ಆಧುನಿಕ ಕಾಲದ ದೊಡ್ಡ ಟೆಕ್ ಮೋಸ "ಫ್ರೀಡಂ 251" ಸ್ಮಾರ್ಟ್‌ಫೋನ್‌!! ಸುದ್ದಿ ಗೊತ್ತಾ?

|

ವಿಶ್ವದಲ್ಲೇ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ ನೀಡುವುದಾಗಿ ಹೇಳಿಕೊಂಡಿದ್ದ ರಿಂಗಿಂಗ್ ಬೆಲ್ ಕಂಪೆನಿಯ ಮೋಸದ ಜಾಲ ಬಯಲಾಗಿದೆ. ! ಹೌದು, ಕೇವಲ 251 ರೂಪಾಯಿಯಲ್ಲಿ ಸ್ಮಾರ್ಟ್ ಫೋನ್ ನೀಡುವುದಾಗಿ ಹೇಳಿ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ ಕಂಪೆನಿ ಜನರಿಗೆ ಮೋಸ ಮಾಡಿದೆ ಎಂದು ವರದಿಯಾಗಿದೆ.

ಆಧುನಿಕ ಕಾಲದ ದೊಡ್ಡ ಟೆಕ್ ಮೋಸ

ಕೇವಲ 251 ರೂಪಾಯಿಗಳಿಗೆ "ಫ್ರೀಡಂ 251" ಸ್ಮಾರ್ಟ್‌ಫೋನ್‌ ನೀಡುವುದಾಗಿ ಹೇಳಿಕೊಂಡಿದ್ದ ರಿಂಗಿಂಗ್ ಬೆಲ್ ಕಂಪನಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಮೋಹಿತ್ ಗೋಯಲ್ ಮತ್ತು ಪತ್ನಿ ಧರ್ನಾ ಗೋಯೆಲ್ ತಮ್ಮ ಹುದ್ದೆ ತೊರೆದಿದ್ದು, ಕಳೆದ ಎರಡು ವಾರಗಳಿಂದ ಕಚೇರಿಗೆ ಬೀಗ ಹಾಕಲಾಗಿದೆ ಎಂದು ವರಿದಿಯತಾಗಿದೆ.

ಆಧುನಿಕ ಕಾಲದ ದೊಡ್ಡ ಟೆಕ್ ಮೋಸ

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ಸ್ಮಾರ್ಟ್‌ಫೋನ್!..ಸಿಲಿಕಾನ್‌ ಸಿಟಿ ಇನ್ನು "ಆಪಲ್‌ ಸಿಟಿ"!!

ಇನ್ನು ಮೋಹಿತ್ ಗೋಯಲ್ ಮತ್ತು ಪತ್ನಿ ಧರ್ನಾ ಗೋಯೆಲ್ ದೇಶದಾಧ್ಯಂತ ಹಲವು ಡೀಲರ್‌ಗಳಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದು, ಈಗ ಹಣ ವಾಪಸ್ ಮಾಡಲು ಅವರಿಗೆ ನೀಡಿದ್ದ ಚೆಕ್‌ ಬೌನ್ಸ್ ಆಗಿದೆ ಎನ್ನಲಾಗಿದೆ. ಇನ್ನು ದೆಹಲಿಯ ಕೋರ್ಟ್‌ನಲ್ಲಿ 2 ಕೋಟಿ ಚೆಕ್ ಬೌನ್‌ಆಗಿರುವ ಕುರಿತು ಪ್ರಕರಣ ದಾಖಲಾಗಿದೆ. ಹೀಗಾಗಿ, ಹಣ ಪಾವತಿಸಿರುವ ಗ್ರಾಹಕರಿಗೆ ಏನು ಉತ್ತರ ನೀಡಬೇಕು ಎಂಬ ಆತಂಕದಲ್ಲಿ ಫೋನ್‌ ಡೀಲರ್‌ಗಳು ಇದ್ದಾರೆ ಎನ್ನಲಾಗಿದೆ.

ಆಧುನಿಕ ಕಾಲದ ದೊಡ್ಡ ಟೆಕ್ ಮೋಸ

ಭಾರತದಾಧ್ಯಂತ ಸುಮಾರು 7 ಕೋಟಿಗೂ ಹೆಚ್ಚು ಜನರು ಫ್ರೀಡಂ 251 ಸ್ಮಾರ್ಟ್‌ಫೋನ್‌ ಬುಕ್ಕಿಂಗ್ ಮಾಡಿದ್ದು, ಇನ್ನು ಇಷ್ಟು ದಿನಗಳಾದರೂ ಸ್ಮಾರ್ಟ್‌ಫೋನ್ ಒದಗಿಸದೆ ಇರುವ ಕಂಪೆನಿಯ ಈ ಎಲ್ಲಾ ಮಾಹಿತಿಗಳಿಂದ ಆಧುನಿಕ ಕಾಲದ ದೊಡ್ಡ ಟೆಕ್ ಮೋಸವಾಗಿ "ಫ್ರೀಡಂ 251" ಸ್ಮಾರ್ಟ್‌ಫೋನ್‌ ಕಂಪೆನಿ ಉಳಿಯಲಿದೆ ಎನ್ನುವ ಅನುಮಾನ ಕಾಡುತ್ತಿದೆ.

Best Mobiles in India

English summary
The makers of 'Freedom 251', claimed to be the world's cheapest smartphone, have been summoned as accused by a Delhi court in a Rs. two-crore cheque bounce case filed by a private firm. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X