ವಾಟ್ಸಾಪ್‌ನಲ್ಲಿ ಸಂಪರ್ಕ ನಿರ್ಬಂಧಿಸಲು ಇಲ್ಲಿದೆ ಟ್ರಿಕ್ಸ್

Written By:

ವಾಟ್ಸಾಪ್ ಇನ್‌ಸ್ಟಂಟ್ ಮೆಸೇಜ್ ಅಪ್ಲಿಕೇಶನ್ ಎಂಬ ಹೆಸರಿನಿಂದಲೇ ಬಳಕೆದಾರರ ಮನಗೆದ್ದಿರುವ ಅಪ್ಲಿಕೇಶನ್ ಆಗಿದೆ. ಪ್ರಸ್ತುತ ಫೇಸ್‌ಬುಕ್ ಸ್ವಾಧೀನದಲ್ಲಿದ್ದರೂ ವಾಟ್ಸಾಪ್ ತನ್ನ ಹಿಂದಿನ ಹಿರಿಮೆಯನ್ನು ಕಳೆದುಕೊಂಡಿಲ್ಲ. ಇಂದಿಗೂ ಬಳಕೆದಾರರಿಗೆ ಉಪಯೋಗಕಾರಿಯಾಗಿಯೇ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ. ನಾವು ಹೆಚ್ಚಿನ ಲೇಖನಗಳಲ್ಲಿ ವಾಟ್ಸಾಪ್ ಕುರಿತ ಹಲವಾರು ತಂತ್ರಗಳನ್ನು ನಿಮ್ಮ ಮುಂದೆ ಸಾದರಪಡಿಸಿದ್ದೆವು. ಈ ಟ್ರಿಕ್‌ಗಳು ನಿಮ್ಮನ್ನು ವಾಟ್ಸಾಪ್‌ನಲ್ಲಿ ಇನ್ನಷ್ಟು ಪಳಗಿಸಿವೆ ಎಂಬುದು ಮಾತ್ರ ಸುಳ್ಳಲ್ಲ.

ಓದಿರಿ: ವಾಟ್ಸಾಪ್ ಕಣ್ಮರೆ: ಮರೆತೇನೆಂದರೂ ಮರೆಯಲಿ ಹ್ಯಾಂಗ!!!

ದಿನದಿಂದ ದಿನಕ್ಕೆ ಈ ವೈಶಿಷ್ಟ್ಯಗಳು ತಂತ್ರಗಳು ಬದಲಾವಣೆಯನ್ನು ಪಡೆದುಕೊಂಡು ಬಳಕೆದಾರರಲ್ಲಿ ಇನ್ನಷ್ಟು ಕುತೂಹಲವನ್ನು ಮೂಡಿಸುತ್ತಿವೆ. ಇಂತಹುದೇ ಅತಿ ವಿಶೇಷವಾದ ವಾಟ್ಸಾಪ್ ಟ್ರಿಕ್ಸ್‌ನೊಂದಿಗೆ ನಾವು ಬಂದಿದ್ದು ಈ ಸಲಹೆಗಳನ್ನು ನೀವು ಪಾಲಿಸಿದ್ದೀರಾ ಎಂಬುದನ್ನು ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ತೆರೆಯಿರಿ
  

ವಾಟ್ಸಾಪ್ ತೆರೆಯಿರಿ

ವಾಟ್ಸಾಪ್ ತೆರೆಯಿರಿ ಮತ್ತು ಚಾಟ್ ಸ್ಕ್ರೀನ್‌ಗೆ ಹೋಗಿ

ಮೆನು ಬಟನ್ ಸ್ಪರ್ಶಿಸಿ
  

ಮೆನು ಬಟನ್ ಸ್ಪರ್ಶಿಸಿ

ಸೆಟ್ಟಿಂಗ್ಸ್ > ಖಾತೆ > ಪ್ರೈವಸಿ> ನಿರ್ಬಂಧಿತ ಸಂಪರ್ಕಗಳು

ಸಂಪರ್ಕ್ ಬ್ಲಾಕ್ ಮಾಡಲು
  

ಸಂಪರ್ಕ್ ಬ್ಲಾಕ್ ಮಾಡಲು

ಮೇಲ್ಭಾಗದಲ್ಲಿ ನಿಮಗೆ ಐಕಾನ್ ತೋರಿಸುತ್ತಿದ್ದು ಬ್ಲಾಕ್ ಮಾಡಿದ ಸಂಪರ್ಕಗಳನ್ನು ಸೇರಿಸಿಕೊಳ್ಳಬಹುದು.

ಅಜ್ಞಾತ ಸಂಪರ್ಕದಿಂದ ಮೇಲ್ ಬಂದಾಗ
  

ಅಜ್ಞಾತ ಸಂಪರ್ಕದಿಂದ ಮೇಲ್ ಬಂದಾಗ

ಅಜ್ಞಾತ ಸಂಪರ್ಕದಿಂದ ನಿಮಗೆ ಆರಂಭ ಸಂದೇಶ ಬಂತು ಎಂದಾದಲ್ಲಿ, ಸ್ಪ್ಯಾಮ್ ರಿಪೋರ್ಟ್ ಮಾಡಿ ಮತ್ತು ಬ್ಲ್ಯಾಕ್ ಮಾಡಿ. ಮೆನು ಬಟನ್ > ಮೋರ್ > ಬ್ಲ್ಯಾಕ್

ಅನ್‌ಬ್ಲಾಕ್ ಮಾಡಬೇಕು ಎಂದಾದಲ್ಲಿ
  

ಅನ್‌ಬ್ಲಾಕ್ ಮಾಡಬೇಕು ಎಂದಾದಲ್ಲಿ

ನೀವು ಯಾರನ್ನಾದರೂ ಅನ್‌ಬ್ಲಾಕ್ ಮಾಡಬೇಕು ಎಂದಾದಲ್ಲಿ, ಬ್ಲ್ಯಾಕ್ ಆಗಿರುವ ಸಂಪರ್ಕಗಳ ಮೇಲೆ ದೀರ್ಘವಾಗಿ ಒತ್ತಿರಿ ಮತ್ತು ಅನ್‌ಬ್ಲ್ಯಾಕ್ ಆಯ್ಕೆಮಾಡಿ.

ಬ್ಲಾಕ್ ಮಾಡಿದರೆ ಏನಾಗುತ್ತದೆ
  

ಬ್ಲಾಕ್ ಮಾಡಿದರೆ ಏನಾಗುತ್ತದೆ

ವಾಟ್ಸಾಪ್‌ನಲ್ಲಿ ನೀವು ಯಾರನ್ನಾದರೂ ಬ್ಲಾಕ್ ಮಾಡಿದರೆ ವಾಟ್ಸಾಪ್ ಸಂದೇಶಗಳು ಮತ್ತು ಕರೆಗಳನ್ನು ನಿಮಗೆ ಸ್ವೀಕರಿಸಲಾಗುವುದಿಲ್ಲ.

ಲಾಸ್ಟ್ ಸೀನ್ ಮತ್ತು ಆನ್‌ಲೈನ್ ಮಾಹಿತಿ
  

ಲಾಸ್ಟ್ ಸೀನ್ ಮತ್ತು ಆನ್‌ಲೈನ್ ಮಾಹಿತಿ

ನಿಮ್ಮ ಲಾಸ್ಟ್ ಸೀನ್ ಮತ್ತು ಆನ್‌ಲೈನ್ ಮಾಹಿತಿ ನೀವು ಬ್ಲಾಕ್ ಮಾಡಿರುವ ಸಂಪರ್ಕಗಳಿಗೆ ದೊರೆಯುವುದಿಲ್ಲ.

ಸ್ಟೇಟಸ್ ಸಂದೇಶ
  

ಸ್ಟೇಟಸ್ ಸಂದೇಶ

ನಿಮ್ಮ ಸ್ಟೇಟಸ್ ಸಂದೇಶಗಳು ಯಾವುದೇ ಬ್ಲಾಕ್ ಮಾಡಿರುವ ಸಂಪರ್ಕಗಳಿಗೆ ದೊರೆಯುವುದಿಲ್ಲ.

ಯಾವುದೇ ಬದಲಾವಣೆಗಳು ದೊರೆಯುವುದಿಲ್ಲ
  

ಯಾವುದೇ ಬದಲಾವಣೆಗಳು ದೊರೆಯುವುದಿಲ್ಲ

ನಿಮ್ಮ ಪ್ರೊಫೈಲ್ ಚಿತ್ರಕ್ಕೆ ನೀವು ಮಾಡಿರುವ ಯಾವುದೇ ಬದಲಾವಣೆಗಳು ಇನ್ನು ಮುಂದೆ ಬ್ಲಾಕ್ ಮಾಡಿರುವ ಸಂಪರ್ಕಗಳಿಗೆ ದೊರೆಯುವುದಿಲ್ಲ.

ಯಾವುದೇ ಕರೆ ಅಥವಾ ಸಂದೇಶ ಕಳುಹಿಸಲಾಗುವುದಿಲ್ಲ
  

ಯಾವುದೇ ಕರೆ ಅಥವಾ ಸಂದೇಶ ಕಳುಹಿಸಲಾಗುವುದಿಲ್ಲ

ನೀವು ಅವರನ್ನು ಅನ್‌ಬ್ಲಾಕ್ ಮಾಡುವವರೆಗೆ ಬ್ಲಾಕ್ ಮಾಡಿದ ಸಂಪರ್ಕಗಳಿಗೆ ಯಾವುದೇ ಕರೆ ಅಥವಾ ಸಂದೇಶಗಳನ್ನು ನಿಮಗೆ ಕಳುಹಿಸಲಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article we can learn How do I block or unblock a contact in whatsapp.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot