Subscribe to Gizbot

ನೆಟ್‌ವರ್ಕ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಕೆ ಮಾಡುವುದು ಹೇಗೆ?

Written By:

ಹಾಗಾಗಿಯೇ, ಗೂಗಲ್ ಮ್ಯಾಪ್ ಇಲ್ಲದೇ ಎಲ್ಲಿಗಾದರೂ ದೂರ ಪ್ರದೇಶಗಳಿಗೆ ಪ್ರಯಾಣಿಸುವುದು ಅಸಾಧ್ಯ ಎಂದು ಎಲ್ಲರಿಗೂ ಅನಿಸುತ್ತದೆ.!! ಅದರಲ್ಲಿಯೂ ದೊಡ್ಡ ದೊಡ್ಡ ನಗರಗಳಲ್ಲಿ ಮತ್ತು ದುರ್ಗಮ ಪ್ರದೇಶಗಳಲ್ಲಂತೂ ಇದರ ಅವಶ್ಯಕತೆ ಹೆಚ್ಚು ಎಂದೇ ಹೇಳಬಹುದು.!! ಆದರೆ, ನೆಟ್‌ವರ್ಕ್ ಸಹ ಇರದ ಪ್ರದೇಶಗಳಲ್ಲಿ ಏನು ಮಾಡುವುದು?

ಹೌದು, ಇಂತಹದೊಂದು ಯೋಚನೆ ಎಲ್ಲರಿಗೂ ಬರುತ್ತದೆ.! ಕೇವಲ ನಗರಗಳಲ್ಲಿ ಮಾತ್ರ ಹೆಚ್ಚು ನೆಟ್‌ವರ್ಕ್ ವ್ಯವಸ್ಥೆ ಇದ್ದು, ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಿಗುವುದೇ ಕಷ್ಟಸಾಧ್ಯವಾಗಿದೆ! ಇನ್ನು ಸಿಕ್ಕರೂ ಸಹ ಮ್ಯಾಪ್ ಲೋಡ್ ಆಗುವುದರಲ್ಲಿಯೇ ದಿನಗಳಾಗುತ್ತವೆ.!! ಹಾಗಾಗಿ, ಇಂದಿನ ಲೇಖನದಲ್ಲಿ ನೆಟ್‌ವರ್ಕ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಕೆ ಹೇಗೆ ಎಂದು ತಿಳಿದುಕೊಳ್ಳಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಮ್ಯಾಪ್ ಬಳಕೆ ಉತ್ತಮ

ಗೂಗಲ್ ಮ್ಯಾಪ್ ಬಳಕೆ ಉತ್ತಮ

ಅಡ್ರೆಸ್ ಅಥವಾ ರೂಟ್‌ಮ್ಯಾಪ್ ಬಗ್ಗೆ ಯಾರನ್ನಾದರೂ ಕೇಳಿ ಕಿರಿಕಿರಿ ಅನುಭವಿಸುವುದರ ಬದಲು ಗೂಗಲ್ ಮ್ಯಾಪ್ ಬಳಕೆ ಉತ್ತಮ ಎಂಬುದು ಬಹುತೇಕ ಬಳಕೆದಾರರ ಅಭಿಪ್ರಾಯ.! ಅದು ನಿಜವೂ ಕೂಡ.ಏಕೆಂದರೆ ಬಹಳ ಸುಲಭವಾಗಿ ಎಲ್ಲಾ ಪ್ರದೇಶಗಳ ಮಾಹಿತಿ ಗೂಗಲ್ ಮ್ಯಾಪ್‌ನಿಂದಾಗಿ ನಮ್ಮ ಕೈಸೇರಿರುತ್ತದೆ.!!

ಹಾಗಾದರೆ ನೆಟ್‌ವರ್ಕ್ ಇಲ್ಲದೇ ಮ್ಯಾಪ್ ಬಳಕೆ ಹೇಗೆ?

ಹಾಗಾದರೆ ನೆಟ್‌ವರ್ಕ್ ಇಲ್ಲದೇ ಮ್ಯಾಪ್ ಬಳಕೆ ಹೇಗೆ?

ನೆಟ್‌ವರ್ಕ್ ಇಲ್ಲದೇ ಮ್ಯಾಪ್ ಬಳಕೆ ಮಾಡಲು ನೀವು ಮೊದಲೇ ನೀವು ಪ್ರಯಾಣಿಸಬೇಕಾದ ಮಾರ್ಗವನ್ನು ನೀವು ಡೌನ್‌ಲೋಡ್ ಮಾಡಬೇಕು. ಗೂಗಲ್ ಮ್ಯಾಪ್‌ನಲ್ಲಿ ನೀವು ಒಂದು ಪ್ರದೇಶದ ನಕ್ಷೆಯನ್ನು ಡೌನ್‌ಲೋಡ್ ಮಾಡಿಕೊಂಡು ನೆಟ್‌ವರ್ಕ್ ಇಲ್ಲೆಡೆಯೂ ದಾರಿಗಳನ್ನು ಪ್ರದೇಶಗಳನ್ನು ನೋಡಬಹುದು.!

ನಕ್ಷೆಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನಕ್ಷೆಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಸ್ಟೆಪ್ 1: ಒಂದು ಪ್ರದೇಶದ ನಕ್ಷೆಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೀವು ಮ್ಯಾಪ್ ತೆರೆದು "offline areas" ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ನಿಮಗೆ ನಿರ್ಧಿಷ್ಟ ನಕ್ಷೆಯನ್ನು ಡೌನ್‌ಲೋಡ್ ಮಾಡುವ ಆಯ್ಕೆ ತೆರೆದುಕೊಳ್ಳುತ್ತದೆ.!!

ನಕ್ಷೆಯನ್ನು ಸೆಲೆಕ್ಟ್ ಮಾಡಿ!!

ನಕ್ಷೆಯನ್ನು ಸೆಲೆಕ್ಟ್ ಮಾಡಿ!!

ಸ್ಟೆಪ್ 2: ನಿರ್ಧಿಷ್ಟ ನಕ್ಷೆಯನ್ನು ಡೌನ್‌ಲೋಡ್ ಮಾಡುವ ಆಯ್ಕೆ ತೆರೆದ ನಂತರ ಅಲ್ಲಿ ನಕ್ಷೆಯನ್ನು ಸೆಲೆಕ್ಟ್ ಮಾಡಲು ಆಯ್ಕೆ ಇರುತ್ತದೆ. ನಿಮಗೆ ಬೇಕಾದ ಅಥವಾ ನೀವು ಪ್ರಯಾಣಿಸಬೇಕಾದ ನಕ್ಷೆಗೆ ಗುರುತು ಮಾಡಿ. ನಂತರ ಡೌನ್‌ಲೋಡ್ ನೌ ಎಂದು ಕ್ಲಿಕ್ಕಿಸಿ.!

ನೆಟ್‌ವರ್ಕ್ ಇಲ್ಲದೆಯೂ ಮ್ಯಾಪ್ ಬಳಸಿ.!!

ನೆಟ್‌ವರ್ಕ್ ಇಲ್ಲದೆಯೂ ಮ್ಯಾಪ್ ಬಳಸಿ.!!

ನಿಮಗೆ ಬೇಕಾದ ಅಥವಾ ನೀವು ಪ್ರಯಾಣಿಸಬೇಕಾದ ನಕ್ಷೆಗೆ ಗುರುತು ಮಾಡಿ ಡೌನ್‌ಲೋಡ್ ಮಾಡಿಕೊಂಡ ನಂತರ ಆ ಮ್ಯಾಮ್ ಭಾಗ ನಿಮ್ಮ ಮ್ಯಾಪ್ ಆಫ್‌ಲೈನ್ ಮೂಡ್‌ನಲ್ಲಿ ಸೇವ್ ಆಗುತ್ತದೆ. ನಂತರ ಪ್ರಯಾಣಿಸುವಾಗ ನೆಟ್‌ವರ್ಕ್ ಇಲ್ಲದೆಯೂ ಮ್ಯಾಪ್ ಬಳಸಿ ನಿಮ್ಮ ಪ್ರಯಾಣ ಸುಖವಾಗಿರಿಸಿ.!!

ಓದಿರಿ:ಪ್ರತಿದಿನ ನಿಮ್ಮ ಕಾರಿನ ಬಣ್ಣ ಬದಲಾದರೆ ಹೇಗಿರುತ್ತದೆ?..ಆ ತಂತ್ರಜ್ಞಾನ ಬೆಂಗಳೂರಿನಲ್ಲಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
You can download any map of any place from Google Maps beforehand. to know more visit to kannada.gzbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot