ಗೂಗಲ್‌ ಮ್ಯಾಪ್‌ನಲ್ಲಿರುವ ಈ ಅಚ್ಚರಿಯ ಫೀಚರ್ಸ್‌ ಬಗ್ಗೆ ನಿಮಗೆ ಗೊತ್ತಾ?

|

ಯಾವುದೋ ಹೊಸ ಸ್ಥಳಕ್ಕೆ ಹೋಗಬೇಕಾದರೇ ಮಾರ್ಗದ ಕುರಿತಾಗಿ ಇದೀಗ ಯಾರನ್ನು ಏನು ಕೇಳುವ ಅಗತ್ಯವೇ ಇಲ್ಲ. ಏಕೆಂದರೇ 'ಗೂಗಲ್ ಮ್ಯಾಪ್‌' ಅತ್ಯುತ್ತಮ ಮಾರ್ಗದರ್ಶಿ ಆಗಿ ಕೆಲಸ ಮಾಡುತ್ತಿದೆ ಎಂದರೇ ತಪ್ಪಾಗಲಾರದು. ಪ್ರಸ್ತುತ ಗೂಗಲ್ ಮ್ಯಾಪ್‌ ಅಪ್ಲಿಕೇಶನ್ ಬಳಕೆದಾರರಿಗೆ ಅತೀ ಅಗತ್ಯವಾಗಿದ್ದು, ಸರಳ ದಾರಿಯನ್ನು ತಿಳಿಸುತ್ತದೆ. ಹಾಗೆಯೇ ಗೂಗಲ್ ಮ್ಯಾಪ್‌ನಲ್ಲಿರುವ ಕೆಲವು ವಿಶೇಷ ಫೀಚರ್‌ಗಳು ಬಳಕೆದಾರರ ಹಾದಿಯನ್ನು ಇನ್ನಷ್ಟು ಸುಗಮವಾಗಿಸುತ್ತವೆ.

ಗೂಗಲ್ ಮ್ಯಾಪ್‌

ಹೌದು, ಗೂಗಲ್ ಮ್ಯಾಪ್‌ ಬಳಕೆದಾರರಿಗಾಗಿ ಇತ್ತೀಚಿಗೆ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರಿಸಿದ್ದು, ಮಾರ್ಗ ಮಧ್ಯದ ಅನೇಕ ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಲಭ್ಯ ಸಾಧ್ಯ ಮಾಡಿದೆ. ಒಂದು ನಿರ್ದಿಷ್ಟ ಸ್ಥಳದಿಂದ ತಲುಪಬೇಕಾದ ಸ್ಥಳಕ್ಕೆ ಹೋಗುವ ಹಾದಿಯಲ್ಲಿ ಲಭ್ಯವಿರುವ ಹೋಟೆಲ್, ಆಸ್ಪತ್ರೆ, ಶೌಚಾಲಯ, ಪ್ರವಾಸಿ ತಾಣಗಳು, ಹೀಗೆ ಎಲ್ಲದರ ಮಾಹಿತಿ ಲಭ್ಯವಿದ್ದು, ಈ ಫೀಚರ್‌ಗಳನ್ನು ಈಗಾಗಲೇ ಬಳಕೆದಾರರು ಬಳಕೆಮಾಡುತ್ತಿದ್ದಾರೆ. ಇದರೊಂದಿಗೆ ಇನ್ನಷ್ಟು ವಿಶೇಷ ಫೀಚರ್ಸ್‌ಗಳು ಮ್ಯಾಪ್‌ನಲ್ಲಿ ಲಭ್ಯ ಇವೆ. ಹಾಗಾದರೇ ಆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್‌ಕಾಗ್ನಿಟೋ ಮೋಡ್

ಗೂಗಲ್ ಮ್ಯಾಪ್‌ ಹಲವು ಅಗತ್ಯ ಫೀಚರ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಇನ್‌ಕಾಗ್ನಿಟೋ ಮೋಡ್ ಸಹ ಒಂದು. ಈ ಫೀಚರ್ ಇತರೆ ಮ್ಯಾಪ್‌ ಬಳಕೆದಾರರಿಂದ ನಿಮ್ಮ ಲೊಕೇಶನ್ ಹೈಡ್‌ ಮಾಡಲು ಬಳಕೆ ಆಗಲಿದೆ. ಈ ಫೀಚರ್‌ ಸಕ್ರಿಯ ಮಾಡಲು ಈ ಹಂತಗಳನ್ನು ಅನುಸರಿಸಿ. ಗೂಗಲ್ ಮ್ಯಾಪ್‌ ಆಪ್ > ಪ್ರೊಫೈಲ್‌ ಐಕಾನ್ > ಇನ್‌ಕಾಗ್ನಿಟೋ ಮೋಡ್ ಟರ್ನ್ ಆನ್ ಮಾಡಿರಿ. ಹಾಗೆಯೇ ಈ ಫೀಚರ್ ಆಫ್‌ ಮಾಡಲುಬಹುದು.

ಆಫ್‌ಲೈನ್ ಮ್ಯಾಪ್‌

ಆಫ್‌ಲೈನ್ ಮ್ಯಾಪ್‌

ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್‌ಅಪ್‌ ಕಡಿಮೆ ಇದ್ದಾಗ, ಅಥವಾ ಇತರೆ ಸಂದರ್ಭಗಳಲ್ಲಿ ಬೇಕಿದ್ದರೆ ಬಳಕೆದಾರರು ಆಫ್‌ಲೈನ್ ಮ್ಯಾಪ್ ಆಯ್ಕೆ ಬಳಕೆ ಮಾಡಬಹುದು. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ಗೂಗಲ್ ಮ್ಯಾಪ್ > ವಿಳಾಸ > ಬಲಬದಿಯ ಮೆನು > ಡೌನ್‌ಲೋಡ್‌ ಆಫ್‌ಲೈನ್ ಮ್ಯಾಪ್ > ಟ್ಯಾಪ್‌ ಡೌನ್‌ಲೋಡ್.

ಟ್ರಿಪ್ ಪ್ಲ್ಯಾನ್ ಸೌಲಭ್ಯ

ಟ್ರಿಪ್ ಪ್ಲ್ಯಾನ್ ಸೌಲಭ್ಯ

ನೀವು ಪ್ರವಾಸ ಹೊರಡುವಾಗ ಒಂದು ಸ್ಥಳದಿಂದ ನೀವು ತಲುಪಬೇಕೆಂದಿರುವ ಸ್ಥಳ ಅಂತರ ಮತ್ತು ಜರ್ನಿ ಸಮಯ ಎಷ್ಟು ಎಂಬುದನ್ನು ಗೂಗಲ್ ಮ್ಯಾಪ್‌ನಲ್ಲಿ ಚೆಕ್ ಮಾಡುತ್ತಿರಿ. ಆದರೆ ನಿಮ್ಮ ಪ್ರಯಾಣ ಅದಕ್ಕಿಂತ ಹೆಚ್ಚಿನ ಸಮಯದ ತೆಗೆದುಕೊಳ್ಳುತ್ತದೆ. ಏಕೆಂದರೇ ನಡು ನಡುವೆ ನೀವು ಸ್ಟಾಪ್‌ ಮಾಡಿರುತ್ತಿರಿ. ಹೀಗಾಗಿ ಗೂಗಲ್‌ ಮ್ಯಾಪ್‌ನಲ್ಲಿ ಟ್ರಿಪ್‌ ಆಯ್ಕೆ ಇದ್ದು, ಇದರಲ್ಲಿ ನೀವು ಸ್ಟಾಪ್‌ ಮಾಡುವ ಸ್ಥಳಗಳ ಬಗ್ಗೆಯು ಎಂಟ್ರಿ ಮಾಡಬಹುದು. ಆಗ ಗೂಗಲ್ ಮ್ಯಾಪ್ ನೀವು ನಿಗದಿತ ಸ್ಥಳ ತಲುಪುವ ನಿಖರ ಸಮತ ತಿಳಿಸುತ್ತದೆ.
* ಗೂಗಲ್ ಮ್ಯಾಪ್ ತೆರೆಯಿರಿ
* ನೀವು ಹೊರಡುವ ಸ್ಥಳದಿಂದ ಫಸ್ಟ್‌ ಡೆಸ್ಟಿನೆ‍ಷನ್‌ ಎಂಟ್ರಿ ಮಾಡಿ(ಹೋಟೆಲ್, ಪೆಟ್ರೋಲ್ ಬಂಕ್, ಇತರೆ)
* ಟ್ಯಾಪ್‌ ಡೈರೆಕ್ಷನ್, ನಂತರ ಮೆನು ಆಯ್ಕೆ ಒತ್ತಿರಿ
* ನಂತರ ಆಡ್‌ ಸ್ಟಾಪ್‌ ಆಯ್ಕೆ ಸೆಲೆಕ್ಟ್ ಮಾಡಿ, ಸ್ಥಳ ಎಂಟ್ರಿ ಮಾಡಿ.

ಪಾರ್ಕಿಂಗ್ ಮಾಹಿತಿ

ಪಾರ್ಕಿಂಗ್ ಮಾಹಿತಿ

ಮೆಟ್ರೋ ಸಿಟಿಗಳಲ್ಲಿ ಕಾರು ಪಾರ್ಕಿಂಗ್ ಮಾಡುವುದು ಒಂದು ತಲೆನೋವಿನ ಕೆಲಸವೇ ಸರಿ. ಅದಕ್ಕಾಗಿ ಗೂಗಲ್ ಮ್ಯಾಪ್‌ನಲ್ಲಿ ಕಾರು ಪಾರ್ಕಿಂಗ್ ಲಭ್ಯತೆ ಸ್ಥಳ ತಿಳಿಯುವ ಬಗ್ಗೆ ಆಯ್ಕೆ ನೀಡಲಾಗಿದೆ. ಗೂಗಲ್ ಮ್ಯಾಪ್‌ನಲ್ಲಿ ಪಾರ್ಕಿಂಗ್ ಮಾಹಿತಿ ತಿಳಿಯಲು ಹೀಗೆ ಮಾಡಿ. ಗೂಗಲ್ ಮ್ಯಾಪ್ > ಡೆಸ್ಟಿನೆಷನ್ > ಎಸ್ಟಿಮೇಟೆಡ್‌ ಟೈಮ್ ಪಕ್ಕದಲ್ಲಿ P ಸಂಕೇತ ಕಾಣಿಸುತ್ತದೆ > ಪಾರ್ಕಿಂಗ್‌ಗಾಗಿ ಟ್ಯಾಪ್ P > P ಸಂಕೇತ ರೆಡ್‌ ಇದ್ದರೇ ಪಾರ್ಕಿಂಗ್ ಲಿಮಿಟೆಡ್‌ ಇದ್ದಂತೆ, ಅದೇ ಬ್ಲೂ ಬಣ್ಣದಲ್ಲಿದ್ದರೇ ಪಾರ್ಕಿಂಗ್ ಲಭ್ಯ ಎಂದರ್ಥ. > ಫೈಂಡ್‌ ಪಾರ್ಕಿಂಗ್ > ಪಾರ್ಕಿಂಗ್ ಸ್ಥಳದ ಲಿಸ್ಟ್‌ ಕಾಣಿಸುತ್ತದೆ.

ಸ್ಥಳದ ಮಾಹಿತಿ

ಸ್ಥಳದ ಮಾಹಿತಿ

ನೀವು ಯಾವುದೋ ಹೊಸ ಸ್ಥಳಕ್ಕೆ ಅಥವಾ ಹೋಟೆಲ್‌ಗೆ ಭೇಟಿ ನೀಡುವ ಪ್ಲ್ಯಾನ್‌ ಇರುತ್ತದೆ. ಆ ಸ್ಥಳಕ್ಕೆ ಹೋಗುವ ಮುನ್ನವೇ ಆ ಕುರಿತು ನೆಟ್‌ನಲ್ಲಿ ಚೆಕ್ ಮಾಡಿರುತ್ತಿರಿ. ಸ್ಥಳದ/ಹೋಟೆಲ್‌ ಫೋಟೊಗಳನ್ನು ವೀಕ್ಷಿಸಿರುತ್ತಿರಿ ಆದರೆ ಸ್ಥಳದ/ಹೋಟೆಲ್‌ ಬೀದಿಯ ಫೋಟೊಗಳನ್ನು ನೋಡಿರುವುದು ಕಡಿಮೆ. ಗೂಗಲ್ ಮ್ಯಾಪ್‌ನಲ್ಲಿ ಆ ಸ್ಥಳದ/ಹೋಟೆಲ್‌ ಇರುವ ಬೀದಿಯ ಫೋಟೊಗಳು ವೀಕ್ಷಿಸಬಹುದಾಗಿದೆ. ಅದಕ್ಕಾಗಿ ಹೀಗೆ ಮಾಡಿ. ಗೂಗಲ್ ಮ್ಯಾಪ್ > ಸರ್ಚ್ ಫಾರ್ ಲೊಕೇಶನ್(ಹೋಟೆಲ್) > ಕೆಳಭಾಗದಲ್ಲಿ ಫೋಟೊ ಬಾಕ್ಸ್ ಕಾಣಿಸುತ್ತದೆ > ಟ್ಯಾಪ್ ಮಾಡಿದರೇ ಫೋಟೊಗಳು ಕಾಣಿಸುತ್ತವೆ > ಫೋಟೊಗಳು ಜೂಮ್‌ ಇನ್‌ ಜೂಮ್ ಔಟ್ ಆಯ್ಕೆ ಪಡೆದಿರುತ್ತವೆ.

Best Mobiles in India

English summary
Google Maps can help with other tasks you may not know about, such as letting you download a map to use offline. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X