ಗೂಗಲ್‌ನಲ್ಲಿ “Find My Phone” ಎಂದು ಟೈಪಿಸಿ, ಕಳೆದಿರುವ ಮೊಬೈಲ್ ಹುಡುಕಿ!!

ಯಾವುದೋ ಸ್ಥಳದಲ್ಲಿ ಮೊಬೈಲ್ ಮರೆತು ಕಳೆದೇಹೋಯಿತು ಎನ್ನುವ ಕೆಟ್ಟ ಅನುಭವ ಹೇಳಲಸಾಧ್ಯ!!.

|

ಮೊಬೈಲ್ ಒಂದು ಕ್ಷಣ ಕೈನಲ್ಲಿಲ್ಲದಿದ್ದರೆ ಏನೊ ಒಂದು ಕಳೆದುಕೊಂಡ ಅನುಭವ. ಇನ್ನು ಯಾವುದೋ ಸ್ಥಳದಲ್ಲಿ ಮೊಬೈಲ್ ಮರೆತು ಕಳೆದೇಹೋಯಿತು ಎನ್ನುವ ಕೆಟ್ಟ ಅನುಭವ ಹೇಳಲಸಾಧ್ಯ!!. ಹೌದು, ನೀವು ಎಲ್ಲೋ ಮೊಬೈಲ್‌ ಮರೆತರೂ ಅಥವಾ ಕಳೆದುಕೊಂಡರೂ ನೀವು ಮತ್ತೆ ಹುಡುಕಲು ಬಹಳಷ್ಟು ಪ್ರಯಾಸಪಡಬೇಕಾಗುತ್ತದೆ.

ಹಾಗಾಗಿ ನೀವೆ ನಿಮ್ಮ ಮೊಬೈಲ್ ಹುಡುಕಲು ಸಾಧ್ಯವಾಗುವಂತೆ ಮಾಡಿಕೊಳ್ಳಿ. ಮನೆಯಲ್ಲಿ ಎಲ್ಲಾದರೂ ಮೊಬೈಲ್ ಮರೆತುಬಿಟ್ಟಿದ್ದರೂ ಮತ್ತು ನಿಮ್ಮ ಮೊಬೈಲ್ ಕಳುವಾಗಿ ನಿಮ್ಮ ಗೂಗಲ್‌ ಅಕೌಂಟ್‌ಮೂಲಕ ಇತರರು ಆ ಫೋನ್ ಉಪಯೋಗಿಸುತ್ತಿದ್ದರೆ, ಗೂಗಲ್‌ನ "Find My Phone" ಮೂಲಕ ನಿಮ್ಮ ಮೊಬೈಲ್ ಪತ್ತೆಹಚ್ಚುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ: ವಾಟ್ಸಾಪ್‌ ಕರೆ ಬ್ಲಾಕ್ ಮಾಡುವುದು ಹೇಗೆ?

ಗೂಗಲ್‌ಗೆ ಸೈನ್‌ಇನ್‌ ಆಗಿರಿ

ಗೂಗಲ್‌ಗೆ ಸೈನ್‌ಇನ್‌ ಆಗಿರಿ

ಈ ಮೊದಲು ನಿಮ್ಮ ಮೊಬೈಲ್‌ನಲ್ಲಿ ನೀವು ಹೊಂದಿದ್ದ ಗೂಗಲ್‌ನಲ್ಲಿ ಅಕೌಂಟ್ ಮಾಹಿತಿ ಮೂಲಕ ಇತರ ಡಿವೈಸ್‌ನ ಗೂಗಲ್ ವೆಬ್‌ನಲ್ಲಿ ಸೈನ್‌ಇನ್‌ ಆಗಿರಿ. ಮುಂದೆ ಓದಿರಿ.

ಗೂಗಲ್  “Find My Phone” ಸೆಟ್ಟಿಂಗ್ಸ್

ಗೂಗಲ್ “Find My Phone” ಸೆಟ್ಟಿಂಗ್ಸ್

ಉತ್ತಮ ಮೊಬೈಲ್‌ಗಳು ಮಾತ್ರ "Find My Phone" ಫೀಚರ್‌ಗೆ ಸಪೋರ್ಟ್ ಮಾಡುವತ್ತವೆ ಹಾಗಾಗಿ ನಿಮ್ಮ ಮೊಬೈಲ್ ಗೂಗಲ್ "Find My Phone" ಸೆಟ್ಟಿಂಗ್ಸ್ ಸಪೋರ್ಟ್ ಮಾಡುತ್ತದೆಯೇ ಎಂದು ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 “Find My Phone” ಸ್ಟೆಪ್ಸ್ ಫಾಲೊ ಮಾಡಿ.

“Find My Phone” ಸ್ಟೆಪ್ಸ್ ಫಾಲೊ ಮಾಡಿ.

  • ಗೂಗಲ್ ವೆಬ್ ಓಪನ್ ಮಾಡಿ
  • ಗೂಗಲ್‌ನಲ್ಲಿ Find My Phone ಎಂದು ಟೈಪ್‌ ಮಾಡಿ. ಗೂಗಲ್‌ಗೆ ಲಾಗಿನ್‌ ಆಗಿರಿ. ನೀವು ಅಕೌಂಟ್ ಹೊಂದಿದ್ದ ಮೊಬೈಲ್ ಯಾವುದು ಎಂದು ಗೂಗಲ್ ತೋರಿಸುತ್ತದೆ. ಅದನ್ನು ಅಲ್ಲಿ ಕ್ಲಿಕ್ಕಿಸಿ.
  • ನಂತರ ಗೂಗಲ್ ಮೂಲಕ ನಿಮ್ಮ ಮೊಬೈಲ್‌ಗೆ ಕಾಲ್ ಮಾಡಿ. ಅಥವಾ ಗೂಗಲ್‌ಮ್ಯಾಪ್ ಮೂಲಕ ಮೊಬೈಲ್ ಎಲ್ಲಿದೆ ಎಂದು ಟ್ರಾಕ್ ಮಾಡಿ
  • How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
    ಉಪಯುಕ್ತ ಸೂಚನೆ

    ಉಪಯುಕ್ತ ಸೂಚನೆ

Best Mobiles in India

English summary
Lost your Android smartphone and unable to track it? Here's how you can locate your lost Android phone with Google search. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X