ವಾಟ್ಸಾಪ್ ಕಣ್ಮರೆ: ಮರೆತೇನೆಂದರೂ ಮರೆಯಲಿ ಹ್ಯಾಂಗ!!!

By Shwetha
|

ವಾಟ್ಸಾಪ್ ಇನ್‌ಸ್ಟಂಟ್ ಮೆಸೇಜ್ ಅಪ್ಲಿಕೇಶನ್ ಎಂಬ ಹೆಸರಿನಿಂದಲೇ ಬಳಕೆದಾರರ ಮನಗೆದ್ದಿರುವ ಅಪ್ಲಿಕೇಶನ್ ಆಗಿದೆ. ಪ್ರಸ್ತುತ ಫೇಸ್‌ಬುಕ್ ಸ್ವಾಧೀನದಲ್ಲಿದ್ದರೂ ವಾಟ್ಸಾಪ್ ತನ್ನ ಹಿಂದಿನ ಹಿರಿಮೆಯನ್ನು ಕಳೆದುಕೊಂಡಿಲ್ಲ. ಇಂದಿಗೂ ಬಳಕೆದಾರರಿಗೆ ಉಪಯೋಗಕಾರಿಯಾಗಿಯೇ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ.

ಓದಿರಿ: ವಾಟ್ಸಾಪ್ ಸಂಪರ್ಕಕ್ಕೆ ನಿರ್ಬಂಧನೆ ಹೇಗೆ?

ನಾವು ಹೆಚ್ಚಿನ ಲೇಖನಗಳಲ್ಲಿ ವಾಟ್ಸಾಪ್ ಕುರಿತ ಹಲವಾರು ತಂತ್ರಗಳನ್ನು ನಿಮ್ಮ ಮುಂದೆ ಸಾದರಪಡಿಸಿದ್ದೆವು. ಈ ಟ್ರಿಕ್‌ಗಳು ನಿಮ್ಮನ್ನು ವಾಟ್ಸಾಪ್‌ನಲ್ಲಿ ಇನ್ನಷ್ಟು ಪಳಗಿಸಿವೆ ಎಂಬುದು ಮಾತ್ರ ಸುಳ್ಳಲ್ಲ. ದಿನದಿಂದ ದಿನಕ್ಕೆ ಈ ವೈಶಿಷ್ಟ್ಯಗಳು ತಂತ್ರಗಳು ಬದಲಾವಣೆಯನ್ನು ಪಡೆದುಕೊಂಡು ಬಳಕೆದಾರರಲ್ಲಿ ಇನ್ನಷ್ಟು ಕುತೂಹಲವನ್ನು ಮೂಡಿಸುತ್ತಿವೆ.

ಓದಿರಿ: ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಇಂತಹುದೇ ಅತಿ ವಿಶೇಷವಾದ ವಾಟ್ಸಾಪ್ ಟ್ರಿಕ್ಸ್‌ನೊಂದಿಗೆ ನಾವು ಬಂದಿದ್ದು ಈ ಸಲಹೆಗಳನ್ನು ನೀವು ಪಾಲಿಸಿದ್ದೀರಾ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಪ್ರೊಫೈಲ್ ಮತ್ತು ಸ್ಟೇಟಸ್

ಪ್ರೊಫೈಲ್ ಮತ್ತು ಸ್ಟೇಟಸ್

ಎಡ ಭಾಗದಲ್ಲಿ ತಟ್ಟಿದರೆ ನಿಮ್ಮ ಪ್ರೊಫೈಲ್ ಫೋಟೋವನ್ನು ಬದಲಾಯಿಸುವ ಲ್ಯಾಪ್‌ಟಾಪ್ ಕ್ಯಾಮೆರಾ ಅಥವಾ ವೆಬ್ ಕ್ಯಾಮ್ ವಿಶೇಷತೆಯೊಂದು ಕಾಣಿಸಿಕೊಳ್ಳಬಹುದು. ನೀವು ಅಡ್ಮಿನ್ ಆಗಿರುವ ಗುಂಪಿನಲ್ಲೂ ಇದು ಕಾರ್ಯನಿರ್ವಹಿಸುತ್ತದೆ.

ಬ್ರಾಡ್‌ಕಾಸ್ಟ್ ಸಂದೇಶ ಕಳುಹಿಸಲು

ಬ್ರಾಡ್‌ಕಾಸ್ಟ್ ಸಂದೇಶ ಕಳುಹಿಸಲು

ಗುಂಪು ಎಸ್‌ಎಮ್‌ಎಸ್ ಕಳುಹಿಸುವುದಕ್ಕಿಂತಲೂ ಇದು ಕಡಿಮೆ ದರದ್ದಾಗಿದೆ. ಮೆನು > ನ್ಯೂ ಬ್ರಾಡ್‌ಕಾಸ್ಟ್, ಮತ್ತು ಸಂದೇಶ ಕಳುಹಿಸಬೇಕೆಂದಿರುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.

ಹಾಟ್‌ಸ್ಪಾಟ್ ಅನ್ವೇಷಿಸಿ

ಹಾಟ್‌ಸ್ಪಾಟ್ ಅನ್ವೇಷಿಸಿ

ಅಟ್ಯಾಚ್‌ಮೆಂಟ್ ಪ್ಯಾನ್‌ನಲ್ಲಿರುವ ಸೆಂಡ್ ಲೊಕೇಶನ್ ಐಕಾನ್ ಅನ್ನು ತಟ್ಟಿರಿ ಮತ್ತು ನಿಮ್ಮ ಸುತ್ತಲಿರುವ ಹಾಟ್‌ಸ್ಪಾಟ್‌ಗಳನ್ನು ಅನ್ವೇಷಿಸಿ.

ಗುಂಪು ಚಾಟ್ ಮತ್ತು ಸಂವಾದಗಳನ್ನು ಮ್ಯೂಟ್ ಮಾಡುವುದು

ಗುಂಪು ಚಾಟ್ ಮತ್ತು ಸಂವಾದಗಳನ್ನು ಮ್ಯೂಟ್ ಮಾಡುವುದು

ಆಂಡ್ರಾಯ್ಡ್‌ನಲ್ಲಿ ಮೆನು ಬಟನ್ ತಟ್ಟಿರಿ, ನಂತರ ಟೈಮ್ ಫ್ರೇಮ್ ಅನ್ನು ಆರಿಸಿ. ಇಲ್ಲಿ ನಿರ್ದಿಷ್ಟ ಸಮಯವನ್ನು ಹೊಂದಿಸುವ ಮೂಲಕ ಅಧಿಸೂಚನೆಗಳನ್ನು ನಿಮಗೆ ನಿಷ್ಕ್ರಿಯಗೊಳಿಸಬಹುದು. ವೆಬ್ ಬ್ರೌಸರ್‌ನಲ್ಲಿ ಕೂಡ ಈ ಫೀಚರ್ ಲಭ್ಯವಿದೆ.

ನಿಮ್ಮ ಸಂದೇಶವನ್ನು ಯಾರು ಓದಿದ್ದಾರೆ ತಿಳಿಯಲು

ನಿಮ್ಮ ಸಂದೇಶವನ್ನು ಯಾರು ಓದಿದ್ದಾರೆ ತಿಳಿಯಲು

ಎರಡು ಬ್ಲ್ಯೂ ಟಿಕ್‌ಗಳನ್ನು ನಿಮ್ಮ ಸಂದೇಶ ಹೊಂದಿದೆ ಎಂದಾದಲ್ಲಿ ಅದನ್ನು ಓದಿದ್ದಾರೆ ಎಂಬುದಾಗಿದೆ. ಇನ್ನು ಗುಂಪು ಚಾಟ್‌ನಲ್ಲಿ ನಿಮ್ಮ ಸಂದೇಶವನ್ನು ಯಾರು ಓದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ನೀವು ಕಳುಹಿಸಿರುವ ಸಂದೇಶಕ್ಕೆ ದೀರ್ಘವಾಗಿ ಒತ್ತಿರಿ. ಇದು ವೃತ್ತಾಕಾರದಲ್ಲಿ ಕಾಣುತ್ತದೆ. ಇದರ ಮೇಲೆ ತಟ್ಟುವುದರಿಂದ ಇದು ಯಾರಿಗೆ ತಲುಪಿದೆ ಮತ್ತು ಯಾರು ಓದಿದ್ದಾರೆ ಎಂಬುದನ್ನು ಅರಿತುಕೊಳ್ಳಬಹುದು.

ಲಾಕ್ ಮಾಡಿ

ಲಾಕ್ ಮಾಡಿ

ನಿಮ್ಮ ಫೋನ್‌ನಲ್ಲಿರುವ ವಾಟ್ಸಾಪ್‌ನ ಸಂರಕ್ಷಣೆಗಾಗಿ ಪಾಸ್‌ವರ್ಡ್ ಅಥವಾ ಪಿನ್ ಅನ್ನು ಬಳಸಿ. ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಈ ಕೆಲಸವನ್ನು ಮಾಡುತ್ತವೆ.

ಫೋಟೋ ರೋಲ್‌

ಫೋಟೋ ರೋಲ್‌

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಿ ವಾಟ್ಸಾಪ್ "ಚಿತ್ರಗಳು" ಮತ್ತು ವೀಡಿಯೋಗಳ" ಫೋಲ್ಡರ್ ಅನ್ನು ಹುಡುಕಿ. ಪ್ರತಿಯೊಂದರಲ್ಲಿ ನೋಮೀಡಿಯಾ ಫೋಲ್ಡರ್ ಅನ್ನು ರಚಿಸಿ. ಫೋಲ್ಡರ್ ಸ್ಕ್ಯಾನಿಂಗ್ ಮಾಡುವಲ್ಲಿಂದ ಆಂಡ್ರಾಯ್ಡ್‌ನ ಗ್ಯಾಲರಿಯನ್ನು ಇದು ನಿಲ್ಲಿಸುತ್ತದೆ.

ಲಾಸ್ಟ್ ಸೀನ್

ಲಾಸ್ಟ್ ಸೀನ್

ನೀವು ಯಾವಾಗ ಆನ್‌ಲೈನ್‌ನಿಂದ ಹೊರಹೋಗಿರುತ್ತೀರಿ ಎಂಬ ಸುದ್ದಿಯನ್ನು ಲಾಸ್ಟ್ ಸೀನ್ ಬಳಕೆದಾರರಿಗೆ ತಿಳಿಸುತ್ತದೆ. ಇದು ಇತರರಿಗೆ ತಿಳಿಯುವುದು ಬೇಡ ಎಂಬುದು ನಿಮ್ಮ ಉದ್ದೇಶವಾಗಿದ್ದರೆ ಅದನ್ನು ಮರೆಮಾಡಿ.

ನಿರ್ಬಂಧ ಹೇರಿ

ನಿರ್ಬಂಧ ಹೇರಿ

ನಿಮ್ಮ ಪ್ರೊಫೈಲ್ ಚಿತ್ರವನ್ನು ಲಿಂಕ್‌ಡ್ ಇನ್, ಫೇಸ್‌ಬುಕ್, ಇಲ್ಲವೇ ಟ್ವಿಟ್ಟರ್‌ನಲ್ಲಿ ನೀವು ಬಳಸಿದ್ದೀರಿ ಎಂದಾದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ.

ಸ್ಪ್ಯಾಮ್

ಸ್ಪ್ಯಾಮ್

ವಾಟ್ಸಾಪ್ ಎಂದಿಗೂ ಅಪ್ಲಿಕೇಶನ್ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ. ಚಾಟ್ಸ್, ವಾಯ್ಸ್ ಸಂದೇಶ, ಪೇಮೆಂಟ್, ಫೋಟೋಗಳು ಅಥವಾ ವೀಡಿಯೊಗಳ ಕುರಿತಾದ ಇಮೇಲ್‌ಗಳನ್ನು ಕಳುಹಿಸುವುದಿಲ್ಲ. ಆದ್ದರಿಂದ ವಾಟ್ಸಾಪ್ ಹೆಸರುಳ್ಳ ಸ್ಪ್ಯಾಮ್ ಮೇಲ್‌ಗಳು ಬಂದಾಗ ಆದಷ್ಟು ಎಚ್ಚರವಾಗಿರಿ.

Best Mobiles in India

English summary
For most of us, WhatsApp has become the default go-to messenger, because everyone's on it, and it's on nearly every platform. WhatsApp has over a billion downloads on Google Play alone, the only other messenger to boast that is Facebook Messenger. Here is the useful whatsapp tips you should try.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X