ಏರ್‌ಟೆಲ್‌, ವೊಡಾಫೋನ್ ಮತ್ತು ಐಡಿಯಾದ ಅತ್ಯುತ್ತಮ ಆಫರ್ ಯಾವುವು?

|

ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬಂದ ನಂತರ ಟೆಲಿಕಾಂ ಕಂಪೆನಿಗಳ ದರಸಮರ ಎಲ್ಲಿಯವರೆಗೂ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲಾ. ಟೆಲಿಕಾಂ ಪ್ರಪಂಚದ ಈ ಪರಿಯ ದರಸಮರದಿಂದಾಗಿ ಎಲ್ಲಾ ಟೆಲಿಕಾಂಗಳು ಇದೀಗ ಅನ್‌ಲಿಮಿಟೆಡ್ ಕಾಲ್‌ ಮತ್ತು ಉಚಿತ 4G ಡೇಟಾವನ್ನು ನೀಡುತ್ತಿದ್ದು, ತಮ್ಮ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ಇನ್ನು ಈ ಟೆಲಿಕಾಂಗಳ ದರಸಮರದಿಂದಾಗಿ ಜನರಿಗೆ ಮಾತ್ರ ಕಡಿಮೆ ಬೆಲೆಯಲ್ಲಿ ಹೆಚ್ಚು ಸೇವೆ ಸಿಗುತ್ತಿದೆ.! ಏರ್‌ಟೆಲ್ ,ಐಡಿಯಾ, ಬಿಎಸ್‌ಎನ್‌ಎಲ್, ಹೀಗೆ ಎಲ್ಲಾ ಟೆಲಿಕಾಂ ಕಂಪೆನಿಗಳು ತನ್ನ ದರಗಳನ್ನು ಕಡಿತಗೊಳಿಸಿಕೊಂಡಿದ್ದು ಗ್ರಾಹಕರು ಇವುಗಳ ಪ್ರಯೋಜನ ಪಡೆಯಬಹುದು.

ಆಧುನಿಕ ಕಾಲದ ದೊಡ್ಡ ಟೆಕ್ ಮೋಸ "ಫ್ರೀಡಂ 251" ಸ್ಮಾರ್ಟ್‌ಫೋನ್‌!! ಸುದ್ದಿ ಗೊತ್ತಾ?

ಹಾಗಾಗಿ, ಯಾವ ಯಾವ ಟೆಲಿಕಾಂಗಳು ಯಾವ ಯಾವ ಉತ್ತಮ ಆಫರ್‌ಗಳನ್ನು ನೀಡಿವೆ ಎಂಬುದನ್ನು ಇಂದಿನ ಒಂದೇ ಲೇಖನದಲ್ಲಿ ತಿಳಿಯೋಣ. ಕೆಳಗಿನ ಸ್ಲೈಡರ್‌ ನೋಡಿ ನಿಮ್ಮ ಟೆಲಿಕಾಂ ಯಾವುದು ಮತ್ತು ಉತ್ತಮ ರೀಚಾರ್ಜ್ ಪ್ಲಾನ್ ಏನು ಎಂಬುದನ್ನು ತಿಳಿಯಿರಿ.

ಬಿಎಸ್‌ಎನ್‌ಎಲ್‌ನ 339 ರೂಪಾಯಿ ಆಫರ್

ಬಿಎಸ್‌ಎನ್‌ಎಲ್‌ನ 339 ರೂಪಾಯಿ ಆಫರ್

ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಇದೀಗ ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು 1GB ಡೇಟಾವನ್ನು ಕೇವಲ 339 ರೂಪಾಯಿಗಳಿಗೆ ನೀಡುತ್ತದೆ. ವ್ಯಾಲಿಡಿಟಿ 28 ದಿನಗಳಾಗಿವೆ.

ಏರ್‌ಟೆಲ್‌ನ 345 ರೂಪಾಯಿ ಆಫರ್.

ಏರ್‌ಟೆಲ್‌ನ 345 ರೂಪಾಯಿ ಆಫರ್.

ಏರ್‌ಟೆಲ್‌ನ 345 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು 300 MB ಡೇಟಾ ಪಡೆಯಬಹುದಾಗಿದೆ.

ವೊಡಾಫೋನ್ 349 ರೂಪಾಯಿ ಆಫರ್.

ವೊಡಾಫೋನ್ 349 ರೂಪಾಯಿ ಆಫರ್.

ವೊಡಾಫೋನ್ 349 ರೂಪಾಯಿ ರೀಚಾರ್ಜ ಮಾಡಿಸಿಕೊಂಡರೆ ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು 50 MB ಡೇಟಾ ಪಡೆಯಬಹುದಾಗಿದೆ. ಜೊತೆಗೆ ಲ್ಯಾಂಡ್‌ಲೈನ್‌ಗಳಿಗೂ ಉಚಿತ ಕರೆ ಮಾಡುವ ಸೌಲಭ್ಯವನ್ನು ಈ ಆಫರ್ ಹೊಂದಿದೆ. ಇನ್ನು 4G ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ 1GB ಉಚಿತ ಇಂಟರ್‌ನೆಟ್ ಕೊಡುಗೆ ಇದೆ.

ಐಡಿಯಾದ 345 ರೂಪಾಯಿ ಆಫರ್.

ಐಡಿಯಾದ 345 ರೂಪಾಯಿ ಆಫರ್.

ಐಡಿಯಾ ಕಂಪೆನಿ ಏರ್‌ಟೆಲ್‌ ಅನ್ನು ಹಿಂಬಾಲಿಸುತ್ತಿದ್ದು, ಏರ್‌ಟೆಲ್‌ ನಂತರ ತಾನು 345 ರೂಪಾಯಿ ಆಫರ್ ನೀಡಿದೆ . ಇನ್ನು ಏರ್‌ಟೆಲ್‌ ನೀಡಿರುವ ಎಲ್ಲಾ ಕೊಡುಗೆಗಳನ್ನು ಐಡಿಯಾ ಸಹ ನೀಡಿದೆ.

Best Mobiles in India

English summary
All this started with the entry of Reliance Jio into the telecom industry in early September. to know this visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X