ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಿದ್ದೀರಾ? ಕೊಂಚ ಯೋಚಿಸಿ

By Shwetha
|

ಮುಕೇಶ್ ಅಂಬಾನಿ ಲಾಂಚ್ ಮಾಡಿರುವ ರಿಲಾಯನ್ಸ್ ಜಿಯೋ ಹೆಚ್ಚಿನ ಟೆಲಿಕಾಮ್ ಸಂಸ್ಥೆಗಳಿಗೆ ಕಠಿಣ ಪೈಪೋಟಿಯನ್ನು ನೀಡುತ್ತಿರುವುದು ನಿಮಗೆಲ್ಲಾ ತಿಳಿದೇ ಇದೆ. ಪ್ರಮುಖ ಕಂಪೆನಿಗಳು ಎಂದೆನಿಸಿರುವ ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್, ವೊಡಾಫೋನ್ ಕೂಡ ಇದಕ್ಕೆ ಹೊರತಲ್ಲ. ಜಿಯೋದ ವೆಲ್‌ಕಮ್ ಆಫರ್‌ನಲ್ಲಿ ಪ್ರತಿಯೊಂದೂ ಉಚಿತವಾಗಿದ್ದು, ದೇಶಾದ್ಯಂತ ಹೆಚ್ಚಿನ ಬಳಕೆದಾರರನ್ನು ಇದು ಆಕರ್ಷಿಸಿದೆ.

ಓದಿರಿ: ಜಿಯೋಗೆ ಪೈಪೋಟಿ ನೀಡಹೊರಟಿರುವ ಏರ್‌ಟೆಲ್ ಆಫರ್ಸ್

ಜಿಯೋ ಸಿಮ್ ಕಾರ್ಡ್ ಅನ್ನು ಮಾತ್ರ ಲಾಂಚ್ ಮಾಡಿರುವುದಲ್ಲದೆ ಬಜೆಟ್ ಬೆಲೆಯಲ್ಲಿ ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳನ್ನು ಪ್ರಸ್ತುತಪಡಿಸಿದೆ. ಈ ಫೋನ್‌ಗಳ ಬೆಲೆ ರೂ 2,999 ರಿಂದ ಆರಂಭವಾಗಿ ಇದು ಜಿಯೋ ಒದಗಿಸಿರುವ ಎಲ್ಲಾ ಯೋಜನೆಗಳನ್ನು ಒಳಗೊಂಡು ಬಂದಿದೆ. ಇಲ್ಲಿ ಬರುವ ಪ್ರಶ್ನೆ ಎಂದರೆ ಕಡಿಮೆ ದರವೆಂದ ಮಾತ್ರಕ್ಕೆ ಎಲ್‌ವೈಎಫ್ ಫೋನ್‌ಗಳನ್ನು ಖರೀದಿಸಬೇಕೇ ಎಂಬುದಾಗಿದೆ. ಹಾಗಿದ್ದರೆ ಇಂತಹ ಫೋನ್‌ಗಳನ್ನು ಖರೀದಿಸುವ ಮುನ್ನ ತುಸು ಯೋಚಿಸಿ ಎಂಬುದಾಗಿಯೇ ತಿಳಿಸುತ್ತಾ ಇದಕ್ಕಿರುವ ಕಾರಣಗಳನ್ನು ನೀಡುತ್ತಿದ್ದೇವೆ.

ಹಾರ್ಡ್‌ವೇರ್ ಗುಣಮಟ್ಟ

ಹಾರ್ಡ್‌ವೇರ್ ಗುಣಮಟ್ಟ

ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳು 4ಜಿ ಸಂಪರ್ಕವನ್ನು ಒಳಗೊಂಡು ಬಂದಿದ್ದರೂ ಹಾರ್ಡ್‌ವೇರ್ ವಿಷಯದಲ್ಲಿ ಎಡವಿದೆ. ಕಡಿಮೆ ಮಟ್ಟದ ಪ್ರೊಸೆಸರ್‌ಗಳನ್ನು ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳು ಹೊಂದಿದ್ದು RAM ಪೂರಕವಾಗಿಲ್ಲ. 4ಜಿ ಇಂಟರ್ನೆಟ್ ಸೇವೆಗಳಿಗೆ ಇದು ಸಮರ್ಥವಾಗಿಲ್ಲ. ಕಡಿಮೆ ಕ್ಯುಎಚ್‌ಡಿ ರೆಸಲ್ಯೂಶನ್ ಅನ್ನು ಹೊಂದಿರುವುದರಿಂದ ಚಲನ ಚಿತ್ರ ಮತ್ತು ವೀಡಿಯೊಗಳ ವೀಕ್ಷಣೆಗೆ ಉತ್ತಮವಾಗಿಲ್ಲ.

ಹಳೆಯ ಸಾಫ್ಟ್‌ವೇರ್

ಹಳೆಯ ಸಾಫ್ಟ್‌ವೇರ್

ಹೆಚ್ಚಿನ ರಿಲಾಯನ್ಸ್ ಎಲ್‌ವೈಎಫ್ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 5.1 ಲಾಲಿಪಪ್ ಅನ್ನು ಚಾಲನೆ ಮಾಡುತ್ತಿವೆ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಎಲ್ಲಾ ಡಿವೈಸ್‌ಗಳು ಮಾರ್ಶ್ ಮಲ್ಲೊ 6.0 ವನ್ನು ಪಡೆದುಕೊಂಡಿದ್ದು ಇತ್ತೀಚಿನ ಆಂಡ್ರಾಯ್ಡ್ 7.0 ನ್ಯೂಗಾವನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿವೆ.

ಅನ್‌ಇನ್‌ಸ್ಟಾಲ್

ಅನ್‌ಇನ್‌ಸ್ಟಾಲ್

ನೀವು ರಿಲಾಯನ್ಸ್ ಎಲ್‌ವೈಎಫ್ ಹ್ಯಾಂಡ್‌ಸೆಟ್ ಅನ್ನೇ ಖರೀದಿಸಬೇಕೆನ್ನುವ ಇರಾದೆಯನ್ನು ಹೊಂದಿದ್ದೀರಿ ಎಂದಾದಲ್ಲಿ ವಿಳಂಬವಾಗಿರುವ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಅಪ್ಲಿಕೇಶನ್ ಕ್ರ್ಯಾಶ್ ವಿಚಾರದಲ್ಲಿ ಎಚ್ಚರದಿಂದಿರಬೇಕು. ಕೆಲವೊಂದು ಬೇಡದೇ ಇರುವ ಅಪ್ಲಿಕೇಶನ್‌ಗಳನ್ನು ಈ ಡಿವೈಸ್ ಒಳಗೊಂಡಿದ್ದು ಅವುಗಳನ್ನು ತುರ್ತಾಗಿ ಅನ್‌ಇನ್‌ಸ್ಟಾಲ್ ಮಾಡಬೇಕು.

ದುರ್ಬಲ ಕ್ಯಾಮೆರಾಗಳು

ದುರ್ಬಲ ಕ್ಯಾಮೆರಾಗಳು

ಎಲ್‌ವೈಎಫ್ ಸಿರೀಸ್ ಫೋನ್‌ಗಳನ್ನು ನಾವು ಪರಿಶೀಲನೆ ಮಾಡಿದ್ದು ಇವುಗಳ ಕ್ಯಾಮೆರಾ ಕಾರ್ಯಕ್ಷಮತೆ ಅಷ್ಟೊಂದು ಉತ್ತಮವಾಗಿಲ್ಲ. ಇದೇ ಬೆಲೆಯಲ್ಲಿ ಬರುತ್ತಿರುವ ಇತರ ಫೋನ್‌ಗಳ ಕ್ಯಾಮೆರಾ ಇದಕ್ಕಿಂತ ಉತ್ತಮವಾದುದಾಗಿದೆ.

ವಿನ್ಯಾಸ ಅಷ್ಟೊಂದು ಆಕರ್ಷಕವಾಗಿಲ್ಲ

ವಿನ್ಯಾಸ ಅಷ್ಟೊಂದು ಆಕರ್ಷಕವಾಗಿಲ್ಲ

ಮೆಟಲ್ ಕ್ಲೇಡ್ ಸ್ಮಾರ್ಟ್‌ಫೋನ್‌ಗಳ ಈ ಯುಗದಲ್ಲಿ ಎಲ್‌ವೈಎಫ್ ಫೋನ್‌ಗಳು ತಮ್ಮ ಬೋರಿಂಗ್ ಪ್ಲಾಸ್ಟಿಕ್ ಸ್ಮಾರ್ಟ್‌ಫೋನ್‌ಗಳ ಪರಿಚಯವನ್ನು ಮಾಡಿಕೊಡುತ್ತಿವೆ. ವಿನ್ಯಾಸ ಮತ್ತು ಫೋನ್‌ಗಳ ಗುಣಮಟ್ಟ ಉತ್ತಮವಾಗಿಲ್ಲ ಎಂಬುದಾಗಿಯೇ ನಾವಿಲ್ಲಿ ತಿಳಿಸಬಯಸುತ್ತೇವೆ.

ಇದೇ ಬೆಲೆಯಲ್ಲಿ ಇತರ ಡಿವೈಸ್‌ಗಳ ಖರೀದಿ ಉತ್ತಮ ಆಯ್ಕೆಯಾಗಿದೆ

ಇದೇ ಬೆಲೆಯಲ್ಲಿ ಇತರ ಡಿವೈಸ್‌ಗಳ ಖರೀದಿ ಉತ್ತಮ ಆಯ್ಕೆಯಾಗಿದೆ

ಗ್ರಾಹಕರಿಗೆ ರಿಲಾಯನ್ಸ್ ಎಲ್‌ವೈಎಫ್ ಹ್ಯಾಂಡ್‌ಸೆಟ್‌ಗಳ ಖರೀದಿ ಮಾಡಿ ಎಂಬುದಾಗಿ ನಾವು ಶಿಫಾರಸು ಮಾಡುವುದು ಅಷ್ಟೊಂದು ಸಮಂಜಸವಾಗಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ3, ಶ್ಯೋಮಿ ರೆಡ್ಮೀ 3ಎಸ್, ಮೋಟೋ ಇ3 ಪವರ್, ಕೂಲ್ ಪ್ಯಾಡ್ ನೋಟ್ 3 ಲೈಟ್, ರೆಡ್ಮೀ ನೋಟ್ 3 ಖರೀದಿಯನ್ನು ಇದೇ ಬೆಲೆಯಲ್ಲಿ ನಿಮಗೆ ಮಾಡಬಹುದಾಗಿದೆ. ಈ ಫೋನ್‌ಗಳು ರಿಲಾಯನ್ಸ್ ಜಿಯೋ ಡೇಟಾಗೆ ಬೆಂಬಲವನ್ನು ನೀಡುತ್ತಿದ್ದು ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತಿವೆ.

Most Read Articles
Best Mobiles in India

English summary
should you really buy Reliance LYF smartphones just because of their luring price range? We give you five reasons why you should have second thoughts about buying Reliance Jio LYF smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more