ಹಳೆಯ ಪಿಸಿಗೆ ಗುಡ್‌ಬೈ ಹೇಳುವ ಸಮಯ ಬಂದಾಯಿತು! ತಿಳಿದುಕೊಳ್ಳುವುದು ಹೇಗೆ?

By Shwetha
|

ನಿಮ್ಮ ಹಳೆಯ ಪಿಸಿಯನ್ನು ಮೂಟೆ ಕಟ್ಟುವ ಸಮಯವಾಯಿತು ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಾಗಿ ಯೋಚಿಸುತ್ತಿದ್ದೀರಾ? ಇದಕ್ಕಾಗಿ ಕೆಲವೊಂದು ಸಲಹೆಗಳನ್ನು ನೀವು ಪಾಲಿಸಬೇಕಾಗಿದ್ದು ಆ ಮೂಲಕ ಹೊಸ ಪಿಸಿಯನ್ನು ಖರೀದಿಸಿ ಹಳೆಯದಕ್ಕೆ ಗುಡ್ ಬೈ ಹೇಳಬಹುದಾಗಿದೆ.

ಓದಿರಿ: ಬೆಚ್ಚಿಬೀಳಿಸುವ ಭಯಾನಕ ಫೇಸ್‌ಬುಕ್ ಪುಟಗಳು

ನಿಮ್ಮ ಪಿಸಿಯನ್ನು ಅಪ್‌ಗ್ರೇಡ್ ಮಾಡುವ ಸಮಯ ಬಂದಾಯಿತು ಎಂಬುದನ್ನು ತಿಳಿಸುವ ಕೆಲವೊಂದು ಟ್ರಿಕ್ಸ್‌ಗಳನ್ನು ನಾವು ಇಲ್ಲಿ ನೀಡುತ್ತಿದ್ದು ಇದು ನಿಮಗೆ ಸಹಾಯ ಮಾಡಲಿದೆ ಬನ್ನಿ ಇಂದಿನ ಲೇಖನದಲ್ಲಿ ಆ ಟ್ರಿಕ್ಸ್‌ಗಳನ್ನು ನಾವು ತಿಳಿಸುತ್ತಿದ್ದು ಅದು ಸಹಕಾರಿಯಾಗಲಿದೆ.

#1

#1

ಇಂದಿನ ದಿನಗಳಲ್ಲಿ ಆಪರೇಟಿಂಗ್ ಸಿಸ್ಟಮ್‌ನ ನಿಯಮಿತವಾಗಿ ಅಪ್‌ಡೇಟ್ ಆಗುತ್ತಿದ್ದು ತಮ್ಮ ಸಿಸ್ಟಮ್‌ಗಳಲ್ಲಿ ಅತ್ಯಾಧುನಿಕ ಓಎಸ್ ಅನ್ನು ಬಳಕೆದಾರರು ಎದುರು ನೋಡುತ್ತಾರೆ. ಪ್ರತಿಯೊಂದು ನವೀಕರಣವು ಬಗ್ ಫೀಕ್ಸ್‌ಗಳನ್ನು, ಹೊಸ ವಿಶೇಷತೆಗಳನ್ನು ಪ್ರಾಯೋಜಿಸುತ್ತಿದ್ದು, ಸಾಫ್ಟ್‌ವೇರ್ ರನ್ ಮಾಡಲು ಕನಿಷ್ಟ ಹಾರ್ಡ್‌ವೇರ್ ಅಗತ್ಯತೆಗಳನ್ನು ಇದು ಪೂರೈಸುತ್ತದೆ.

#2

#2

ಗೇಮಿಂಗ್ ಒಂದು ವೆಚ್ಚದಾಯಕ ವ್ಯವಹಾರ ಎಂದೆನಿಸಿದ್ದು ಪಿಸಿಗಳನ್ನು ಅಪ್‌ಗ್ರೇಡ್ ಮಾಡುವುದು ಇತ್ತೀಚಿನ ಗೇಮ್ಸ್ ಮತ್ತು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತದೆ. ನಿಮ್ಮ ಸಿಸ್ಟಮ್ ಇದಕ್ಕೆ ಪೂರಕವಾಗಿಲ್ಲ ಎಂದಾದಲ್ಲಿ ಹೊಸದನ್ನು ಕೊಂಡುಕೊಳ್ಳುವ ಸಮಯವಾಯಿತು ಎಂದೇ ಅದರರ್ಥ.

#3

#3

ನಿಮ್ಮ ಪಿಸಿಯ ನಿಧಾನತೆಯನ್ನು ಸೂಕ್ತವಾಗಿ ವಿವರಿಸಬಹುದಾಗಿದೆ. ನಿಮ್ಮ ಬ್ರೌಸರ್‌ನಲ್ಲಿ ಸಾಕಷ್ಟು ಟ್ಯಾಬ್‌ಗಳು ತೆರೆದಾಗ ಕಂಪ್ಯೂಟರ್ ನಿಧಾನವಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಪ್ರಿಂಗ್ ಕ್ಲೀನ್ ಅನ್ನು ಬಳಸುವ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

#4

#4

ನೀವು ಹಳೆಯ ಪಿಸಿಯನ್ನು ಹೊಂದಿದ್ದೀರಿ ಎಂದಾದಲ್ಲಿ, ಇದನ್ನು ದೊಡ್ಡದಾದ 4 ಕೆ ಮಾನಿಟರ್‌ಗೆ ಸಂಪರ್ಕಪಡಿಸಲು ಆಗುವುದಿಲ್ಲ, ಸೂಪರ್ ಫಾಸ್ಟ್ ವೈಫೈ ಜೊತೆಗೂ ಇದು ಕಾಂಪಿಟೇಬಲ್ ಎಂದೆನಿಸುವುದಿಲ್ಲ. ಪಿಸಿಯು ಕಡಿಮೆ ರೆಸಲ್ಯೂಶನ್‌ನೊಂದಿಗೆ ನಿಮ್ಮನ್ನು ನಿರ್ಬಂಧಿಸುತ್ತದೆ. ನೀವು ಹೊಸ ಪಿಸಿಗೆ ಅಪ್‌ಗ್ರೇಡ್ ಮಾಡಿದಲ್ಲಿ, ಈ ಎಲ್ಲಾ ಫೀಚರ್‌ಗಳನ್ನು ಅದು ಬೆಂಬಲಿಸುತ್ತದೆ ಮತ್ತು ಇನ್‌ಬಿಲ್ಟ್ ಆಗಿ ಇರುತ್ತದೆ.

#5

#5

ಎಲ್ಲಿಯಾದರೂ ನಿಮ್ಮ ಹಾರ್ಡ್ ಡ್ರೈವ್ ಸಂಗ್ರಹಣೆ ಸಮಸ್ಯೆಯನ್ನು ಅನುಭವಿಸುತ್ತಿದ್ದಲ್ಲಿ, RAM ಸಂಪೂರ್ಣ ಬಳಕೆಯಲ್ಲಿರುವುದನ್ನು ನೀವು ಕಾಣುತ್ತೀರಿ ಮತ್ತು ಕೆಲವೇ ಕೆಲವು ಅಪ್ಲಿಕೇಶನ್‌ಗಳನ್ನು ನಿಮಗೆ ತೆರೆಯಲು ಸಾಧ್ಯವಾಗುತ್ತದೆ.

#6

#6

ಸಮಯದೊಂದಿಗೆ, ನಿಮ್ಮ ಪಿಸಿಯನ್ನು ಆರಂಭಿಸುವಾಗ ಶಬ್ಧ ಮಾಡುತ್ತಿದ್ದರೆ ಫ್ಯಾನ್ ಸಿಪಿಯುಗಿಂತ ಹೆಚ್ಚಿನ ಸದ್ದನ್ನು ಉಂಟುಮಾಡುತ್ತಿದ್ದರೆ ನಿಮ್ಮ ಕಂಪ್ಯೂಟರ್ ಅನ್ನು ಬದಲಾಯಿಸುವ ಸಮಯ ಬಂದಾಯಿತು ಎಂದೇ ಅರ್ಥ.

#7

#7

ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗುವುದು ಮತ್ತು ವೈಫೈ ಸಂಪರ್ಕ ಕಡಿತಗೊಳ್ಳುವುದು ಇದೇ ಮೊದಲಾದ ಸಮಸ್ಯೆಗಳನ್ನು ಹಳೆಯ ಕಂಪ್ಯೂಟರ್ ಎದುರುಗೊಳ್ಳುತ್ತಿರುತ್ತದೆ. ನೀವು ಫೀಕ್ಸ್ ಮಾಡಿರುವ ಮಾಲ್‌ವೇರ್ ದೋಷಗಳು ಪುನಃ ಎದುರುಗೊಂಡು ಸಂಪೂರ್ಣ ವ್ಯವಸ್ಥೆಯನ್ನು ಫ್ರೀಜ್ ಮಾಡಿಬಿಡುತ್ತದೆ.

Best Mobiles in India

English summary
We would know what tricks will actually work and what will not and will just wiggle some cables and plugs to connect properly..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X