ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿಸಲಿರುವ ಹೊಸ ಫೋನ್ಸ್

Written By:

ಈ ವಾರಾದ್ಯಂತ ಹೊಸ ಹೊಸ ಡಿವೈಸ್‌ಗಳ ಲಾಂಚ್‌ಗಳನ್ನು ನಿಮ್ಮೆದುರು ನಾವು ಪ್ರಸ್ತುತಪಡಿಸುತ್ತಿದ್ದು, ಇಫಾದ ಪ್ರಮುಖ ಸುದ್ದಿಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಇಫಾ 2016 ಸಪ್ಟೆಂಬರ್ 2 ರಿಂದ ಸಪ್ಟೆಂಬರ್ 7 ರವರೆಗೆ ನಡೆಯಲಿದೆ.

ಓದಿರಿ: ಜಿಯೋಗೆ ಸ್ಪರ್ಧಿಯಾಗಿ ಆಫರ್‌ಗಳ ಪೂರ ಹರಿಸಲಿರುವ ಏರ್‌ಟೆಲ್, ವೊಡಾಫೋನ್

ಈ ಬಾರಿಯೂ ತಂತ್ರಜ್ಞಾನ ಕಂಪೆನಿಗಳಾದ ಮೈಕ್ರೋಸಾಫ್ಟ್, ಲೆನೊವೊ, ಎಚ್‌ಟಿಸಿ, ಸ್ಯಾಮ್‌ಸಂಗ್, ಹುವಾವೆ ಮತ್ತು ಇತರ ಕಂಪೆನಿಗಳಿಂದ ಹೊಸ ಹೊಸ ಡಿವೈಸ್‌ಗಳನ್ನು ನೀವು ಎದುರು ನೋಡಬಹುದಾಗಿದೆ. ಈವೆಂಟ್‌ನಲ್ಲಿ ಲಾಂಚ್ ಆಗಲಿರುವ ಐದು ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ZTE Nubia Z11

ZTE Nubia Z11

ತಮ್ಮ ನ್ಯೂಬಿಯಾ ಸಾಲಿನಲ್ಲಿ ZTE ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಲಾಂಚ್ ಈವೆಂಟ್‌ಗಾಗಿ ಕಂಪೆನಿ ಮಾಧ್ಯಮ ಆಹ್ವಾನಗಳನ್ನು ಕರೆಸಲಿದೆ. ಈ ಡಿವೈಸ್ ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿದೆ. ಇದು 5.5 ಇಂಚಿನ ಪೂರ್ಣ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1080x1920 ಪಿಕ್ಸೆಲ್ ರೆಸಲ್ಯೂಶನ್‌ಗಳನ್ನು ಪಡೆದುಕೊಂಡಿದೆ. 2.5 ಡಿ ಕರ್ವ್ಡ್ ಗ್ಲಾಸ್ ಬೆಜಲ್ ಅನ್ನು ಇದು ಪಡೆದುಕೊಂಡಿದ್ದು ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಇದರಲ್ಲಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಇದು ಹೊಂದಿದೆ.

ಎಚ್‌ಟಿಸಿ ಒನ್ A9S

ಎಚ್‌ಟಿಸಿ ಒನ್ A9S

ತೈವಾನ್‌ನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎಚ್‌ಟಿಸಿ ತನ್ನ ಸಕ್ಸೆಸರ್ ಎಚ್‌ಟಿಸಿ ಒನ್ A9 ಇಫಾ 2016 ರಲ್ಲಿ ಲಾಂಚ್ ಮಾಡಲಿದೆ. ಒನ್ ಎ9 ನಂತೆಯೇ ಇದು ಅದೇ ರೀತಿಯ ವಿನ್ಯಾಸವನ್ನು ಪಡೆದುಕೊಂಡಿದೆ. ಹೋಮ್ ಬಟನ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದ್ದು ಮೆಟಲ್ ಬಾಡಿಯದ್ದಾಗಿದೆ.

ಸೋನಿ ಎಕ್ಸ್‌ಪೀರಿಯಾ ಎಕ್ಸ್ ಆರ್

ಸೋನಿ ಎಕ್ಸ್‌ಪೀರಿಯಾ ಎಕ್ಸ್ ಆರ್

ಜಪಾನ್‌ನ ಕಂಪೆನಿ ಆಂಡ್ರಾಯ್ಡ್ ಫ್ಲ್ಯಾಗ್‌ಶಿಪ್ ಆದ ಎಕ್ಸ್‌ಪೀರಿಯಾ ಎಕ್ಸ್ ಆರ್ ಅನ್ನು ಲಾಂಚ್ ಮಾಡಿದೆ. 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇದು ಹೊಂದಿದ್ದು, 4ಜಿಬಿ RAM ಇದರಲ್ಲಿದೆ ಮತ್ತು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಅನ್ನು ಇದು ಹೊಂದಿದೆ. 4.7 ಇಂಚಿನ ಸ್ಕ್ರೀನ್ ಅನ್ನು ಡಿವೈಸ್ ಹೊಂದಿದ್ದು, ಎಕ್ಸ್‌ಪೀರಿಯಾ ಎಕ್ಸ್ ಕಾಂಪ್ಯಾಕ್ಟ್ ಎಂಬುದಾಗಿ ಕರೆಯಲ್ಪಟ್ಟಿದೆ.

ಹುವಾವೆ ಮೇಟ್ 9

ಹುವಾವೆ ಮೇಟ್ 9

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಹುವಾವೆ ಮೇಟ್ 9 ಅನ್ನು ಲಾಂಚ್ ಮಾಡಿದ್ದು ಮೇಟ್ 8 ನ ಸಕ್ಸೆಸರ್ ಆಗಿ ಇದನ್ನು ಕರೆಯಲಾಗಿದೆ. ಓಕ್ಟಾ ಕೋರ್ ಕಿರಿನ್ 960 ಪ್ರೊಸೆಸರ್ ಇದರಲ್ಲಿ ಚಾಲನೆಯಾಗುತ್ತಿದೆ. 5.9 ಇಂಚಿನ ಸ್ಕ್ರೀನ್, 4ಜಿಬಿ ಅಥವಾ 6ಜಿಬಿ RAM ಮತ್ತು 16 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ. ಗೂಗಲ್‌ನ ಅತ್ಯಾಧುನಿಕ ಆಂಡ್ರಾಯ್ಡ್ ಓಎಸ್ ಅನ್ನು ಪಡೆದುಕೊಂಡಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಫೋನ್

ಮೈಕ್ರೋಸಾಫ್ಟ್ ಸರ್ಫೇಸ್ ಫೋನ್

ಇಫಾ 2016 ರಲ್ಲಿ ಇದು ಅತ್ಯಂತ ದೊಡ್ಡ ಬಿಡುಗಡೆ ಎಂದೆನಿಸಿದೆ. ಮೈಕ್ರೋಸಾಫ್ಟ್ ತನ್ನ ಸರ್ಫೇಸ್ ಬ್ರ್ಯಾಂಡ್ ಉಳ್ಳ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಐಟೆಕ್ ಪೋಸ್ಟ್‌ನಲ್ಲಿರುವ ವರದಿಯ ಪ್ರಕಾರ, ಸರ್ಫೇಸ್ ಫೋನ್‌ನ ಮೂರು ಆವೃತ್ತಿಗಳನ್ನು ಕಂಪೆನಿ ಬಿಡುಗಡೆ ಮಾಡುತ್ತಿದೆ. ಒಂದು 3ಜಿಬಿ RAM ಅನ್ನು ಹೊಂದಿದ್ದರೆ, ಮಧ್ಯಮ ಶ್ರೇಣಿಯ ಫೋನ್ 6ಜಿಬಿ RAM ಒಳಗೊಂಡಿದೆ ಮತ್ತು ಹೈ ಎಂಡ್ ಚಾಲಿತ ಡಿವೈಸ್ 8ಜಿಬಿ RAM ಅನ್ನು ಹೊಂದಿದೆ. 5.5 ಇಂಚಿನ ಅಮೋಲೆಡ್ ಸ್ಕ್ರೀನ್, 20 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮೈಕ್ರೋಸಾಫ್ಟ್‌ನ ಸರ್ಫೇಸ್ ಪೆನ್ ಅನ್ನು ಇದು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are five smartphones likely to be launched at the event.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot