ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎ ಬಗ್ಗೆ ಗೊತ್ತಿರಬೇಕಾದ ಏಳು ಸಂಗತಿಗಳು.

|

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಎಸ್-ಪೆನ್ ಇರುವ ಗ್ಯಾಲಕ್ಸಿ ಟ್ಯಾಬ್ ಎ ಅನ್ನು ಬಿಡುಗಡೆಗೊಳಿಸಿದೆ, ಗ್ಯಾಲಕ್ಸಿ ನೋಟ್ 7 ಜೊತೆಗೆ ಟ್ಯಾಬ್ ಎ ಬಿಡುಗಡೆಯಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎ ಬಗ್ಗೆ ಗೊತ್ತಿರಬೇಕಾದ ಏಳು ಸಂಗತಿಗಳು.

ಓದಿರಿ: ಬಿಎಸ್‌ಎನ್‌ಎಲ್‌ 'ಬ್ರಾಡ್‌ಬ್ಯಾಂಡ್‌ 249' ಪ್ಲಾನ್‌ನ 5 ಅನ್‌ಲಿಮಿಟೆಡ್‌ ಉಪಯೋಗಗಳು

ಸದ್ಯಕ್ಕೆ ಈ ಟ್ಯಾಬ್ಲೆಟ್ ದಕ್ಷಿಣ ಕೊರಿಯಾದಲ್ಲಿ ಮಾತ್ರ ಬಿಡುಗಡೆಯಾಗಿದೆ, ಮುಂಬರುವ ದಿನಗಳಲ್ಲಿ ಇತರೆ ಮಾರುಕಟ್ಟೆಗಳಲ್ಲೂ ಲಭ್ಯವಾಗಲಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನ್ಯಾಸ.

ವಿನ್ಯಾಸ.

ವಿನ್ಯಾಸದ ಬಗ್ಗೆ ಹೇಳುವುದಾದರೆ 2016ರ ಗ್ಯಾಲಕ್ಸಿ ಟ್ಯಾಬ್ ಎ ತನ್ನ ಹಿಂದಿನ ಟ್ಯಾಬ್ಲೆಟ್ಟಿನಂತೆಯೇ ಇದೆ, ಎಸ್ ಪೆನ್ ಅನ್ನು ಹೊರತುಪಡಿಸಿ. ಈ ಟ್ಯಾಬ್ಲೆಟ್ಟಿನ ಗಾತ್ರ 254.30 x 164.20 x8.20 ಎಂ.ಎಂನಷ್ಟಿದೆ ಮತ್ತು 558 ಗ್ರಾಂ ತೂಕವಿದೆ.

1080 ಪಿ ಪರದೆ!

1080 ಪಿ ಪರದೆ!

ಗ್ಯಾಲಕ್ಸಿ ಟ್ಯಾಬ್ ಎ(2016)ನಲ್ಲಿ 10.1 ಇಂಚಿನ ಪರದೆಯಿದೆ, 1920 x 1080ಪಿಕ್ಸೆಲ್ ರೆಸೆಲ್ಯೂಷನ್ ಇದೆ. 10 ಇಂಚಿನ ಪರದೆಯ ಟ್ಯಾಬ್ಲೆಟ್ಟುಗಳು ಉಪಯೋಗಿಸಲು ಅನುಕೂಲಕರ.

ಆಕ್ಟಾ ಕೋರ್ ಪ್ರೊಸೆಸರ್.

ಆಕ್ಟಾ ಕೋರ್ ಪ್ರೊಸೆಸರ್.

ಈ ಹತ್ತು ಇಂಚಿನ ಟ್ಯಾಬ್ಲೆಟ್ಟಿನಲ್ಲಿ 1.6GHz ಆಕ್ಟಾ ಕೋರ್ ಎಕ್ಸಿನೋಸ್ 7870 ಪ್ರೊಸೆಸರ್ 3 ಜಿಬಿ ರ್ಯಾಮ್ ಇದೆ. ಈ ಪ್ರೊಸೆಸರ್ ಅನ್ನು 14ಎನ್.ಎಂ ಫಿನ್ ಫೆಟ್ ಮೇಲೆ ನಿರ್ಮಿಸಲಾಗಿದೆ, ಕಾರ್ಯದಕ್ಷತೆ ಮತ್ತು ಬ್ಯಾಟರಿ ಬಳಕೆ ಚೆನ್ನಾಗಿರಲಿದೆ. 32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಈ ಟ್ಯಾಬ್ಲಟ್ಟಿನ ಮೆಮೊರಿಯನ್ನು ಮೈಕ್ರೋ ಎಸ್.ಡಿ ಕಾರ್ಡ್ ಬಳಸುವ ಮೂಲಕ 256ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.

ಹೊಸ ಎಸ್ ಪೆನ್.

ಹೊಸ ಎಸ್ ಪೆನ್.

ಮೇ ತಿಂಗಳಿನಲ್ಲಿ ಕಂಪನಿಯು ಎಸ್ ಪೆನ್ ಇಲ್ಲದ ಟ್ಯಾಬ್ಲೆಟ್ ಅನ್ನು ಬಿಡುಗಡೆಗೊಳಿಸಿತ್ತು. ಆದರೆ ಈಗ ಬಿಡುಗಡೆಯಾಗಿರುವ ಟ್ಯಾಬ್ ಎನಲ್ಲಿ ಎಸ್ ಪೆನ್ ಸೌಕರ್ಯವಿದೆ. ತತ್ ಕ್ಷಣದಲ್ಲಿ ಪದಗಳ ಅನುವಾದ, ಕ್ವಿಕ್ ನೋಟ್ಸ್ ಆ್ಯಕ್ಸೆಸ್, ಜಿ.ಐ.ಎಫ್ ಗಳನ್ನು ಸುಲಭವಾಗಿ ಸೆರೆಹಿಡಿಯುವುದು, ಚಿತ್ರಗಳನ್ನು ಆಯ್ಕೆ ಮಾಡಿ ಹಂಚಿಕೊಳ್ಳುವುದು ಇದರಿಂದ ಸುಲಭವಾಗಲಿದೆ.

ಎಸ್ ಪೆನ್ ಮೂಲಕ ನಿಮ್ಮ ಭಾವನೆ ವ್ಯಕ್ತಪಡಿಸಿ.

ಎಸ್ ಪೆನ್ ಮೂಲಕ ನಿಮ್ಮ ಭಾವನೆ ವ್ಯಕ್ತಪಡಿಸಿ.

ಎಸ್ ಪೆನ್ ಇರುವಾಗ ಸ್ಕ್ರೀನನ್ನು ಅನ್ ಲಾಕ್ ಮಾಡದೆಯೂ ನೋಟ್ಸ್ ಮಾಡಿಕೊಳ್ಳಿ! ಸ್ಕ್ರೀನ್ ಆಫ್ ಮೆಮೊ ಫಂಕ್ಷನ್ ಉಪಯೋಗಿಸಿಕೊಂಡು ಲಾಕ್ ಸ್ಕ್ರೀನ್ ಮೇಲೆ ನೋಟ್ಸ್ ಇರುವಂತೆ ಮಾಡಬಹುದು.

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.

ಎಸ್ ಪೆನ್ ಇರುವ ಈ ಟ್ಯಾಬ್ಲೆಟ್ಟಿನಲ್ಲಿ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಪ್ರಾಥಮಿಕ ಕ್ಯಾಮೆರ ಮತ್ತು 2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಲಭ್ಯವಿದೆ. ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇರುವ ಗ್ಯಾಲಕ್ಸಿ ಟ್ಯಾಬ್ ಎ ನಲ್ಲಿ 7300 ಎಂ.ಎ.ಹೆಚ್ ಬ್ಯಾಟರಿ ಇದೆ.

ಸಂಪರ್ಕ ಮತ್ತು ಬೆಲೆ.

ಸಂಪರ್ಕ ಮತ್ತು ಬೆಲೆ.

ವೈಫೈ, ಜಿಪಿಎಸ್, ಬ್ಲೂಟೂಥ್, ಎಫ್.ಎಮ್, 4ಜಿ ಸೌಲಭ್ಯವಿದೆ. ಪ್ರಾಕ್ಸಿಮಿಟಿ ಸೆನ್ಸಾರ್, ಆ್ಯಂಬಿಯಂಟ್ ಲೈಟ್ ಸೆನ್ಸಾರ್, ಆ್ಯಕ್ಸೆಲರೊಮೀಟರ್ ಮತ್ತು ಗೈರೋಸ್ಕೋಪ್ ಇದರಲ್ಲಿದೆ. ಆಫ್ ಕಂಟ್ರಾಕ್ಟ್/ ಅನ್ ಲಾಕ್ಡ್ ಗ್ಯಾಲಕ್ಸಿ ಟ್ಯಾಬ್ ಎ (2016)ನ ಬೆಲೆ 489,000 ವಾನ್ (ಅಂದಾಜು 29,000 ರುಪಾಯಿ).

Best Mobiles in India

English summary
Putting an end to all the speculations, the South Korean tech giant Samsung has officially launched its new Galaxy Tab A featuring S-Pen, that has been launched with Galaxy Note 7. As of now, this tablet has been launched only in South Korea, and will soon make its way other markets in the upcoming days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X