Just In
- 22 hrs ago
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
- 1 day ago
ಅಗ್ಗದ ದರದಲ್ಲಿ ರಿಯಲ್ಮಿ C20 ಸ್ಮಾರ್ಟ್ಫೋನ್ ಅನಾವರಣ: ಫೀಚರ್ಸ್ ಏನು?
- 1 day ago
ಏರ್ಟೆಲ್ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್ಗೆ ಯಾವುದು ಓಕೆ!
- 1 day ago
ಸ್ಮಾರ್ಟ್ಫೋನಿನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮ ಅನುಸರಿಸಿ!
Don't Miss
- News
56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ
- Lifestyle
ಸೋಮವಾರದ ಭವಿಷ್ಯ: ಕರ್ಕ ರಾಶಿಯವರಿಗೆ ದಿನ ಉತ್ತಮ, ಉಳಿದ ರಾಶಿಫಲ ನೋಡಿ
- Movies
ರಾಮ ಮಂದಿರ ನಿರ್ಮಾಣಕ್ಕೆ ಭಾರಿ ಮೊತ್ತ ದೇಣಿಗೆ ನೀಡಿದ ಅಮೂಲ್ಯ ದಂಪತಿ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋನಿನಲ್ಲಿ ಬೆಸ್ಟ್ ಫೋಟೊ ಸೆರೆಹಿಡಿಯಬೇಕೆ?..ಹಾಗಿದ್ರೆ ಇಲ್ಲಿವೆ ನೋಡಿ ಟಿಪ್ಸ್!
ಫೋಟೊಗ್ರಫಿ ಎಂದರೇ ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ. ಆದರೆ ಕೆಲವರಿಗೆ ಫೋಟೊಗ್ರಫಿ ಅನ್ನೋದು ಹವ್ಯಾಸವಾಗಿದ್ದರೇ. ಇನ್ನೂ ಕೇಲವರಿಗೆ ಅದೇ ವೃತ್ತಿಯಾಗಿರುತ್ತದೆ. ಹವ್ಯಾಸಿ ಫೋಟೊಗ್ರಫರ್‌ಗಳು ಸಹ ಈಗ ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸುತ್ತಾರೆ. ಆದರೆ ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿಯೇ ಉತ್ತಮ ಫೋಟೊ ಸೆರೆಹಿಡಿಯುವ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ.

ಹೌದು, ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ಗಳನ್ನು ಹೊಂದಿದ್ದು, ಫೋಟೊಗ್ರಫಿಗೆ ಉತ್ತಮ ಪ್ಲಾಟ್‌ಫಾರ್ಮ್ ಒದಗಿಸುತ್ತಿವೆ. ಫೋಟೊ ಸೆರೆಹಿಡಿಯುವವರಲ್ಲಿ ಆಸಕ್ತಿ ಜೊತೆಗೆ ಫೋಟೊ ಕ್ಲಿಕ್ಕಿಸಲು ವಾತಾವರಣದ ಬೇಸಿಕ್ ಟಿಪ್ಸ್ ಬಗ್ಗೆ ಗೊತ್ತಿದ್ದರೇ, ಲಭ್ಯ ಇರುವ ಫೋನ್ ಕ್ಯಾಮೆರಾ ಸೆನ್ಸಾರ್‌ಗಳಲ್ಲಿಯೇ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಫೋನಿನಲ್ಲಿ ಫೋಟೊ ಸೆರೆಹಿಡಿಯುವ ಕೆಲವು ಅಗತ್ಯ ಟಿಪ್ಸ್‌ಗಳನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಅಗತ್ಯ ಇದ್ದಾಗ ಮಾತ್ರ ಫ್ಲ್ಯಾಶ್ ಬಳಸಿ
ಇಂದಿನ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲ್ಯಾಶ್ ಲೈಟ್ ನೀಡಿರುತ್ತಾರೆ. ಪ್ರತಿ ಬಾರಿ ಫೋಟೊ ಸೆರೆಹಿಡಿಯುವಾಗಲು ಫ್ಲ್ಯಾಶ್ ಲೈಟ್ ಬಳಸುವುದು ಉತ್ತಮವಲ್ಲ. ಡಾರ್ಕ/ಮಂದಬೆಳಕು ಇದ್ದಾಗ ಮತ್ತು ಎಕ್ಸ್‌ಟ್ರಾ ಲೈಟಿಂಗ್ ಬೇಕು ಅಂದಾಗ ಮಾತ್ರ ಫ್ಲ್ಯಾಶ್ ಲೈಟ್ ಬಳಕೆ ಮಾಡಿ. ಅನಗತ್ಯವಾಗಿ ಫ್ಲ್ಯಾಶ್ ಲೈಟ್ ಬಳಸಿದರೇ ಫೋಟೊದಲ್ಲಿ ಲೈಟ್ ಸ್ಪಾಟ್ ಕಾಣಿಸುತ್ತದೆ.

ಜೂಮ್ ಜರೂರಿ ಇಲ್ಲ
ಫೋನಿನಲ್ಲಿ ಫೋಟೊ ಕ್ಲಿಕ್ಕಿಸುವಾಗ ಇಮೇಜ್‌ಗಳನ್ನು ಕ್ಲೋಸ್‌ಅಪ್‌ನಲ್ಲಿ ಇರಲಿ ಎಂದು ಜೂಮ್ ಮಾಡುವುದರಿಂದ ಫೋಟೊ ಪಿಕ್ಸಲ್ ಗುಣಮಟ್ಟ ಉತ್ತಮವಾಗಿ ಮೂಡಿಬರುವುದಿಲ್ಲ. ಜೊತೆಗೆ ಫೋಟೊ ಕ್ವಾಲಿಟಿ ಸಹ ಅಷ್ಟೇನು ಗುಣಮಟ್ಟದಲ್ಲಿ ಸೆರೆಯಾಗುವುದಿಲ್ಲ. ಹೀಗಾಗಿ ಫೋಟೊ ಕ್ಲಿಕ್ಕಿಸುವಾಗ ಅನಗತ್ಯವಾಗಿ ಜೂಮ್ ಮಾಡಲೇಬೇಡಿ.

ನೆರಳಿದ್ದರೇ ಬೆಸ್ಟ್
ಮರದ ಅಥವಾ ಕಟ್ಟಡದ ನೆರಳಿನಲ್ಲಿ ನಿಂತು ಫೋಟೊ ಕ್ಲಿಕ್ಕಿಸುವುದು ಉತ್ತಮ. ಹಾಗೇ ಫೋಟೊ ಸೆರೆಹಿಡಿಯುವಾಗ ಮುಖದ ಸುತ್ತಲೂ ಉತ್ತಮ ಬೆಳಕನ್ನು ಇರುವುದನ್ನು ಗಮನಿಸಿ. ಈಗಂತೂ ಫೋನ್ ಕ್ಯಾಮೆರಾಗಳಲ್ಲಿ ಅಗತ್ಯ ಸೆಟ್ಟಿಂಗ್ ಆಯ್ಕೆಗಳು ಲಭ್ಯ ಇದ್ದು, ಅವುಗಳನ್ನು ಅಗತ್ಯತೆಗೆ ಸೆಟ್‌ಮಾಡಿಕೊಂಡು ಫೋಟೊ ಸೆರೆಹಿಡಿಯಿರಿ. ಇಲ್ಲವೇ ಆಟೋ ಮೋಡ್‌ನಲ್ಲಿ ಇಡಿ.

ಫೋಕಸ್ ಮಾಡಿ
ಫೋಟೊ ಸೆರೆಹಿಡಿಯುವಾಗ ಫೋನ್ ಕ್ಯಾಮೆರಾ ತೆರೆದು ತಕ್ಷಣಕ್ಕೆ ಫೋಟೊ ಕ್ಲಿಕ್ ಮಾಡಬೇಡಿ. ನೀವು ಫೋಟೊ ಸೆರೆಹಿಡಿಯುವ ವ್ಯಕ್ತಿ/ಇಮೇಜ್ ಅನ್ನು ಫೋಕಸ್ ಮಾಡಿ. ಇಂದಿನ ಪ್ರತಿ ಫೋನ್‌ಗಳಲ್ಲಿ ಫೋಕಸ್ ಆಯ್ಕೆ ಇರುತ್ತದೆ. ಫೋಕಸ್ ಮಾಡದೇ ಸೆರೆಹಿಡಿದ ಫೋಟೊಗಳು ಸಾಧಾರಣ ಮಟ್ಟದಲ್ಲಿ ಇರುತ್ತವೆ. ಅದೇ ಫೋಕಸ್ ಮಾಡಿದಾಗ ಫೋಟೊ ಅತ್ಯುತ್ತಮವಾಗಿ ಮೂಡಿಬರಲಿದೆ.

ಕ್ಯಾಮೆರಾ ಸ್ಟಡಿ ಇರಲಿ
ಫೋನಿನಲ್ಲಿ ಫೋಟೊ ಸೆರೆಹಿಡಿಯುವಾಗ ಫೋಕಸ್ ಮಾಡಿ ಜೊತೆಗೆ ಕ್ಯಾಮೆರಾ ಸ್ಟಡಿಯಾಗಿ ಹಿಡಿದು ಕ್ಲಿಕ್ ಮಾಡಿ. ಫೋಟೊ ಕ್ಲಿಕ್ಕಿಸುವಾಗ ಕೈ ಶೇಕ್ ಮಾಡಿದರೇ ಫೋಟೊಗಳು ಮರ್ಜ/ಮಸಕು ಮಸಕಾಗಿ ಮೂಡಿಬಂದಂತೆ ಕಾಣಿಸುತ್ತವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190