ಫೋನಿಲ್ಲದೆ ಫೋನು ಮಾಡುವ ಐದು ವಿಧಾನ!

Written By:

ಬಹಳಷ್ಟು ಸಲ ನಿಮ್ಮ ಮೊಬೈಲ್ ಫೋನಿನ ನೆಟ್ ವರ್ಕ್ ಇಲ್ಲದಾಗುತ್ತದೆ ಮತ್ತು ತುರ್ತಾಗಿ ನೀವು ಒಂದು ಕರೆ ಮಾಡಬೇಕೆಂದಿರುತ್ತೀರಿ. ಎಂತಹ ಕಷ್ಟದ ಸನ್ನಿವೇಶವಲ್ಲವೇ?

ಫೋನಿಲ್ಲದೆ ಫೋನು ಮಾಡುವ ಐದು ವಿಧಾನ!

ದಿನನಿತ್ಯ ಅಸಂಖ್ಯಾತ ಆ್ಯಪ್ ಗಳು ಬಿಡುಗಡೆಯಾಗುತ್ತಿವೆ ಮತ್ತು ಅವುಗಳಲ್ಲಿ ಕೆಲವು ಸ್ಮಾರ್ಟ್ ಫೋನ್ ಇಲ್ಲದೆಯೂ ಕರೆ ಮಾಡುವ ಸೌಕರ್ಯವನ್ನು ನೀಡುತ್ತಿದೆ.

ಓದಿರಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎ ಬಗ್ಗೆ ಗೊತ್ತಿರಬೇಕಾದ ಏಳು ಸಂಗತಿಗಳು.

ಅಂತಹ ಕೆಲವು ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ ಲೋಡ್ ಮಾಡಿಕೊಂಡರೆ ಸುಲಭವಾಗಿ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಕರೆ ಮಾಡಬಹುದು.
ಸ್ಮಾರ್ಟ್ ಫೋನ್ ಇಲ್ಲದೇ ಕರೆ ಮಾಡಬಹುದಾದ ಅಂತಹ ಟಾಪ್ ಐದು ತಂತ್ರಾಂಶಗಳನ್ನು ಗಿಝ್ಬಾಟ್ ನಲ್ಲಿ ನಾವಿಂದು ನೀಡುತ್ತಿದ್ದೇವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್ ಬುಕ್ ಮೆಸೆಂಜರ್.

ಫೇಸ್ ಬುಕ್ ಮೆಸೆಂಜರ್.

ಇತ್ತೀಚೆಗೆ ಫೇಸ್ ಬುಕ್ ಮೆಸೆಂಜರ್ ಕರೆ ಮಾಡುವ ಆಯ್ಕೆಯನ್ನು ನೀಡಿದೆ. ಒಂದು ಕ್ಲಿಕ್ ಮೂಲಕ ಯಾರಿಗಾದರೂ ಕರೆ ಮಾಡಬಹುದು. ನಿಮ್ಮ ಫೋನಿನ ಬ್ಯಾಟರಿ ಮುಗಿದು ಹೋಗಿದ್ದರೆ, ಈ ಆ್ಯಪ್ ಅನ್ನು ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಗೆ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವವರಿಗೆ ಕರೆ ಮಾಡಬಹುದು.ಇದನ್ನು ಮಾಡುವುದು ಹೀಗೆ:

ಹಂತ 1: ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಯಲ್ಲಿ ಫೇಸ್ ಬುಕ್ ಮೆಸೆಂಜರ್ ಅನ್ನು ಇನ್ಸ್ಟಾಲ್ ಮಾಡಿ. ನಿಮ್ಮ ಫೇಸ್ ಬುಕ್ ಖಾತೆಯ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.

ಹಂತ 2: ಚಾಟ್ ಪಟ್ಟಿಯಲ ಬಲ ಮೇಲ್ತುದಿಯಲ್ಲಿ ಕ್ಲಿಕ್ ಮಾಡಿ, ಯಾರಿಗೆ ಕರೆ ಮಾಡಬೇಕೋ ಆ ಸಂಪರ್ಕವನ್ನು ಆಯ್ದುಕೊಳ್ಳಿ.

ಹಂತ 3: ನೀಲಿ ಬಣ್ಣದ ಫೋನಿನ ಐಕಾನ್ ಮೇಲೆ ಕ್ಲಿಕ್ಕಿಸಿ ಮಾತನಾಡಿ.

ಸೂಚನೆ: ಡಾಟಾ ಪ್ಯಾಕ್ ಇದೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ.

ಸ್ಕೈಪ್.

ಸ್ಕೈಪ್.

ಸ್ಕೈಪ್ ವೀಡಿಯೋ ಮತ್ತು ಧ್ವನಿ ಕರೆಗಳನ್ನು ಮಾಡಲಿರುವ ಅತ್ಯುತ್ತಮ ಆ್ಯಪ್. ಯಾವುದೇ ಅಡೆತಡೆಯಿಲ್ಲದೆ ಸ್ಕೈಪಿನಲ್ಲಿ ಕರೆಗಳನ್ನು ಮಾಡುವುದು ಹೀಗೆ:

ಹಂತ 1: ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಯಲ್ಲಿ ಸ್ಕೈಪ್ ಅನ್ನು ಇನ್ಸ್ಟಾಲ್ ಮಾಡಿ.

ಹಂತ 2: ನಿಮ್ಮ ಸ್ಕೈಪ್ ಖಾತೆಯ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.

ಹಂತ 3: ಲಾಗಿನ್ ಆದ ಮೇಲೆ, ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ - ಕಾಂಟಾಕ್ಟ್ಸ್, ರೀಸೆಂಟ್, ಕಾಲ್ ಫೋನ್ಸ್ ಮತ್ತು ಪ್ರೊಫೈಲ್.

ಹಂತ 4: ಕಾಲ್ ಫೋನ್ಸ್ ಮೇಲೆ ಕ್ಲಿಕ್ಕಿಸಿ > ನಂಬರನ್ನು ಒತ್ತಿ. ಸ್ಕೈಪ್ ಟು ಸ್ಕೈಪ್ ಕರೆ ಮಾಡಲು ಕಾಂಟಾಕ್ಟ್ಸ್ > ಕಾಲ್ ಐಕಾನ್ ಮೇಲೆ ಕ್ಲಿಕ್ಕಿಸಿ.

ಲೈನ್: ಉಚಿತ ಕರೆ ಮತ್ತು ಮೆಸೇಜುಗಳು.

ಲೈನ್: ಉಚಿತ ಕರೆ ಮತ್ತು ಮೆಸೇಜುಗಳು.

ಉಚಿತ ಕರೆ ಮತ್ತು ವೀಡಿಯೋ ಕರೆಗಳಿಂದಾಗಿ ಸ್ವಲ್ಪ ಸಮಯದಲ್ಲೇ ಲೈನ್ ಪ್ರಸಿದ್ಧಿಯಾಗಿಬಿಟ್ಟಿದೆ. ಲೈನ್ ಉಪಯೋಗಿಸಿ ಕರೆ ಮಾಡುವುದು ಹೀಗೆ:

ಹಂತ 1: ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಯಲ್ಲಿ ಲೈನ್ ಅನ್ನು ಇನ್ಸ್ಟಾಲ್ ಮಾಡಿ. ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.

ಹಂತ 2: ನಿಮ್ಮ ಡೆಸ್ಕ್ ಟಾಪ್ ಪರದೆಯ ಮೇಲೆ ಎಲ್ಲಾ ಸಂಪರ್ಕಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಿಮ್ಮ ಸ್ನೇಹಿತರ ಹೆಸರಿನ ಮೇಲೆ ರೈಟ್ ಕ್ಲಿಕ್ ಮಾಡಿ, ಫೋನ್ ಐಕಾನಿನ ಮೇಲೆ ಕ್ಲಿಕ್ಕಿಸಿ, ಪಿಸಿಯಿಂದ ಉಚಿತ ಕರೆ ಮಾಡಿ.

ಇಮೊ: ಉಚಿತ ಕರೆಗಳು ಮತ್ತು ಚಾಟ್.

ಇಮೊ: ಉಚಿತ ಕರೆಗಳು ಮತ್ತು ಚಾಟ್.

ಇಮೋ ಬಳಸಿಕೊಂಡು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಧ್ವನಿ ಕರೆ ಅಥವಾ ವೀಡಿಯೋ ಕರೆಗಳನ್ನು ಮಾಡಬಹುದು. ಅವರು ಯಾವ ಸಾಧನವನ್ನು ಉಪಯೋಗಿಸುತ್ತಿದ್ದರೂ ಚಿಂತಿಲ್ಲ. ಮೊಬೈಲ್ ಫೋನ್ ಇಲ್ಲದಾಗ ಇಮೋ ಬಳಸಿ ಫೋನ್ ಮಾಡುವುದು ಹೀಗೆ:

ಹಂತ 1: ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಯಲ್ಲಿ ಇಮೋ ಅನ್ನು ಇನ್ಸ್ಟಾಲ್ ಮಾಡಿ. ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.

ಹಂತ 2: ಸಂಪರ್ಕಗಳ ಪಟ್ಟಿ ತೆರೆದುಕೊಳ್ಳುತ್ತದೆ, ಸಂಪರ್ಕದ ಮೇಲೆ ಕ್ಲಿಕ್ಕಿಸಿ, ಫೋನ್ ಐಕಾನಿನ ಮೇಲೆ ಕ್ಲಿಕ್ಕಿಸಿ ಉಚಿತ ಕರೆಗಳನ್ನು ಮಾಡಿ.

ಗೂಗಲ್ ಹ್ಯಾಂಗ್ ಔಟ್.

ಗೂಗಲ್ ಹ್ಯಾಂಗ್ ಔಟ್.

ಮೇಲೆ ತಿಳಿಸಿದ ಆ್ಯಪ್ ಗಳನ್ನು ನಿಮ್ಮ ಡೆಸ್ಕ್ ಟಾಪಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವುದು ಕಷ್ಟವಾದರೆ, ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ ಹ್ಯಾಂಗ್ ಔಟ್ ಅನ್ನು ಆರಿಸಿಕೊಳ್ಳಿ. ಹ್ಯಾಂಗ್ ಔಟ್ ಉಪಯೋಗಿಸಿ ಕರೆ ಮಾಡುವುದು ಹೀಗೆ:

ಹಂತ 1: ಜಿಮೇಲ್ ಖಾತೆಗೆ ಲಾಗಿನ್ ಆಗಿ > ಬಲ ಮೇಲ್ತುದಿಯಲ್ಲಿರುವ ಗೂಗಲ್ ಆ್ಯಪ್ ಐಕಾನಿನ ಮೇಲೆ ಕ್ಲಿಕ್ಕಿಸಿ > ಹ್ಯಾಂಗ್ ಔಟ್ ಅನ್ನು ಆಯ್ದುಕೊಳ್ಳಿ.

ಹಂತ 2: ಐಕಾನಿನ ಮೇಲೆ ಕ್ಲಿಕ್ಕಿಸಿದ ನಂತರ, ನಿಮ್ಮ ಸಂಪರ್ಕ ಪಟ್ಟಿ ಕಾಣಿಸುತ್ತದೆ ಅಥವಾ ನೀವು ಕರೆ ಮಾಡಬೇಕೆಂದಿರುವ ನಂಬರನ್ನು ಸರ್ಚ್ ಬಾಕ್ಸಿನಲ್ಲಿ ಹಾಕಬಹುದು.

ಹಂತ 3: ನಂತರ, ಕಾಲ್ ಐಕಾನಿನ ಮೇಲೆ ಕ್ಲಕ್ಕಿಸಿ ನಿಮ್ಮ ನೆಚ್ಚಿನವರ ಜೊತೆ ಹರಟಿ.

ಈ ಆ್ಯಪ್ ಗಳ ಮತ್ತೊಂದು ಲಾಭವೆಂದರೆ ನೀವು ಯಾವುದೇ ಪ್ರದೇಶದಲ್ಲಿದ್ದರೂ ಇದರಿಂದ ನೀವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In case of emergencies, here's how you can make voice calls to your contacts without your mobile phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot