ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿಕೆಗೆ ಈ ಐದು ಟಿಪ್ಸ್‌ ನೆರವಾಗಲಿವೆ!

|

ಪ್ರಸ್ತುತ ಪ್ರತಿಯೊಬ್ಬರು ತಮ್ಮ ಅಗತ್ಯ ಕೆಲಸಗಳನ್ನು ನಡೆಸಲು ಸ್ಮಾರ್ಟ್‌ಫೋನ್‌ಗಳು ಮೇಲೆ ಅವಲಂಭಿತರಾಗಿದ್ದಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್ ಸಹ ಅಷ್ಟೇ ಅಗತ್ಯ ಮತ್ತು ಅನಿವಾರ್ಯ ಆಗಿದ್ದು, ಫೋನ್ ಬಳಕೆ ಹೆಚ್ಚಾಗಿದೆ. ಹೀಗಾಗಿ ಫೋನ್‌ಗಳಿಗೆ ಅಧಿಕ ಬ್ಯಾಟರಿ ಬಾಳಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊಬೈಲ್ ಸಂಸ್ಥೆಗಳು ಇತ್ತೀಚಿಗೆ ಫೋನ್‌ಗಳಲ್ಲಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ನೀಡುತ್ತಿವೆ. ಅದಾಗ್ಯೂ ಫೋನ್‌ಗಳ ಬ್ಯಾಟರಿ ಕೈ ಕೊಡುವ ಸಾಧ್ಯತೆಗಳು ಅಧಿಕವಾಗಿವೆ.

ಸ್ಮಾರ್ಟ್‌ಫೋನ್‌ಗಳಲ್ಲಿ

ಹೌದು, ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿ 4,000mAh ಬ್ಯಾಟರಿ ಮತ್ತು ಅಧಿಕ್ಕಿಂತಲೂ ಅಧಿಕ ಸಾಮರ್ಥ್ಯದ ಬ್ಯಾಟರಿ ಲೈಫ್‌ ಸಾಮಾನ್ಯವಾಗಿದೆ. ಹೀಗಿದ್ದರೂ ಸ್ಮಾರ್ಟ್‌ಫೋನ್‌ಗಳ ಅತೀಯಾದ ಬಳಕೆಯಿಂದ ಅವುಗಳ ಬ್ಯಾಟರಿ ಲೈಫ್ ಕರಗಿಹೋಗುತ್ತದೆ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಫೋನ್ ಬ್ಯಾಟರಿ ಕಡಿಮೆ ಆಗಿಬಿಡುವ ಸನ್ನಿವೇಶಗಳು ಬರುತ್ತವೆ. ಅಂತಹ ವೇಳೆ ಕೇಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಫೋನ್ ಬ್ಯಾಟರಿ ಲೈಫ್ ಕಾಪಾಡಿಕೊಳ್ಳಬಹುದು. ಹಾಗಾದರೆ ಫೋನ್ ಬ್ಯಾಟರಿ ಲೈಫ್ ಉಳಿಸುವ ಕೆಲವು ಕ್ರಮಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ವೈಫೈ ಬಳಸಿ

ವೈಫೈ ಬಳಸಿ

ಸ್ಮಾರ್ಟ್‌ಫೋನ್‌ಗಳಲ್ಲಿ 3G ಮತ್ತು 4G ಇಂಟರ್ನೆಟ್‌ಗಾಗಿ ಮೊಬೈಲ್‌ ಡೇಟಾ ಬಳಕೆಯು ಶೇ.40% ಬ್ಯಾಟರಿ ಬಾಳಿಕೆಯನ್ನು ಕಬಳಿಸುತ್ತದೆ. ಹೀಗಾಗಿ ಇಂಟರ್ನೆಟ್‌ ಬಳಕೆಗಾಗಿ ಸಾಧ್ಯವಾದಷ್ಟು ವೈಫೈ ಇಂಟರ್ನೆಟ್ ಅನ್ನು ಬಳಕೆ ಮಾಡಿರಿ. ವೈಫೈ ಡೇಟಾ ಬಳಕೆಯು ಫೋನ್ ಬ್ಯಾಟರಿಯನ್ನು ಹೆಚ್ಚಾಗಿ ಕಬಳಿಸುವುದಿಲ್ಲ. ಇದು ಆಂಡ್ರಾಯ್ಡ್‌ ಮತ್ತು ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹಕಾರಿಯಾಗಲಿದೆ.

ಬ್ಯಾಟರಿ ಸೇವಿಂಗ್ ಮೋಡ್

ಬ್ಯಾಟರಿ ಸೇವಿಂಗ್ ಮೋಡ್

ಇತ್ತೀಚಿಗಿನ ಪ್ರತಿಯೊಂದು ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಉಳಿಕೆಗಾಗಿ ಬ್ಯಾಟರಿ ಸೇವಿಂಗ್ ಮೋಡ್ ಫೀಚರ್ಸ್‌ ನೀಡಲಾಗಿದೆ. ಆಂಡ್ರಾಯ್ಡ್‌ ಪವರ್ ಸೇವಿಂಗ್ ಮೋಡ್ ಮತ್ತು ಐಓಎಸ್‌ನಲ್ಲಿ ಲೋ ಪವರ್ ಮೋಡ್ ಆಯ್ಕೆ ಲಭ್ಯ. ಈ ಆಯ್ಕೆಯು ಫೋನ್‌ಗಳ ಕೆಲವು ಆಪ್‌ಗಳ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡಿ, ಫೋನ್ಗಳಲ್ಲಿನ ಬ್ಯಾಟರಿ ಉಳಿಕೆಗೆ ನೆರವಾಗಲಿದೆ.

ಬ್ರೈಟ್ನೆಸ್‌ ಕಡಿಮೆ ಮಾಡಿ

ಬ್ರೈಟ್ನೆಸ್‌ ಕಡಿಮೆ ಮಾಡಿ

ಸ್ಮಾರ್ಟ್‌ಫೋನ್‌ಗಳಲ್ಲಿ ಅತೀ ಹೆಚ್ಚು ಬ್ಯಾಟರಿ ಖಾಲಿಮಾಡುವ ಅಂಶವೆಂದರೇ ಅದು ಸ್ಕ್ರೀನ್ ಬ್ರೈಟ್ನೆಸ್ ಆಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಬ್ರೈಟ್ನೆಸ್ ಕಡಿಮೆ ಮಾಡುವ ಮೂಲಕ ಫೋನ್ ಬ್ಯಾಟರಿ ಉಳಿಕೆ ಮಾಡಬಹುದು. ಫೋನ್‌ಗಳಲ್ಲಿ ಹೆಚ್ಚಿನ ಬ್ರೈಟ್ನೆಸ್ ಅಗತ್ಯ ಇಲ್ಲದಾಗ ಸ್ಕ್ರೀನ್ ಬ್ರೈಟ್ನೆಸ್ ಕಡಿಮೆ ಮಾಡುವುದು, ಇಲ್ಲವೇ ಆಟೋಮ್ಯಾಟಿಕ್ ಆಯ್ಕೆ ಸೆಟ್‌ ಮಾಡಿಕೊಳ್ಳುವುದು ಉತ್ತಮ.

ಅಧಿಕ ವಿಡಿಯೊ ವೀಕ್ಷಣೆ ಬೇಡಾ

ಅಧಿಕ ವಿಡಿಯೊ ವೀಕ್ಷಣೆ ಬೇಡಾ

ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳ ಮತ್ತು ಅಧಿಕ ವಿಡಿಯೊ ವೀಕ್ಷಣೆ ಬಳಕೆ ಬೇಡ ಇದರಿಂದ ಫೋನ್ ಬ್ಯಾಟರಿ ಬಹುಬೇಗನೆ ಖಾಲಿ ಆಗುವುದು ಖಚಿತ. ಅದು ಬ್ಯಾಟರಿ ಕಡಿಮೆ ಆದ ಸಮಯದಲ್ಲಿ ವಿಡಿಯೊ ಆಪ್ಸ್‌ ತೆರೆಯಲೆ ಬೇಡಿ, ನೋಟಿಫಿಕೇಶನ್ ಸಹ ಆಫ್ ಮಾಡಿಕೊಳ್ಳಿ. ಇವುಗಳು ಬ್ಯಾಟರಿ ಉಳಿಕೆಗೆ ಖಂಡಿತಾ ನೆರವಾಗಲಿವೆ.

ಏರೋಪ್ಲೇನ್‌ ಮೋಡ್

ಏರೋಪ್ಲೇನ್‌ ಮೋಡ್

ಸ್ಮಾರ್ಟ್‌ಫೋನ್‌ ಅನ್ನು ಏರೋಪ್ಲೇನ್‌ ಮೋಡ್‌ಗೆ ಹಾಕುವುದರಿಂದ ಸಹ ಬ್ಯಾಟರಿ ಉಳಿಸುವ ಕಾರ್ಯ ಮಾಡಬಹುದು. ಫೋನ್‌ ಏರೋಪ್ಲೇನ್‌ ಮೋಡ್‌ನಲ್ಲಿದ್ದಾಗ ಬ್ಯಾಟರಿ ಬಳಕೆ ಹೆಚ್ಚಾಗಿರುವುದಿಲ್ಲ. ಹಾಗೆಯೇ ಏರೋಪ್ಲೇನ್‌ ಮೋಡ್‌ನಲ್ಲಿ ಫೋನಿನ ಜಿಪಿಎಸ್‌, ವೈಫೈ, ಬ್ಲೂಟೂತ್ ಸೇವೆಗಳು ಆಟೋಮ್ಯಾಟಿಕ್ ಆಗಿ ಸ್ಥಗಿತವಾಗುತ್ತವೆ.

Best Mobiles in India

English summary
Phone batteries are usually made of Lithium-ion. The ability of batteries to store charge depends on the extent of their degradation. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X