ಸ್ಮಾರ್ಟ್‌ಫೋನ್‌ನಲ್ಲಿಯೇ ವೆಬ್‌ಸೈಟ್ ಕ್ರಿಯೇಟ್ ಮಾಡೋದು ಹೇಗೆ ಗೊತ್ತಾ?

Written By:

ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ವೆಬ್‌ಸೈಟ್ ತೆರೆಯಲು ಸಾಧ್ಯವೇ? ನಂಬಿದರೆ ನಂಬಿ ಬಿಟ್ಟರೆ ಬಿಡಿ.ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ನೀವು ನಿಮ್ಮದೇ ವೆಬ್‌ಸೈಟ್ ಕ್ರಿಯೆಟ್ ಮಾಡಿಕೊಳ್ಳಬಹುದು.!! ಹೌದು, ಕೇವಲ 10ರಿಂದ 15 ನಿಮಿಷಗಳಲ್ಲಿಯೇ ನಿಮಗೆ ಬೇಕಾದ ವೆಬ್‌ಸೈಟ್ ರೂಪಿಸುವ ಆಪ್‌ಗಳು ಇವೆ.!!

ಸ್ಮಾರ್ಟ್‌ಫೋನ್‌ನಲ್ಲಿಯೇ ವೆಬ್‌ಸೈಟ್ ರೂಪಿಸುವ ಆಪ್‌ಗಳು ಐಒಎಸ್ ಮತ್ತು ಆಂಡ್ರಾಯ್ಡ್ ಎಡೂ ಮಾದರಿಗಳಲ್ಲಿಯೂ ಲಭ್ಯವಿದ್ದು, ಸಂಪೂರ್ಣ ಉಚಿತವಾಗಿ ಸ್ಮಾರ್ಟ್‌ಫೋನ್‌ನಲ್ಲಿಯೇ ವೆಬ್‌ಸೈಟ್ ರೂಪಿಸಬಹುದು. ಹಾಗಾಗಿ, ಸ್ಮಾರ್ಟ್‌ಫೋನ್ ಮೂಲಕವೇ ವೆಬ್‌ಸೈಟ್ ಕ್ರಿಯೇಟ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ (Akmin Website Builder app)

ಅಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ (Akmin Website Builder app)

ತಾಂತ್ರಿಕವಾಗಿ ಮುಂದುವರಿದ ಯುಗದಲ್ಲಿ ಎಲ್ಲವೂ ಕೈಗೆಟುಕುತ್ತಿವೆ. ಇದೀಗ ಸ್ಮಾರ್ಟ್‌ಫೋನ್‌ನಲ್ಲಿಯೇ ವೆಬ್‌ಸೈಟ್ ಕ್ರಿಯೇಟ್ ಮಾಡಲು ಅಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ ಬಿಡುಗಡೆಯಾಗಿದ್ದು, ಆಪ್ ಸಂಪೂರ್ಣ ಉಚಿತವಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.!!

ಸಂಪೂರ್ಣ ಕ್ರಿಯಾತ್ಮಕ ವೆಬ್ಸೈಟ್ ರಚಿಸಲು ಸಾಧ್ಯ.!!

ಸಂಪೂರ್ಣ ಕ್ರಿಯಾತ್ಮಕ ವೆಬ್ಸೈಟ್ ರಚಿಸಲು ಸಾಧ್ಯ.!!

ಸ್ಮಾರ್ಟ್‌ಫೋನ್‌ನಲ್ಲಿಯೇ ವೆಬ್‌ಸೈಟ್ ರಚಿಸುವ ಫೀಚರ್ ಹೊಂದಿರುವ ಆಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರೆದಿದ್ದು, ನಿಮ್ಮ ಕಲ್ಪನೆಯ ರೀತಿಯಲ್ಲಿಯೇ ವೆಬ್‌ಸೈಟ್ ರಚಿಸಬಹುದಾದ ತಂತ್ರಜ್ಞಾನ ಇದರಲ್ಲಿದೆ.!! ಹಾಗಾಗಿ, ಸಂಪೂರ್ಣ ಕ್ರಿಯಾತ್ಮಕ ವೆಬ್ಸೈಟ್ ರಚಿಸಲು ಸಾಧ್ಯ.!!

ಅಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ ಬಳಕೆ ಹೇಗೆ?

ಅಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ ಬಳಕೆ ಹೇಗೆ?

ಆಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ ಮೂಲಕ ನೀವು ಯಾವುದೇ ಕೋಡಿಂಗ್ ಇಲ್ಲದೆ ವೆಬ್‌ಸೈಟ್ ಕ್ರಿಯೇಟ್ ಮಾಡಬಹುದು. ಆಪ್‌ ತೆರೆದು ಟೆಂಪ್ಲೇಟ್ ಆಯ್ಕೆ ಮಾಡಿ, ನಿಮಗೆ ಬೇಕಾದ ರೀತಿಯಲ್ಲಿ ಸೈಟ್ ಕಸ್ಟಮೈಸ್ ಮಾಡಬಹುದು. ನಂತರ ನಿಮ್ಮ ಕಂಟೆಂಟ್ ಸೇರಿಸಿ ಕೆಲವೇ ನಿಮಿಷಗಳಲ್ಲಿ ಅದನ್ನು ಪ್ರಕಟಿಸಬಹುದು.!!www.akmin.net.

ವ್ಯಾಪಾರಕ್ಕಾಗಿ ವೆಬ್ಸೈಟ್!!

ವ್ಯಾಪಾರಕ್ಕಾಗಿ ವೆಬ್ಸೈಟ್!!

ಅಕ್ಮಿನ್ ವೆಬ್ಸೈಟ್ ಬಿಲ್ಡರ್ ಆಪ್ ಬಳಸಲು ಸರಳವಾಗಿದ್ದು, ಸಣ್ಣ ಉದ್ಯಮಗಳಿಗೆ ಈ ತುಂಬಾ ಉಪಯುಕ್ತವಾಗಿದೆ. ಇನ್ನು ಈ ಆಪ್‌ನಲ್ಲಿ ಶಾಪಿಂಗ್ ಕಾರ್ಟ್ ಆಯ್ಕೆಯನ್ನು ಸಹ ಸೇರಿಸಬಹುದಾಗಿದ್ದು, ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ, ಇನ್ನು ಯಾವುದೇ ವೆಬ್ಸೈಟ್ ಡಿಸೈನರ್ ಅಥವಾ ಕಂಪನಿಯ ಮೇಲೆ ನೀವು ಅವಲಂಬಿತವಾಗಬೇಕಿಲ್ಲಾ. ಏನಂತಿರಾ? ಶೇರ್ ಮಾಡಿ.!!ಓದಿರಿ: ಸ್ವಂತ ಆಂಡ್ರಾಯ್ಡ್ ಆಪ್‌ ಕ್ರಿಯೇಟ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Did you know that you can build a complete website using only your smartphone?to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot