Subscribe to Gizbot

ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ನಿಲ್ಲಿಸುವುದು ಹೇಗೆ?

Written By:

ಇಂಟರ್ನೆಟ್‌ಗೆ ಕಂಪ್ಯೂಟರ್‌ ಮತ್ತು ಮೊಬೈಲ್‌ಗಳಿಂದ ಕನೆಕ್ಟ್‌ ಆಗುವ ಸುಲಭ ಮಾರ್ಗ ಅಂದ್ರೆ ಉಚಿತ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗುವುದು. ಉಚಿತ ವೈಫೈ ನೆಟ್‌ವರ್ಕ್‌ಗಳಿಗೆ ಕನೆಕ್ಟ್‌ ಆಗುವುದರಿಂದ ವೇಗವಾದ ಇಂಟರ್ನೆಟ್‌ ಸಂಪರ್ಕವು ದೊರೆಯುತ್ತದೆ, ಹಾಗೆ ಇಂಟರ್ನೆಟ್‌ ಡೇಟಾ ಪ್ಯಾಕ್‌ಗೆ ವೆಚ್ಚ ಮಾಡುವ ಹಣವು ಉಳಿಯುತ್ತದೆ. ಇಂತಹ ಸುಲಭ ಮಾರ್ಗವನ್ನು ಕಂಡುಕೊಂಡ ಹಲವು ಟೆಕ್‌ ಎಕ್ಸ್‌ಪರ್ಟ್‌ಗಳು ಯಾವಾಗಲು ಇಂಟರ್ನೆಟ್‌ಗಾಗಿ ಇತರರ ವೈಫೈ ನೆಟ್‌ವರ್ಕ್‌ ಅನ್ನು ಹ್ಯಾಕ್‌ ಮಾಡಿ, ಕಳ್ಳತನದಿಂದ ವೈಫೈ ಬಳಕೆಮಾಡಿಕೊಳ್ಳುತ್ತಾರೆ.

ವೈಫೈ ನೆಟ್‌ವರ್ಕ್‌ ಹೊಂದಿರುವ ಹಲವರಿಗೆ ಇನ್ನೂ ಸಹ ವೈಫೈ ಕಳ್ಳತನ ಮಾಡದಂತೆ ಸುರಕ್ಷತೆ ಹೊಂದುವುದು ಹೇಗೆ ಎಂದು ತಿಳಿದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡಿ ಕಳ್ಳತನದಿಂದ ವೈಫೈ ಬಳಸುವ ಇತರ ಡಿವೈಸ್‌ಗಳನ್ನು ನಿಲ್ಲಿಸುವುದು(Stop) ಹೇಗೆ ಮತ್ತು ಅವರು ಯಾರು ಎಂದು ತಿಳಿಯುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ಸ್ಟಾಪ್‌ ಮಾಡುವುದು ಹೇಗೆ?

ಮೊದಲಿಗೆ ರೂಟರ್‌ಗೆ ಲಾಗಿನ್‌ ಆಗಬೇಕು. "192.168.0.1" ವಿಳಾಸಕ್ಕೆ ಹೋಗುವ ಮೂಲಕ ಅಥವಾ "routerlogin.com" ಹೋಗುವ ಮೂಲಕ ಲಾಗಿನ್‌ ಪ್ಯಾನೆಲ್‌ ಪಡೆದು ಯುಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಬೇಕು.

 ಹಂತ 2

ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ಸ್ಟಾಪ್‌ ಮಾಡುವುದು ಹೇಗೆ?

ಒಮ್ಮೆ ಆಡ್ಮಿನ್‌ ಖಾತೆ ಓಪನ್‌ ಮಾಡಿದ ನಂತರ ನಿಮ್ಮ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆದ ಡಿವೈಸ್‌ಗಳನ್ನು ಪತ್ತೆ ಹಚ್ಚಲು "Connected devices" ಅಥವಾ "Attached devices" ಎಂಬ ಆಯ್ಕೆಯನ್ನು ಪಡೆಯಬಹುದಾಗಿದೆ. ಈ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿದರೆ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆದ ಡಿವೈಸ್‌ಗಳನ್ನು ನೋಡಬಹುದಾಗಿದೆ. ಇಲ್ಲಿ ಕನೆಕ್ಟ್‌ ಆದ ಡಿವೈಸ್‌ ಐಪಿ ವಿಳಾಸ ಮತ್ತು ಹೆಸರನ್ನು ತೋರಿಸಲಾಗುತ್ತದೆ.

ಹಂತ 3

ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ಸ್ಟಾಪ್‌ ಮಾಡುವುದು ಹೇಗೆ?

ಈ ಹಂತದಲ್ಲಿ ನಿಮಗೆ ಪರಿಚಯವಿಲ್ಲದ ಡಿವೈಸ್‌ಗಳು ಕನೆಕ್ಟ್‌ ಆಗಿದ್ದರೆ ವೈಫೈ ನೆಟ್‌ವರ್ಕ್‌ ಬಳಸದಂತೆ ಸ್ಟಾಪ್‌ ಮಾಡಬಹುದಾಗಿದೆ. ಅಥವಾ ಪಾಸ್‌ವರ್ಡ್‌ ಬದಲಿಸಿ ಇತರೆ ಡಿವೈಸ್‌ಗಳು ಕನೆಕ್ಟ್‌ ಆಗುವುದನ್ನು ಬ್ಲಾಕ್‌ ಮಾಡಬಹುದಾಗಿದೆ.

 ಹ್ಯಾಕರ್‌

ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ಸ್ಟಾಪ್‌ ಮಾಡುವುದು ಹೇಗೆ?

ವೈಫೈ ನೆಟ್‌ವರ್ಕ್‌ ಹ್ಯಾಕರ್‌ಗಳು ಪುನಃ ವೈಫೈ ಹ್ಯಾಕ್‌ ಮಾಡಿ ಆಕ್ಸೆಸ್‌ ಪಡೆಯಬಹುದು. ಆದರೆ ವೈಫೈ ನೆಟ್‌ವರ್ಕ್‌ ಹೊಂದಿರುವವರು ತಮ್ಮ ವೈಫೈ ನೆಟ್‌ವರ್ಕ್‌ ನಿಯಂತ್ರಿಸುವ ಬಗ್ಗೆ ತಿಳಿದಿರುವುದು ಉತ್ತಮ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡುವ ಟಾಪ್‌ 8 ಆಪ್‌ಗಳು

ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
How to Stop Wifi Stealing and Catch that Wifi Hacker. Read more about this in kannada.gizobot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot