ಇನ್ನು ವಾಟ್ಸಾಪ್ ಸಂವಾದಗಳು ಗೂಗಲ್ ಡ್ರೈವ್‌ನಲ್ಲೂ

By Shwetha
|

ನಿಮ್ಮ ಗೂಗಲ್ ಡ್ರೈವ್ ಕ್ಲೌಡ್ ಸ್ಟೊರೇಜ್‌ನಲ್ಲಿ ನಿಮ್ಮ ವಾಟ್ಸಾಪ್ ಸಂವಾದಗಳನ್ನು ನೀವೀಗ ಬ್ಯಾಕಪ್ ಮಾಡಬಹುದು. ಹೌದು ಇತ್ತೀಚೆಗೆ ತಾನೇ ವಾಟ್ಸಾಪ್ ಹೊಸ ಆವೃತ್ತಿಯಾದ 2.12.45 ಅನ್ನು ಬಿಡುಗಡೆ ಮಾಡಿದ್ದು ಇದನ್ನು ಬಳಸಿಕೊಂಡು ನಿಮ್ಮ ಗೂಗಲ್ ಡ್ರೈವ್ ಖಾತೆಯಲ್ಲಿ ನಿಮ್ಮೆಲ್ಲಾ ಚಾಟ್ ಸಂವಾದಗಳನ್ನು ಬ್ಯಾಕಪ್ ಮಾಡಿಡಬಹುದಾಗಿದೆ.

[ಓದಿರಿ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು]

ಇಂದಿನ ಲೇಖನದಲ್ಲಿ ಹೆಚ್ಚು ಪರಿಣಾಮಕಾರಿ ಎಂದೆನಿಸಿರುವ ಈ ವಿಧಾನಗಳನ್ನು ಹಂತಹಂತವಾಗಿ ನಾವು ನಿಮಗೆ ತಿಳಿಸಿಕೊಡಲಿದ್ದು ಇದು ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ. [ಓದಿರಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!]

ಅತ್ಯಾಧುನಿಕ ವಾಟ್ಸಾಪ್ ಆವೃತ್ತಿ

ಅತ್ಯಾಧುನಿಕ ವಾಟ್ಸಾಪ್ ಆವೃತ್ತಿ

ಎಪಿಕೆ ಮಿರರ್ ಸೈಟ್‌ನಿಂದ ಅತ್ಯಾಧುನಿಕ ವಾಟ್ಸಾಪ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ.

ಪ್ರಸ್ತುತ ವಾಟ್ಸಾಪ್ ಅಪ್ಲಿಕೇಶನ್

ಪ್ರಸ್ತುತ ವಾಟ್ಸಾಪ್ ಅಪ್ಲಿಕೇಶನ್

ಅದನ್ನು ಇನ್‌ಸ್ಟಾಲ್ ಮಾಡಿ ಮತ್ತು ಪ್ರಸ್ತುತ ವಾಟ್ಸಾಪ್ ಅಪ್ಲಿಕೇಶನ್ ಸ್ಥಾನಾಂತರಿಸಿ.

ವಾಟ್ಸಾಪ್ ಸೆಟ್ಟಿಂಗ್ಸ್

ವಾಟ್ಸಾಪ್ ಸೆಟ್ಟಿಂಗ್ಸ್

ಸೆಟ್ಟಿಂಗ್ಸ್ > ಚಾಟ್ ಸೆಟ್ಟಿಂಗ್ಸ್ > ಚಾಟ್ ಬ್ಯಾಕಪ್ > ಬ್ಯಾಕಪ್ ಫ್ರಿಕ್ವೆನ್ಸಿ ಇದನ್ನು ಆರಿಸಿ.

ಗೂಗಲ್ ಖಾತೆ

ಗೂಗಲ್ ಖಾತೆ

ನಿಮ್ಮ ಗೂಗಲ್ ಖಾತೆಗೆ ಪ್ರವೇಶವನ್ನು ಇದು ಕೇಳಬಹುದು. "ಓಕೆ" ಯನ್ನು ಕ್ಲಿಕ್ ಮಾಡುವ ಮೂಲಕ ಪ್ರವೇಶವನ್ನು ನೀಡಿ

ಗೂಗಲ್ ಐಡಿ

ಗೂಗಲ್ ಐಡಿ

ವಾಟ್ಸಾಪ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡುವಾಗ ನಿಮ್ಮ ಗೂಗಲ್ ಐಡಿಯೊಂದಿಗೆ ನೀವು ಲಾಗಿನ್ ಮಾಡಬೇಕು. ನಿಮ್ಮ ವಾಟ್ಸಾಪ್ ಖಾತೆಯನ್ನು ಬ್ಯಾಕಪ್ ಮಾಡಲು ನೀವು ಈ ಹಿಂದೆ ಬಳಸಿರುವ ಗೂಗಲ್ ಐಡಿ ಇದಾಗಿರಬೇಕು.

ವಾಟ್ಸಾಪ್ ಸಂವಾದ

ವಾಟ್ಸಾಪ್ ಸಂವಾದ

ಈ ಹಂತಗಳ ಮೂಲಕ ನೀವು ಗೂಗಲ್ ಡ್ರೈವ್ ಅನ್ನು ಪ್ರವೇಶಿಸಿದ್ದು ಇದರಿಂದಾಗಿ ಸ್ವಯಂಚಾಲಿತವಾಗಿ ನಿಮ್ಮ ವಾಟ್ಸಾಪ್ ಸಂವಾದ ಡ್ರೈವ್‌ನಲ್ಲಿ ಉಳಿಯುತ್ತದೆ.

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಸೇವೆ ಲಭ್ಯವಿರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದು ಬೀಟಾ ಆವೃತ್ತಿಯಾಗಿರುವುದರಿಂದ ನಂತರ ಮಾತ್ರವೇ ಪ್ಲೇ ಸ್ಟೋರ್‌ನಲ್ಲಿ ಇದು ಲಭ್ಯವಾಗುತ್ತದೆ.

ಐಓಎಸ್  ವಿಂಡೋಸ್

ಐಓಎಸ್ ವಿಂಡೋಸ್

ಈ ಸೇವೆಯನ್ನು ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಒದಗಿಸಿದ್ದು ಐಓಎಸ್ ಅಂತೆಯೇ ವಿಂಡೋಸ್ ಬಳಕೆದಾರರು ಕೊಂಚ ಸಮಯ ಇದಕ್ಕಾಗಿ ಕಾಯಬೇಕಾಗುತ್ತದೆ.

ಕ್ಲೌಡ್ ಸ್ಟೊರೇಜ್‌

ಕ್ಲೌಡ್ ಸ್ಟೊರೇಜ್‌

ನಿಮ್ಮ ಗೂಗಲ್ ಡ್ರೈವ್ ಕ್ಲೌಡ್ ಸ್ಟೊರೇಜ್‌ನಲ್ಲಿ ನಿಮ್ಮ ವಾಟ್ಸಾಪ್ ಸಂವಾದಗಳನ್ನು ನೀವೀಗ ಬ್ಯಾಕಪ್ ಮಾಡಬಹುದು.

ಚಾಟ್ ಸಂವಾದ

ಚಾಟ್ ಸಂವಾದ

ವಾಟ್ಸಾಪ್ ಹೊಸ ಆವೃತ್ತಿಯಾದ 2.12.45 ಅನ್ನು ಬಿಡುಗಡೆ ಮಾಡಿದ್ದು ಇದನ್ನು ಬಳಸಿಕೊಂಡು ನಿಮ್ಮ ಗೂಗಲ್ ಡ್ರೈವ್ ಖಾತೆಯಲ್ಲಿ ನಿಮ್ಮೆಲ್ಲಾ ಚಾಟ್ ಸಂವಾದಗಳನ್ನು ಬ್ಯಾಕಪ್ ಮಾಡಿಡಬಹುದಾಗಿದೆ.

Best Mobiles in India

English summary
Now you can backup your WhatsApp conversations in your Google drive cloud storage. WhatsApp has just released a new version namely 2.12.45 which gives you the option to backup your chat conversations to your Google drive account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X