ಸ್ಮಾರ್ಟ್‌ಫೋನ್ ಇಂಟರ್ನೆಟ್ ವೇಗಗೊಳಿಸಲು 7 ಸಲಹೆಗಳು

By Shwetha
|

ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್ ಬಳಸುವುದು ಇಂದು ಸರ್ವೇ ಸಾಮಾನ್ಯವಾಗಿದ್ದು ಹೆಚ್ಚಿನವರು ಸ್ಮಾರ್ಟ್‌ಫೋನ್ ಖರೀದಿಯನ್ನು ಈ ಅವಶ್ಯಕತೆಗಳಿಗೆ ಅನುಗುಣವಾಗಿಯೇ ನಡೆಸುತ್ತಾರೆ. ಆದರೆ ಒಮ್ಮೊಮ್ಮೆ ನೆಟ್‌ವರ್ಕ್ ಸಮಸ್ಯೆ ನಿಮ್ಮ ಫೋನ್ ಇಂಟರ್ನೆಟ್ ವೇಗವನ್ನು ನಿಧಾನಗೊಳಿಸುತ್ತದೆ. ಆದರೆ ಇದೇನು ಅಷ್ಟು ದೊಡ್ಡ ಸಮಸ್ಯೆಯಲ್ಲ.

ಓದಿರಿ: ಫೋನ್‌ನ 3ಜಿಯನ್ನು ವೇಗವಾಗಿಸುವುದು ಹೇಗೆ?

ಏಕೆಂದರೆ ಒಮ್ಮೊಮ್ಮೆ ನಿಮ್ಮ ಫೋನ್‌ನಲ್ಲಿರುವ ಇಂಟರ್ನೆಟ್ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಯಾವುದಾದರೂ ಸೌಲಭ್ಯಕ್ಕೆ ತನ್ನ ಸೇವೆಯನ್ನು ಮೀಸಲಾಗಿಟ್ಟಿರಬಹುದು. ಅದೇನು ಎಂಬುದನ್ನು ಪತ್ತೆಹಚ್ಚಿದರೆ ನಿಮ್ಮ ಕೆಲಸ ಮುಗಿದಂತೆಯೇ ಸಮಸ್ಯೆಯನ್ನು ಬಗೆಹರಿಸುವ ವಿಧಾನ ನಿಮಗೆ ದೊರೆಯುವುದು ಖಂಡಿತ. ಹಾಗಿದ್ದರೆ ಆ ಸಲಹೆಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ವೇಗ ಗಮನಿಸಿಕೊಳ್ಳಿ

ವೇಗ ಗಮನಿಸಿಕೊಳ್ಳಿ

ನಿಮ್ಮ ವೈಫೈ ಸಂಪರ್ಕಗಳು ಯಾವುದಾದರೂ ಸೇವೆಗಳನ್ನು ಹೊಂದಿದೆಯೇ ಇಲ್ಲವೇ ಹೆಚ್ಚುವರಿ ಫೀಸ್‌ಗಳನ್ನು ಬಳಸಿಕೊಳ್ಳುತ್ತಿದೆಯೇ ಎಂಬುದನ್ನು ನೋಡಿ. ಇಂಟರ್ನೆಟ್ ವೇಗ ಅದು 3ಜಿಯಾಗಿದ್ದಲ್ಲಿ ಇದರ ವೇಗ ಹೇಗಿದೆ ಎಂಬುದನ್ನು ಗಮನಿಸಿಕೊಳ್ಳಿ. ಗ್ರಾಹಕ ಸೇವಾ ವೇದಿಕೆಯನ್ನು ಕೂಡಲೇ ಸಂಪರ್ಕಿಸಿಕೊಳ್ಳಿ.

ಚಟುವಟಿಕೆ ನಿಲ್ಲಿಸಿ

ಚಟುವಟಿಕೆ ನಿಲ್ಲಿಸಿ

ಹೆಚ್ಚಿನ ಫೋನ್‌ಗಳು ತಮ್ಮ ಇಂಟರ್ನೆಟ್‌ಗಳನ್ನು ಅಧಿಸೂಚನೆಗಳು, ಆನ್‌ಲೈನ್ ಡೇಟಾಬೇಸ್ ಅಪ್‌ಡೇಟ್ಸ್, ಹುಡುಕಾಟಕ್ಕಾಗಿ ಬಳಸಿಕೊಳ್ಳುತ್ತದೆ. ಮೊದಲು ಇದನ್ನು ತಡೆಯಿರಿ. ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳನ್ನು ನಿವಾರಿಸಿಕೊಳ್ಳಿ.

ಕಾರ್ಯಕ್ಷಮತೆಯಲ್ಲಿ ಸುಧಾರಣೆ

ಕಾರ್ಯಕ್ಷಮತೆಯಲ್ಲಿ ಸುಧಾರಣೆ

ಆಂಡ್ರಾಯ್ಡ್ ಅಥವಾ ಐಓಎಸ್ ಹೆಚ್ಚಾಗಿ ಹೊಸ ಹೊಸ ಫೀಚರ್‌ಗಳೊಂದಿಗೆ ಅಪ್‌ಗ್ರೇಡ್ ಆಗುತ್ತಿರುತ್ತದೆ. ಫೋನ್‌ನ ನೆಟ್‌ವರ್ಕ್‌ಗಳಿಗೆ ಈ ಅಪ್‌ಗ್ರೇಡ್‌ಗಳು ಯಾವುದೇ ತೊಂದರೆಯನ್ನುಂಟು ಮಾಡದೆಯೇ ಅವುಗಳ ಕಾರ್ಯಕ್ಷಮತೆಯಲ್ಲಿ ಸುಧಾರಣೆಯನ್ನು ತರುತ್ತವೆ. ಆದರೆ ನಿಮ್ಮ ಇಂಟರ್ನೆಟ್‌ ಸಮಸ್ಯೆಗೆ ಈ ಅಪ್‌ಗ್ರೇಡ್‌ಗಳು ಪರಿಹಾರವನ್ನು ನೀಡುವುದು ಖಂಡಿತ.

ಡೇಟಾ ಕ್ಯಾಶ್ ನಿವಾರಣೆ

ಡೇಟಾ ಕ್ಯಾಶ್ ನಿವಾರಣೆ

ಆಂಡ್ರಾಯ್ಡ್ ಮತ್ತು ಐಓಎಸ್ ಸ್ಮಾರ್ಟ್‌ಫೋನ್‌ಗಳು ಡೇಟಾ ಕ್ಯಾಶ್ ಫೀಚರ್ ಅನ್ನು ಹೊಂದಿದ್ದು ನಿಮ್ಮ ಹೆಚ್ಚುವರಿ ಡೇಟಾ ಕ್ಯಾಶ್ ನಿವಾರಣೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ. ಡೇಟಾ ಕ್ಯಾಶ್‌ಗಳ ನಿವಾರಣೆಯನ್ನು ಮಾಡಿಕೊಂಡಾಗೆ ಇಂಟರ್ನೆಟ್ ವೇಗ ವರ್ಧನೆಯಾಗುವುದೂ ಖಂಡಿತ.

ಇಂಟರ್ನೆಟ್ ವೇಗ

ಇಂಟರ್ನೆಟ್ ವೇಗ

ಡೇಟಾ ಕ್ಯಾಶ್ ಅನ್ನು ನೆಟ್‌ವರ್ಕ್ ಡಿವೈಸ್‌ಗಳ ಕಾರ್ಯಕ್ಷಮತೆ ಸುಧಾರಣೆಗಾಗಿಯೇ ವಿನ್ಯಾಗೊಳಿಸಲಾಗಿದ್ದು, ಇದರ ಬಳಕೆಯನ್ನು ನಾವು ಹೆಚ್ಚು ಮಾಡಿಕೊಂಡಂತೆಲ್ಲಾ ಇಂಟರ್ನೆಟ್ ವೇಗದ ಜೊತೆಗೆ ಫೋನ್‌ನ ಕಾರ್ಯಕ್ಷಮತೆಯೂ ಸುಧಾರಣೆಯಾಗುತ್ತದೆ.

ಇಂಟರ್ನೆಟ್ ಸಮಸ್ಯೆ

ಇಂಟರ್ನೆಟ್ ಸಮಸ್ಯೆ

ನೀವು ಹೆಚ್ಚುವರಿ ಇಂಟರ್ನೆಟ್ ಸಮಸ್ಯೆಯನ್ನು ಹೊಂದಿದ್ದೀರಿ ಎಂದಾದಲ್ಲಿ, ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ಫೋನ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ವಿಜೆಟ್‌ಗಳ ನಿವಾರಣೆ

ವಿಜೆಟ್‌ಗಳ ನಿವಾರಣೆ

ನೀವು ಕೆಲವೊಂದು ಅಪ್ಲಿಕೇಶನ್‌ಗಳನ್ನು ಬಳಸುತ್ತಿಲ್ಲ ಎಂದಾದಲ್ಲಿ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ. ಅಂತೆಯೇ ವಿಜೆಟ್‌ಗಳ ನಿವಾರಣೆಯನ್ನು ಮಾಡಿ. ಹೋಮ್ ಸ್ಕ್ರೀನ್‌ನಿಂದ ಇದನ್ನು ನಿವಾರಿಸಿಕೊಂಡು ಇಂಟರ್ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಿ

Best Mobiles in India

English summary
In this article we are mentioning top tips on how to speed up phones internet connection through easy steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X