ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

Posted By:

ಆನ್‌ಲೈನ್‌ಲ್ಲಿ ಮೊಬೈಲ್‌ ಖರೀದಿಸುವ ಮಂದಿ ಹೆಚ್ಚಾಗುತ್ತಿದ್ದಾರೆ. ರಿಟೇಲ್‌ ಶಾಪ್‌ಗಿಂತ ಸ್ವಲ್ಪ ಕಡಿಮೆ ಮತ್ತು ನಮ್ಮ ಮನೆಗೆ/ಆಫೀಸ್‌ಗೆ ಮೊಬೈಲ್‌ ತಲುಪುವುದರಿಂದ ಜನ ಆನ್‌ಲೈನ್‌ ಶಾಪಿಂಗ್‌ನಂತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಗಿಝ್‌ಬಾಟ್‌ ಇಂದು ಆನ್‌ಲೈನ್‌ನಲ್ಲಿ ಉತ್ತಮ ಗುಣಮಟ್ಟದ,ಕಡಿಮೆ ಬೆಲೆಯಲ್ಲಿ ನಮಗೆ ಬೇಕಾದ ಮೊಬೈಲ್‌ನ್ನು ಖರೀದಿಸುವುದು ಹೇಗೆ ಎಂಬುದರ ಬಗ್ಗೆ ಸರಳ ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.ನಂತರ ಈ ಮಾಹಿತಿಯನ್ನು ಅನುಸರಿಸಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ ಖರೀದಿಸಿ.

ಇದನ್ನೂ ಓದಿ : ಸ್ಮಾರ್ಟ್‌ಫೋನ್ ಖರೀದಿಗೆ 6 ಟಿಪ್ಸ್

ಇದನ್ನೂ ಓದಿ : ಆನ್‌ಲೈನ್‌ಲ್ಲಿ ಸುಲಭವಾಗಿ ಶಾಪಿಂಗ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಿಕೊಳ್ಳಿ

ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

ಯಾವುದೇ ಸ್ಮಾರ್ಟ್‌ಫೋನ್‌ ಖರೀದಿಸುವ ಮೊದಲು ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆ ಮೊಬೈಲ್‌ಗೆ ಎಷ್ಟು ದರವನ್ನು ನಿಗದಿ ಪಡಿಸಿದ್ದಾರೆ ಎಂದು ತಿಳಿಯುವುದು ಉತ್ತಮ. ಆದರೆ ಸಾಧಾರಣವಾಗಿ ಕಂಪೆನಿಯ ವೆಬ್‌ಸೈಟ್‌ಗಳಲ್ಲಿ ನಿಗದಿ ಮಾಡಿದ ದರಕ್ಕಿಂತ ಕಡಿಮೆ ದರದಲ್ಲಿ ಬೇರೆ ಶಾಪಿಂಗ್‌ ತಾಣಗಳಲ್ಲಿ ಮೊಬೈಲ್‌ ಲಭ್ಯವಾಗುತ್ತದೆ. ಮೊಬೈಲ್‌ ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗಳು
ಸ್ಯಾಮ್‌ಸಂಗ್‌--- samsungindiaestore.com
ನೋಕಿಯಾ --- www.nokia.com

ಹೋಲಿಕೆ ಮಾಡಿ ಖರೀದಿಸಿ

ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

ಮೊಬೈಲ್‌ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದ ಬಳಿಕ ಎರಡು ಕಂಪೆನಿಗಳ ಮೊಬೈಲ್‌ ಇಷ್ಟವಾಗಿ ಯಾವುದು ಖರೀದಿಸಿದರೆ ಉತ್ತಮ ಎಂಬುದರ ಬಗ್ಗೆ ನಿಮ್ಮಲ್ಲಿ ಗೊಂದಲ ಮೂಡಬಹುದು. ಇದಕ್ಕಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ. goprobo ವೆಬ್‌ಸೈಟ್‌ನಲ್ಲಿ ಎರಡು ಮೊಬೈಲ್‌ಗಳ ಹೆಸರನ್ನು ಆರಿಸಿ, ಹೋಲಿಕೆ ಮಾಡಿ ಮಾಹಿತಿ ತಿಳಿಯಬಹುದು.

ಯಾವ ಬಣ್ಣದ ಮೊಬೈಲ್‌ ಬೇಕು ?

ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

ಹ್ಯಾಂಡ್‌ಸೆಟ್‌ಗಳು ಒಂದೇಯಾದ್ರೂ ಬೇರೆ ಬೇರೆ ಬಣ್ಣದಲ್ಲಿ ಮೊಬೈಲ್‌ಗಳು ಮಾರುಕಟ್ಟೆಗೆ ಬರುತ್ತದೆ.ಕೆಲವೊಂದು ಬಣ್ಣಗಳು ನಿಮಗೆ ಇಷ್ಟವಾಗಬಹುದು. ಅದಕ್ಕಾಗಿ ಖರೀದಿ ಮಾಡುವ ಮುನ್ನಾ ಗಿಜ್ಬಾಟ್‌ ಗ್ಯಾಲರಿಗೆ ಭೇಟಿ ನೀಡಿ ಬೇಕಾದ ಮೊಬೈಲ್‌ ಹೆಸರನ್ನು ಟೈಪಿಸಿದರೆ ವಿವಿಧ ಬಣ್ಣಗಳಲ್ಲಿರುವಆ ಮೊಬೈಲ್‌ನ ಆಕರ್ಷಕ ಚಿತ್ರಗಳನ್ನು ನೀವು ನೋಡಬಹುದು.

ಯಾವ ಸೈಟ್‌ನಲ್ಲಿ ಎಷ್ಟು ಬೆಲೆಯಿದೆ ?

ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

ಹ್ಯಾಂಡ್‌ಸೆಟ್‌ ಒಂದೇ ಆದ್ರೂ ಒಂದೊಂದು ಆನ್‌ಲೈನ್‌ ಶಾಪಿಂಗ್‌ನಲ್ಲಿ ಬೇರೆ ಬೇರೆ ದರವಿರುತ್ತದೆ.ಹೀಗಾಗಿ ಎಲ್ಲಾ ಆನ್‌ಲೈನ್‌ ಶಾಪಿಂಗ್‌ ತಾಣಗಳಿಗೆ ಭೇಟಿ ನೀಡಿ ಆ ಮೊಬೈಲ್‌ ದರವನ್ನು ನೋಡಿ ಖರೀದಿಸಿ.ಒಂದು ವೇಳೆ ಎಲ್ಲಾ ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿರುವ ಆ ಮೊಬೈಲ್‌ ದರಗಳನ್ನು ಒಂದೇ ಕ್ಲಿಕ್‌ ಮಾಡಿ ನೋಡಬೇಕು ಎಂದು ನಿಮಗೆ ಅನಿಸಿದರೆ ನೀವು goproboಗೆ ಭೇಟಿ ನೀಡಿ ಬೆಲೆಯನ್ನು ಸುಲಭವಾಗಿ ತಿಳಿಯಬಹುದು.

ಬೇರೆಯವರ ಸಲಹೆ ಕೇಳಿ

ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

ಆನ್‌ಲೈನ್‌ ಶಾಪಿಂಗ್‌ನಲ್ಲಿ ವೆಬ್‌ಸೈಟ್‌ಗಳು ಈಗ ಹೆಚ್ಚಾಗುತ್ತಲೇ ಇವೆ.ಹೀಗಾಗಿ ಕೆಲವು ವೆಬ್‌ಸೈಟ್‌ಗಳು ಮಾತ್ರ ಗುಣಮಟ್ಟದ ಸೇವೆಗಳನ್ನು ನೀಡುತ್ತವೆ.ಹೀಗಾಗಿ ಮೊದಲ ಬಾರಿಗೆ ಖರೀದಿ ಮಾಡುವವರು ಯಾರಾದ್ರೂ ಈ ಹಿಂದೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿ ಮಾಡಿದವರಲ್ಲಿ ಸಲಹೆ ಕೇಳಿ ಖರೀದಿ ಮಾಡಿದರೆ ಒಳ್ಳೆಯದು.

ಪ್ರತಿದಿನ ತಪ್ಪದೇ ಗಿಜ್ಬಾಟ್‌ ಓದಿ

ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್‌ ಖರೀದಿ ಹೇಗೆ ?

ಕೊನೆಯದಾಗಿ ಮೊಬೈಲ್‌,ಟ್ಯಾಬ್ಲೆಟ್‌,ಆನ್‌ಲೈನ್‌ ಶಾಪಿಂಗ್‌,ಹೊಸ ತಂತ್ರಜ್ಞಾನದ ಮಾಹಿತಿಗಾಗಿ ಪ್ರತಿದಿನವು ತಪ್ಪದೇ ಕನ್ನಡ ಗಿಝ್‌ಬಾಟ್‌ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot