ಸ್ಮಾರ್ಟ್‌ಫೋನ್‌ಗಳಲ್ಲಿ ಡಾಟಾ ಬಳಕೆ ಕಡಿಮೆಗೊಳಿಸಲು ಅತ್ಯುತ್ತಮ ಸಲಹೆಗಳು

Posted By:

ಸ್ಮಾರ್ಟ್‌ಫೋನ್‌ ಬಳಕೆದಾರರು ಇಂದು ದಿನನಿತ್ಯ ಇಂಟರ್ನೆಟ್ ಬಳಕೆ ಮಾಡುತ್ತಾ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದು ಬೇರೇನು ಅಲ್ಲಾ. ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಬಳಸಿದರೇ ಸಿಗುವ ಸೇವೆಗಿಂತ ಹೆಚ್ಚಿನದಾಗಿ ಡಾಟಾ ಖರ್ಚಾಗುತ್ತಿದೆ. ಇದು ಹಲವರ ಪ್ರಶ್ನೆಯಾಗಿದ್ದು, ಹೇಗೆ ಡಾಟಾ ಬಳಕೆ ಕಡಿಮೆಮಾಡುವುದು ಎಂಬ ಉತ್ತರ ಹುಡುಕುತ್ತಿದ್ದಾರೆ.

ಓದಿರಿ: ಅತೀ ಕಡಿಮೆ ಬೆಲೆಗೆ ಟಾಪ್‌ 10 ಹೆಡ್‌ಫೋನ್‌ಗಳು

ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಡಾಟಾ ಬಳಕೆ ಕಡಿಮೆ ಮಾಡುವುದು ಹೇಗೆ ಎಂಬುದಕ್ಕೆ ಸರಳವಾದ 5 ಸಲಹೆಗಳನ್ನು ನೀಡುತ್ತಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಗ್ರೌಂಡ್‌ ಮತ್ತು ಸೋಶಿಯಲ್‌ ನೆಟ್‌ವರ್ಕಿಂಗ್‌ ಅಪ್ಲಿಕೇಶನ್‌ಗಳು ಹೆಚ್ಚಿನದಾಗಿ ಡಾಟಾ ಬಳಕೆ ಮಾಡಿಕೊಳ್ಳುತ್ತವೆ. ಆದರೆ ಸ್ಮಾರ್ಟ್‌ಫೋನ್‌ಗಳು ಹಲವು ಟೂಲ್ಸ್‌ ಮತ್ತು ಸೆಟ್ಟಿಂಗ್ಸ್‌ಗಳ ಮೂಲಕ ಡಾಟಾ ಬಳಕೆ ಕಡಿಮೆ ಮಾಡಲು ಅವಕಾಶ ಹೊಂದಿವೆ. ಅದು ಹೇಗೆ ಎಂಬುದನ್ನು ಈ ಲೇಖನ ಓದಿ ತಿಳಿದುಕೊಳ್ಳಿ.

ಈ ಲೇಖನದ ಮಾಹಿತಿ, ‌ ಗೂಗಲ್‌ ಮ್ಯಾಪ್‌ ಬಳಸಿ ಟ್ರಾವೆಲ್ ಮಾಡುವವರಿಗೆ ಹೆಚ್ಚಿನ ಡಾಟಾವನ್ನು ಉಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Disable Auto-Sync

ಸಲಹೆ 1

ಡಾಟಾ ಬಳಕೆ ಕಡಿಮೆಗೊಳಿಸಲು ಉತ್ತಮ ಮಾರ್ಗವೆಂದರೆ Auto-Sync ಅಕೌಂಟನ್ನು ಡಿಸೇಬಲ್‌ ಮಾಡುವುದು. ಇದರಿಂದ ಬ್ಯಾಟರಿ ಲೈಫ್‌ ಸಹ ಹೆಚ್ಚಾಗುತ್ತದೆ. Auto-Sync ಆಪ್ಸನ್‌ ಬ್ಯಾಗ್ರೌಂಡ್‌ನಲ್ಲಿ ಹೈಪರ್ ಆಕ್ಟಿವ್‌ ಆಗಿರುತ್ತದೆ. ಹಾಗೂ ರಿಯಲ್‌ ಟೈಮ್‌ನಲ್ಲಿ ಜಿ-ಮೇಲ್‌, ಫೇಸ್‌ಬುಕ್‌, ಕ್ಯಾಲೆಂಡರ್‌ಗಳ ನೋಟಿಫಿಕೇಶನ್‌ ನೀಡುತ್ತದೆ.
Auto-Sync ಡಿಸೇಬಲ್‌ ಮಾಡಲು ಸೆಟ್ಟಿಂಗ್ಸ್‌ಗನಲ್ಲಿ ಅಕೌಂಟ್ಸ್‌ಮೆನುಗೆ ಹೋಗಿ Auto-Sync ಟ್ಯಾಪ್‌ ಮಾಡಿ.

ಸೆಟ್‌ ಡಾಟಾ ಲಿಮಿಟ್‌

ಸಲಹೆ 2

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಡಾಟಾ ಬಳಕೆ ಕಡಿಮೆ ಮಾಡಲು ಹಾಗೂ ಬ್ಯಾಗ್ರೌಂಡ್‌ ಡಾಟಾ ಬಳಕೆ ನಿರ್ಬಂಧಿಸಲು ಅವಕಾಶ ಕಲ್ಪಿಸಿವೆ.
ಡಾಟಾ ಲಿಮಿಟ್‌ ಸೆಟ್‌ ಮಾಡಲು ಡಿವೈಸ್‌ ಸೆಟ್ಟಿಂಗ್ಸ್>>ಡಾಟಾ ಯೂಸೇಜ್‌ ಅಂಡ್‌ ಆಕ್ಟಿವೇಟ್ ' ಸೆಟ್‌ ಸೆಲ್ಯೂಲಾರ್ ಡಾಟಾ ಲಿಮಿಟ್'. ಹಾಗೂ 2 ಸ್ಲೈಡರ್‌ಗಳನ್ನು ತಿಂಗಳಿನ ಡಾಟಾ ಲಿಮಿಟ್‌ಗಾಗಿ ಮತ್ತು ವಾರ್ನ್ ಫಾರ್‌ ಸರ್ಟೈನ್‌ ಡಾಟಾ ಯೂಸ್‌ ಗಾಗಿ ಬಳಸಿ.

ವೈ-ಫೈ ಬಳಕೆಯಿಂದ ಮಾತ್ರ ಅಪ್ಲಿಕೇಶನ್‌ಗಳ ಅಪ್‌ಡೇಟ್‌ ಮಾಡಿ

ಸಲಹೆ 3

ಡಾಟಾ ಬಳಕೆ ಕಡಿಮೆಗೊಳಿಸಲು ಇದು ಉತ್ತಮ ಮಾರ್ಗ. ಸ್ಮಾರ್ಟ್‌ಫೋನ್‌ಗಳ ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್‌ ಮಾಡಲು ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿ ಸೆಟ್ಟಿಂಗ್ಸ್‌ ಓಪೆನ್‌ ಮಾಡಿ Auto-Update apps ಮೇಲೆ ಟ್ಯಾಪ್ ಮಾಡಿ.

ಕ್ರೋಮ್‌ ಡಾಟಾ ಸೇವರ್

ಸಲಹೆ 4

ಕ್ರೋಮ್‌ ಗ್ರೇಟ್‌ ಫೀಚರ್ ಡಾಟಾ ಸೇವರ್‌ ಹೊಂದಿದೆ. ಇದು ಎಲ್ಲಾ ಇನ್‌ಕಮಿಂಗ್ ಟ್ರ್ಯಾಫಿಕ್ ಅನ್ನು ಕಂಪ್ರೆಸ್ ಮಾಡಿ ಪೇಜ್‌ ಲೋಡ್ ಮಾಡಲು ಕಡಿಮೆ ಡಾಟಾ ಬಳಕೆ ಮಾಡುತ್ತದೆ.
ಆಕ್ಟಿವೇಟ್‌ ಮಾಡಲು ಕ್ರೋಮ್‌ ಸೆಟ್ಟಿಂಗ್ಸ್>> ಅಡ್ವಾನ್ಸ್>>ಡಾಟಾ ಸೇವರ್ ಅಂಡ್‌ ಆಕ್ಟಿವೇಟ್.

 ಆಫ್‌ಲೈನ್ ಮ್ಯಾಪ್ಸ್‌

ಸಲಹೆ 5

ಗೂಗಲ್‌ ತನ್ನ ಮ್ಯಾಪ್ಸ್‌ ಅನ್ನು ಹೊಸ ಫೀಚರ್ '' ಸೇವ್‌ ಆಫ್‌ಲೈನ್‌ ಮ್ಯಾಪ್‌'' ಅನ್ನು ಅಪ್‌ಡೇಟ್‌ ಮಾಡಿದೆ. ನೀವು ಟ್ರಾವೆಲ್‌ ಮಾಡುವ ಮೊದಲು ಮ್ಯಾಪ್‌ ಡಾಟಾ ಡೌನ್‌ಲೋಡ್‌ಮಾಡಿ ಕೊಳ್ಳಬಹುದು. ನೀವು ತಲುಪ ಬೇಕಾಗಿರುವ ಸ್ಥಳವನ್ನು ಸರ್ಚ್‌ಮಾಡಿ, ಮೆನು ಮೇಲೆ ಟ್ಯಾಪ್ ಮಾಡಿ ''ಸೇವ್ ಆಫ್‌ ಲೈನ್‌ ಮ್ಯಾಪ್‌'' ಆಯ್ಕೆಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Data consumption on Android smartphones is the one biggest concern for every users. Many apps on Android devices works silently on background and tend to consume data unknowingly.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot