ಸ್ಮಾರ್ಟ್ ಫೋನಿನ ಉಷ್ಣಾಂಶವನ್ನು ಕಡಿಮೆ ಮಾಡುವುದೇಗೆ? ಫೋನು ಸ್ಫೋಟಗೊಳ್ಳುವುದನ್ನು ತಡೆಯುವುದೇಗೆ?

|

ನೀವು ಯಾವುದೋ ಗುಹೆಯಲ್ಲಿರದೇ ಹೋದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಫೋನಿನ ಬ್ಯಾಟರಿ ಸ್ಪೋಟಗೊಂಡ ವಿಷಯ ನಿಮಗೆ ತಿಳಿದೇ ಇರುತ್ತದೆ.

ಸ್ಮಾರ್ಟ್ ಫೋನಿನ ಉಷ್ಣಾಂಶವನ್ನು ಕಡಿಮೆ ಮಾಡುವುದೇಗೆ?

ಸ್ಮಾರ್ಟ್ ಫೋನಿನ ಬ್ಯಾಟರಿಗಳು ಸ್ಪೋಟಗೊಳ್ಳಲು ಹಲವಾರು ಕಾರಣಗಳಿದ್ದರೂ, ತುಂಬಾ ಬಿಸಿಯಾಗುವುದು ಪ್ರಮುಖ ಕಾರಣ.

ಓದಿರಿ: ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಿದ್ದೀರಾ? ಕೊಂಚ ಯೋಚಿಸಿ

ಹೀಗಾಗಿ, ನಿಮ್ಮ ಸ್ಮಾರ್ಟ್ ಫೋನ್ ಬಿಸಿಯಾಗದಂತೆ ತಡೆಯಲು ಸಹಾಯ ಮಾಡಲು ನಾವು ಕೆಲವು ಸಲಹೆಗಳನ್ನು ಪಟ್ಟಿ ಮಾಡಿದ್ದೀವಿ.

ಓದಿರಿ: ಏರ್‌ಟೆಲ್‌ನಿಂದ ರೂ.29 ಕ್ಕೆ 1GB ಡಾಟಾ ಪಡೆಯಲು ಈ ಹಂತಗಳನ್ನು ಪಾಲಿಸಿ

ನೀವು ಮಾಡಬೇಕಾದ ಕೆಲಸವೆಂದರೆ, ನಿಮ್ಮ ಸ್ಮಾರ್ಟ್ ಫೋನಿನ ಸಿ.ಪಿ.ಯು ಉಷ್ಣಾಂಶದ ಬಗ್ಗೆ ಒಂದು ಕಣ್ಣಿಡುವುದು. ಅದನ್ನು ಮಾಡುವುದೇಗೆಂದು ತಿಳಿಸುವುದಕ್ಕೆ ಮುಂಚೆ, ಫೋನು ತುಂಬಾ ಬಿಸಿಯಾಗುವುದು ಏಕೆ ಎಂದು ತಿಳಿದುಕೊಳ್ಳೋಣ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತುಂಬಾ ಬಳಸುವುದು ಬಿಸಿಯಾಗಲು ಕಾರಣ.

ತುಂಬಾ ಬಳಸುವುದು ಬಿಸಿಯಾಗಲು ಕಾರಣ.

ನಿಮ್ಮ ಸ್ಮಾರ್ಟ್ ಫೋನನ್ನು ತುಂಬಾ ಬಳಸಿದರೆ, ಉದಾಹರಣೆಗೆ ಹೆಚ್ಚು ಗ್ರಾಫಿಕ್ಸ್ ಇರುವ ಆಟಗಳನ್ನು ಆಡಿದರೆ, ಒಂದೇ ಸಮಯಕ್ಕೆ ಹಲವಾರು ಆ್ಯಪ್ ಗಳನ್ನು ಉಪಯೋಗಿಸಿದರೆ ಫೋನು ಬಿಸಿಯಾಗುತ್ತದೆ.

ಬ್ಯಾಟರಿ ಹೆಚ್ಚು ಬಿಸಿಯಾಗುವುದು ಕೂಡ ಫೋನ್ ಬಿಸಿಯಾಗುವುದಕ್ಕೆ ಮತ್ತು ತತ್ ಪರಿಣಾಮವಾಗಿ ಸ್ಪೋಟಕ್ಕೆ ಕಾರಣ.

ಪ್ರೊಸೆಸರ್ ತಪ್ಪೂ ಇರಬಹುದು.

ಪ್ರೊಸೆಸರ್ ತಪ್ಪೂ ಇರಬಹುದು.

ಮೇಲೆ ಹೇಳಿದ ಕಾರಣಗಳ ಜೊತೆಗೆ, ಪ್ರೊಸೆಸರ್ ನಲ್ಲಿ ಕೂಡ ದೋಷ ಇರಬಹುದು. ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 615 ಮತ್ತು 810 ಪ್ರೊಸೆಸರ್ ಗಳು ಹೆಚ್ಚು ಬಿಸಿಯಾಗುವುದಕ್ಕೆ ಉದಾಹರಣೆ. ಒನ್ ಪ್ಲಸ್ 2 ನೆನಪಿದೆಯಲ್ಲವೇ?

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಸಿಯಾಗುವುದರ ದೀರ್ಘಕಾಲೀನ ಪರಿಣಾಮಗಳು.

ಬಿಸಿಯಾಗುವುದರ ದೀರ್ಘಕಾಲೀನ ಪರಿಣಾಮಗಳು.

ಹೆಚ್ಚು ಬಿಸಿಯಾಗುವುದು ಫೋನಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸ್ಮಾರ್ಟ್ ಫೋನ್ ನಿಧಾನವಾಗಿ ಕೆಲಸ ಮಾಡುತ್ತದೆ. ಬ್ಯಾಟರಿ ಹೆಚ್ಚು ಬಿಸಿಯಾಗಿ ಅದನ್ನು ನಿಲ್ಲಿಸುವುದೇ ಅಸಾಧ್ಯವಾಗಿಬಿಡುತ್ತದೆ.

ಸಿಪಿಯು ತಾಪಮಾನವನ್ನು ಗಮನಿಸಿ.

ಸಿಪಿಯು ತಾಪಮಾನವನ್ನು ಗಮನಿಸಿ.

ಗೂಗಲ್ ಪ್ಲೇ ಸ್ಟೋರಿನಲ್ಲಿ ನಿಮ್ಮ ಸ್ಮಾರ್ಟ್ ಫೋನಿನ ಸಿಪಿಯು ತಾಪಮಾನವನ್ನು ನಿಯಂತ್ರಿಸಲು ಹಲವಾರು ಆ್ಯಪ್ ಗಳು ಲಭ್ಯವಿದೆ. ಸಿಪಿಯು ಕೂಲರ್ ಅಥವಾ ಕೂಲಿಫೈ ಆ್ಯಪ್ ಅನ್ನು ಉಪಯೋಗಿಸಿರಿ ಎನ್ನುವುದು ನಮ್ಮ ಸಲಹೆ, ಎರಡೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಕ್ ಗ್ರೌಂಡ್ ಆ್ಯಪ್ ಗಳನ್ನು ಮುಚ್ಚಿರಿ.

ಬ್ಯಾಕ್ ಗ್ರೌಂಡ್ ಆ್ಯಪ್ ಗಳನ್ನು ಮುಚ್ಚಿರಿ.

ಮೇಲೆ ತಿಳಿಸಿದ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿದ ನಂತರ ಫೋನನ್ನು ಬಿಸಿಯಾಗಿಸುತ್ತಿರುವ ಆ್ಯಪ್ ಗಳ್ಯಾವುವೆಂದು ತಿಳಿದುಕೊಳ್ಳಿ. ಅವುಗಳನ್ನು ಮುಚ್ಚುವುದರ ಮೂಲಕ ಬಿಸಿಯಾಗುವುದನ್ನು ತಪ್ಪಿಸಬಹುದು.

ಫೋನನ್ನು ದೀರ್ಘಕಾಲದವರೆಗೆ ಚಾರ್ಜ್ ಮಾಡಬೇಡಿ.

ಫೋನನ್ನು ದೀರ್ಘಕಾಲದವರೆಗೆ ಚಾರ್ಜ್ ಮಾಡಬೇಡಿ.

ನಿಮ್ಮ ಫೋನನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಚಾರ್ಜ್ ಮಾಡುವುದರಿಂದ ಬಿಸಿಯಾಗುವ ಸಮಸ್ಯೆ ಉಂಟಾಗುತ್ತದೆ. ಇದು ತೀವ್ರವಾಗಿಬಿಟ್ಟರೆ ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಫೋನನ್ನೆಂದೂ ವಿಪರೀತ ಚಾರ್ಜ್ ಮಾಡಬೇಡಿ. ಜೊತೆಗೆ ಚಾರ್ಜ್ ಮಾಡುವಾಗ ಫೋನಿನ ಕೇಸ್ ಅನ್ನು ತೆಗೆಯುವುದು ಉತ್ತಮ. ಇದು ಫೋನ್ ಬಿಸಿಯಾಗುವುದನ್ನು ತಪ್ಪಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Unless you've been living under a rock, you'd be aware of the exploding batteries on Samsung Galaxy Note 7.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X