Subscribe to Gizbot

ಕೇಂದ್ರದ ಡಿಜಿ-ಧನ್ ಲಕ್ಕಿ ಗ್ರಾಹಕನೆಂದು ತಿಳಿಯುವುದು ಹೇಗೆ?

Written By:

ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಕ್ಕಿ ಗ್ರಾಹಕ್ ಯೋಜನೆ ಹಾಗೂ ಡಿಜಿ ಧನ್ ವ್ಯಾಪಾರ್ ಯೋಜನೆಯಡಿಯಲ್ಲಿ ಇಂದು 15 ಸಾವಿರ ವಿಜೇತರಿಗೆ 1 ಸಾವಿರ ರೂ. ಬಹುಮಾನದ ಹಣವನ್ನು ನೀಡಲಾಯಿತು.

ಇದೇ ಭಾನುವಾರದಿಂದ ಆರಂಭವಾಗಿರುವ ಲಕ್ಕಿ ಡ್ರಾ ಸ್ಪರ್ಧೆಯ ಮೊದಲ ಸುತ್ತಿನ ಬಹುಮಾನ ವಿಜೇತರ ಹೆಸರನ್ನು ಘೋಷಿಸಲಾಗಿದದ್ದು, ದೆಹಲಿಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮೊದಲನೇ ಸುತ್ತಿನ ಲಕ್ಕಿ ಡ್ರಾ ಉದ್ಘಾಟಿಸಿದರು.

ಕೇಂದ್ರದ ಡಿಜಿ-ಧನ್ ಲಕ್ಕಿ ಗ್ರಾಹಕನೆಂದು ತಿಳಿಯುವುದು ಹೇಗೆ?

ಕೇಂದ್ರಸರ್ಕಾರದಿಂದ "ಆಧಾರ್ ಪೇಮೆಂಟ್ ಆಪ್‌" ಬಿಡುಗಡೆ!!..ರಿಜಿಸ್ಟರ್ ಹೇಗೆ?

ಕೇಂದ್ರ ಸರ್ಕಾರ ಭರವಸೆ ನೀಡಿದಂತೆ ಡಿಜಿಟಲ್ ವ್ಯವಹಾರ ನಡೆಸಿದ 15 ಸಾವಿರ ವಿಜೇತರಿಗೆ 1 ಸಾವಿರ ರೂ. ಬಹುಮಾನದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದೆ. ಈ ಸ್ಪರ್ಧೆ ಮುಂದಿನ 100 ದಿನಗಳವರೆಗೆ ಇರಲಿದ್ದು, ಡಿಜಿಟಲ್ ಪೇಮೆಂಟ್ ಆಯ್ಕೆ ಬಳಸಿದ ವ್ಯಾಪಾರಸ್ಥರು ಹಾಗೂ ಗ್ರಾಹಕರು 1 ಸಾವಿರ ರೂ. ಹಣ ವಾಪಸ್ ಪಡೆಯಲು ಅರ್ಹರಿದ್ದಾರೆ.

ಕೇಂದ್ರದ ಡಿಜಿ-ಧನ್ ಲಕ್ಕಿ ಗ್ರಾಹಕನೆಂದು ತಿಳಿಯುವುದು ಹೇಗೆ?

ಲಕ್ಕಿ ಗ್ರಾಹಕನೆಂದು ತಿಳಿಯೋದು ಹೇಗೆ?

ಕೇಂದ್ರ ಸರ್ಕಾರ ನೀಡುತ್ತಿರುವ ಲಕ್ಕಿ ಡ್ರಾ ಯೋಜನೆಯ ಪೂರ್ಣ ವಿವರ https://digidhanlucky.mygov.in/ ವೆಬ್‌ಸಯಟ್‌ನಲ್ಲಿ ಲಭ್ಯವಿದೆ. ವೆಬ್‌ಸೈಟ್ ತೆರೆದು ನೀವು ಗ್ರಾಹಕರಾದಲ್ಲಿ ಕನ್‍ಸ್ಯೂಮರ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ವ್ಯಾಪಾರಸ್ಥರಾದಲ್ಲಿ ಮರ್ಚೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಕೇಂದ್ರದ ಡಿಜಿ-ಧನ್ ಲಕ್ಕಿ ಗ್ರಾಹಕನೆಂದು ತಿಳಿಯುವುದು ಹೇಗೆ?

ನೀವು ನೊಂದಾಯಿಸಿಕೊಂಡಿರುವ ಮಬೈಲ್ ನಂಬರ್ ಮತ್ತು ಪಾಸ್‍ವರ್ಡ್ ಹಾಕಿದ ನಂತರ ನೀವು ಯಾವ ಆಯ್ಕೆಯ ಮೂಲಕ ಆನ್‍ಲೈನ್ ವಹಿವಾಟು ನಡೆಸಿದ್ದೀರೋ ಅದನ್ನು ಆಯ್ಕೆ ಮಾಡಿ. ನಂತರ ನಿಮ್ಮ ಕಾರ್ಡ್ ನಂಬರ್ ನಮೂದಿಸಿದರೆ ನೀವು ಬಹುಮಾನ ಗೆದ್ದಿದ್ದೀರಾ ಇಲ್ಲವಾ ಎಂಬುದನ್ನು ತಿಳಿಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
As per the Digital scheme, the practice will be continued for the next 100 days. As per PTI, Union ministers Arun Jaitley and Ravi Shankar Prasad will inaugurate the first draw of lots in Delhi. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot