ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

Written By:

ನಮಗೆ ಈಗಾಗಲೇ ತಿಳಿದಿರುವಂತೆ ಫೇಸ್‌ಬುಕ್ ವಾಟ್ಸಾಪ್ ಅನ್ನು ರೂ $19 ಬಿಲಿಯನ್‌ಗೆ ಖರೀದಿಸಿದೆ. ಇದರ ಬಳಕೆದಾರರ ಇಂಟರ್ಫೇಸ್‌ನಿಂದಾಗಿಯೇ ವಾಟ್ಸಾಪ್ ಖ್ಯಾತಿಯ ತುತ್ತತುದಿಗೇರಿದೆ. ಎಲ್ಲಾ ಪ್ರಮುಖ ಮೊಬೈಲ್ ಓಎಸ್‌ಗಳಲ್ಲಿ ಲಭ್ಯವಿರುವ ವಾಟ್ಸಾಪ್ ಜಗತ್ತಿನಾದ್ಯಂತ ಇದು 400 ಮಿಲಿಯನ್‌ಗಿಂತಲೂ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಇದರ ಅತಿ ವೇಗದ ಸಂದೇಶ ರವಾನೆಗಾಗಿ ಹೆಚ್ಚಿನ ಬಳಕೆದಾರರು ವಾಟ್ಸಾಪ್ ಅನ್ನು ನೆಚ್ಚಿಕೊಂಡಿದ್ದು ಇದರ ಇನ್ನಷ್ಟು ವಿಶೇಷತೆಗಳು ವಾಟ್ಸಾಪ್ ಅನ್ನು ಬಳಕೆದಾರರಿಗೆ ಪ್ರಿಯ ಎಂದೆನಿಸಿದೆ.

ಇದನ್ನೂ ಓದಿ: ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಹಾಗಿದ್ದರೆ ಇಂದಿನ ಲೇಖನದಲ್ಲಿ ನೀವು ತಿಳಿಯದೇ ಇರುವ ವಾಟ್ಸಾಪ್‌ನ ಅತ್ಯದ್ಭುತ ಫೀಚರ್‌ಗಳನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ನಲ್ಲಿ ಲಾಸ್ಟ್ ಸೀನ್ ಫೀಚರ್ ಮರೆಮಾಡಿ

ವಾಟ್ಸಾಪ್‌ನಲ್ಲಿ ಲಾಸ್ಟ್ ಸೀನ್ ಫೀಚರ್ ಮರೆಮಾಡಿ

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಮೊದಲಿಗೆ ವಾಟ್ಸಾಪ್ ಅನ್ನು ತೆರೆಯಿರಿ, ಸೆಟ್ಟಿಂಗ್ಸ್> ಅಕೌಂಟ್>ಪ್ರೈವಸಿ>ಲಾಸ್ಟ್ ಸೀನ್. ಇಲ್ಲಿ ನೀವು ಮೂರು ಆಯ್ಕೆಗಳನ್ನು ಆರಿಸಬಹುದು. ಎವ್ರಿವನ್, ಮೈ ಕಾಂಟಾಕ್ಸ್ಟ್, ನೊಬಡಿ ಹೀಗೆ ಯಾವುದನ್ನಾದರೂ ಆಯ್ಕೆಮಾಡಿ.

ಪಾಸ್‌ವರ್ಡ್‌ನೊಂದಿಗೆ ವಾಟ್ಸಾಪ್ ಲಾಕ್ ಮಾಡಿ

ಪಾಸ್‌ವರ್ಡ್‌ನೊಂದಿಗೆ ವಾಟ್ಸಾಪ್ ಲಾಕ್ ಮಾಡಿ

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಸಾಮಾನ್ಯವಾಗಿ ವೈಯಕ್ತಿಕ ಚಾಟ್ ಅನ್ನು ವಾಟ್ಸಾಪ್‌ನಲ್ಲಿ ನಾವು ಮಾಡುತ್ತೇವೆ. ಮತ್ತು ಇನ್ನೊಬ್ಬರು ನಮ್ಮ ಈ ಸಂದೇಶವನ್ನು ಓದಬಾರದು ಎಂದು ನಾವು ಬಯಸುತ್ತೇವೆ. ವಾಟ್ಸಾಪ್ ಯಾವುದೇ ಲಾಗಿನ ವಿವರಗಳನ್ನು ಹೊಂದಿರುವುದಿಲ್ಲ ಮತ್ತು ಇದರಿಂದ ಇನ್ನೊಬ್ಬ ವ್ಯಕ್ತಿ ನಿಮ್ಮ ವೈಯಕ್ತಿಕ ಸಂದೇಶಗಳನ್ನು ಸುಲಭವಾಗಿ ಓದಬಹುದು. ವಾಟ್ಸಾಪ್ ಲಾಕ್ ಅನ್ನು ಬಳಸಿ ನಿಮ್ಮ ಸಂದೇಶಗಳನ್ನು ಪಾಸ್‌ವರ್ಡ್‌ನೊಂದಿಗೆ ರಕ್ಷಿಸಿಕೊಳ್ಳಬಹುದು.

ಪಿಡಿಎಫ್, ಜಿಪ್, ಎಪಿಕೆ ಫೈಲ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದು

ಪಿಡಿಎಫ್, ಜಿಪ್, ಎಪಿಕೆ ಫೈಲ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದು

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಆಡಿಯೊ ಮತ್ತು ವೀಡಿಯೊ ಸ್ವರೂಪಗಳ ಫೈಲ್ ಅನ್ನು ಬಿಟ್ಟು ಇತರ ಫೈಲ್‌ಗಳನ್ನು ಬೆಂಬಲಿಸುವುದಿಲ್ಲ. ಅದಾಗ್ಯೂ ಕೆಲವೊಮ್ಮೆ ನೀವು ಎಪಿಕೆ ಫೈಲ್‌ಗಳು, ಜಿಪ್, ಪಿಡಿಎಫ್ ಫೈಲ್‌ಗಳನ್ನು ಮತ್ತು ಇತರ ಯಾವುದೇ ಸ್ವರೂಪದ ಫೈಲ್‌ಗಳನ್ನು ಕಳುಹಿಸಬಹುದು. ವಾಟ್ಸ್ ಪ್ಯಾಕ್‌ಡ್ 2 ಏಡ್ಸ್ ಈ ಅಪ್ಲಿಕೇಶನ್‌ನಿಂದ ಮೇಲೆ ತಿಳಿಸಿದ ಎಲ್ಲಾ ರೀತಿಯ ಸ್ವರೂಪದ ಫೈಲ್‌ಗಳನ್ನು ನಿಮ್ಮ ವಾಟ್ಸಾಪ್ ಸಂಪರ್ಕಗಳಿಗೆ ಕಳುಹಿಸಬಹುದು.

ವಾಟ್ಸಾಪ್ ಉಚಿತ ಟ್ರಯಲ್ ಸಮಯವನ್ನು ವಿಸ್ತರಿಸುವುದು

ವಾಟ್ಸಾಪ್ ಉಚಿತ ಟ್ರಯಲ್ ಸಮಯವನ್ನು ವಿಸ್ತರಿಸುವುದು

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಕೇವಲ ಒಂದು ವರ್ಷದವರೆಗೆ ಉಚಿತ ವಾಟ್ಸಾಪ್ ಅನ್ನು ಮಾತ್ರವೇ ನಮಗೆ ಪಡೆದುಕೊಳ್ಳಬಹುದಾಗಿದೆ. ನಂತರ ರೂ 62 ಅನ್ನು ನೀಡಿ ವಾಟ್ಸಾಪ್ ಅನ್ನು ಬಳಸಬೇಕಾಗುತ್ತದೆ. ಇದನ್ನು ಉಚಿತವಾಗಿ ಇನ್ನಷ್ಟು ಸಮಯ ಬಳಸಬೇಕು ಎಂದು ನೀವು ಬಯಸಿದಲ್ಲಿ ಸೆಟ್ಟಿಂಗ್ಸ್>ಖಾತೆ>ಡಿಲೀಟ್ ಮೈ ಅಕೌಂಟ್ ಹೀಗೆ ಮಾಡಿ. ಪಠ್ಯ ಸ್ಥಳದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಖಾತೆ ಅಳಿಸಿ. ಮೊದಲ ಬಾರಿಗೆ ನೀವು ರಚಿಸಿದಂತೆಯೇ ಇನ್ನೊಂದು ಹೊಸ ಖಾತೆಯನ್ನು ರಚಿಸಿಕೊಳ್ಳಿ.

ಅಳಿಸಿದ ಸಂದೇಶಗಳನ್ನು ಮರುಪಡೆದುಕೊಳ್ಳುವುದು

ಅಳಿಸಿದ ಸಂದೇಶಗಳನ್ನು ಮರುಪಡೆದುಕೊಳ್ಳುವುದು

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಇದನ್ನು ಮಾಡಲು ವಾಟ್ಸಾಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಪುನಃ ಅದನ್ನು ಮರುಸ್ಥಾಪಿಸಿಕೊಳ್ಳಿ. ಈ ಸಮಯದಲ್ಲಿ ಹಳೆಯ ಸಂದೇಗಳನ್ನು ಮರುಸಂಗ್ರಹಿಸಬೇಕೇ ಎಂದು ನಿಮ್ಮನ್ನು ಕೇಳಬಹುದು. ಇದೀಗ, ನಿಮ್ಮ ಅಳಿಸಿದ ಸಂದೇಶಗಳನ್ನು ಮರುಪಡೆದುಕೊಳ್ಳಲು ರೀಸ್ಟೋರ್ ಬಟನ್ ಕ್ಲಿಕ್ಕಿಸಿ.

ಪಿಸಿ/ಲ್ಯಾಪ್‌ಟಾಪ್‌ಗೆ ವಾಟ್ಸಾಪ್ ಡೌನ್‌ಲೋಡ್ ಮಾಡುವುದು

ಪಿಸಿ/ಲ್ಯಾಪ್‌ಟಾಪ್‌ಗೆ ವಾಟ್ಸಾಪ್ ಡೌನ್‌ಲೋಡ್ ಮಾಡುವುದು

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲೂ ವಾಟ್ಸಾಪ್ ಮೆಸೆಂಜರ್ ಅನ್ನು ನಿಮಗೆ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದಕ್ಕಾಗಿ ಎಮ್ಯುಲೇಟರ್ ಸಾಫ್ಟ್‌ವೇರ್ ಅನ್ನು ನಿಮ್ಮ ಕಂಪ್ಯೂಟರ್‌ಗೆ ನೀವು ಅಳವಡಿಸಬೇಕಾಗುತ್ತದೆ. ಬ್ಲ್ಯೂಸ್ಟಾಕ್ಸ್ ಅತ್ಯುತ್ತಮ ಎಮ್ಯುಲೇಟರ್ ಸಾಫ್ಟ್‌ವೇರ್ ಆಗಿದೆ.

 ಮುಖ್ಯ ಸಂಪರ್ಕಗಳಿಗೆ ಶಾರ್ಟ್‌ಕಟ್ ರಚಿಸಿ

ಮುಖ್ಯ ಸಂಪರ್ಕಗಳಿಗೆ ಶಾರ್ಟ್‌ಕಟ್ ರಚಿಸಿ

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಆಂಡ್ರಾಯ್ಡ್ ಫೋನ್‌ನಲ್ಲಿ ಗುಂಪು ಅಥವಾ ಸಂಪರ್ಕಕ್ಕೆ ದೀರ್ಘ ಒತ್ತುವಿಕೆಯನ್ನು ಅನುಸರಿಸುವ ಮೂಲಕ ಸಂಪರ್ಕಗಳಿಗೆ ಶಾರ್ಟ್‌ಕಟ್ ಅನ್ನು ರಚಿಸಿಕೊಳ್ಳಬಹುದು.

ಸ್ವಯಂಚಾಲಿತ ಚಿತ್ರಗಳು ಮತ್ತು ವೀಡಿಯೊಗಳ ಡೌನ್‌ಲೋಡ್ ನಿಲ್ಲಿಸುವುದು

ಸ್ವಯಂಚಾಲಿತ ಚಿತ್ರಗಳು ಮತ್ತು ವೀಡಿಯೊಗಳ ಡೌನ್‌ಲೋಡ್ ನಿಲ್ಲಿಸುವುದು

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಸೆಟ್ಟಿಂಗ್ಸ್> ಚಾಟ್ ಸೆಟ್ಟಿಂಗ್ಸ್> ಮೀಡಿಯಾ ಆಟೊ - ಡೌನ್‌ಲೋಡ್ ಇಲ್ಲಿ ನಿಮಗೆ ಇದನ್ನು ಹೇಗೆ ನಿಲ್ಲಿಸುವುದು ಎಂಬುದನ್ನು ಕುರಿತ ಮಾಹಿತಿ ಲಭ್ಯವಾಗುತ್ತದೆ.

ಕಳುಹಿಸಿದ ಚಿತ್ರಗಳನ್ನು ಇತರ ಚಿತ್ರಗಳೊಂದಿಗೆ ಮರೆಮಾಡುವುದು

ಕಳುಹಿಸಿದ ಚಿತ್ರಗಳನ್ನು ಇತರ ಚಿತ್ರಗಳೊಂದಿಗೆ ಮರೆಮಾಡುವುದು

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಆಂಡ್ರಾಯ್ಡ್‌ಗಾಗಿ Magiapp tricks App ಮತ್ತು ಐಫೋನ್‌ಗಾಗಿ Fhumb App ಅನ್ನು ಬಳಸಿ ಕಳುಹಿಸಿದ ಚಿತ್ರಗಳನ್ನು ಇತರ ಚಿತ್ರಗಳೊಂದಿಗೆ ನಿಮಗೆ ಮರೆಮಾಡಬಹುದಾಗಿದೆ.

ವಾಟ್ಸಾಪ್ ಅಂಕಿಅಂಶವನ್ನು ಪಡೆದುಕೊಳ್ಳುವುದು

ವಾಟ್ಸಾಪ್ ಅಂಕಿಅಂಶವನ್ನು ಪಡೆದುಕೊಳ್ಳುವುದು

ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ನೀವು ವಾಟ್ಸಾಪ್‌ನಲ್ಲಿ ಎಷ್ಟು ಸಮಯವನ್ನು ವ್ಯಯಿಸುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕೇ? ಸೆಟ್ಟಿಂಗ್ಸ್> ಅಕೌಂಟ್>ನೆಟ್‌ವರ್ಕ್ ಯೂಸೇಜ್ ಇಲ್ಲಿ ನಿಮಗೆ ವಾಟ್ಸಾಪ್ ಅನ್ನು ನೀವು ಎಷ್ಟು ಸಮಯ ಬಳಸುತ್ತಿದ್ದೀರಿ ಎಂಬುದರ ಬಗ್ಗೆ ಮಾಹಿತಿ ದೊರಕುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We all know that recently Facebook bought WhatsApp messenger for $19 Billion. WhatsApp deserves this huge amount because of its awesome user interface. WhatsApp is available for all the major mobile platform OS...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot