Subscribe to Gizbot

ಮನೆಯ ವೈಫೈ ಸುಧಾರಣೆಗೆ 5 ಟಿಪ್ಸ್‌ಗಳು

Written By:

ನಿಮ್ಮ ಮನೆಯ ವೈಫೈ ನೆಟ್‌ವರ್ಕ್ ನಿಧಾನವಾಗಿ ಚಾಲನೆಯಾಗುತ್ತಿದೆಯೇ? ಚಿಂತಿಸದಿರಿ, ಅದಕ್ಕಾಗಿ ಇಲ್ಲಿ ಸಲಹೆ ಇದೆ. ಹೆಚ್ಚಿನವರು ವೈಫೈ ರೂಟರ್ ಸೆಟ್ಟಿಂಗ್ ಕುರಿತು ಯೋಚಿಸುವುದೇ ಇಲ್ಲ. ಸರ್ವೀಸ್ ಪ್ರೊವೈಡರ್ ಇದನ್ನು ಹೊಂದಿಸಿದ್ದು ದೀರ್ಘ ಸಮಯದವರೆಗೆ ಇದು ಹಾಗೆಯೇ ಇರುತ್ತದೆ.

ಇದನ್ನೂ ಓದಿರಿ: ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ನಿಲ್ಲಿಸುವುದು ಹೇಗೆ?

ಕಡಿಮೆ ಕವರೇಜ್ ಮತ್ತು ನಿಮ್ಮ ವೈಫೈ ರೂಟರ್ ಹೊಂದಿಸುವುದು ಹೀಗೆ ಮೊದಲಾದ ಸಮಸ್ಯೆಗಳನ್ನು ಹೊಂದಿಸುವ ಮೂಲಕ ವೈಫೈ ಸಿಗ್ನಲ್ ಬಲವನ್ನು ವರ್ಧಿಸಬಹುದಾಗಿದೆ. ಇಲ್ಲಿದೆ ಅದಕ್ಕಾಗಿ ಮಾಹಿತಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂಟರ್ ಅನ್ನು ಸರಿಯಾಗಿ ಹೊಂದಿಸಿ

#1

ಮನೆಯಲ್ಲಿ ವೈಫೈ ಕವರೇಜ್ ತೊಂದರೆಯಾಗುತ್ತಿದೆ ಎಂದಾದಲ್ಲಿ, ನೀವು ರೂಟರ್ ಅನ್ನು ಎಲ್ಲಿ ಇಟ್ಟಿದ್ದೀರಿ ಎಂಬುದನ್ನು ಆಧರಿಸಿರುತ್ತದೆ. ಮನೆಯ ಮಧ್ಯಭಾಗದಲ್ಲಿ ರೂಟರ್ ಅನ್ನು ಇರಿಸಬೇಕು ಹಾಗೂ ಗೋಡೆ, ಕನ್ನಡಿ ಮತ್ತು ಇತರ ಇಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿಸಿ.

ದೊಡ್ಡ ಆಂಟೆನಾಗಳನ್ನು ಬಳಸಿ

#2

ರೂಟರ್‌ಗಳೊಂದಿಗೆ ಬರುವ ಡೀಫಾಲ್ಟ್ ಆಂಟೆನಾಗಳು ಉತ್ತಮವಾಗಿರುವುದಿಲ್ಲ. ನಿಮ್ಮ ವೈಫೈ ಸಿಗ್ನಲ್‌ಗಳನ್ನು ವರ್ಧಿಸಲು ದೊಡ್ಡ ಆಂಟೆನಾಗಳನ್ನು ಖರೀದಿಸುವುದು ಉತ್ತಮವಾಗಿದೆ.

ರೂಟರ್ ಸಾಫ್ಟ್‌ವೇರ್

#3

ರೂಟರ್ ಇಂಟರ್ಫೇಸ್‌ನಲ್ಲಿರುವ ಸೆಟ್ಟಿಂಗ್ ಅನ್ನು ಪರಿಶೀಲಿಸಲು ಯಾರೂ ಹೋಗುವುದೇ ಇಲ್ಲ. ಕೆಲವೊಂದು ರೂಟರ್‌ಗಳು ಸೆಟ್ಟಿಂಗ್‌ನೊಂದಿಗೆ ಬಂದಿದ್ದು ಟ್ರಾನ್ಸ್‌ಮೀಶನ್ ಪವರ್ ಅನ್ನು ಹೊಂದಿಸಬಹುದಾಗಿದೆ. ಸೆಟ್ಟಿಂಗ್ ಅನ್ನು ಸರಿಪಡಿಸಿಕೊಂಡರೆ ಇದು ಟ್ರಾನ್ಸ್‌ಮಿಶನ್ ಪವರ್ ಅನ್ನು ಹೆಚ್ಚಿಸುತ್ತದೆ ಮತ್ತು ಕವರೇಜ್ ಏರಿಯಾವನ್ನು ಸುಧಾರಿಸುತ್ತದೆ.

ಸಿಗ್ನಲ್ ರಿಪೀಟರ್ಸ್

#4

ಮನೆಯಲ್ಲೇ ರಿಪೀಟರ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ ವೈಫೈ ಸಿಗ್ನಲ್ ಬಲವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ವೈಫೈ ಸಿಗ್ನಲ್ ಅನ್ನು ರಿಪೀಟರ್ ಬೌನ್ಸ್ ಮಾಡುತ್ತದೆ ಮತ್ತು ಇದರ ರೇಂಜ್ ಅನ್ನು ಹೆಚ್ಚಿಸುತ್ತದೆ.

ಅಲ್ಯುಮಿನಿಯಮ್ ಫಾಯಿಲ್

#5

ನಿಮ್ಮ ಮನೆಯ ವೈಫೈ ರೂಟರ್ ಸಿಗ್ನಲ್ ಬಲವನ್ನು ಹೆಚ್ಚಿಸಲು ಸಾಧಾರಣ ಅಲ್ಯುಮಿನಿಯಮ್ ಫಾಯಿಲ್ ಅನ್ನು ಬಳಸಬಹುದಾಗಿದೆ. ನಿಮ್ಮ ರೂಟರ್ ಆಂಟೆನಾ ಸುತ್ತಲೂ ಅಲ್ಯುಮಿನಿಯಮ್ ಫಾಯಿಲ್ ಅನ್ನು ಇರಿಸಿ ಇದು ಸಿಗ್ನಲ್ ಸುಧಾರಿಸುತ್ತದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

1 ಸೆಕೆಂಡ್‌ಗೆ 200 HD ಸಿನಿಮಾ ಡೌನ್‌ಲೋಡ್‌ "ಬಿಟಿ 5.6Tbps ಫೈಬರ್ ಸಂಪರ್ಕ"
ಬರೇ 15 ನಿಮಿಷದಲ್ಲಿ ಇಂಟರ್ನೆಟ್‌ನಲ್ಲಿ ಫೇಮಸ್ ಆದವರು!
ವಿಶ್ವ ಅಂತ್ಯವಾದಾಗ ಹೀಗೆಲ್ಲಾ ಸಂಭವಿಸುತ್ತದಂತೆ!

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
You can fix many issues including low coverage and set up your Wi-Fi router to get more out of it. Take a look at the slider below to know more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot