ವಾಟ್ಸಾಪ್‌ನಲ್ಲಿ ತಲೆಹರಟೆಗಳಿಂದ ದೂರ ಇರಬೇಕೆ... ಈ ಎರಡು ಆಯ್ಕೆ ಸಾಕು ಅವರನ್ನು ಸುಮ್ಮನಿರಿಸಲು!

|

ವಾಟ್ಸಾಪ್‌ ಸಾಮಾನ್ಯವಾಗಿ ಜಗತ್ತಿನ ಬಹುತೇಕರು ಬಳಕೆ ಮಾಡುವ ಪ್ಲಾಟ್‌ಫಾರ್ಮ್‌ ಆಗಿದೆ. ಅದರಲ್ಲೂ ಈಗಂತೂ ವಾಟ್ಸಾಪ್‌ ಅನ್ನು ಕೇವಲ ಮಾಹಿತಿ ಕಳುಹಿಸಲು ಅಷ್ಟೇ ಅಲ್ಲದೆ, ಮನರಂಜನೆಗಾಗಿ, ಉದ್ಯೋಗ, ವ್ಯವಹಾರ ಸಂಬಂಧ ಹೀಗೆ ಹತ್ತಾರು ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ, ಯಾರದೇ ವಾಟ್ಸಾಪ್ ಸಂಪರ್ಕ ಪಟ್ಟಿಯಲ್ಲಿ ಯಾರಾದರೊಬ್ಬರು ಬೇಡವಾದ ಅಥವಾ ಅವಶ್ಯಕತೆ ಇಲ್ಲದ ಸಂದೇಶಗಳನ್ನು ನಿರಂತರವಾಗಿ ಕಳುಹಿಸುವವರು ಇದ್ದೇ ಇರುತ್ತಾರೆ.

ವಾಟ್ಸಾಪ್‌

ಹೌದು, ನೀವು ವಾಟ್ಸಾಪ್‌ ಬಳಕೆದಾರರರಾಗಿದ್ದರೆ ಖಂಡಿತಾ ನಿಮಗೆ ಇದು ಅನುಭವಕ್ಕೆ ಬಂದಿರುತ್ತದೆ. ನಿಮಗೆ ದಿನವೂ ಏನಾದರೂ ಒಂದು ಮೆಸೆಜ್‌ ಕಳುಹಿಸುವುದು ಅಥವಾ ನಿಮಗೆ ಕೋಪ ತರಿಸುವ ಕೆಲಸ ಮಾಡುವ ವ್ಯಕ್ತಿ ನಿಮ್ಮ ಸಂಪರ್ಕದಲ್ಲಿ ಇದ್ದೇ ಇರುತ್ತಾರೆ. ಹಾಗಂತ ಅವರನ್ನು ಅಥವಾ ಆ ರೀತಿಯ ಗ್ರೂಪ್‌ ಗಳನ್ನು ತಕ್ಷಣಕ್ಕೆ ಬ್ಲಾಕ್‌ ಮಾಡಲು ಸಾಧ್ಯವಿಲ್ಲ ಎಂದಾಗ ಈ ಮಾರ್ಗಗಳ ಮೂಲಕವೂ ನೀವು ಅವರಿಂದ ಅಂತರ ಕಾಪಾಡಿಕೊಳ್ಳಬಹುದು.

ತಕ್ಷಣಕ್ಕೆ ಬ್ಲಾಕ್‌ ಮಾಡಬೇಡಿ

ತಕ್ಷಣಕ್ಕೆ ಬ್ಲಾಕ್‌ ಮಾಡಬೇಡಿ

ಸಾಮಾನ್ಯವಾಗಿ ಟೆಲಿಕಾಂ ವ್ಯವಸ್ಥೆಯಲ್ಲಿ ಯಾವುದೇ ಕರೆಯನ್ನು ಬ್ಲಾಕ್‌ ಮಾಡುವ ಆಯ್ಕೆ ನೀಡಲಾಗಿದೆ. ಅಂದರಂತೆ ವಾಟ್ಸಾಪ್‌ನಲ್ಲೂ ಸಹ ಈ ಆಯ್ಕೆ ಇದೆಯಾದರೂ ನೀವು ಬ್ಲಾಕ್‌ ಮಾಡಿದ ವ್ಯಕ್ತಿಗೆ ಬೇರೆಯದೇ ಸಂದೇಶ ರವಾನೆ ಆದಂತೆ ಆಗುತ್ತದೆ. ಇದರಿಂದ ಅವರು ನಿಮ್ಮ ಬಗ್ಗೆ ಕೆಟ್ಟ ಭಾವನೆ ಇಟ್ಟುಕೊಳ್ಳಬಹುದು. ಆ ವ್ಯಕ್ತಿ ನಿಮಗೆ ಅನಿವಾರ್ಯ. ಅದರೆ, ಆತ ಮಾಡುವ ಸಂದೇಶ ಮಾತ್ರ ನಿಮಗೆ ಅನಗತ್ಯ ಎಂದರೆ ನೀವು ಈ ಕೆಲಸ ಮಾಡಿ.

ಬ್ಲಾಕ್‌ ಹೊರತು ಪಡಿಸಿ ಇತರೆ ಎರಡು ಮಾರ್ಗ ಇವೆ

ಬ್ಲಾಕ್‌ ಹೊರತು ಪಡಿಸಿ ಇತರೆ ಎರಡು ಮಾರ್ಗ ಇವೆ

ಹೌದು, ನೀವು ಸಾಮಾನ್ಯವಾಗಿ ಯಾರ ಮೇಲಾದರೂ ಕೋಪ ಬಂದರೆ ಅಥವಾ ಸ್ನೇಹಿತರಾಗಿದ್ದವರು ದ್ವೇಷಿಗಳಾದರೆ ಅವರನ್ನು ಬ್ಲಾಕ್‌ ಮಾಡುವುದು ಸಾಮಾನ್ಯವಾದ ಕೆಲಸವಾದರೂ ಈ ಮಾರ್ಗಗಳ ಮೂಲಕ ನೀವು ಅವರನ್ನು ದೂರ ಸರಿಸಬಹುದು. ಅದುವೇ 'ಆರ್ಕೈವ್' ಹಾಗೂ ' ಮ್ಯೂಟ್‌ ' ಆಯ್ಕೆ. ಹೌದು, ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು ಎಂಬಂತೆ ಮನುಷ್ಯನ ದ್ವೇಷ ಹಾಗೂ ಕೋಪ ಶಾಸ್ವತವಾಗಿರಬಾರದು. ಅದಕ್ಕೆಂದೇ ಈ ಫೀಚರ್ಸ್ ನಿಮಗೆ ಅನುಕೂಲ ಆಗಲಿವೆ. ಯಾಕೆಂದರೆ ಈ ಫೀಚರ್ಸ್‌ ಮೂಲಕ ನಿಮ್ಮ ಕೋಪವಾಗಲಿ ಅಥವಾ ದ್ವೇಷವಾಗಲಿ ಎಷ್ಟು ದಿನ ಇರಬೇಕು ಎಂದು ನಿಗದಿ ಮಾಡಬಹುದು.

ಅರ್ಕೈವ್ ಮಾಡಿ

ಅರ್ಕೈವ್ ಮಾಡಿ

ಹೌದು, ಯಾರು ನಿಮಗೆ ಕಿರಿಕಿರಿ ಉಂಟುಮಾಡುತ್ತಾರೋ ಅವರ ನಂಬರ್‌ ಅನ್ನು ಅಥವಾ ಗ್ರೂಪ್‌ ಅನ್ನು ಅರ್ಕೈವ್ ಮಾಡಬಹುದು. ಹಾಗೆಯೇ ಈ ಫೀಚರ್ಸ್‌ನಲ್ಲಿ ಯಾವಾಗ ಆ ಚಾಟ್‌ಗಳನ್ನು ನೋಡಬೇಕು ಎನಿಸುತ್ತದೆಯೋ ಆವಾಗ ಅವರ ಸಂದೇಶಗಳನ್ನು ಓದಬಹುದು. ಅಲ್ಲಿವರೆಗೂ ಅವು ನಿಮಗೆ ಕಾಣಿಸಿಕೊಳ್ಳುವುದಿಲ್ಲ. ಹಾಗಿದ್ರೆ, ಈ ಪ್ರಕ್ರಿಯೆಯನ್ನು ಹೇಗೆ ಮಾಡುವುದು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ ನೋಡಿ.

ಹಂತ  1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಓಪನ್‌ ಮಾಡಿ ಹಾಗೂ ಯಾವ ನಂಬರ್‌ ಅನ್ನು ಅರ್ಕೈವ್ ಮಾಡಬೇಕೋ ಅದರ ಮೇಲೆ ಲಾಂಗ್‌ ಪ್ರೆಸ್‌ ಮಾಡಿ. ಅಂದರೆ ದೀರ್ಘವಾಗಿ ಒತ್ತಿ ಹಿಡಿಯಿರಿ.

ಹಂತ 2

ಹಂತ 2

ದೀರ್ಘವಾಗಿ ಒತ್ತಿ ಹಿಡಿದ ನಂತರ ಡಿಸ್‌ಪ್ಲೇ ನ ಮೇಲ್ಭಾಗದಲ್ಲಿ ಕೆಳಮುಖ ಬಾಣದೊಂದಿಗೆ ಒಂದು ಐಕಾನ್‌ ಕಾಣಿಸಿಕೊಳ್ಳುತ್ತದೆ. ಅದೇ ಆರ್ಕೈವ್ ಮಾಡುವ ಫೀಚರ್ಸ್‌. ಹೀಗಾಗಿ ಅದರ ಮೇಲೆ ಟ್ಯಾಪ್‌ ಮಾಡಿದರೆ ಆ ನಂಬರ್‌ ಆರ್ಕೈವ್ ವಿಭಾಗದಲ್ಲಿ ಸೇರುತ್ತದೆ. ಈ ಮೂಲಕ ನೀವು ಬೇಡವಾದವರನ್ನು ತೆರೆಮರೆಗೆ ಸರಿಸಬಹುದು.

 ಮ್ಯೂಟ್‌   ಮಾಡಿ ಬಿಡಿ

ಮ್ಯೂಟ್‌ ಮಾಡಿ ಬಿಡಿ

ಆರ್ಕೈವ್ ರೀತಿಯಲ್ಲಿಯೇ ಈ ಫಿಚರ್ಸ್ ಸಹ ಕೆಲಸ ಮಾಡಲಿದೆ. ಯಾರು ನಿರಂತರವಾಗಿ ನಿಮಗೆ ಕಿರಿಕಿರಿ ಉಂಟು ಮಾಡುತ್ತಿರುತ್ತಾರೋ ಅವರನ್ನು ಮ್ಯೂಟ್‌ ಮಾಡಬಹುದು ವಿಶೇಷ ಎಂದರೆ ಇದರಲ್ಲಿ 8 ಗಂಟೆಗಳು, 1 ವಾರ ಅಥವಾ ಯಾವಾಗಲೂ ಎಂಬ ಆಯ್ಕೆ ಇವೆ. ಅಂದರೆ, ಎಲ್ಲಿಯವರೆ ಈ ನಂಬರ್‌ ಅನ್ನು ಮ್ಯೂಟ್‌ ಮಾಡಿರಬೇಕು ಎಂದು ವಾಟ್ಸಾಪ್ ಕೇಳುತ್ತದೆ. ಹೀಗಾಗಿ ನಿಮಗೆ ಎಲ್ಲಿವರೆಗೂ ಆ ವ್ಯಕ್ತಿಯ ಅಥವಾ ಗ್ರೂಪ್‌ನ ಸಹವಾಸ ಬೇಡವೋ ಅಲ್ಲಿವರೆಗಿನ ಸಮಯ ಆರಿಸಿಕೊಳ್ಳಿ. ಹಾಗಿದ್ರೆ, ಈ ಪ್ರಕ್ರಿಯೆಯನ್ನು ಹೇಗೆ ಮಾಡುವುದು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ ನೋಡಿ.

ಹಂತ 1

ಹಂತ 1

ಮೊದಲು ನಿಮ್ಮ ವಾಟ್ಸಾಪ್‌ ಓಪನ್‌ ಮಾಡಿ ನಂತರ ಯಾವ ಗ್ರೂಪ್‌ ಅಥವಾ ವ್ಯಕ್ತಿ ನಿಮಗೆ ಅನಗತ್ಯ ಎನಿಸುತ್ತದೆಯೋ ಆ ನಂಬರ್‌ನ ಮೇಲೆ ದೀರ್ಘವಾಗಿ ಒತ್ತಿ ಹಿಡಿಯಿರಿ. ಇದಾದ ಬಳಿಕ ಪರದೆಯ ಮೇಲ್ಭಾಗದಲ್ಲಿ ಆರ್ಕೈವ್ ನ ಎಡಭಾಗದಲ್ಲಿ ಒಂದು ಐಕಾನ್‌ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 2

ಹಂತ 2

ಆ ಐಕಾನ್ ಮೇಲೆ ಟ್ಯಾಪ್‌ ಮಾಡಿದ ನಂತರ ಆ ಸಂಪರ್ಕ 8 ಗಂಟೆಗಳು, 1 ವಾರ ಅಥವಾ ಯಾವಾಗಲೂ ಮ್ಯೂಟ್‌ ಮಾಡಬೇಕೆ ಎಂದು ಕೇಳುತ್ತದೆ. ಆಗ ನಿಮಗೆ ಬೇಕಾದದನ್ನು ಸೆಲೆಕ್ಟ್‌ ಮಾಡಿ, ಜೊತೆಗೆ ಅದರಲ್ಲಿ 'ಶೋ ನೋಟಿಫಿಕೇಶನ್ಸ್' ಎಂಬ ಆಯ್ಕೆಯೂ ಇದೆ. ಅದನ್ನು ಟ್ಯಾಪ್‌ ಮಾಡಬೇಡಿ. ಮಾಡಿದರೆ ನೋಟಿಫಿಕೇಶನ್ಸ್ ಬರುತ್ತವೆ.

ಬ್ಲಾಕ್‌

ಇಷ್ಟೆಲ್ಲಾ ಆದರೂ ಆ ವ್ಯಕ್ತಿ ಅಥವಾ ಗ್ರೂಪ್‌ ನಿಮಗೆ ಬೇಡವೇ ಬೇಡ ಎನಿಸಿದರೆ ಕೊನೆಯ ಆಯ್ಕೆಯಾಗಿ ಬ್ಲಾಕ್‌ ಮಾಡಬಹುದು. ಇದಕ್ಕೆ ನೀವು ಮಾಡಬೇಕಿರುವುದು ಏನೆಂದರೆ ಮೊದಲು ವಾಟ್ಸಾಪ್‌ ತೆರೆಯಿರಿ, ನಂತರ ಬ್ಲಾಕ್‌ ಮಾಡಲು ಬಯಸುವ ಚಾಟ್‌ ಹುಡುಕಿ ಅದನ್ನು ಓಪನ್‌ ಮಾಡಿ, ನಂತರ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಅದರ ಮೇಲೆ ಟ್ಯಾಪ್‌ ಮಾಡಿ.

ಟ್ಯಾಪ್‌

ಆ ಮೂರು ಚುಕ್ಕೆಗಳ ವಿಭಾಗವನ್ನು ಟ್ಯಾಪ್‌ ಮಾಡಿದ ನಂತರ ನಿಮಗೆ 'ಮೋರ್' ಎಂಬ ಆಯ್ಕೆ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ನಂತರ ಅದರಲ್ಲಿ 'ಬ್ಲಾಕ್' ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ. ಈ ರೀತಿ ಮಾಡಿದರೆ ನಿಮಗೆ ಕಿರಿಕಿರಿ ಉಂಟುಮಾಡುವ ವ್ಯಕ್ತಿ ಎಂದಿಗೂ ನಿಮ್ಮ ವಾಟ್ಸಾಪ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

Best Mobiles in India

English summary
Don't worry about those who annoy you in WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X