ವಾಟ್ಸಾಪ್‌ನಲ್ಲಿ 'ಟೈಪಿಂಗ್‌ ಸ್ಟೇಟಸ್‌' ಅನ್ನು ಈ 2 ವಿಧಾನಗಳಿಂದ ಹೈಡ್ ಮಾಡಿ

By Suneel
|

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ದಿನದಿಂದ ದಿನಕ್ಕೆ ಹೆಚ್ಚು ಫೀಚರ್‌ಗಳನ್ನು ನೀಡುತ್ತಾ ಹೆಡ್‌ಲೈನ್‌ ಪಡೆಯುತ್ತಲೇ ಇದೆ. ಅವುಗಳಲ್ಲಿ ವೀಡಿಯೋ ಕರೆ ಟೆಸ್ಟ್‌, ಡೂಡಲ್ ಸಪೋರ್ಟ್‌, ಜಿಫ್ ಸೆಂಡ್ ಮುಂತಾದವುಗಳು

ವಾಟ್ಸಾಪ್‌ನಲ್ಲಿ 'ಟೈಪಿಂಗ್‌ ಸ್ಟೇಟಸ್‌' ಅನ್ನು ಈ 2 ವಿಧಾನಗಳಿಂದ ಹೈಡ್ ಮಾಡಿ

ವಾಟ್ಸಾಪ್ ಬಳಕೆದಾರರು ಬಹು ನಿರೀಕ್ಷೆಯಿಂದ ಪ್ರಸ್ತುತದಲ್ಲಿ ವೀಡಿಯೊ ಕರೆ ಫೀಚರ್‌ಗಾಗಿ ಮುನ್ನೋಡುತ್ತಿದ್ದಾರೆ. ಇದು ವಾಟ್ಸಾಪ್‌ನ ಪ್ರಮುಖ ಫೀಚರ್ ಸಹ ಆಗಿದೆ.

ವಾಟ್ಸಾಪ್ ಬಳಕೆದಾರರಿಗೆ ಕೆಲವು ಸಣ್ಣ ಸಣ್ಣ ಫೀಚರ್‌ಗಳು ಆಪ್‌ನಲ್ಲಿ ತಲೆನೋವಾಗಿಬಿಟ್ಟಿವೆ. ಅವುಗಳಲ್ಲಿ ಟೈಪಿಂಗ್‌ ಸ್ಟೇಟಸ್‌ ಆಗಿರಬಹುದು. ಈ ಫೀಚರ್‌ ಬಗ್ಗೆ ಹಲವು ವಾಟ್ಸಾಪ್‌ ಬಳಕೆದಾರರು ದೂರನ್ನು ಸಹ ಹೇಳುತ್ತಾರೆ. ಯಾಕಂದ್ರೆ ಮೆಸೇಜ್‌ ಸ್ವೀಕೃತದಾರರು ದೀರ್ಘಕಾಲ ಟೈಪಿಂಗ್ ಸ್ಟೇಟಸ್‌ ಅನ್ನು ನೋಡುವುದರಿಂದ ಡಿಸ್‌ಟರ್ಬ್‌ ಆಗುತ್ತದೆ ಎಂದಿದ್ದಾರೆ. ನೀವು ಸಹ ಈ ಟೈಪಿಂಗ್‌ ಸ್ಟೇಟಸ್‌ನಿಂದ ಡಿಸ್‌ಟರ್ಬ್‌ ಆಗುತ್ತಿದ್ದಲ್ಲಿ, ಈ ಲೇಖನವನ್ನು ಒಮ್ಮೆ ಓದಿರಿ.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ 'ಟೈಪಿಂಗ್‌ ಸ್ಟೇಟಸ್‌' ಅನ್ನು ಈ 2 ವಿಧಾನಗಳಿಂದ ಹೈಡ್ ಮಾಡಿ

ವಿಧಾನ 1 : ಟೈಪಿಂಗ್‌ ಮಾಡುವಾಗ ಫೋನ್‌ ಏರ್‌ಪ್ಲೇನ್‌ ಮೋಡ್‌ನಲ್ಲಿ ಇಡಿ
ಈ ಐಡಿಯಾ ಒಂದು ರೀತಿಯಲ್ಲಿ ವಿಲಕ್ಷಣ ಎಂದು ಭಾವಿಸಬಹುದು. ಆದರೆ ಇದು ಪರಿಣಾಮಕಾರಿಯಾಗಿದೆ.

ಮೆಸೇಜ್‌ ಟೈಪ್‌ ಮಾಡುವಾಗ, ದೀರ್ಘಕಾಲ ಟೈಪಿಸುವಾಗ ನಿಮ್ಮ ಫೋನ್‌ ಅನ್ನು ಏರ್‌ಪ್ಲೇನ್‌ ಮೋಡ್‌ನಲ್ಲಿ ಇಡಿ ಅಥವಾ ಇಂಟರ್ನೆಟ್ ಸ್ವಿಚ್‌ ಆಫ್‌ ಮಾಡಿ ಮತ್ತು ಸೆಂಡ್ ಹಿಟ್‌ ಮಾಡಿ

ಫೋನ್‌ ಏರ್‌ಪ್ಲೇನ್‌ ಮೋಡ್‌ನಲ್ಲಿರುವಾಗ, ಸಣ್ಣ ಕ್ಲಾಕ್‌ ಚಿಹ್ನೆ ಪ್ರದರ್ಶನವಾಗುತ್ತದೆ. ಅತಿ ಶೀಘ್ರದಲ್ಲಿ ಮೆಸೇಜ್‌ ಸೆಂಡ್‌ ಮಾಡಿದ ನಂತರ ಸ್ವಿಚ್‌ ಆನ್‌ ಮಾಡಿ. ಮೆಸೇಜ್‌ ಸೆಂಡ್‌ ಆಗುತ್ತದೆ. ಈ ವಿಧಾನದಿಂದ ಇತರರು ನಿಮ್ಮ ಮೆಸೇಜ್‌ ಟೈಪಿಂಗ್‌ ಸ್ಟೇಟಸ್ ಅನ್ನು ನೋಡುವುದನ್ನು ತಪ್ಪಿಸಬಹುದು.

ವಾಟ್ಸಾಪ್‌ನಲ್ಲಿ 'ಟೈಪಿಂಗ್‌ ಸ್ಟೇಟಸ್‌' ಅನ್ನು ಈ 2 ವಿಧಾನಗಳಿಂದ ಹೈಡ್ ಮಾಡಿ

ವಿಧಾನ 2: GBWhastsApp ಬಳಸಿ
GBWhastsApp ಎಂದರೆ ಏನಪ್ಪಾ ಎಂದು ಎಲ್ಲರಿಗೂ ಸಂಶಯವಾಗಬಹುದು. ಅಂದಹಾಗೆ GBWhastsApp ಎಂಬುದು ಆಂಡ್ರಾಯ್ಡ್ ಡಿವೈಶ್‌ಗಳಿಗೆ ಇರುವ ವಾಟ್ಸಾಪ್‌(WhatsApp) ಮೋಡ್‌ ಆಗಿದೆ. ಇದು ವಾಟ್ಸಾಪ್‌ನ ಹಲವು ರಹಸ್ಯ ಫೀಚರ್‌ಗಳನ್ನು ಅನ್‌ಲಾಕ್‌ ಮಾಡುತ್ತದೆ. ಸೋ, GBWhastsApp ನ APK ಡೌನ್‌ಲೋಡ್‌ ಮಾಡಿ, ಇನ್‌ಸ್ಟಾಲ್ ಮಾಡಿ. ಕೆಳಗಿನ ಹಂತಗಳನ್ನು ಫಾಲೋ ಮಾಡಿ

ಹಂತ 1: ನಿಮ್ಮ ವಾಟ್ಸಾಪ್ ಖಾತೆಯನ್ನು ಪರಿಶೀಲನೆ ಮಾಡಿ
ಹಂತ 2: ಈ ಹಂತದಲ್ಲಿ ವಾಟ್ಸಾಪ್‌ ಮೆನು ಆಪ್ಶನ್‌ಗೆ ಹೋಗಿ, Privacy ಆಪ್ಶನ್ ಟ್ಯಾಪ್‌ ಮಾಡಿ.
ಹಂತ 3: ಮತ್ತೊಂದು ಟ್ಯಾಬ್‌ ತೆರೆದುಕೊಳ್ಳುತ್ತದೆ. ಅಲ್ಲಿ ಟೈಪಿಸುವ ಆಪ್ಶನ್ ಸೆಲೆಕ್ಟ್ ಮಾಡಿ.
ಹಂತ 4: ಈ ಹಂತದಲ್ಲಿ ಓಪನ್‌ ಆಗಿರುವ ಪೇಜ್‌ನಲ್ಲಿ 'Hide For Contacts' ಮತ್ತು 'Hide For Groups' ಎಂಬ ಎರಡು ಆಯ್ಕೆಗಳಿರುತ್ತವೆ. ಇವುಗಳಲ್ಲಿ ನಿಮಗೆ ಅಗತ್ಯವಾದ ಆಪ್ಶನ್‌ ಅನ್ನು ಆಯ್ಕೆ ಮಾಡಿ.

Best Mobiles in India

English summary
Hide the 'Typing...' Status on WhatsApp with These 2 Simple Tricks. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X