ಪ್ರಯಾಣದ ಸಮಯದಲ್ಲಿ ತೆಗೆದ ಚಿತ್ರಗಳು ಕಳೆದುಹೋಗದಂತಿರಲು 6 ಉಪಾಯಗಳು

|

ಪ್ರಯಾಣ ಮಾಡುವಾಗ ನಿಮಗೆ ಆಸಕ್ತಿ ಇರುವ ಒಂದು ವಿಷಯ ಯಾವುದು ಮತ್ತು ಪ್ರಯಾಣ ಮುಗಿಸಿ ಬಂದ ನಂತರ ಯಾವ ಒಂದನ್ನು ನೀವು ಕಾಯ್ದಿರಿಸಲು ಇಚ್ಛಿಸುತ್ತೀರಿ. ಅದಕ್ಕೆ ನಿಮ್ಮ ಉತ್ತರ ಖಂಡಿತ ಛಾಯಾಚಿತ್ರಗಳು. ಅವು ಕೇವಲ ಸಾವಿರ ಮಾತನ್ನು ಹೇಳುವುದಿಲ್ಲಾ, ಸುಂದರ ನೆನಪುಗಳು ಘಟನೆಗಳ ಕಥೆಯನ್ನು ಹೇಳುತ್ತವೆ.

ಪ್ರಯಾಣದ ಸಮಯದಲ್ಲಿ  ತೆಗೆದ ಚಿತ್ರಗಳು ಕಳೆದುಹೋಗದಂತಿರಲು 6 ಉಪಾಯಗಳು

ಆದರೆ ನಿಮ್ಮ ಎಲ್ಲಾ ಛಾಯಾಚಿತ್ರಗಳನ್ನು ಹೊಂದಿದ ಮೆಮೊರಿ ಕಾರ್ಡ್ ಹಾಳಾದರೆ ಏನು ಮಾಡುತ್ತೀರಾ ಅಥವಾ ನಿಮ್ಮ ಕ್ಯಾಮೆರಾ ಕಳೆದು ಹೋದರೆ ಇಲ್ಲಾ ನೀವು ತಪ್ಪಿ ಉಪಕರಣವನ್ನು ಫಾರ್ಮೆಟ್ ಮಾಡಿದರೆ ? ನೆನೆಸಿದರೆ ಹೆದರಿಕೆ ಅಲ್ಲವೇ ? ಆದರೆ ಚಿಂತಿಸುವ ಅಗತ್ಯವಿಲ್ಲಾ.

ಓದಿರಿ:ಫೇಸ್ ಬುಕ್ಕಿನಲ್ಲಿ ಮಾಡಬಹುದಾದ ನಿಮಗೆ ಗೊತ್ತಿಲ್ಲದ ಹತ್ತು ಅದ್ಭುತ ಸಂಗತಿಗಳು

ಪ್ರಯಾಣಿಸುವಾಗ ಚಿತ್ರಗಳನ್ನು ಕಳೆದುಕೊಳ್ಳದಂತಿರಲು ಇಲ್ಲಿವೆ 6 ಉಪಾಯಗಳು ಹೆಚ್ಚಿನ ಕಾರ್ಡ್ ಸಂಗ್ರಹಿಸುವುದರಿಂದ ಹಿಡಿದು ಅದರ ಬ್ಯಾಕ್‍ಅಪ್ ಮತ್ತು ಕಳೆದು ಹೋದದ್ದನ್ನು ಹಿಂಪಡೆಯುವತನಕ.

ಮೆಮೊರಿ ಕಾರ್ಡ್ ನಿಂದ ನೇರವಾಗಿ ಚಿತ್ರ ಅಳಿಸಿ ಹಾಕುವುದನ್ನು ತಪ್ಪಿಸಿ

ಮೆಮೊರಿ ಕಾರ್ಡ್ ನಿಂದ ನೇರವಾಗಿ ಚಿತ್ರ ಅಳಿಸಿ ಹಾಕುವುದನ್ನು ತಪ್ಪಿಸಿ

ನೀವು ತೆಗೆದ ಚಿತ್ರಗಳ ಬಗ್ಗೆ ನಿಮಗೆ ಸಮಾಧಾನವಿಲ್ಲದಿದ್ದರೆ ಮೆಮೊರಿ ತುಂಬಾ ಕಡಿಮೆ ಇಲ್ಲಾ ಎಂದಾದಲ್ಲಿ ತತ್ ಕ್ಷಣವೆ ಚಿತ್ರಗಳನ್ನು ಅಳಿಸಲು ಹೋಗಬೇಡಿ. ಏಕೆಂದರೆ ಇದರಿಂದ ಎಲ್ಲಾ ಚಿತ್ರಗಳನ್ನು ನೋಡಿಕೊಳ್ಳುವ ಒಳಗಿನ ಕಡತದ ವ್ಯವಸ್ಥೆ ಹಾಳಾಗುತ್ತದೆ ಇದರಿಂದ ಮೆಮೊರಿ ಕಾರ್ಡ್ ಹಾಳಾಗುವ ಸಾಧ್ಯತೆ ಇರುತ್ತದೆ. ಗಣಕಯಂತ್ರದಿಂದ ಕೂಡ ಅಳಿಸ ಬಾರದು ಅದರ ಬದಲಿಗೆ ಅದೆಲ್ಲವನ್ನು ಮೆಮೊರಿ ಕಾರ್ಡ್ ನಿಂದ ನಕಲು ಮಾಡಿ ಆ ನಂತರ ಪೂರ್ತಿ ಮೆಮೊರಿ ಕಾರ್ಡ್ ಅನ್ನೇ ಫಾರ್ಮೆಟ್ ಮಾಡಬೇಕು ಕ್ಯಾಮೆರಾ ಉಪಯೋಗಿಸಿ. ಈ ವಿಧಾನದಿಂದ ಕಡತದ ವ್ಯವಸ್ಥೆ ರಿಫ್ರೆಷ್ ಆಗುವುದಲ್ಲದೆ ಭವಿಷ್ಯದಲ್ಲಿ ಹಾಳಾಗುವ ಸಾಧ್ಯತೆಗಳು ತುಂಬಾ ಕಡಿಮೆ.

ಒಂದಕ್ಕಿಂತ ಹೆಚ್ಚು  ಕಾರ್ಡ್ ಬಳಸಿ

ಒಂದಕ್ಕಿಂತ ಹೆಚ್ಚು ಕಾರ್ಡ್ ಬಳಸಿ

ರಜೆಗೆಂದು ಹೊರಡುವಾಗ ಕೇವಲ ಒಂದೇ ಮೆಮೊರಿಕಾರ್ಡ್ ಒಯ್ಯದೆ ಒಂದಕ್ಕಿಂತ ಹೆಚ್ಚು ಕಾರ್ಡ್ ಖರೀದಿಸಿ. ಒಂದನ್ನೇ ನಂಬಿಕೊಂಡಿರುವುದು ಅಪಾಯ. ಏಕೆಂದರೆ ಒಂದು ಮೆಮೊರಿ ಕಾರ್ಡ್ ಹಾಳಾಗಬಹುದು, ಮುರಿಯಬಹುದು, ಕಳೆದು ಹೋಗಬಹುದು ಆಗ ನಿಮ್ಮೆಲ್ಲಾ ಚಿತ್ರಗಳನ್ನು ಒಂದೇ ಬಾರಿಗೆ ಕಳೆದುಕೊಳ್ಳುವಿರಿ. ಅದರ ಬದಲಿಗೆ ಒಂದಕ್ಕಿಂತ ಹೆಚ್ಚು ಮೆಮೊರಿ ಕಾರ್ಡ್ ತೆಗೆದುಕೊಂಡು ಹೋಗಿ ಬಾರಿ ಬಾರಿಯಾಗಿ ಉಪಯೋಗಿಸಿ. ಇದರಿಂದ ಒಂದನ್ನು ನೀವು ಕಳೆದುಕೊಂಡರು ಕೂಡಾ ಎಲ್ಲಾ ಚಿತ್ರಗಳನ್ನು ಕಳೆದುಕೊಳ್ಳುವುದಿಲ್ಲಾ.

ಕಾರ್ಡ್ ಹೊದಿಕೆಯಲ್ಲಿಡಿ

ಕಾರ್ಡ್ ಹೊದಿಕೆಯಲ್ಲಿಡಿ

ಈಗ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಮೆಮೊರಿ ಕಾರ್ಡ್ ಇದೆ ಎಂದ ಮೇಲೆ ಅದರ ಕಾಳಜಿಯ ಅವಶ್ಯಕತೆ ಕೂಡ ಬರುತ್ತದೆ. ಬೇರೆಯದರಂತೆ ಮೆಮೊರಿ ಕಾರ್ಡ್ ಕೂಡ ನೀರು,ಧೂಳು ಮತ್ತು ಅತಿ ಉಷ್ಣತೆಯಿಂದ ಹಾನಿಗೊಳಗಾಗುತ್ತದೆ. ಹೀಗಾಗಿ ಅದರಿಂದ ಕಾಪಾಡಲು 22 ಮೆಮೊರಿ ಕಾರ್ಡ್‍ಗಳನ್ನು ಹಿಡಿದಿಡಬಲ್ಲ 8 ಪ್ಲಾಸ್ಟಿಕ್ ಪುಟಗಳನ್ನು ಹೊಂದಿದ ಇಕೊ ಫ್ಯೂಸ್ಡ್ ಕಾರ್ಡ್ ಕ್ಯಾರಿಂಗ್ ಕೇಸ್ ಅನ್ನು ತೆಗೆದುಕೊಳ್ಳಬಹುದು.

ಬ್ಯಾಕ್ ಅಪ್

ಬ್ಯಾಕ್ ಅಪ್

ನಿಮ್ಮ ಚಿತ್ರಗಳನ್ನು ಉಳಿಸಿಕೊಳ್ಳಲು ಅತ್ಯಂತ ಒಳ್ಳೆ ಉಪಾಯವೆಂದರೆ ಬ್ಯಾಕ್ ಅಪ್ ತೆಗೆಯುವುದು ಮತ್ತು ಬ್ಯಾಕ್ ಅಪ್ ನ ಮತ್ತಷ್ಟು ಬ್ಯಾಕ್ ಅಪ್ ತೆಗೆಯುವುದು(ನೀವು sಸಂಶಯಗ್ರಸ್ಥರಾಗಿದ್ದರೆ). ನಿಮ್ಮ ಚಿತ್ರಗಳನ್ನು ಲ್ಯಾಪ್‍ಟಾಪ್ ನಲ್ಲಿ ಇಡಬಹುದು ಆದರೆ ಪ್ರಯಾಣಿಸುವಾಗ ಅದನ್ನು ತೆಗೆದುಕೊಂಡು ಹೋಗುವುದು ತುಂಬಾ ಭಾರವೆನಿಸುವುದಾದರೆ ಕ್ರೊಮೊಬುಕ್ ಆಥವಾ ಟಾಬ್ಲೆಟ್ ಖರೀದಿಸಲು ಸಲಹೆ ನೀಡುತ್ತೇವೆ. ನೀವು ಟಾಬ್ಲೆಟ್ ಉಪಯೋಗಿಸುವುದಾದರೆ ನಿಮಗೆ ಒಟಿಜಿ ಕೇಬಲ್ ನ ಅವಶ್ಯಕತೆಯು ಬೀಳುತ್ತದೆ.

ಕ್ಲೌಡ್ ಸಂಗ್ರಹ

ಕ್ಲೌಡ್ ಸಂಗ್ರಹ

ನಿಮಗೆ ಲ್ಯಾಪ್ ಟಾಪ್ ಅಥವಾ ಟಾಬ್ಲೆಟ್ ನಲ್ಲಿ ಇಡಲಾಗುವುದಿಲ್ಲಾ ಅಥವಾ ಇನ್ನೂ ಹೆಚ್ಚಿನ ಸುರಕ್ಷತೆ ಬೇಕು ಮತ್ತು ಬೇಕಾದಾಗಲೆಲ್ಲಾ ಪಡೆಯುವಂತಿರಬೇಕೆಂದಾದರೆ ನಿಮಗಿರುವ ಇನ್ನೊಂದು ಆಯ್ಕೆ ಕ್ಲೌಡ್ ಸಂಗ್ರಹ. ಇದರಲ್ಲಿ ಎರಡು ಕೌಡ್ ಸೇವೆಗಳಿವೆ. ಉಚಿತ ಸೇವೆ ಹಾಗು ಅಪರಿಮಿತ ಸ್ಥಾನ ಒದಗಿಸುವ ಅಮೆಜೊನ್ ಪ್ರೈಮ್ ಫೊಟೊಸ್ ಮತ್ತು ಗೂಗಲ್ ಫೋಟೊಸ್.

ಡಾಟಾ ರಿಕವರಿ ಪ್ರೊಗ್ರಾಮ್

ಡಾಟಾ ರಿಕವರಿ ಪ್ರೊಗ್ರಾಮ್

ಮೇಲಿನ ಎಲ್ಲಾ ಆಯ್ಕೆಗಳು ನಿಮಗೆ ಹಾಗು ನಿಮ್ಮ ಕಾರ್ಡ್ ಗೆ ಸರಿ ಹೊಂದದೆ ಕಾರ್ಡ್ ಹಾಳಾಯಿತು ಎಂದಾದಲ್ಲಿ ಹೇಗೆ? ಸುಲಭ, ನಿಮ್ಮ ಅತ್ಯಮೂಲ್ಯ ಚಿತ್ರಗಳನ್ನು ಪುನಃ ತರಲು ಡಾಟಾ ರಿಕವರಿ ಪ್ರೊಗ್ರಾಮ್ ಗಾಗಿ ನೋಡಿ. ಬಹಳಷ್ಟು ಗಣಕಯಂತ್ರಗಳು ತಮ್ಮದೇ ಆದ ಡಾಟಾ ರಿಕವರಿ ಪ್ರೊಗ್ರಾಮ್ ಹೊಂದಿರುತ್ತವೆ ಆದರೆ ಅದು ಕೂಡ ಉಪಯೊಗಕ್ಕೆ ಬರದಿದ್ದರೆ ಆಗ ರೆಕುವಾ, ಫೊಟೊರೆಕ್ ಮತ್ತು ಪಾಂಡೊರಾ ರಿಕವರಿ ಎನ್ನುವ ತಂತ್ರಾಶಗಳ ಸಹಾಯ ಪಡೆಯಬಹುದು. ಈಗ ಇದನ್ನೆಲ್ಲಾ ತಿಳಿದ ನಂತರ ನೀವೆಂದಿಗೂ ಚಿತ್ರಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸುವುದಿಲ್ಲಾ ಮತ್ತು ರಜೆಯ ಸುಂದರ ಕ್ಷಣಗಳನ್ನು ಚಿತ್ರ ನೋಡುತ್ತಾ ಆನಂದಿಸುವಿರಿ ಎಂದು ಆಶಿಸುತ್ತೇವೆ.

Best Mobiles in India

English summary
So what is the one thing that you are interested in while traveling and what is the one thing you treasure when you get back from your trip? The answer is obviously, Photos. Not only they say that a picture speaks thousand words, but it also stores all those beautiful memories and wonderful moments.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X