ಸೆಕೆಂಡ್ ಹ್ಯಾಂಡ್ ಖರೀದಿಸುತ್ತಿದ್ದೀರಾ? ನೆನಪಿರಲಿ ಈ ಸಲಹೆಗಳು

By Shwetha
|

ಬಳಸಿದ ಉತ್ಪನ್ನಗಳನ್ನು ಖರೀದಿಸುವುದರಲ್ಲಿ ನಿಪುಣತೆ ಇರಬೇಕು ಎಂಬುದು ನಿಮಗೆ ಗೊತ್ತೇ? ಕಾರ್, ಪೀಠೋಪಕರಣಗಳು ಹೀಗೆ ಕೆಲವೊಮ್ಮೆ ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ಕೂಡ ನಾವು ಖರೀದಿಸುತ್ತೇವೆ. ಇದನ್ನು ಒಬ್ಬ ವ್ಯಕ್ತಿ ಈಗಾಗಲೇ ಬಳಸಿದ್ದಾನೆ ಎಂಬುದನ್ನು ಅರಿತುಕೊಂಡು ನಾವು ಅದನ್ನು ಖರೀದಿಸಿ ಬಳಸುತ್ತೇವೆ. ಹೊಸದನ್ನು ಬಳಸುವುದಕ್ಕೂ ಈಗಾಗಲೇ ಬಳಸಿರುವುದನ್ನು ಖರೀದಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ನೀವು ಅರಿತಿದ್ದೀರಾ?

ಇದನ್ನೂ ಓದಿ: ರೀಸೈಕಲ್ ಬಿನ್ ಬಳಸದೇ ಫೈಲ್ ಅಳಿಸುವುದು ಹೇಗೆ?

ಹಾಗಿದ್ದರೆ ಇಲೆಕ್ಟ್ರಾನಿಕ್ ವಸ್ತುಗಳನ್ನು ನೀವು ಮರುಬಳಕೆಯಾಗಿರುವುದನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ನಿಮಗೆ ಇದನ್ನು ಹೇಗೆ ಖರೀದಿಸಬೇಕು ಎಂಬುದನ್ನು ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸೆಕೆಂಡ್ ಹ್ಯಾಂಡ್ ಖರೀದಿಯನ್ನು ಮಾಡಿ.

#1

#1

ಉತ್ಪನ್ನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ. ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ವಸ್ತುವಿನ ಕುರಿತು ಅಪ್‌ಡೇಟ್ ಮಾಡಿದ್ದಾರೆ ಎಂದಾದಲ್ಲಿ ವ್ಯಕ್ತಿಯ ಮತ್ತು ಉತ್ಪನ್ನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ. ಉತ್ಪನ್ನವು ಯಾವುದಾದರೂ ಲೋಪ ದೋಷವನ್ನು ಹೊಂದಿದೆಯೇ ಎಂಬುದನ್ನು ಅರಿತುಕೊಳ್ಳಿ. ಬೆಲೆ ಮತ್ತು ವಿಶೇಷತೆಗಳನ್ನು ಕುರಿತು ಅವಲೋಕಿಸಿ.

#2

#2

ನಿಮ್ಮ ಸೆಕೆಂಡ್ ಹ್ಯಾಂಡ್ ಉತ್ಪನ್ನ ಈಗಾಗಲೇ ರಿಪೇರಿಗೆ ಒಳಪಟ್ಟಿದೆಯೇ ಎಂಬುದನ್ನು ನೋಡಿ. ಇದರ ಬಗ್ಗೆ ರಿಪೇರಿ ಮಾಹಿತಿಗಳು, ಗ್ಯಾರಂಟಿ ಇದನ್ನು ನೋಡಿ.

#3

#3

ನೀವು ಸೆಕೆಂಡ್ ಹ್ಯಾಂಡ್ ಉತ್ಪನ್ನವನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ಅದನ್ನು ರಿಪೇರಿ ಮಾಡಿದ್ದು ಯಾರು? ಎಲ್ಲಿ ಮುಂತಾದ ಮಾಹಿತಿಗಳನ್ನು ಕಲೆಹಾಕುವುದು ಅತೀ ಅಗತ್ಯವಾಗಿದೆ.

#4

#4

ನೀವು ರೀಟೈಲ್ ತಾಣದಿಂದ ಈ ಉತ್ಪನ್ನವನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ಅದರ ವ್ಯಾರಂಟಿಯನ್ನು ಪರಿಶೀಲಿಸುವುದು ಅತೀ ಅಗತ್ಯವಾಗಿದೆ.

#5

#5

ನೀವು ಖರೀದಿಸಿದ ವಸ್ತುವಿಗೆ ಏನಾದರೂ ಸಂಭವಿಸಿತು ಎಂದಾದಲ್ಲಿ ತಾಣವು ವಿನಿಮಯ ನೀತಿಯನ್ನು ನೀಡಬಲ್ಲುದೇ ಎಂಬುದನ್ನು ಕೇಳಿ.

#6

#6

ನೀವು ಉತ್ಪನ್ನವನ್ನು ಖರೀದಿ ಮಾಡುವ ಮುನ್ನ ಅದನ್ನು ಪರಿಶೀಲಿಸುವುದು ಅತೀ ಅಗತ್ಯವಾಗಿದೆ. ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉತ್ಪನ್ನವನ್ನು ನೀವು ಹೊಂದಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#7

#7

ನೀವು ಒಂದು ಉತ್ಪನ್ನವನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ಉತ್ಪನ್ನದ ಕುರಿತಾದ ರಶೀದಿಯನ್ನು ಭದ್ರವಾಗಿ ಇರಿಸಿಕೊಳ್ಳಿ.

Best Mobiles in India

English summary
This article tells about How to Buy Used Electronics.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X