ಎಚ್ಚರ: ರಿಲಾಯನ್ಸ್ ಜಿಯೋ 4ಜಿ ಯಲ್ಲಿ ಕೇಳುತ್ತಿದೆ ಅಪಸ್ವರದ ಸದ್ದು

By Shwetha
|

ರಿಲಾಯನ್ಸ್ ಜಿಯೋದ 4ಜಿ ಪ್ರಿವ್ಯೂ ಆಫರ್ ಮಾರುಕಟ್ಟೆಯಲ್ಲಿ ಭಾರೀ ಸದ್ದುಗದ್ದಲವನ್ನುಂಟು ಮಾಡುತ್ತಿದೆ. ಇದು ಇನ್ನೂ ವಾಣಿಜ್ಯವಾಗಿ ಭಾರತದಲ್ಲಿ ಲಾಂಚ್ ಆಗುವ ಮುನ್ನವೇ ತನ್ನ ಅದ್ಭುತ ಕೊಡುಗೆಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ತನ್ನ 4ಜಿ ಪ್ರಿವ್ಯೂ ಆಫರ್ ಅನ್ನು ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳಿಗೆ ಮೊದಲು ಆರಂಭಿಸಿದ್ದ ಸಂಸ್ಥೆ, ನಂತರ ತನ್ನ ಆಫರ್ ಅನ್ನು ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಸೋನಿಕ್, ಅಸೂಸ್, ಮೈಕ್ರೋಮ್ಯಾಕ್ಸ್ ಫೋನ್‌ಗಳಿಗೆ ವಿಸ್ತರಿಸಿತ್ತು.

ಓದಿರಿ: ಜಿಯೋ 4ಜಿ ಆಫರ್ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳಿಗೆ

ಇದು ಎಷ್ಟೇ ಉತ್ತಮ ಆಫರ್‌ಗಳನ್ನು ಬಳಕೆದಾರರಿಗೂ ನೀಡಿದ್ದರೂ ಇದು ಕೆಲವೊಂದು ದೋಷಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದ್ದು ಕೆಲವೊಂದು ಆಫರ್‌ಗಳನ್ನು ಮಿಸ್ ಮಾಡಿಕೊಂಡಿದೆ ಎಂಬುದಾಗಿ ಇತ್ತೀಚಿನ ಸುದ್ದಿಗಳು ತಿಳಿಸಿವೆ. ಜಿಯೋಗೆ ಸ್ಪರ್ಧೆಯನ್ನು ಒಡ್ಡುವುದಕ್ಕಾಗಿ ಏರ್‌ಟೆಲ್, ಬಿಎಸ್‌ಎನ್‌ಎಲ್ ಮತ್ತು ವೋಡಾಫೋನ್ ಕಂಪೆನಿಗಳು ಬೇರೆ ಬೇರೆ ಆಫರ್‌ಗಳನ್ನು ಪರಿಚಯಿಸುತ್ತಿವೆ. ರಿಯೋ ಪ್ರಸ್ತುತಪಡಿಸದೇ ಇರುವ ಆಫರ್‌ಗಳನ್ನು ಬೆನ್ನೆತ್ತಿ ಈ ಕಂಪೆನಿಗಳು ತಮ್ಮ ಗಾಳವನ್ನು ಹಾಕಿವೆ.

ಓದಿರಿ: ಜಿಯೋ 4ಜಿ ಸಿಮ್ ಅನ್ನು ಡಾಂಗಲ್‌ನಲ್ಲಿ ಬಳಸುವುದು ಹೇಗೆ?

ಇಂದಿನ ಲೇಖನದಲ್ಲಿ ಈ ಅಂಶಗಳ ಕುರಿತೇ ನಿಮಗೆ ಸಂಪೂರ್ಣ ವಿವರಗಳನ್ನು ನೀಡುತ್ತಿದ್ದು ಧನ ಮತ್ತು ಋಣ ಅಂಶಗಳನ್ನು ಇಲ್ಲಿ ತಿಳಿದುಕೊಳ್ಳಿ.

ಅನಿಯಮಿತ ವಾಯ್ಸ್, ಡೇಟಾ ಮತ್ತು ಪಠ್ಯ

ಅನಿಯಮಿತ ವಾಯ್ಸ್, ಡೇಟಾ ಮತ್ತು ಪಠ್ಯ

ಜಿಯೋದ ಪ್ರಿವ್ಯೂ ಆಫರ್ ಅನಿಯಮಿತ 4ಜಿ ಸೇವೆಗೆ ಪ್ರವೇಶವನ್ನು ಒದಗಿಸುತ್ತಿದ್ದು, ಡೇಟಾ ಮತ್ತು ಪಠ್ಯ ಸಂದೇಶವೂ ಇದರೊಂದಿಗಿದೆ. ಎಚ್‌ಡಿ ವಾಯ್ಸ್ ಕಾಲಿಂಗ್, ಅನಿಯಮಿತ ಹೈ ಸ್ಪೀಡ್ ಡೇಟಾ, ಅನಿಯಮಿತ ಎಸ್‌ಎಮ್‌ಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳ ಸೇವೆಯನ್ನು ಇದು ಒಳಗೊಂಡಿದೆ.

3 ತಿಂಗಳುಗಳ ವ್ಯಾಲಿಡಿಟಿ

3 ತಿಂಗಳುಗಳ ವ್ಯಾಲಿಡಿಟಿ

ರಿಲಾಯನ್ಸ್ ಜಿಯೋ 4ಜಿ ಸಿಮ್ ಅನ್ನು ನೀವು ಆಕ್ಟಿವೇಟ್ ಮಾಡಿದಾಗ, ಉಚಿತ ಡೇಟಾ ಸರ್ವೀಸ್ ಸಿಮ್‌ನ ಆಕ್ಟಿವೇಶನ್ ಆದ ನಂತರದಿಂದ 90 ದಿನಗಳ ಕಾಲ ಲಭ್ಯವಾಗಲಿದೆ. ನೀವು 3 ತಿಂಗಳುಗಳ ಕಾಲ 4ಜಿ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ

ಕಡಿಮೆ ದರದ ಟಾರಿಫ್ ಯೋಜನೆಗಳು

ಕಡಿಮೆ ದರದ ಟಾರಿಫ್ ಯೋಜನೆಗಳು

90 ದಿನಗಳ ನಂತರ, ಟಾರಿಫ್ ಯೋಜನೆಗಳಿಂದ ಜಿಯೋದ 4ಜಿ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಪ್ರತಿ ಎಮ್‌ಬಿಗೆ 50 ಪೈಸೆಯಂತೆ ಇದು ನಿಗದಿ ಮಾಡಿದೆ ಮತ್ತು ಸೇವಾ ಆಪರೇಟರ್‌ಗಳ ಯೋಜನೆಗಳನ್ನು ಇದು ಸೇರಿಸಲಿದೆ.

ಬೇರೆ ಬೇರೆ ಡೇಟಾ ಸೇವೆಗಳ ಲಭ್ಯತೆ

ಬೇರೆ ಬೇರೆ ಡೇಟಾ ಸೇವೆಗಳ ಲಭ್ಯತೆ

ಮೊದಲಿಗೆ ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಡೇಟಾ ಸೇವೆಯನ್ನು ನಿರ್ಬಂಧಿಸಲಾಗಿತ್ತು, ನಂತರ ಅದನ್ನು ಸ್ಯಾಮ್‌ಸಂಗ್, ಎಲ್‌ಜಿ, ಮೈಕ್ರೋಮ್ಯಾಕ್ಸ್, ವೈಯು, ಪ್ಯಾನಸೋನಿಕ್, ಜಿಯೋನಿ, ಲಾವಾ, ಕಾರ್ಬನ್, ಟಿಸಿಎಲ್ ಮತ್ತು ಅಲಾಕ್ಟೆಲ್ ಮಾಡೆಲ್ ಫೋನ್‌ಗಳಿಗೆ ನೀಡಲಾಗಿತ್ತು.

ಕಾನೂನು ಸಮಸ್ಯೆಗಳು

ಕಾನೂನು ಸಮಸ್ಯೆಗಳು

ಜಿಯೋ 4ಜಿ ಕೂಡ ಕೆಲವೊಂದು ಕಾನೂನು ತೊಡಕುಗಳನ್ನು ಎದುರಿಸಲಿದ್ದು ವಾಣಿಜ್ಯಿಕವಾಗಿ ಲಾಂಚ್ ಆಗುವ ಮುನ್ನವೇ ಇದು ತನ್ನ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಸರಕಾರಿ ಸ್ಪ್ರೆಕ್ಟ್ರಮ್ ಮತ್ತು ಇತರ ದರಗಳನ್ನು ನೀಡದೆಯೇ ಇದು ಕಾರ್ಯನಿರ್ವಹಿಸುತ್ತಿದ್ದು ಕಾನೂನು ಮಟ್ಟದಲ್ಲಿ ಇದು ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡಲಿದೆ.

ಕಾಲ್ ಡ್ರಾಪ್ ಸಮಸ್ಯೆಗಳು

ಕಾಲ್ ಡ್ರಾಪ್ ಸಮಸ್ಯೆಗಳು

ರಿಲಾಯನ್ಸ್ ಜಿಯೋ ನೆಟ್‌ವರ್ಕ್ 4ಜಿ ಎಲ್‌ಟಿಇ ಸೇವೆಗಳಿಗೆ ಉತ್ತಮವಾಗಿದೆ, ಆದರೆ ವಾಯ್ಸ್ ಕಾಲ್ ಅನ್ನು ಈ ಸೇವೆಯ ಮೂಲಕ ಮಾಡಬೇಕಾದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಹುದಾಗಿದೆ. ತಮ್ಮ ನೆಟ್‌ವರ್ಕ್‌ನಲ್ಲಿ ಕಾಲ್ ಡ್ರಾಪ್ ರೇಟ್ ಕೊಂಚ ದುಬಾರಿಯಾಗಿದೆ, ಆದರೆ ಕಂಪೆನಿ ಈ ಬಗ್ಗೆ ಸುಧಾರಣೆಯನ್ನು ಮಾಡುತ್ತಿದೆ.

ನಂಬರ್ ಪೋರ್ಟಿಂಗ್ ಆಪ್ಶನ್ ಇಲ್ಲ

ನಂಬರ್ ಪೋರ್ಟಿಂಗ್ ಆಪ್ಶನ್ ಇಲ್ಲ

ರಿಲಾಯನ್ಸ್ ಜಿಯೋ 4ಜಿ ಸೇವೆಯನ್ನು ನೀವು ಇಷ್ಟಪಟ್ಟಿದ್ದು ನಿಮ್ಮ ಪ್ರಸ್ತುತ ಸಂಖ್ಯೆಯನ್ನು ನೆಟ್‌ವರ್ಕ್‌ಗೆ ಪೋರ್ಟ್ ಮಾಡಬೇಕಿದ್ದಲ್ಲಿ ಸದ್ಯಕ್ಕೆ ಯಾವುದೇ ಆಪ್ಶನ್ ಲಭ್ಯವಿಲ್ಲ. ರಿಲಾಯನ್ಸ್ ಜಿಯೋ ಕಮರ್ಶಿಯಲ್ ಆಗಿ 4ಜಿ ಸೇವೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

Best Mobiles in India

English summary
Reliance Jio's 4G Preview Offer has created a stir in the market, even though it has been commercially launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X