5 ಸರಳ ತಂತ್ರಗಳು ಫೇಸ್ಬುಕ್ ನ ಚಿತ್ರಗಳು ಮತ್ತು ಸಂದೇಶಗಳನ್ನು ವಾಟ್ಸಪ್ ನಲ್ಲಿ ಕಳಿಸಲು

By Prateeksha
|

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಸಾಮಾಜಿಕ ಜಾಲತಾಣವನ್ನು ಮತ್ತು ತ್ವರಿತ ಸಂದೇಶವಾಹಕ ಅಪ್ಲಿಕೇಷನ್ ಗಳನ್ನು ಉಪಯೋಗಿಸುತ್ತಿದ್ದಾರೆ ಹಲವಾರು ಉದ್ದೇಶಗಳಿಗಾಗಿ. ಈ ಎಲ್ಲಾ ಆಪ್ಸ್ ಗಳನ್ನು ಉಪಯೋಗಕಾರಿ ಯಾಗಿ ಉಪಯೋಗಿಸಲು ಹಲವಾರು ದಾರಿಗಳಿವೆ.

5 ಸರಳ ತಂತ್ರಗಳು ಫೇಸ್ಬುಕ್ ನ ಚಿತ್ರಗಳು ಮತ್ತು ಸಂದೇಶಗಳನ್ನು ವಾಟ್ಸಪ್

ಫೇಸ್ಬುಕ್ ಬ್ರೌಸ್ ಮಾಡುವಾಗ, ನೀವು ಹಲವಾರು ಚಿತ್ರಗಳನ್ನು ನೋಡಿರಬಹುದು, ಅರ್ಥಗರ್ಭಿತ ಸಂದೇಶಗಳನ್ನು ಓದಿರಬಹುದು. ಆಗ ನಿಮಗೆ ಅವುಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಾಟ್ಸಪ್ ನಲ್ಲಿ ಹಂಚಿಕೊಳ್ಳಬೇಕೆಂದು ಅನಿಸಬಹುದು. ಆದರೆ ಇದನ್ನು ಮಾಡಲು ಯಾವುದೇ ನೇರವಾದ ದಾರಿಯಿಲ್ಲಾ.

ಓದಿರಿ: ಎಚ್ಚರ: ರಿಲಾಯನ್ಸ್ ಜಿಯೋ 4ಜಿ ಯಲ್ಲಿ ಕೇಳುತ್ತಿದೆ ಅಪಸ್ವರದ ಸದ್ದು

ಫೇಸ್ಬುಕ್ ನಲ್ಲಿನ ಚಿತ್ರವನ್ನು ಹಂಚಿಕೊಳ್ಳಲು ಪ್ರಯತ್ನಿಸಿದಾಗ, ನಿಮಗೆ ಮೆಸೆಂಜರ್ ಮೂಲಕ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಆಯ್ಕೆ ನೀಡುತ್ತದೆ. ಆದರೆ, ವಾಟ್ಸಪ್ ನೊಂದಿಗೆ ಹಂಚಿಕೊಳ್ಳಲು ಆಯ್ಕೆ ಇಲ್ಲಾ. ಆದರೂ ಕೂಡ ನೀವು ಫೇಸ್ಬುಕ್ ನಲ್ಲಿನ ಚಿತ್ರಗಳನ್ನು ಮತ್ತು ಸಂದೇಶಗಳನ್ನು ಹಂಚಿಕೊಳ್ಳಬೇಕೆಂದಿದ್ದರೆ ನೀವು ಈ ಕೆಳಗಿನ ಸರಳ ಸೂತ್ರಗಳನ್ನು ಪಾಲಿಸಿ

ವಾಟ್ಸಪ್ ನೊಂದಿಗೆ ಹಂಚುವ ಆಯ್ಕೆ ಇಲ್ಲದಿರುವುದು ಕಿರಿಕಿರಿ ತರುತ್ತದೆ

ವಾಟ್ಸಪ್ ನೊಂದಿಗೆ ಹಂಚುವ ಆಯ್ಕೆ ಇಲ್ಲದಿರುವುದು ಕಿರಿಕಿರಿ ತರುತ್ತದೆ

ಫೇಸ್ಬುಕ್ ನಿಂದ ವಾಟ್ಸಪ್ ನಲ್ಲಿ ಹಂಚಿಕೊಳ್ಳುವ ಆಯ್ಕೆ ಇಲ್ಲದಿರುವುದರಿಂದ ನಿಮಗೆ ಸ್ವಲ್ಪ ಕಿರಿಕಿರಿ ಆಗಿರಬಹುದು.ಇದು ಕೆಲಸವನ್ನು ಸರಳ ಮತ್ತು ನೇರವಾಗಿ ಮಾಡಬಹುದಿತ್ತು.ಆದರೆ ಈ ಥರದ ಆಯ್ಕೆ ಭವಿಷ್ಯದಲ್ಲಿ ಕಂಪನಿ ವಾಟ್ಸಪ್ ನಲ್ಲಿ ತರಬಹುದು ಏಕೆಂದರೆ ಬಹಳಷ್ಟು ಹೊಸ ಫೀಚರ್‍ಗಳನ್ನು ಸೇರಿಸಲಿದೆ.

ಸಹಾಯ ಮಾಡಲು ಶೇರ್ ಎಕ್ಸ್‍ಟರ್ನಲ್ ಒಪ್ಷನ್ ಇದೆ

ಸಹಾಯ ಮಾಡಲು ಶೇರ್ ಎಕ್ಸ್‍ಟರ್ನಲ್ ಒಪ್ಷನ್ ಇದೆ

ನೇರವಾದ ಆಯ್ಕೆ ಇಲ್ಲದಿದ್ದರೂ, ಶೇರ್ ಎಕ್ಸ್‍ಟರ್ನಲ್ ಎನ್ನುವ ಆಯ್ಕೆ ಇದೆ ಅದು ನಿಮಗೆ ಫೇಸ್ಬುಕ್ ನಲ್ಲಿನ ಚಿತ್ರಗಳನ್ನು ಬೇರೆ ಆಪ್ಸ್‍ಗಳಲ್ಲಿ ಹಂಚಿಕೊಳ್ಳಲು ಅವಕಾಶ ನೀಡುತ್ತದೆ ನಿಮ್ಮ ಡಿವೈಜ್ ನಲ್ಲಿ. ಈ ರೀತಿಯಾಗಿ ಫೇಸ್ಬುಕ್ ನಲ್ಲಿನ ಚಿತ್ರಗಳನ್ನು ವಾಟ್ಸಪ್, ಈ ಮೇಲ್ ಅಥವಾ ಬೇರೆ ವಾಹಿನಿ ಮೂಲಕ ಹಂಚಿಕೊಳ್ಳಬಹುದು.

ಇಲ್ಲಿದೆ ಫೀಚರ್ ಹೇಗೆ ಉಪಯೋಗಿಸಬಹುದೆಂದು

ಇಲ್ಲಿದೆ ಫೀಚರ್ ಹೇಗೆ ಉಪಯೋಗಿಸಬಹುದೆಂದು

ನಿಮಗೆ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಬೇಕೆಂದಿರುವ ಚಿತ್ರವನ್ನು ತೆರೆಯಿರಿ ಮತ್ತು ಅಲ್ಲಿ ನೀವು 3 ಚುಕ್ಕೆ ಕಾಣಬಹುದು ಆಯ್ಕೆಗಳಾಗಿ ಸೇವ್ ಇಮೇಜ್, ಶೇರ್ ಎಕ್ಸ್‍ಟರ್ನಲ್ ಮತ್ತು ಐ ಡೊನ್ಟ್ ಲೈಕ್ ದಿಸ್ ಫೋಟೊ ಎನ್ನುವಂತಹುದು. ಶೇರ್ ಎಕ್ಸ್‍ಟರ್ನಲ್ ಒಪ್ಷನ್ ಆಯ್ಕೆ ಮಾಡಿದಾಗ ನಿಮಗೆ ಆಪ್ಸ್ ಗಳ ಪಟ್ಟಿ ಸಿಗುತ್ತದೆ ವಾಟ್ಸಪ್ ಸೇರಿಸಿ,ಮತ್ತು ಅದರಲ್ಲಿ ಒಂದನ್ನು ಆಯ್ಕೆ ಮಾಡಬಹುದು.

ವಾಟ್ಸಪ್ ವೆಬ್ ಕೂಡ ಉಪಯೋಗಿಸಬಹುದು

ವಾಟ್ಸಪ್ ವೆಬ್ ಕೂಡ ಉಪಯೋಗಿಸಬಹುದು

ನೀವು ನಿಮ್ಮ ಲ್ಯಾಪ್‍ಟಾಪ್ ಇಲ್ಲವೆ ಗಣಕಯಂತ್ರದಲ್ಲಿ ವಾಟ್ಸಪ್ ವೆಬ್ ಉಪಯೋಗಿಸುತ್ತಿದ್ದರೆ, ನಿಮ್ಮ ಫೇಸ್ಬುಕ್ ಚಿತ್ರಗಳನ್ನು ವಾಟ್ಸಪ್ ಕೊನ್ಟಾಕ್ಟ್ಸ್ ಇಲ್ಲವೆ ಗ್ರುಪ್ ನಲ್ಲಿ ಹಂಚಬಹುದು ಸಣ್ಣ ತಂತ್ರ ಉಪಯೋಗಿಸಿ. ಕೇವಲ ಫೇಸ್ಬುಕ್ ನಲ್ಲಿನ ಚಿತ್ರವನ್ನು ತೆರೆಯಿರಿ ಮತ್ತು ಉಳಿಸುವ ಆಯ್ಕೆ ಒತ್ತಿರಿ ಲ್ಯಾಪ್‍ಟಾಪ್ ನಲ್ಲಿ. ಆಮೇಲೆ ನೀವು ಅದರಿಂದಲೆ ವಾಟ್ಸಪ್ ನಲ್ಲಿ ಅಟ್ಯಾಚ್ ಮಾಡಿ ಶೇರ್ ಮಾಡಿ.

ಫೇಸ್ಬುಕ್ ನಿಂದ ಸಂದೇಶಗಳನ್ನು ವಾಟ್ಸಪ್ ಗೆ ಕೊಪಿ ಮಾಡಿ

ಫೇಸ್ಬುಕ್ ನಿಂದ ಸಂದೇಶಗಳನ್ನು ವಾಟ್ಸಪ್ ಗೆ ಕೊಪಿ ಮಾಡಿ

ನಿಮಗೆ ಫೇಸ್ಬುಕ್ ನಲ್ಲಿನ ಯಾವುದಾದರು ಸಂದೇಶ ಇಷ್ಟವಾದಲ್ಲಿ ಅದನ್ನು ವಾಟ್ಸಪ್ ನಲ್ಲಿ ಹಂಚಿಕೊಳ್ಳಬೇಕೆಂದು ಅನಿಸಿದರೆ ಅದನ್ನು ಫೇಸ್ಬುಕ್ ನಿಂದ ಕೊಪಿ ಮಾಡಿ ವಾಟ್ಸಪ್ ನಲ್ಲಿ ಪೇಸ್ಟ್ ಮಾಡಿ ಬೇಕಾದವರೊಂದಿಗೆ ಶೇರ್ ಮಾಡಿಕೊಳ್ಳಬಹುದು.

Best Mobiles in India

English summary
Facebook has no separate feature to share Facebook photos and messages on WhatsApp. But, you can use the share external option to do the same as it will let you share the Facebook photos and messages via different platforms. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X