Subscribe to Gizbot

ರಾತ್ರಿ ಮಲಗಲು ನೆರವು ನೀಡುವ ಆಂಡ್ರಾಯ್ಡ್ ಮೊಬೈಲಿನ ಸಂಗೀತ ತನ್ನಿಂತಾನೇ ಬಂದ್ ಆಗಲು ಐದು ಕ್ರಮ ಅನುಸರಿಸಿ

Written By: Super Admin

ಮೊಬೈಲು ನಮ್ಮ ಜೀವನದಲ್ಲಿ ಅಡಿಯಿಟ್ಟ ಬಳಿಕ ನಡೆದ ಕ್ರಾಂತಿಕಾರಕ ಬದಲಾವಣೆಯಲ್ಲಿ ಮಲಗಲು ನೆರವಾಗುವ ಸಂಗೀತವೂ ಒಂದು. ಹಿಂದೆಲ್ಲಾ ಉಳಿದವರಿಗೆ ತೊಂದರೆಯಾಗುತ್ತಿತ್ತು ಎಂದು ಸಂಗೀತ ಆಲಿಸದಿದ್ದವರು ಈಗ ತಮ್ಮ ಹೆಡ್ ಫೋನ್ ಧರಿಸಿ ಇಷ್ಟದ ಸಂಗೀತ ಆಲಿಸುತ್ತಾ ಅಥವಾ ಬೈನಾರಲ್ ಬೀಟ್ಸ್ ಆಲಿಸಿ ಸುಖನಿದ್ದೆ ಪಡೆಯಬಹುದು.

ರಾತ್ರಿ ಮಲಗಲು ನೆರವು ನೀಡುವ ಆಂಡ್ರಾಯ್ಡ್ ಮೊಬೈಲಿನ ಸಂಗೀತ ತನ್ನಿಂತಾನೇ ಬಂದ್

ಓದಿರಿ: ಜಿಯೋ 4G ನೆಟ್‌ವರ್ಕ್‌ ಮತ್ತು ಡೌನ್‌ಲೋಡ್‌ ಸಮಸ್ಯೆಗೆ ಪರಿಹಾರ ಏನು ಗೊತ್ತೇ?

ಆದರೆ ನಿದ್ದೆ ಬಂದ ಬಳಿಕ ಈ ಬೀಟ್ಸ್ ಅಥವಾ ಸಂಗೀತ ವಿಪರೀತ ಕಿರಿಕಿರಿ ಎನಿಸುತ್ತದೆ. ಅಲ್ಲದೇ ಇಡಿಯ ರಾತ್ರಿ ನಡೆಯುವ ಸಂಗೀತ ಮೊಬೈಲಿನ ಬ್ಯಾಟರಿಯನ್ನೆಲ್ಲಾ ಹೀರಿ ಮರುದಿನ ಕಛೇರಿಗೆ ಹೋಗುವ ಅಗತ್ಯ ಸಮಯದಲ್ಲಿ ಪೂರ್ಣ ಖಾಲಿಯಾಗಿ ತಾಪತ್ರಯ ಅನುಭವಿಸಬೇಕಾಗುತ್ತದೆ.

 ಓದಿರಿ: ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿಸಲಿರುವ ಹೊಸ ಫೋನ್ಸ್

ಈ ತೊಂದನೆಯನ್ನು ಗಮನಿಸಿದ ಕೆಲವೇ ಮೊಬೈಲ್ ಆಪ್ ನಿರ್ಮಾತೃರು ನಿಗದಿತ ಸಮಯದ ಬಳಿಕ ಆಫ್ ಮಾಡುವ ಸೌಲಭ್ಯ ಒದಗಿಸುತ್ತಾರೆ. ಉಳಿದಂತೆ ಹೆಚ್ಚಿನ ಮ್ಯೂಸಿಕ್ ಅಪ್ಲಿಕೇಶನ್ ಗಳಲ್ಲಿ ಈ ಸೌಲಭ್ಯವಿಲ್ಲ. ಒಂದು ವೇಳೆ ನಿಮಗೂ ಈ ತೊಂದರೆ ಎದುರಾಗಿದ್ದರೆ ಕೆಳಗೆ ವಿವರಿಸಿದ ಐದು ಹಂತಗಳನ್ನು ಅನುಸರಿಸಿ ಈ ಸೌಲಭ್ಯವನ್ನು ಪಡೆಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Sleep Timer (Turn music off)ಆಪ್ ಹುಡುಕಿ

Sleep Timer (Turn music off)ಆಪ್ ಹುಡುಕಿ

ಗೂಗಲ್ ಪ್ಲೇ ನಲ್ಲಿ ಹುಡುಕಾಟ ನಡೆಸಿ Sleep Timer (Turn music off) ಎಂಬ ಆಪ್ ಅನ್ನು ನಿಮ್ಮ ಮೊಬೈಲಿನಲ್ಲಿ ಪ್ರತಿಷ್ಠಾಪಿಸಿ. ಇದು ಉಚಿತ ತಂತ್ರಾಂಶವಾಗಿದ್ದು ಕಡಿಮೆ ಸ್ಮರಣಶಕ್ತಿಯನ್ನು ಬಳಸುವುದರಿಂದ ಯಾವುದೇ ಅಳುಕಿಲ್ಲದೇ ಕಡಿಮೆ ಮೆಮೊರಿ ಇರುವ ಮೊಬೈಲುಗಳಲ್ಲಿಯೂ ಸ್ಥಾಪಿಸಬಹುದು.

ಇನ್ಸ್ಟಾಲ್ ಆದ ಬಳಿಕ ತೆರೆಯಿರಿ.

ಇನ್ಸ್ಟಾಲ್ ಆದ ಬಳಿಕ ತೆರೆಯಿರಿ.

ಈ ಆಪ್ ತೆರೆದ ಬಳಿಕ ಇದರಲ್ಲಿರುವ ವೃತ್ತಾಕಾರದ ಬಟನ್ ಮೇಲೆ ಒಂದು ಬಾರಿ ಕುಟ್ಟಿ. ಈಗ ಎಷ್ಟು ನಿಮಿಷದ ಬಳಿಕ ಆಫ್ ಮಾಡಬೇಕು ಎಂಬ ಸಮಯವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಲು ಹಳದಿ ಬಟನ್ ಅನ್ನು ವೃತ್ತದ ಪರಿಧಿಯನ್ನು ಅನುಸರಿಸಿ ಜಾರಿಸಿ.

ಸಂಗೀತ ಪ್ರಾರಂಭಿಸಿ

ಸಂಗೀತ ಪ್ರಾರಂಭಿಸಿ

ಈಗ ನಿಮ್ಮ ನೆಚ್ಚಿನ ಸಂಗೀತವನ್ನು ನಿಮ್ಮ ಆಯ್ಕೆಯ ಮ್ಯೂಸಿಕ್ ಪ್ಲೇಯರ್ ಆಪ್ ಬಳಸಿ ಪ್ರಾರಂಬಿಸಿ. ಗೂಗಲ್ ಪ್ಲೇ ಮ್ಯೂಸಿಕ್, ಸಾವನ್, ಸ್ಪೋಟಿಫೈ, ಒಟ್ಟಾರೆ ಯಾವುದೂ ನಡೆಯುತ್ತದೆ.

ಆಪ್ ಒಳಗಿರುವ ಮ್ಯೂಸಿ ಪ್ಲೇಯರನ್ನೂ ಬಳಸಬಹುದು.

ಆಪ್ ಒಳಗಿರುವ ಮ್ಯೂಸಿ ಪ್ಲೇಯರನ್ನೂ ಬಳಸಬಹುದು.

ಒಂದು ವೇಳೆ ನಿಮಗೆ ಇತರ ಪ್ಲೇಯರ್ ನಡೆಸುವಷ್ಟು ವ್ಯವಧಾನವಿಲ್ಲದಿದ್ದರೆ ಈ ಆಪ್ ಒಳಗೇ ಸ್ಥಾಪಿಸಲ್ಪಟ್ಟಿರುವ ಮ್ಯೂಸಿಕ್ ಆಯ್ಕೆಯನ್ನು ಬಳಸಬಹುದು. ದೊಡ್ಡ ವೃತ್ತದ ಕೆಳಗೆ ಇರುವ ಸಾಮಾನ್ಯ ಪ್ಲೇ ಬಟನ್ ಒತ್ತಿ ಪ್ರಾರಂಭಿಸಿ. ಈಗ ಇನ್ನು ಎಷ್ಟು ನಿಮಿಷ ಸಂಗೀತ ನಡೆಯಲಿಕ್ಕಿದೆ ಎಂಬುದನ್ನ ಕೌಂಟ್ ಡೌನ್ ಟೈಮರ್ ತೋರಿಸುತ್ತದೆ.

ಹೆಚ್ಚು ಸಮಯ ನಡೆಯಬೇಕೆಂದಿದ್ದರೆ ಸಮಯ ಹೆಚ್ಚಿಸಿ

ಹೆಚ್ಚು ಸಮಯ ನಡೆಯಬೇಕೆಂದಿದ್ದರೆ ಸಮಯ ಹೆಚ್ಚಿಸಿ

ನಿಗದಿತ ಸಮಯಕ್ಕೆ ಮ್ಯೂಸಿಕ್ ಆಫ್ ಆಗುತ್ತದೆ. ಆದರೆ ಇದುವರೆಗೆ ನಿದ್ದೆ ಬರದೇ ಇದ್ದು ಇನ್ನೂ ಕೊಂಚ ಹೊತ್ತು ಸಂಗೀತ ಆಲಿಸಲು ಉತ್ಸುಕರಾಗಿದ್ದರೆ ಕೆಳಗಿರುವ ಎಕ್ಸ್ಟೆಂಡ್ ಎಂಬ ಬಟನ್ ಒತ್ತಿ ನಿಮ್ಮ ಅನುಕೂಲಕ್ಕೆ ತಕ್ಕಷ್ಟು ಹೆಚ್ಚುವರಿ ಸಮಯವನ್ನು ಮತ್ತೊಮ್ಮೆ ಆಯ್ದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We all love listening music at any point in time, especially after you are tired and returned back to home. You want to listen to music while going to bed, however, once after you go into a deep sleep, music might be irritating and it may wake you up.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot