಿವೆ. ಈ ಫೀಚರ್‌ ಕಸ್ಟಮೈಶೇಷನ್ ಆಪ್ಶನ್‌ನಲ್ಲಿ ಇವೆ. ಈ ಸೆಟ್ಟಿಂಗ್ಸ್‌ ಮೂಲಕ ನಿಮ್ಮ ಅಗತ್ಯಕ್ಕೆ ತಕ್ಕ LED ಕಲರ್‌ ಅನ್ನು ಕಸ್ಟಮೈಸ್ ಮಾಡಬಹುದು.

ಟಾಕ್‌ಬ್ಯಾಕ್‌ ಆಪ್ಶನ್‌

ಟಾಕ್‌ಬ್ಯಾಕ್‌ ಆಪ್ಶನ್‌

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಟಾಕ್‌ಬ್ಯಾಕ್‌ ಒಂದು ಕೂಲೆಸ್ಟ್‌ ಆಪ್ಶನ್‌ ಆಗಿದೆ. ನಿಮ್ಮ ಫೋನ್‌ ಸ್ಕ್ರೀನ್‌ ಸಮಸ್ಯೆ ಆಗಿದ್ದಲ್ಲಿ ಅಥವಾ ಸ್ಕ್ರೀನ್‌ನಲ್ಲಿ ಏನನ್ನು ಬರೆಯಲಾಗಿದೆ ಎಂಬುದನ್ನು ಓದಲು ಸಾಧ್ಯವಾಗದಿದ್ದರೇ, ಈ ಆಪ್ಶನ್ ಅನ್ನು ಎನೇಬಲ್‌ ಮಾಡಿ. ನಂತರ ಈ ಆಪ್ಶನ್‌ ಸ್ಕ್ರೀನ್‌ನಲ್ಲಿನ ಯಾವುದೇ ಬರಹವನ್ನು ಜೋರಾಗಿ ಓದುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Hidden Features in Android You Probably Didn't Even Know Existed.To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X