ಅಂಗೈಯಗಲದ ಜಾದೂ ಪೆಟ್ಟಿಗೆಯ ಕಮಾಲು ಬಲ್ಲವರಾರು?

By Shwetha
|

ನಿಮ್ಮ ಫೋನ್ ಎಂಬ ಮಾಯಾ ಪೆಟ್ಟಿಗೆ ಏನೆಲ್ಲಾ ಕಾರುಬಾರುಗಳನ್ನು ಮಾಡಬಹುದು ಎಂಬ ಅಂದಾಜು ನಿಮಗೆ ಇರಲಿಕ್ಕಿಲ್ಲ. ಅಷ್ಟೊಂದು ಕಾರ್ಯವೈಖರಿಗಳ ನಾಯಕತ್ವ ಗುಣಗಳನ್ನು ಈ ಜಂಗಮವಾಣಿ ಹೊಂದಿದೆ. ನೀವು ಬಳಸುತ್ತಿರುವ ಫೋನ್ ಆಂಡ್ರಾಯ್ಡ್ ಆಗಿರಲಿ ಇಲ್ಲವೇ ಐಫೋನ್, ಅಥವಾ ಬ್ಲ್ಯಾಕ್‌ಬೆರ್ರಿಯೇ ಆಗಿರಲಿ ಆದರೆ ಅವುಗಳು ಮಾಡುವ ಮೂಲ ಕಾರ್ಯಗಳನ್ನು ನೀವು ಅರಿತುಕೊಳ್ಳುವುದು ಅತೀ ಅವಶ್ಯಕವಾಗಿದೆ.

ಓದಿರಿ: ಕಾಲ್ಪನಿಕ ವಿಜ್ಞಾನಕ್ಕಿಂತ ಭಯಂಕರವಾದ ಟೆಕ್ನಾಲಜಿಗಳು

ನಮ್ಮ ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನಲ್ಲಿ ನೀವು ನೆರವೇರಿಸಿಕೊಳ್ಳಬಹುದಾದ ಅದ್ಭುತ ಕಾರ್ಯಗಳ ಪಟ್ಟಿಯನ್ನು ನಾವು ಮುಂದಿಡುತ್ತಿದ್ದು ಇದು ನಿಮ್ಮನ್ನು ಸ್ತಂಭೀಭೂತಗೊಳಿಸುವುದಂತೂ ನಿಜ. ಹಾಗಿದ್ದರೆ ತಡ ಮಾಡದೇ ಕೆಳಗಿನ ಸ್ಲೈಡರ್ ಪರಿಶೀಲಿಸಿಕೊಳ್ಳಿ.

ಸ್ಕ್ರೀನ್ ಶಾಟ್

ಸ್ಕ್ರೀನ್ ಶಾಟ್

ಐಫೋನ್
ಹೋಮ್ ಬಟನ್ ಒತ್ತಿಹಿಡಿದುಕೊಳ್ಳಿ ಇಲ್ಲಿ ನಿಮಗೆ ಶಟರ್ ಕ್ಲಿಕ್ ದೊರೆಯುತ್ತದೆ. ನಿಮ್ಮ ಕ್ಯಾಮೆರಾ ರೋಲ್ ಅಥವಾ ಸೇವ್ ಮಾಡಿರುವ ಫೋಟೋ ಸೆಕ್ಶನ್‌ನಲ್ಲಿ ಸ್ಕ್ರೀನ್ ಶಾಟ್ ದೊರೆಯುತ್ತದೆ.

ಆಂಡ್ರಾಯ್ಡ್
ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್ ಒತ್ತಿ ಹಿಡಿದುಕೊಳ್ಳಿ "ಕ್ಯಾಪ್ಚರ್ಡ್ ಇಮೇಜಸ್" ನಲ್ಲಿ ಚಿತ್ರ ಸೇವ್ ಆಗುತ್ತದೆ. ಆಂಡ್ರಾಯ್ಡ್ 4.0 ಮತ್ತು ಹೆಚ್ಚಿನದರಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಕರೆ ಮತ್ತು ಪಠ್ಯಗಳನ್ನು ಬ್ಲಾಕ್ ಮಾಡಲು

ಕರೆ ಮತ್ತು ಪಠ್ಯಗಳನ್ನು ಬ್ಲಾಕ್ ಮಾಡಲು

ಐಫೋನ್
ಫೋನ್ ಅಥವಾ ಫೇಸ್ ಟೈಮ್ ಅಪ್ಲಿಕೇಶನ್ ತೆರೆಯಿರಿ. ಈಗಾಗಲೇ ಆ ವ್ಯಕ್ತಿ ಸಂಪರ್ಕದಲ್ಲಿದ್ದರೆ, ಪುಟದ ಕೆಳಕ್ಕೆ ಸ್ಕ್ರಾಲ್ ಟೌನ್ ಮಾಡಿ ಮತ್ತು ಕಾಲರ್ ಅನ್ನು ಬ್ಲಾಕ್ ಮಾಡಿ. ನಂತರ ಸಂಪರ್ಕ ಬ್ಲಾಕ್ ಮಾಡಿ ಸ್ಪರ್ಶಿಸಿ.

ಆಂಡ್ರಾಯ್ಡ್
ಸೆಟ್ಟಿಂಗ್ಸ್> ಕಾಲ್ ಸೆಟ್ಟಿಂಗ್ಸ್ > ಕಾಲ್ ಬ್ಲಾಕ್ "ಇನ್‌ಕಮಿಂಗ್ ಕಾಲ್ಸ್" ಅಡಿಯಲ್ಲಿ "ಕಾಲ್ ಬ್ಲಾಕ್ ಲಿಸ್ಟ್" ಸ್ಪರ್ಶಿಸಿ ನಂತರ ರಚಿಸಿ ಸ್ಪರ್ಶಿಸಿ.

ನೈಜ ಪಾಸ್‌ವರ್ಡ್ ಬಳಸಿ

ನೈಜ ಪಾಸ್‌ವರ್ಡ್ ಬಳಸಿ

ಐಫೋನ್‌ನಲ್ಲಿ ನೈಜ ಪಾಸ್‌ವರ್ಡ್ ಹೊಂದಿಸಲು, ಸೆಟ್ಟಿಂಗ್ಸ್ > ಪಾಸ್‌ಕೋಡ್. ಅಲ್ಲಿಂದ ಸಿಂಪಲ್ ಪಾಸ್‌ಕೋಡ್ ಸ್ಪೈಪ್ ಆಫ್ ಆಪ್ಶನ್ ಓಕೆ ಮಾಡಿ. ಇಲ್ಲಿ ನಿಮಗೆ ಅಕ್ಷರ ಮತ್ತು ವಿಶೇಷ ಅಕ್ಷರಗಳ ಪಾಸ್‌ಕೋಡ್ ಅನ್ನು ರಚಿಸಿಕೊಳ್ಳಬಹುದು.

ಆಂಡ್ರಾಯ್ಡ್
ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ ಮತ್ತು ಟ್ಯಾಪ್ ಸ್ಕ್ರೀನ್ ಲಾಕ್. ನಿಮಗೆ ಬೇಕಾದ ಭದ್ರತಾ ಮಟ್ಟವನ್ನು ನೀವಿಲ್ಲಿ ರಚಿಸಿಕೊಳ್ಳಬಹುದು.

ಸುಲಭವಾಗಿ ಪಠ್ಯವನ್ನು ನೋಡುವುದು

ಸುಲಭವಾಗಿ ಪಠ್ಯವನ್ನು ನೋಡುವುದು

ಐಫೋನ್
ಸೆಟ್ಟಿಂಗ್ಸ್ > ಜನರಲ್ > ಆಕ್ಸೆಬಿಲಿಟಿ ಮತ್ತು ಬೋಲ್ಡ್ ಪಠ್ಯ ಆನ್ ಮಾಡಿ

ಆಂಡ್ರಾಯ್ಡ್
ಸೆಟ್ಟಿಂಗ್ಸ್ > ಆಕ್ಸೆಸಿಬಿಲಿಟಿ. ವಿಶನ್ ಅಡಿಯಲ್ಲಿ, ಫಾಂಟ್ ಗಾತ್ರ ಸ್ಪರ್ಶಿಸಿ ಮತ್ತು ಅದನ್ನು ದೊಡ್ಡದಾಗಿ ಹೊಂದಿಸಿಕೊಳ್ಳಿ.

ದೊಡ್ಡದಾಗಿ ಓದಲು

ದೊಡ್ಡದಾಗಿ ಓದಲು

ಐಫೋನ್
ಸೆಟ್ಟಿಂಗ್ಸ್‌ಗೆ ಹೋಗಿ ಜನರಲ್ ಇಲ್ಲಿ ಆಕ್ಸಿಸಿಬಿಲಿಟಿ ಮತ್ತು ವಾಯ್ಸ್ ಓವರ್ ಆನ್ ಮಾಡಿಕೊಳ್ಳಿ.
ಆಂಡ್ರಾಯ್ಡ್
ಸೆಟ್ಟಿಂಗ್ಸ್ > ಆಕ್ಸೆಬಿಲಿಟಿ ಮತ್ತು ಟಾಕ್ ಬ್ಯಾಕ್ ಸ್ಪರ್ಶಿಸಿ

ಕಸ್ಟಮೈಜ್ ಅಲರ್ಟ್ ವೈಬ್ರೇಶನ್ ಪ್ಯಾಟ್ರನ್ಸ್

ಕಸ್ಟಮೈಜ್ ಅಲರ್ಟ್ ವೈಬ್ರೇಶನ್ ಪ್ಯಾಟ್ರನ್ಸ್

ಐಫೋನ್
ಸೆಟ್ಟಿಂಗ್ಸ್ > ಸೌಂಡ್ಸ್ > ರಿಂಗ್‌ಟೋನ್ > ವೈಬ್ರೇಶನ್
ಆಂಡ್ರಾಯ್ಡ್
ಸಂಪರ್ಕಗಳಿಗೆ ಹೋಗಿ. ವೈಬ್ರೇಶನ್ ಪ್ಯಾಟ್ರನ್ ಅಡಿಯಲ್ಲಿ, ಡೀಫಾಲ್ಟ್ ಸ್ಪರ್ಶಿಸಿ ಮತ್ತು ಪ್ರಸೆಂಟ್ ಪ್ಯಾಟ್ರನ್ ಆರಿಸಿ.

ಅಧಿಸೂಚನೆಗಳಿಗಾಗಿ ಫ್ಲ್ಯಾಶ್ ಕ್ಯಾಮೆರಾ ಎಲ್‌ಇಡಿ

ಅಧಿಸೂಚನೆಗಳಿಗಾಗಿ ಫ್ಲ್ಯಾಶ್ ಕ್ಯಾಮೆರಾ ಎಲ್‌ಇಡಿ

ಐಫೋನ್
ಸೆಟ್ಟಿಂಗ್ಸ್ > ಜನರಲ್ > ಆಕ್ಸೆಬಿಲಿಟಿ ಮತ್ತು ಸೂಚನೆಗಳಿಗಾಗಿ ಎಲ್‌ಇಡಿ ಫ್ಲ್ಯಾಶ್ ಆನ್ ಮಾಡಿ.
ಆಂಡ್ರಾಯ್ಡ್
ಸೆಟ್ಟಿಂಗ್ಸ್ > ಆಕ್ಸೆಬಿಲಿಟಿ ಮತ್ತು ಫ್ಲ್ಯಾಶ್ ನೋಟಿಫಿಕೇಶನ್ ಆನ್ ಮಾಡಿ.

ಚಿತ್ರಗಳನ್ನು ತೆಗೆಯುವ ಉತ್ತಮ ವಿಧಾನಗಳು

ಚಿತ್ರಗಳನ್ನು ತೆಗೆಯುವ ಉತ್ತಮ ವಿಧಾನಗಳು

ಐಫೋನ್
ನಿಮ್ಮ ಕ್ಯಾಮೆರಾವನ್ನು ಪಾಯಿಂಟ್ ಮಾಡಿಕೊಳ್ಳಿ ಮತ್ತು ಫೋನ್‌ನ ವಾಲ್ಯೂಮ್ ಬಟನ್ ಅನ್ನು ಮೇಲಕ್ಕೆ ಏರಿಸಿಕೊಳ್ಳಿ.
ಆಂಡ್ರಾಯ್ಡ್
ಕ್ಯಾಮೆರಾ ಅಪ್ಲಿಕೇಶನ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್ ನೋಡಲು ಗೇರ್ ಸ್ಪರ್ಶಿಸಿ. ವಾಯ್ಸ್ ಕಂಟ್ರೋಲ್‌ಗೆ ಸ್ಕ್ರಾಲ್ ಡೌನ್ ಮಾಡಿಕೊಳ್ಳಿ ಮತ್ತು ಅದನ್ನು ಆನ್ ಮಾಡಿಟ್ಟುಕೊಳ್ಳಿ.

ಒಮ್ಮೆಗೆ ಬಹು ಚಿತ್ರಗಳನ್ನು ತೆಗೆಯುವುದು

ಒಮ್ಮೆಗೆ ಬಹು ಚಿತ್ರಗಳನ್ನು ತೆಗೆಯುವುದು

ಐಫೋನ್ 5, 5ಎಸ್, ಮತ್ತು 5ಸಿ
ಕ್ಯಾಮೆರಾ ಅಪ್ಲಿಕೇಶನ್ ತೆರೆಯಿರಿ ಮತ್ತು ಪರದೆಯಲ್ಲಿ ಶಟರ್ ರಿಲೀಸ್ ಬಟನ್ ಅನ್ನು ಒತ್ತಿಹಿಡಿದುಕೊಳ್ಳಿ. ಅಥವಾ ವಾಲ್ಯೂಮ್ ಅಪ್ ಬಟನ್ ಅನ್ನು ಒತ್ತಿಹಿಡಿಯಿರಿ ಹಾಗೂ ಕ್ಯಾಮೆರಾ ಬಹು ಚಿತ್ರಗಳನ್ನು ತೆಗೆಯಲು ಆರಂಭಿಸುತ್ತದೆ.

ಆಂಡ್ರಾಯ್ಡ್
ಕ್ಯಾಮೆರಾ ಅಪ್ಲಿಕೇಶನ್ ತೆರೆಯಿರಿ. ಸೆಟ್ಟಿಂಗ್ಸ್ ತೆರೆಯಲು ಗೇರ್ ಐಕಾನ್ ಸ್ಪರ್ಶಿಸಿ ಮತ್ತು ಬರ್ಸ್ಟ್ ಶಾಟ್ ಆನ್ ಮಾಡಿಟ್ಟುಕೊಳ್ಳಿ. ಶಟರ್ ರಿಲೀಸ್ ಬಟನ್ ಅನ್ನು ಒತ್ತಿಹಿಡಿದುಕೊಳ್ಳಿ ನೀವು ಕೈಬಿಡುವವರೆಗೆ ಇದು ಬಹು ಚಿತ್ರಗಳನ್ನು ತೆಗೆಯುತ್ತದೆ.

ಸ್ವಯಂಚಾಲಿತವಾಗಿ ಮ್ಯೂಸಿಕ್ ಆಫ್ ಮಾಡಲು

ಸ್ವಯಂಚಾಲಿತವಾಗಿ ಮ್ಯೂಸಿಕ್ ಆಫ್ ಮಾಡಲು

ಐಫೋನ್
ಕ್ಲಾಕ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಟೈಮರ್ ಕ್ಲಿಕ್ ಮಾಡಿ. ವೆನ್ ಟೈಮರ್ ಎಂಡ್ಸ್ ಕ್ಲಿಕ್ಕಿಸಿ. ಇಲ್ಲಿಂದ ಪರದೆಯ ಕೆಳಭಾಗದಲ್ಲಿ ಕೆಳಕ್ಕೆ ಸ್ಕ್ರಾಲ್ ಡೌನ್ ಮಾಡಿಕೊಳ್ಳಿ ಮತ್ತು ಸ್ಟಾಪ್ ಪ್ಲೇಯಿಂಗ್ ಆರಿಸಿ.
ಆಂಡ್ರಾಯ್ಡ್
ಮ್ಯೂಸಿಕ್ ಪ್ಲೇಯರ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ "ಮ್ಯೂಸಿಕ್ ಆಟೊ ಆಫ್" ನೋಡಿ ಮತ್ತು ಹಾಡು ಎಷ್ಟು ಹೊತ್ತು ಪ್ಲೇ ಆಗಬೇಕು ಅದನ್ನು ಹೊಂದಿಸಿಕೊಳ್ಳಿ.

Best Mobiles in India

English summary
Friends don’t let friends have smartphone skill envy. Here are some of my favorite secrets buried in your phone settings that you probably don't know, but will use now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X