ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

Written By:

ನಿಮಗೆ ಕಾರ್ಟೂನ್ ಅಂದ್ರೆ ಇಷ್ಟನಾ ? ನೀವು ಕಾರ್ಟೂನ್‌ ಬಿಡಿಸಬೇಕು ಎಂದು ಆಲೋಚಿಸುತ್ತಿದ್ದೀರಾ? ಹಾಗಾದ್ರೆ ಚಿಂತೆ ಬಿಡಿ. ನೀವು ಇನ್ನು ಕಾರ್ಟೂನ್‌ ಬಿಡಿಸಬಹುದು. ಆದ್ರೆ ಪೇಪರ್‌ ಮೇಲೆ ಕಾರ್ಟೂನ್‌ ಬಿಡಿಸುದು ಅಲ್ಲ. ಬದಲಾಗಿ ಕಂಪ್ಯೂಟರ್‌ನಲ್ಲಿ ಅದು ಫೇಸ್‌ಬುಕ್‌ನಲ್ಲಿ ನೀವು ನಿಮ್ಮಿಷ್ಟದ ವಿವಿಧ ಶೈಲಿಯ ಕಾರ್ಟೂನ್‌ ಬಿಡಿಸಬಹುದು.

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ಅಂದ್ರೆ ಕನ್‌ಫ್ಯೂಸ್‌ ಆಗಬೇಡಿ. ಫೇಸ್‌ಬುಕ್‌ ಅಕೌಂಟ್‌ ಸಹಾಯದಿಂದ Bitstrips app ಮುಖಾಂತರ ನೀವು ಕಾರ್ಟೂನ್‌ ಬಿಡಿಸಬಹುದು. ಈ ಕಾರ್ಟೂನ್‌ ಬಿಡಿಸಲು 5 ಸರಳವಾದ ಹಂತಗಳಿವೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು ಹೋಗಿ. ನಂತರ ಫೇಸ್‌ಬುಕ್‌ನಲ್ಲಿ Bitstrips app ಮುಖಾಂತರ ಸುಂದರವಾದ ಕಾರ್ಟೂನ್ ಬಿಡಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಸ್ಟೆಪ್‌-1
ಫೇಸ್‌ಬುಕ್‌ ಅಕೌಂಟ್‌ನಲ್ಲಿ ಲಾಗಿನ್‌ ಆಗಿರದಿದ್ರೆ ಲಾಗಿನ್‌ ಆಗಿ.ಫೇಸ್‌ಬುಕ್‌ನಲ್ಲಿ Bitstrips app site ಹೋಗಿ . ಆಪ್ಸ್‌ ಓಪನ್‌ ಆದ ಮೇಲೆ ಅದರಲ್ಲಿ ಸೂಚನೆಗಳನ್ನು ಚೆನ್ನಾಗಿ ಓದಿಕೊಳ್ಳಿ. ನಂತರ 'Get Started by designing your Avatar' ಮೇಲೆ ಕ್ಲಿಕ್‌ ಮಾಡಿ

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಸ್ಟೆಪ್‌ -2
ಈ ಹಂತದಲ್ಲಿ Bitstrips ಸಹಾಯದಿಂದ ನಿಮ್ಮ ಮುಖವನ್ನು ವಿನ್ಯಾಸ ಮಾಡಿಕೊಳ್ಳಿ.ಚರ್ಮದ ಬಣ್ಣ,ತಲೆ ಕೂದಲಿನ ಬಣ್ಣ, ತಲೆ ಕೂದಲಿನ ಉದ್ದ ಸೇರಿದಂತೆ 17 ವಿವಿಧ ಆಯ್ಕೆಗಳಿವೆ.ಈ ಆಯ್ಕೆಯನ್ನು ಆರಿಸಿ ವಿನ್ಯಾಸ ಮಾಡಿಕೊಳ್ಳಿ.

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಸ್ಟೆಪ್‌ -3
ಈ ಹಂತದಲ್ಲಿ ಕಾರ್ಟೂನ್‌ನ ಗಾತ್ರ ವಿನ್ಯಾಸ ಮಾಡಬೇಕು. ಇಲ್ಲಿ ಕಾರ್ಟೂನ್‌ ಗಾತ್ರ ಕುಳ್ಳಗಿರಬೇಕೋ, ಸಾಮಾನ್ಯವಾಗಿರಬೇಕೋ ಎಂಬುದಕ್ಕೂ ಆಯ್ಕೆಗಳಿವೆ. ಇಲ್ಲಿ ನಿಮಗಿಷ್ಟವಾದ ಆಯ್ಕೆ ಮೂಲಕ ವಿನ್ಯಾಸ ಮಾಡಬಹುದು.

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಸ್ಟೆಪ್‌ 4
ಈ ಹಂತದಲ್ಲಿ ಕಾರ್ಟೂನಿನ ದೇಹವನ್ನು ವಿನ್ಯಾಸ ಮಾಡುವ ಆಯ್ಕೆ ಇರುತ್ತದೆ.ಇಲ್ಲಿ ದಪ್ಪ ಬೇಕಿದ್ದರೆ ದಪ್ಪ, ತೆಳ್ಳಗೆ ಬೇಕಿದ್ದರೆ ತೆಳ್ಳಗೆ ಆಯ್ಕೆ ಆರಿಸುವ ಮೂಲಕ ವಿನ್ಯಾಸ ಮಾಡಬಹುದು.

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಫೇಸ್‌ಬುಕ್‌ನಲ್ಲಿ ಕಾರ್ಟೂನ್‌ ರಚಿಸಿ

ಸ್ಟೆಪ್‌ 5
ಕೊನೆಯ ಸ್ಟೆಪ್‌ನಲ್ಲಿ ನಿಮ್ಮ ಕಾರ್ಟೂನ್‌ ವಸ್ತ್ರ ವಿನ್ಯಾಸ ಮಾಡಬಹುದು. ಆಫೀಸ್‌ ಶರ್ಟ್ ಬೇಕಾದ್ರೆ ಆಫೀಸ್‌ ಶರ್ಟ್‌,ಕ್ರೀಡಾ ಶರ್ಟ್‌ ಬೇಕಾದ್ರೆ ಕ್ರೀಡಾ ಶರ್ಟ್‌ ಆಯ್ಕೆಯ ಮೂಲಕ ವಸ್ತ್ರವನ್ನು ವಿನ್ಯಾಸ ಮಾಡಿಕೊಂಡು ನಿಮ್ಮ ಕಾರ್ಟೂನ್‌ ರಚಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot