ತತ್ಕಾಲ್‌ ಟಿಕೆಟ್‌ ವೇಗವಾಗಿ ಪಡೆಯಲು ಸರಳ ಟಿಪ್ಸ್‌

By Ashwath
|

ಭಾರತೀಯ ರೈಲಿನಲ್ಲಿ ಅನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಲು ಸಿಗುವ ಒಂದೇ ಒಂದು ಮಾರ್ಗ ಅಂದ್ರೆ ಅದು ತತ್ಕಾಲ್‌ ಟಿಕೆಟ್‌. ಒಂದು ದಿನದ ಮೊದಲು ನೀವು ಈ ಟಿಕೆಟ್‌ ಖರೀದಿಸಬಹುದು.ಸರ್ಕಾರ ಈ ಸೇವೆಯಲ್ಲಿ ಬದಲಾವಣೆ ಮಾಡಿದ್ದು ಬೆಳಗ್ಗೆ 10 ಗಂಟೆಯಿಂದ ಈ ಸೇವೆ ಆರಂಭಗೊಳ್ಳುತ್ತದೆ. ಆದ್ರೆ ಈ ತತ್ಕಾಲ್‌ ಟಿಕೆಟ್ ಕೊಳ್ಳುವಲ್ಲಿ ಅನೇಕ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗಿಜ್ಬಾಟ್‌ ಈ ಬಾರಿ ಕೆಲವು ಸರಳ ಟಿಪ್ಸ್‌ ತಂದಿದೆ.

 ತತ್ಕಾಲ್‌ ಟಿಕೆಟ್‌ ವೇಗವಾಗಿ ಪಡೆಯಲು ಸರಳ ಟಿಪ್ಸ್‌
  • ಮೊದಲು ಒಂದು ನೋಟ್‌ ಬುಕ್‌ನಲ್ಲಿ ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌,ಪಾನ್‌ ಕಾರ್ಡ್‌ ಡಿಟೈಲ್ಸ್‌ ಬರೆದುಕೊಳ್ಳಿ, ಯಾಕಂದ್ರೆ ಬುಕಿಂಗ್‌ ಮಾಡುವಾಗ ಈ ರೀತಿ ಮಾಡಿದ್ರೆ ಸಮಯ ಉಳಿತಾಯವಾಗುತ್ತದೆ.
  • IRCTC ವೆಬ್‌ಸೈಟ್‌ ಓಪನ್‌ ಮಾಡಿ ಲಾಗಿನ್‌ ಆಗಿ.ಒಂದು ವೇಳೆ ನಿಮ್ಮ ಅಕೌಂಟ್‌ ಇಲ್ಲದಿದ್ರೆ ಸೈನ್‌ ಆಪ್‌ ಆಗಿ ಅಕೌಂಟ್‌ ಓಪನ್‌ ಮಾಡಿ
  • ಲಾಗಿನ್‌ ಆದ ಕೂಡಲೇ ಸರ್ವರ್‌ ಟೈಮ್‌ ಚೆಕ್‌ ಮಾಡಿಕೊಳ್ಳಿ, ಯಾವುದೇ ಕಾರಣಕ್ಕೂ ನಿಮ್ಮ ಕಂಪ್ಯೂಟರ್ ಸಮಯವನ್ನು ನೋಡದಿರಿ
  • ಅಲ್ಲಿರುವ ಸೂಚನೆಗಳನ್ನು ಪಾಲಿಸಿಕೊಂಡು ನಿಮಗೆ ಬೇಕಾದ ರೈಲಿನ ಸಮಯವನ್ನು ನೋಡಿಕೊಂಡು, ನಿಮಗೆ ಬೇಕಾದ ದರ್ಜೆಯನ್ನು ಆರಿಸಿಕೊಳ್ಳಿ
  • ವೆಬ್‌ಸೈಟ್‌ ಸರ್ವರ್‌ ಸಮಯ 10 ಗಂಟೆ ತೋರಿಸುತ್ತಿದ್ದಂತೆ ಬುಕ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ
  • ಬುಕಿಂಗ್‌ ಸಮಯದಲ್ಲಿ ಸರ್ವಿಸ್‌ ಇಲ್ಲದಿದ್ರೆ ಯಾವುದೇ ಕಾರಣಕ್ಕೂ ಪರದೆಯನ್ನು ಕ್ಲೋಸ್‌ ಅಥವಾ ಹಿಂದಿನ ಪೇಜ್‌ಗೆ ಹೋಗಲು ಯತ್ನಿಸಬೇಡಿ. ಇದು ಸಾಮಾನ್ಯವಾಗಿ ಅನೇಕ ಜನ ಮಾಡುತ್ತಿರುತ್ತಾರೆ. ಈ ರೀತಿ ಮಾಡದೇ ರಿಫ್ರೇಶ್‌ ಬಟನ್‌ ಕ್ಲಿಕ್‌ ಮಾಡುತ್ತಿರಿ
  • ಬ್ಯಾಂಕಿನ ಪೇಮೆಂಟ್‌ ಮಾಡುವಾಗ ಸೇವೆಯಲ್ಲಿ ಅಡತಡೆಗಳಾದ್ರೆ ಯಾವುದೇ ಕಾರಣಕ್ಕೂ ಕ್ಲೋಸ್‌ ಬಟನ್‌ ಕ್ಲಿಕ್‌ ಮಾಡಲೇಬೇಡಿ. ರಿಫ್ರೇಶ್‌ ಬಟನ್‌ ಕ್ಲಿಕ್‌ ಮಾಡುತ್ತಿರಿ
  • ಕೊನೆಯದಾಗಿ ತತ್ಕಾಲ್‌ ಟಿಕೆಟ್‌ ಸೇರಿದಂತೆ ಅನ್‌ಲೈನ್‌ನಲ್ಲಿ ಯಾವುದೇ ವ್ಯವಹಾರ ಮಾಡುವಾಗ ಸಾಕಷ್ಟು ತಾಳ್ಮೆಯಿಂದಿರಿ.

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X