ನಾಲ್ಕು ಸರಳ ಕ್ರಮದಿಂದ ನಿಮ್ಮ ಮಾತೃಭಾಷೆಯಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿ

|

ಫೇಸ್ ಬುಕ್ ಲಕ್ಷಾಂತರ ಜನರಿಗೆ ಲಭ್ಯವಿದೆ. ಫೇಸ್ ಬುಕ್ ಜನರಿಗೆ ಇಂಗ್ಲೀಷಿನಲ್ಲಷ್ಟೇ ಅಲ್ಲ, ಇನ್ನಿತರೆ ಸ್ಥಳೀಯ ಭಾಷೆಗಳಲ್ಲೂ ಲಭ್ಯವಿರಬೇಕೆಂದು ಬಯಸುವುದು ಸಹಜವೇ ಆಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ಕಿನಲ್ಲಿ ಮಾತೃ ಭಾಷೆಯಲ್ಲಿ ತಮ್ಮ ಸ್ಟೇಟಸ್ ಹಾಕುವ ಜನರ ಸಂಖೈಯೂ ಹೆಚ್ಚಿದೆ.
ನೀವು ನಿಮ್ಮ ಸ್ಥಳೀಯ ಭಾಷೆಯಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡುತ್ತೀರಾ? ಆಗದರೆ ಇದನ್ನು ಓದಿ.

ನಾಲ್ಕು ಸರಳ ಕ್ರಮದಿಂದ ನಿಮ್ಮ ಮಾತೃಭಾಷೆಯಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿ


ಸ್ಥಳೀಯ ಭಾಷೆಯಲ್ಯಾಕೆ?

ನಿಮ್ಮ ಬಳಿ ಹೇಳಲು ಬಹಳಷ್ಟು ವಿಷಯಗಳಿವೆ, ಸ್ಥಳೀಯ ಭಾಷೆಯಲ್ಲಿ ಅದನ್ನು ಬರೆದಾಗ ಉಂಟಾಗುವ ಪರಿಣಾಮ ಹೆಚ್ಚು. ಮತ್ತು ನಿರ್ದಿಷ್ಟವಾಗಿ, ಅದು ಪ್ರಪಂಚದಾದ್ಯಂತ ಇರುವ ನೋಡುಗರಿಗೆ ತಲುಪುತ್ತದೆ. ನಿಮ್ಮ ಪೋಸ್ಟ್ ಬೇರೆ ಪ್ರದೇಶದ ಭಾಷೆಗಳಿಗೂ ಭಾಷಾಂತರವಾಗುತ್ತದೆ. ಉದ್ದಿಮೆದಾರರು ಮತ್ತು ಕಂಪನಿಗಳು ನಡೆಸುವ ಪೇಜುಗಳ ವಿಷಯದಲ್ಲಂತೂ, ಈ ತಂತ್ರದಿಂದಾಗಿ ಮಿಲಿಯನ್ನುಗಟ್ಟಲೇ ಜನರನ್ನು ಯಶಸ್ವಿಯಾಗಿ ತಲುಪಲು ಸಾಧ್ಯವಾಗಿದೆ.
ಕ್ರಮ 1
ನಿಮ್ಮ ಸ್ಟೇಟಸ್ಸನ್ನು ಬಹುಭಾಷೆಯಲ್ಲಿ ಪೋಸ್ಟ್ ಮಾಡುವುದಕ್ಕೆ ಮೊದಲು ನಿಮ್ಮ ಅಕೌಂಟ್ ಸೆಟ್ಟಿಂಗ್ಸಿಗೆ ಹೋಗಿ. 'ಜೆನರಲ್’ ಟ್ಯಾಬನ್ನು ಆಯ್ಕೆ ಮಾಡಿ, ಅಲ್ಲಿ 'ಪೋಸ್ಟ್ ಇನ್ ಮಲ್ಟಿಪಲ್ ಲ್ಯಾಂಗ್ವೇಜಸ್’ (ಬಹುಭಾಷೆಯಲ್ಲಿ ಪ್ರಕಟಿಸಿ) ಅನ್ನು ಎನೇಬಲ್ ಮಾಡಿ. ಗ್ರೂಪ್ ಮತ್ತು ಪೇಜಿನ ಅಡ್ಮಿನ್ನುಗಳಷ್ಟೇ ಇದನ್ನು ಎನೇಬಲ್ ಮಾಡಲು ಸಾಧ್ಯ.

ನಾಲ್ಕು ಸರಳ ಕ್ರಮದಿಂದ ನಿಮ್ಮ ಮಾತೃಭಾಷೆಯಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿ


ಕ್ರಮ 2
'ಎಡಿಟ್’ ಬಟನ್ನಿನ ಮೇಲೆ ಕ್ಲಿಕ್ ಮಾಡಿ ಮತ್ತು ಬದಲಾವಣೆಗಳನ್ನು ಸೇವ್ ಮಾಡಿ.

ಓದಿರಿ:ಇನ್ನು ವಾಟ್ಸಾಪ್ ಸಂವಾದಗಳು ಗೂಗಲ್ ಡ್ರೈವ್‌ನಲ್ಲೂ

ನಾಲ್ಕು ಸರಳ ಕ್ರಮದಿಂದ ನಿಮ್ಮ ಮಾತೃಭಾಷೆಯಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿ

ಕ್ರಮ 3
ಸೆಟ್ಟಿಂಗ್ಸನ್ನು ಬದಲಿಸಿದ ಮೇಲೆ, ನಿಮ್ಮ ಸ್ಟೇಟಸ್ ಪೋಸ್ಟ್ ಮಾಡಲಾರಂಭಿಸಿ. ಈ ಬಾರಿ, ಯಾವ ಭಾಷೆಯಲ್ಲಿ ಪೋಸ್ಟ್ ಮಾಡಬೇಕೆಂದು ನೀವು ಆಯ್ಕೆ ಮಾಡಿಕೊಳ್ಳಬಹುದು. “ರೈಟ್ ಸಮ್ ಥಿಂಗ್” ಎಂದಿರುವ ಜಾಗದಲ್ಲಿ ಕರ್ಸರ್ ಇರಿಸಿದಾಗ, “ಪೋಸ್ಟನ್ನು ಬೇರೆ ಭಾಷೆಯಲ್ಲಿ ಬರೆಯಿರಿ” ಎಂಬ ಹೆಚ್ಚುವರಿ ಆಯ್ಕೆಯನ್ನು ನೀವು ಕಾಣುವಿರಿ.
ನಾಲ್ಕು ಸರಳ ಕ್ರಮದಿಂದ ನಿಮ್ಮ ಮಾತೃಭಾಷೆಯಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿ

ಕ್ರಮ 4
ಅವಶ್ಯಕತೆಯಿದ್ದಲ್ಲಿ, ಅದೇ ಪೋಸ್ಟನ್ನು ಮೂರನೇ ಭಾಷೆಯಲ್ಲೂ ಪೋಸ್ಟ್ ಮಾಡಬಹುದು. ಒಮ್ಮೆ ಪೋಸ್ಟ್ ಮಾಡಿದ ನಂತರ, ಫೇಸ್ ಬುಕ್ಕಿನಲ್ಲಿರುವ ನಿಮ್ಮ ಗೆಳೆಯರಿಗೆ ಮತ್ತು ಇತರರಿಗೆ ಯಾವ ಭಾಷೆಯಲ್ಲಿ ಪೋಸ್ಟನ್ನು ಓದಬೇಕೆಂಬ ಆಯ್ಕೆ ಬರುತ್ತದೆ.

ಓದಿರಿ: ಸ್ಮಾರ್ಟ್‌ಫೋನ್‌ ಬಳಕೆದಾರರಿಗಾಗಿ ಗೂಗಲ್‌ ಮ್ಯಾಪ್‌ ರಹಸ್ಯ ಫೀಚರ್‌ಗಳು

ನಾಲ್ಕು ಸರಳ ಕ್ರಮದಿಂದ ನಿಮ್ಮ ಮಾತೃಭಾಷೆಯಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿ

ಫೇಸ್ ಬುಕ್ಕಿನ ಟ್ರಾನ್ಸ್ ಲೇಷನ್ ಸೇವೆಗಳು ನೀವು ಬರೆದ ಪೋಸ್ಟನ್ನು ಇತರೆ ಭಾಷೆಗಳಿಗೆ ಭಾಷಾಂತರಿಸುತ್ತದೆ. ಆದರೆ ಕೆಲವೊಮ್ಮೆ ಈ ಭಾಷಾಂತರ ಅರ್ಥವಿಲ್ಲದ ರೀತಿಯಲ್ಲಿ ಆಗಿರುತ್ತದೆ! ನೀವೇ ಸ್ವತಃ ಭಾಷಾಂತರಿಸುವುದು ಉತ್ತಮ ವಿಧಾನ.
Best Mobiles in India

English summary
If you're a multilingual person who has a post to write to many of your friends, or a businessman who wants to attract more people by posting status updates on Facebook in the local dialect or your mother tongue, then you can do so by following these 4 simple steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X