ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ 2 ಹಿಂಭಾಗ ಕ್ಯಾಮೆರಾಗಳುಳ್ಳ ಟಾಪ್ 6 ಸ್ಮಾರ್ಟ್‌ಫೋನ್‌ಗಳು!

By Suneel
|

ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಭಾಗ ಕ್ಯಾಮೆರಾ ಅಳವಡಿಸಿದಾಗಿನಿಂದ ಮೊಬೈಲ್‌ ಕ್ಷೇತ್ರದಲ್ಲಿ ಹೊಸ ಸಂಚಲನವೇ ಉಂಟಾಗಿತ್ತು. ಸೆಲ್ಫಿ ಎಂಬ ಗೀಳು ಇಂದು ಯಾರನ್ನೂ ಬಿಟ್ಟಿಲ್ಲ. ಒಬಾಮ ಮತ್ತು ಮೋದಿಯವರೂ ಸಹ ಆಗಾಗ ಸೆಲ್ಫಿ ಕ್ಲಿಕ್ಕಿಸುತ್ತಿರುತ್ತಾರೆ. ಈ ಟ್ರೆಂಡ್ ಸ್ವಲ್ಪ ಹಳೆಯದಾಗುತ್ತಿದೆ ಅಲ್ವೇ. ಅದಕ್ಕೆ ಈಗ ಸ್ಮಾರ್ಟ್‌ಫೋನ್ ತಯಾರಕರು ಎರಡು ಹಿಂಭಾಗ ಕ್ಯಾಮೆರಾಗಳನ್ನು ಡಿವೈಸ್‌ಗಳಲ್ಲಿ ಅಭಿವೃದ್ದಿಪಡಿಸುತ್ತಿದ್ದಾರೆ. ಈ ಕ್ಯಾಮೆರಾ ಯುನಿಟ್‌ಗಳು ಇಂದು ಹೆಚ್ಚು ಪ್ರಾಮುಖ್ಯತೆಯನ್ನು ಹಲವು ಉಪಯೋಗಗಳಿಂದ ಪಡೆದುಕೊಳ್ಳುತ್ತಿವೆ.

ಈ ವರ್ಷದ ಆರಂಭದಲ್ಲಿ ಎಲ್‌ಜಿ ಮತ್ತು ಹುವಾವೆ ತಮ್ಮ ಫ್ಲಾಗ್‌ಶಿಪ್‌ನಲ್ಲಿ ಆಂಡ್ರಾಯ್ಡ್ ಓಎಸ್‌ ಚಾಲಿತ ಎರಡು ಹಿಂಭಾಗ ಕ್ಯಾಮೆರಾ ಲೆನ್ಸ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿವೆ. ಈ ಡಿವೈಸ್‌ಗಳ ನಂತರ ಆಪಲ್‌ ಸೇರಿದಂತೆ ಇತರೆ ಸ್ಮಾರ್ಟ್‌ಫೋನ್‌ ತಯಾರಕರು ಎರಡು ಕ್ಯಾಮೆರಾ ಲೆನ್ಸ್‌ ಡಿವೈಸ್‌ಗಳನ್ನು ಲಾಂಚ್‌ ಮಾಡಿದ್ದಾರೆ.

ಹೋನರ್ 8 ಮತ್ತು ಐಫೋನ್ 7 ಗಿರುವ ವ್ಯತ್ಯಾಸಗಳನ್ನು ಅರಿತುಕೊಳ್ಳಿ

ಅಂದಹಾಗೆ ಎರಡು ಕ್ಯಾಮೆರಾ ಲೆನ್ಸ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳಿಂದ, ಬಳಕೆದಾರರು ದೊಡ್ಡ ಮತ್ತು ವಿಶಾಲವಾದ ಫೋಟೋಗಳನ್ನು ಕ್ಯಾಪ್ಚರ್ ಮಾಡಬಹುದು. ಅಲ್ಲದೇ ಕ್ಯಾಮೆರಾ ಯುನಿಟ್‌ಗಳಿಂದ ಆಪ್ಟಿಕಲ್ ಜೂಮ್ ಮಾಡುವುದರೊಂದಿಗೆ ಫ್ರೇಮ್‌ನ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು. ಈ ಹಿಂದೆ 2011 ರಲ್ಲಿ 'ಎಚ್‌ಟಿಸಿ ಇವೋ 3D' 2 ಕ್ಯಾಮೆರಾ ಲೆನ್ಸ್ ಫೀಚರ್‌ನ ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಿತ್ತು. ಪ್ರಸ್ತುತದಲ್ಲಿ ಭಾರತದಲ್ಲಿ ಬಜೆಟ್‌ ಬೆಲೆಗೆ ಖರೀದಿಸಬಹುದಾದ ಎರಡು ಹಿಂಭಾಗ ಕ್ಯಾಮೆರಾಗಳುಳ್ಳ ಟಾಪ್‌ 6 ಸ್ಮಾರ್ಟ್‌ಫೋನ್‌ಗಳನ್ನು(Smartphones) ನಿಮಗೆ ಪರಿಚಯಿಸುತ್ತಿದ್ದೇವೆ. ದಿಪಾವಳಿ ಸೇಲ್‌ನಲ್ಲಿ ಆಫರ್‌ನೊಂದಿಗೆ ಈ ಡಿವೈಸ್‌ಗಳನ್ನು ಬಜೆಟ್‌ ಬೆಲೆಯಲ್ಲಿ ಖರೀದಿಸಬಹುದು. ಲೇಖನದ ಸ್ಳೈಡರ್‌ಗಳಲ್ಲಿ ಆ ಡಿವೈಸ್‌ಗಳು ಯಾವುವು, ವಿಶೇಷತೆ ಏನು, ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ತಿಳಿಯಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಆಪಲ್‌ ಐಫೋನ್ 7

ಆಪಲ್‌ ಐಫೋನ್ 7

ಖರೀದಿ ಬೆಲೆ ರೂ.60,000
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು
* 4.7 ಇಂಚಿನ IPS 326 ppi ಡಿಸ್‌ಪ್ಲೇ
* 2GB RAM
* ಐಓಎಸ್ 10
* ಕ್ವಾಡ್-ಕೋರ್ ಎ10 ಫ್ಯೂಸನ್ 64ಬಿಟ್ ಪ್ರೊಸೆಸರ್, ಜೊತೆಗೆ 6-ಕೋರ್ ಜಿಪಿಯು, ಎಂ10 ಮೋಶನ್ ಕೋ-ಪ್ರೊಸೆಸರ್
* 12MP ಹಿಂಭಾಗ ಕ್ಯಾಮೆರಾ ಮತ್ತು 7MP ಸೆಲ್ಫಿ ಕ್ಯಾಮೆರಾ
* 1960mAh ಬ್ಯಾಟರಿ
* ವಾಟರ್‌ ಪ್ರೂಫ್, ಫಿಂಗರ್‌ಪ್ರಿಂಟ್‌ ಸೆನ್ಸಾರ್

ಹುವಾವೆ ಪಿ9

ಹುವಾವೆ ಪಿ9

ಖರೀದಿ ಬೆಲೆ ರೂ.39,999
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು
* 5.2 ಇಂಚಿನ ಸಂಪೂರ್ಣ HD ಡಿಸ್‌ಪ್ಲೇ
* 3GB RAM ಜೊತೆಗೆ 32GB ಸ್ಟೋರೇಜ್‌, 4GB RAM ಜೊತೆಗೆ 64GB ಸ್ಟೋರೇಜ್
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್
* ಆಕ್ಟಾ-ಕೋರ್ ಕಿರಿನ್ 955 ಪ್ರೊಸೆಸರ್ ಜೊತೆಗೆ Mali T880-MP4 GPU
* 12MP ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ
* 3000mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಜಿ5

ಎಲ್‌ಜಿ ಜಿ5

ಖರೀದಿ ಬೆಲೆ ರೂ.32,990
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು

* 5.3 ಇಂಚಿನ ಕ್ವಾಡ್ HD ಡಿಸ್‌ಪ್ಲೇ
* 4GB RAM
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ
* ಕ್ವಾಡ್-ಕೋರ್ ಸ್ನಾಪ್‌ಡ್ರಾಗನ್ 820 64ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 530 ಜಿಪಿಯು
* 16MP ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ
* 2800mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜರ್ 3.0
* ಫಿಂಗರ್‌ಪ್ರಿಂಟ್ ಸೆನ್ಸಾರ್, ಇನ್‌ಫ್ರೇರ್ಡ್ ಸೆನ್ಸಾರ್

ಎಚ್‌ಟಿಸಿ ಒನ್ ಎಂ8

ಎಚ್‌ಟಿಸಿ ಒನ್ ಎಂ8

ಖರೀದಿ ಬೆಲೆ ರೂ.26,240
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು
* 5.0 ಇಂಚಿನ ಸಂಪೂರ್ಣ HD ಡಿಸ್‌ಪ್ಲೇ
* 2GB RAM
* ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಜೊತೆಗೆ ಎಚ್‌ಟಿಸಿ ಸೆನ್ಸ್ 6 UI
* 2.3 GHz ಕ್ವಾಡ್-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಅಡ್ರೆನೊ 330 ಜಿಪಿಯು
* 13MP ಹಿಂಭಾಗ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ
* 2600mAh ಬ್ಯಾಟರಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪಲ್‌ ಐಫೋನ್ 7 ಪ್ಲಸ್

ಆಪಲ್‌ ಐಫೋನ್ 7 ಪ್ಲಸ್

ಖರೀದಿ ಬೆಲೆ ರೂ.72,000
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು
* 5.5 ಇಂಚಿನ IPS 401 ppi ಡಿಸ್‌ಪ್ಲೇ
* 3GB RAM
* ಐಓಎಸ್ 10
* ಕ್ವಾಡ್-ಕೋರ್ ಎ10 ಫ್ಯೂಸನ್ 64ಬಿಟ್ ಪ್ರೊಸೆಸರ್, ಜೊತೆಗೆ 6-ಕೋರ್ ಜಿಪಿಯು, ಎಂ10 ಮೋಶನ್ ಕೋ-ಪ್ರೊಸೆಸರ್
* 12MP ಹಿಂಭಾಗ ಕ್ಯಾಮೆರಾ ಮತ್ತು 7MP ಸೆಲ್ಫಿ ಕ್ಯಾಮೆರಾ
* 2,900mAh ಬ್ಯಾಟರಿ
* ವಾಟರ್‌ ಪ್ರೂಫ್, ಫಿಂಗರ್‌ಪ್ರಿಂಟ್‌ ಸೆನ್ಸಾರ್, ಧೂಳು ನಿರೋಧಕ

 ಹೋನರ್ 8

ಹೋನರ್ 8

ಖರೀದಿ ಬೆಲೆ ರೂ.29,999
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು

* 5.2 ಇಂಚಿನ ಸಂಪೂರ್ಣ HD ಡಿಸ್‌ಪ್ಲೇ
* 3GB RAM ಜೊತೆಗೆ 32GB ಸ್ಟೋರೇಜ್‌, 4GB RAM ಜೊತೆಗೆ 64GB ಸ್ಟೋರೇಜ್
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್
* ಆಕ್ಟಾ-ಕೋರ್ ಕಿರಿನ್ 950 (2.3GHz 4 x A72 + 1.8GHz 4 x A53) 16nm ಪ್ರೊಸೆಸರ್
* 12MP ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ
* 3000mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Top 6 Smartphones with Dual Rear Camera Lens to Buy in India in 2016. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X