ವಾಟ್ಸಾಪ್‌ನಲ್ಲಿ ಡೂಡಲ್ ಕ್ರಿಯೇಟ್‌ ಮಾಡುವುದು ಹೇಗೆ?

By Suneel
|

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಟೆಕ್ಸ್ಟ್‌ ವಿನ್ಯಾಸ, ಹೊಸ ಸ್ಮೈಲಿ ಎಮೋಜಿ ಸೇರಿದಂತೆ ಇತರೆ ಹಲವು ಫೀಚರ್‌ಗಳನ್ನು ಬಿಡುಗಡೆ ಮಾಡಿದೆ.

ವಾಟ್ಸಾಪ್ ಜೂಕ್‌ಬಾಕ್ಸ್‌ಗೆ ಹೊಸ ಫೀಚರ್ ಆಡ್‌ ಮಾಡಿರುವುದರಿಂದ, ಬಳಕೆದಾರರು ಈಗ ತಾವೇ ಆಸಕ್ತಕರ ಡೂಡಲ್ ಅನ್ನು ತಯಾರಿಸಿ ತಮ್ಮ ಸ್ನೇಹಿತರಿಗೆ ಶೇರ್‌ ಮಾಡಬಹುದಾಗಿದೆ.

ಸಾಮಾಜಿಕ ತಾಣ ಮೆಸೇಜಿಂಗ್‌ ಆಪ್‌ ಅಭಿವೃದ್ದಿಪಡಿಸಿರುವ ಹೊಸ ಫೀಚರ್‌ನಲ್ಲಿ ವಾಯ್ಸ್ ಮತ್ತು ವೀಡಿಯೊ ಕರೆ ವೈಶಿಷ್ಟವು ಇದೆ. ಮುಂಭಾಗ ಕ್ಯಾಮೆರಾ ಫ್ಲ್ಯಾಶ್‌ ಫೀಚರ್‌ನೊಂದಿಗೆ ಸ್ವಚ್ಛಂದದ ಫೋಟೋಗಳನ್ನು ಕ್ಯಾಪ್ಚರ್‌ ಮಾಡಬಹುದು. ಅಲ್ಲದೇ ಇಮೇಜ್‌ ಶೇರಿಂಗ್‌ನಲ್ಲಿ ಆಸಕ್ತಕರವಾದ ಇಮೇಜ್‌ಗಳನ್ನು ಶೇರ್‌ ಮಾಡಲು ಅವಕಾಶ ಒದಗಿಸಿದೆ.

ಹಳೆಯ ಇಮೇಜ್‌ಗಳನ್ನು ಸೆಂಡ್‌ ಮಾಡುವ ಬದಲು ವಾಟ್ಸಾಪ್ ಈಗ ತನ್ನ ಬಳಕೆದಾರರು ಸ್ವಯಂಕೃತವಾಗಿ ಡೂಡಲ್ ಕ್ರಿಯೇಟ್‌ ಮಾಡಿ ಸೆಂಡ್‌ ಮಾಡಲು ವೈಶಿಷ್ಟವನ್ನು ಒದಗಿಸಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರು ಇಂದಿನ ಲೇಖನದಲ್ಲಿ ವಾಟ್ಸಾಪ್‌ನಲ್ಲಿ ಡೂಡಲ್‌ ಕ್ರಿಯೇಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಹೊಸ ಡೂಡಲ್ ಫೀಚರ್

ವಾಟ್ಸಾಪ್‌ನಲ್ಲಿ ಹೊಸ ಡೂಡಲ್ ಫೀಚರ್

ವಾಟ್ಸಾಪ್‌ ಹೊಸ ಡೂಡಲ್ ಫೀಚರ್ ಅನ್ನು ಬೆಟಾ ಬಳಕೆದಾರರಿಗಾಗಿ ಪರಿಚಯಿಸಿದ್ದು, ಡೂಡಲ್ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲು ಲಭ್ಯ. ಬಳಕೆದಾರರು ರಚಿನೆ, ಎಡಿಟ್, ಹಾಸ್ಯ ಎಮೋಜಿ ಆಡ್‌ ಮಾಡುವುದು, ಅಡಿಬರಹ ನೀಡಬಹುದು. ಕ್ರಿಯೇಟ್ ಆದ ಡೂಡಲ್ ಆಸಕ್ತವಾಗಿಲ್ಲದಿದ್ದಲ್ಲಿ, ಹಂತ ಹಂತವಾಗಿ ಅಂಡು(Undo) ನಿರ್ವಹಿಸಬಹುದು.

ಸ್ವಂತ ಡೂಡಲ್ ರಚನೆ ಹೇಗೆ?
ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರ ಅಪಹಾಸ್ಯ ಇಮೇಜ್‌ ಕ್ರಿಯೇಟ್, ಸೆಲೆಬ್ರಿಟಿಯಾಗಿ ರಚಿಸಿ ಇತರೆ ಸ್ನೇಹಿತರಿಗೆ ಮತ್ತು ಕುಟುಂಬದ ಸದಸ್ಯರಿಗೆ ಕಳುಹಿಸಲು ಡೂಡಲ್‌ ಉತ್ತಮ ಆಪ್ಶನ್ ಆಗಿದೆ. ಕೆಳಗಿನ ಹಂತಗಳನ್ನು ಪಾಲಿಸಿ.

 ಹಂತ 1:

ಹಂತ 1:

ಡೂಡಲ್‌ ಕ್ರಿಯೇಟ್ ಮಾಡಬೇಕಾಗಿರುವ ಇಮೇಜ್‌ ಅನ್ನು ಸೆಲೆಕ್ಟ್ ಮಾಡಿ. ಇಮೇಜ್‌ ಅನ್ನು ಕ್ಲಿಕ್ ಮಾಡಬಹುದು ಅಥವಾ ಗ್ಯಾಲರಿ, ಸಾಮಾಜಿಕ ತಾಣ ಖಾತೆಗಳಿಂದ ಸೆಲೆಕ್ಟ್ ಮಾಡಿಕೊಳ್ಳಬಹುದು.

ಹಂತ 2:

ಹಂತ 2:

ಇಮೇಜ್‌ ಸೆಲೆಕ್ಟ್ ಮಾಡಿದ ನಂತರ ಶೀಘ್ರವಾಗಿ 'Send photo to *contact*' ಆಪ್ಶನ್‌ ಅನ್ನು ನೋಡಿ, ನಂತರ ಇಮೇಜ್‌ ಮೇಲೆ ಟ್ಯಾಪ್‌ ಮಾಡಿ ಹಲವು ನ್ಯೂಸ್‌ ಆಪ್ಶನ್‌ಗಳನ್ನು ಡೂಡಲ್‌ ರಚನೆಗೆ ಸಂಬಂಧಿಸಿದಂತೆ ನೋಡುತ್ತೀರಿ. ಅದಕ್ಕೆ ಎಮೋಜಿ, ಟೆಕ್ಟ್ಸ್‌ ಅನ್ನು ಆಡ್‌ ಮಾಡಬಹುದು.

 ಹಂತ 3:

ಹಂತ 3:

ಡೂಡಲ್‌ ಅನ್ನು ನಿಮಗೆ ಬೇಕಾದಂತೆ ರಚಿಸಿಕೊಂಡು, ನಂತರ ನಿಮ್ಮ ಸಂಪರ್ಕಗಳಿಗೆ ಸೆಂಡ್‌ ಮಾಡಬಹುದು.

ಡೂಡಲ್ ಫೀಚರ್ ಶೀಘ್ರದಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್‌ಗೆ ಬರಲಿದೆ

ಡೂಡಲ್ ಫೀಚರ್ ಶೀಘ್ರದಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್‌ಗೆ ಬರಲಿದೆ

ವಾಟ್ಸಾಪ್‌ ಪ್ರಸ್ತುತದಲ್ಲಿ ಡೂಡಲಿಂಗ್ ಫೀಚರ್‌ ಅನ್ನು ಕೇವಲ ಬೆಟಾ ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಎಲ್ಲಾ ವಾಟ್ಸಾಪ್‌ ಬಳಕೆದಾರರಿಗೆ ಅಧಿಕೃತವಾಗಿ ಫೀಚರ್ ನೀಡಲು ಯೋಜನೆ ಸಿದ್ಧಪಡಿಸಿದೆ.

Best Mobiles in India

Read more about:
English summary
Here's how to create your own Doodle on WhatsApp. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X