ಪ್ರಯೋಜನಕಾರಿ ಗೂಗಲ್ ಸರ್ಚ್‌ನ ಅನೇಕ ಮುಖಗಳು

Written By:

ಇಂದು ಇಂಟರ್ನೆಟ್‌ನಲ್ಲಿ ಅತೀ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತಿದ್ದು ಅವುಗಳಲ್ಲಿ ನಮಗೆ ಬೇಕಾದ್ದನ್ನು ಹುಡುಕುವುದು ಎಂದರೆ ತಲೆನೋವಿನ ಸಂಗತಿಯಾಗಿದೆ. ಆದ್ದರಿಂದಲೇ ವೆಬ್‌ನ ವಿಷಯದಲ್ಲಿ ಹುಡುಕಲು ಸಾಧ್ಯವಾಗಬಹುದಾದ ಮಾಹಿತಿಗಾಗಿ ಸರ್ಚ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಂರ್ಜಾಲದಲ್ಲಿ ವಿಷಯವನ್ನು ಹುಡುಕುವುದಕ್ಕಾಗಿ ಜನರು ಸರ್ಚ್ ಎಂಜಿನ್‌ಗಳನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ: ಬ್ಲ್ಯೂಟೂತ್ ಮತ್ತು ವೈಫೈ ಯಾವುದು ಉತ್ತಮ?

ಗೂಗಲ್ ಅನ್ನು ಹೆಚ್ಚು ಶಕ್ತಿಯುತ ಮತ್ತು ಹೆಸರುವಾಸಿ ಸರ್ಚ್ ಎಂಜಿನ್ ಎಂದು ಪರಿಗಣಿಸಲಾಗಿದ್ದು ನೀವು ಪ್ರಶ್ನೆಯಲ್ಲಿ ವಿಷಯವನ್ನು ಟೈಪಿಸಿದರೆ ಸಾಕು ಇದು ಹುಡುಕಾಲ ಫಲಿತಾಂಶಗಳನ್ನು ನಿಮಗೆ ಒದಗಿಸುತ್ತದೆ. ಇಂದಿನ ಲೇಖನದಲ್ಲಿ ಗೂಗಲ್ ಸರ್ಚ್ ಎಂಜಿನ್ ಬಳಸಿಕೊಂಡು ಮಾಹಿತಿಗಳನ್ನು ಪಡೆಯುವುದು ಹೇಗೆಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆದಷ್ಟು ಸರಳವಾಗಿರಿಸಿ

#1

ನಿಮ್ಮ ಹುಡುಕಾಟವನ್ನು ಆದಷ್ಟು ಸರಳ ಮತ್ತು ವೆಬ್ ಸ್ನೇಹಿಯಾಗಿರಿಸಿ. ಒಂದು ಅಥವಾ ಎರಡು ಪದಗಳನ್ನು ನಮೂದಿಸುವ ಮೂಲಕ ಹುಡುಕಾಟವನ್ನು ಆರಂಭಿಸಿ. ನೀವು ವೆಬ್‌ ಹುಡುಕಾಟದಲ್ಲಿ ಆದಷ್ಟು ಕಡಿಮೆ ಪದಗಳನ್ನು ಬಳಸಿದಂತೆ ಹುಡುಕಾಟ ಫಲಿತಾಂಶ ಉತ್ತಮವಾಗಿರುತ್ತದೆ.

ಕೀವರ್ಡ್‌ಗಳ ಪ್ರಕಾರ

#2

ನಿಮ್ಮ ಹುಟುಕಾಟವನ್ನು ಅರ್ಥಪೂರ್ಣಗೊಳಿಸಲು ಸರಿಯಾದ ಕೀವರ್ಡ್‌ಗಳನ್ನು ಬಳಸಿ. ಹುಡುಕಾಟ ಫಲಿತಾಂಶಗಳು ಕೀವರ್ಡ್‌ಗಳನ್ನು ಆಧರಿಸಿರುತ್ತದೆ. ಇದರಿಂದ ಮಾತ್ರವೇ ಫಲಿತಾಂಶಗಳು ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ.

 ಅನಗತ್ಯ ಅಂಶಗಳನ್ನು ಬಿಡಿ

#3

ನಿಮ್ಮ ಹೆಚ್ಚಿನ ಕಾಗುಣಿತ ದೋಷಗಳನ್ನು ಸರಿಪಡಿಸುವಲ್ಲಿ ಗೂಗಲ್ ನಿಪುಣನಾಗಿದೆ ಆದ್ದರಿಂದ ಹುಡುಕಾಡುವಾಗ ಕಾಗುಣಿತ, ವ್ಯಾಕರಣ ತಪ್ಪುಗಳುನ್ನು ಗಮನಿಸದೇ ನಿಮ್ಮ ಹುಡುಕಾಟವನ್ನು ಆರಂಭಿಸಿ.

ಸಾಮಾಜಿಕ ಹುಡುಕಾಟ

#4

ಸಾಮಾಜಿಕ ತಾಣಗಳು ಮತ್ತು ವ್ಯಕ್ತಿಗಳ ಹುಡುಕಾಟದಲ್ಲಿ ಗೂಗಲ್ ಅಪರಿಮಿತ ಬುದ್ಧಿಯನ್ನ ಪಡೆದುಕೊಂಡಿದೆ.

ಸೂರ್ಯೋದಯ ಮತ್ತು ಸೂರ್ಯಾಸ್ಥ ಸಮಯವನ್ನು ಪಡೆದುಕೊಳ್ಳಿ

#5

ಗೂಗಲ್ ಅನ್ನು ಬಳಸಿಕೊಂಡು ಅನೇಕ ಪ್ರದೇಶದ ಸೂರ್ಯೋದಯ ಮತ್ತು ಸೂರ್ಯಾಸ್ಥ ಸಮಯ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬಹುದು.

 ಸಿನೋನಿಮ್ ಹುಡುಕಾಟ

#6

ನೀವು ಗೂಗಲ್‌ನಲ್ಲಿ ನಿಮಗೆ ಬೇಕಾದ್ದನ್ನು ಹುಡುಕಾಡುವಾಗ ನಿರ್ದಿಷ್ಟ ಪದಕ್ಕೆ ಅನುಗುಣವಾಗಿ ಅದೇ ರೀತಿಯ ಬೇರೆ ವಿಷಯಗಳನ್ನು ಹುಡುಕಾಡಬಹುದು.

ಸಂಖ್ಯೆಗಳಿಗಾಗಿ ಹುಡುಕಾಡಿ

#7

ದಿನಾಂಕ, ಬೆಲೆ ಮತ್ತು ಅಳತೆಗಳಿಗನುಗುಣವಾಗಿ ಹುಡುಕಾಡಲು ಗೂಗಲ್‌ಗೆ ನೀವು ತಿಳಿಸಬಹುದು.

ಫೈಲ್ ಪ್ರಕಾರಗಳಿಗೆ ಅನುಗುಣವಾಗಿ ಹುಡುಕಿ

#8

ನಿಮ್ಮ ಪ್ರಶ್ನೆಗಾಗಿ ನಿರ್ದಿಷ್ಟ ಫೈಲ್ ಪ್ರಕಾರ ಮತ್ತು ಪ್ರಶ್ನೆಗಳಿಗೆ ಸರಿ ಹೊಂದಿದಂತೆ ಗೂಗಲ್‌ನಲ್ಲಿ ನಿಮಗೆ ಹುಡುಕಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about A Guide To Better Google Search Techniques.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot