ಸ್ಮಾರ್ಟ್‌ಫೋನ್ ಖರೀದಿಗೆ 6 ಟಿಪ್ಸ್

By Ashwath
|

ಮೂರು ವರ್ಷಗಳ ಹಿಂದೆ ಹೇಗೆ ದೇಶದಲ್ಲಿ ಮೊಬೈಲ್‌ ಫೋನ್‌ ಪ್ರಸಿದ್ದವಾಗಿತ್ತೋ ಅದೇ ರೀತಿಯಲ್ಲಿ ಈಗ ಸ್ಮಾರ್ಟ್‌ಫೋನ್‌ ಪ್ರಸಿದ್ದವಾಗುತ್ತಿದೆ. ಮೊಬೈಲ್‌ ಫೋನ್‌ಗಳ ವಿಶೇಷತೆಯೊಂದಿಗೆ ಇಂಟರ್‌ನೆಟ್‌, ವೈಫಿ, ಟಚ್‌ ಸ್ಕ್ರೀನ್‌ ಇರುವುದರಿಂದ ಕಂಪೆನಿಗಳು ವಿವಿಧ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ದಿನಕ್ಕೊಂದರಂತೆ ಬಿಡುಗಡೆ ಮಾಡುತ್ತಲೇ ಇರುತ್ತಿವೆ. ಮಾರುಕಟ್ಟೆಯಲ್ಲಿ ಆಯ್ಕೆಗಳು ಹೆಚ್ಚಿದ್ದಷ್ಟು ಗ್ರಾಹಕರಿಗೆ ಗೊಂದಲುಗಳು ಹೆಚ್ಚು. ಹೀಗಾಗಿ ಈ ಗೊಂದಲ ನಿವಾರಿಸುವ ಹಿನ್ನಲೆಯಲ್ಲಿ ಗಿಜ್ಬಾಟ್‌ ತನ್ನ ಓದುಗರಿಗೆ ಸ್ಮಾರ್ಟ್‌ಫೋನ್‌ ಕೊಳ್ಳುವ 6 ಸರಳ ಟಿಪ್ಸ್‌ಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಯಲ್ಲಿ ಖರೀದಿಸಿ.

ಇದನ್ನೂ ಓದಿ : ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಕಂಪ್ಯೂಟರ್‌ನ ತಾತ್ಕಾಲಿಕ ಸ್ಮರಣ ಶಕ್ತಿಯನ್ನು ನಾವು RAM ಎಂದು ಕರೆಯುತ್ತೇವೆ. ಹಾಗಾಗಿ RAM ಹೆಚ್ಚಿದಷ್ಟು ನೀವು ಸ್ಮಾರ್ಟ್‌ಫೋನ್‌ನಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ. ಹಾಗಾಗಿ ಕನಿಷ್ಟ 512 MB RAMಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸಿದರೆ ಉತ್ತಮ. 1GB RAM ಇದ್ದರೆ ನಿಮ್ಮ ವೆಬ್‌ಸೈಟ್‌ ಹುಡುಕುವುದು, ಇಮೇಲ್‌, ಫೇಸ್‌ಬುಕ್‌ ಕೆಲಸ ಸುಲಭವಾಗಿ ಮಾಡಬಹುದು. ಇತ್ತೀಚಿನ ಕೆಲ ಸ್ಮಾರ್ಟ್‌ಫೋನ್‌ಗಳಾದ ಎಲ್‌ಜಿ ನೆಕ್ಸಸ್‌, ಏಸ್‌3 2GB RAM ನೊಂದಿಗೆ ಮಾರುಕಟ್ಟೆಗೆ ಬಂದಿವೆ.

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

RAM ನಂತರ ಎರಡನೆಯದಾಗಿ ಪ್ರೊಸೆಸರ್ ಎಷ್ಟು ಶಕ್ತಿಯುತವಾಗಿದೆ ಕೆಲಸ ಮಾಡುತ್ತದೆ ಎನ್ನುವುದು ಮುಖ್ಯ. ಪ್ರೊಸೆಸರ್‌ನ್ನು ಸ್ಮಾರ್ಟ್‌ಫೋನ್‌ನ ಹೃದಯವೆಂದೇ ಕರೆಯುತ್ತೇವೆ. ಹಲವಾರು ಕೆಲಸಗಳನ್ನು ಏಕಕಾಲಕ್ಕೆ ಮಾಡಲು ಸಹಾಯ ಮಾಡುವುದೇ ಪ್ರೊಸೆಸರ್‌. ಮೆಗಾಹರ್ಟ್ಸ, ಗಿಗಾಹರ್ಟ್ಸ, ಸಿಂಗಲ್‌ ಕೋರ್‌, ಡ್ಯುಯಲ್‌ ಕೋರ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌ಗಳು ಮಾರುಕಟ್ಟೆಯಲ್ಲಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ಯಾಡ್‌ ಕೋರ್‌ ಪ್ರೊಸೆಸರ್‌ನ್ನು ಆನೇಕ ಮೊಬೈಲ್‌ ಕಂಪೆನಿಗಳು ಬಳಸುತ್ತಿವೆ. ಸರಳವಾಗಿ ಹೇಳುವುದಿದ್ದರೆ ಕನಿಷ್ಟ 1GHz ಪ್ರೊಸೆಸರ್‌ ಇರುವ ಸ್ಮಾರ್ಟ್‌ಫೋನ್‌ ಖರೀದಿಸಿ.

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಖರೀದಿಸುವ ಮೊದಲು ಅ ಮೊಬೈಲ್‌ಗಿರುವ ವಾರಂಟಿಯನ್ನು ತಿಳಿದುಕೊಳ್ಳಿ. ಕನಿಷ್ಟ ಒಂದು ವರ್ಷದ ವಾರಂಟಿ ಇರುವ ಸ್ಮಾರ್ಟ್‌ಫೋನ್‌ ಖರೀದಿಸಿ.ಒಂದು ವರ್ಷದೊಳಗಡೆ ನಿಮ್ಮ ಸ್ಮಾರ್ಟ್‌ಫೋನ್‌ ಯಾವುದಾದ್ರು ಭಾಗ ಹಾಳಾದ್ರೂ ಬದಲಿಸಬಹುದು

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಆಂಡ್ರಾಯ್ಡ್‌ ಮೊಬೈಲ್‌ ಫೋನ್‌ಲ್ಲಿ ಸದ್ಯ ಐಸಿಎಸ್‌( ಐಸ್‌ಕ್ರೀಮ್‌ ಸ್ಯಾಂಡ್ವಿಚ್‌) ಆಪರೆಟಿಂಗ್‌ ಸಿಸ್ಟಂ ಇರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿವೆ. ಇಷ್ಟೇ ಅಲ್ಲದೇ ಈಗೀನ ಮಾರುಕಟ್ಟೆಯಲ್ಲಿ ಐಸಿಎಸ್‌ಗಿಂತ ನಂತರದ ಆವೃತ್ತಿ ಜೆಲ್ಲಿಬೀನ್‌ ಓಎಸ್‌ ಇರುವಂತಹ ಸ್ಮಾರ್ಟ್‌ಫೋನ್‌ಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕನಿಷ್ಟ ಅಂಡ್ರಾಯ್ಡ್‌ 4.0 ಇರುವಂತಹ ಐಸಿಎಸ್‌ ಓಎಸ್‌ ಖರೀದಿಸಿದರೆ ಉತ್ತಮ.

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್‌ ಖರೀದಿಸುವಾಗ ಬ್ಯಟರಿ ಬಗ್ಗೆ ಗಮನಹರಿಸಿ. ಸಾಮಾನ್ಯವಾಗಿ ಇಂದು 1200 mAh ದಿಂದಲೇ ಆರಂಭವಾಗಿ 4000 mAh, 8000 mAh ವರೆಗೂ ಸಾಮಾರ್ಥ್ಯದ ಬ್ಯಾಟರಿಗಳಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿವೆ. ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ ದೊಡ್ಡದಿದ್ದಷ್ಟು ಬ್ಯಾಟರಿ ಹೆಚ್ಚು ಹೀರಿಕೊಳ್ಳುತ್ತದೆ. ಹಾಗಾಗಿ ಸ್ಮಾರ್ಟ್‌ಫೋನ್‌ ಖರೀದಿಸುವಾಗ 1500 mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸಿದರೆ ಉತ್ತಮ.

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಇಂದು ಎಲ್ಲಾ ಸ್ಮಾರ್ಟ್‌ಫೋನ್‌ಗಳು ಕಂಪೆನಿಗಳು ಕ್ಯಾಮೆರಾಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿವೆ. ನಿಮಗೆ ವೀಡಿಯೋ ಕಾಲಿಂಗ್‌ ಬೇಕಾದ್ರೆ ಎದುರುಗಡೆ ಇರುವಂತಹ ಕ್ಯಾಮೆರಾವನ್ನು ಖರೀದಿಸಿ. ಹಿಂದುಗಡೆ 5MP ಕ್ಯಾಮೆರಾವಿದ್ದರೆ ನೀವು ಉತ್ತಮ ಚಿತ್ರಗಳನ್ನು ತೆಗೆಯಬಹುದು. ಜೊತೆಗೆ ಕ್ಯಾಮೆರಾಕ್ಕೆ ಫ್ಲ್ಯಾಶ್‌ ಆಯ್ಕೆ ಇದೆಯೋ ಇಲ್ಲವೊ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಸ್ಮಾರ್ಟ್‌ಫೋನ್ ಖರೀದಿಗೆ ಟಿಪ್ಸ್

ಇಷ್ಟೆಲ್ಲ ಮಾಹಿತಿ ನೋಡಿದ ಮೇಲೆ ಫೋನ್‌ ಖರೀದಿಸುವಾಗ ನಿಮ್ಮ ಜೊತೆ ಆಂಡ್ರಾಯ್ಡ್‌ ಫೋನ್‌ ಆಪರೆಟಿಂಗ್‌ ಅನುಭವ ಹೊಂದಿರುವ ವ್ಯಕ್ತಿಯನ್ನು ಕರೆದುಕೊಂಡು ಹೋಗಿ. ಸ್ಮಾರ್ಟ್‌ಫೋನ್‌ಲ್ಲಿ ನಿಮಗೆ ಬೇಕಾದ ಎಲ್ಲಾ ವಿಶೇಷತೆಗಳಿವೆಯೋ ಎಂಬುದನ್ನು ಪರೀಕ್ಷಿಸಿ ನಂತರ ಸ್ಮಾರ್ಟ್‌ಫೋನ್‌ ಖರೀದಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X