ಸ್ವಂತ ವೆಬ್‌ಸೈಟ್‌ ತೆರೆಯುವುದು ಹೇಗೆ? ಮೊದಲ ಸಾರಿ ಕನ್ನಡದಲ್ಲಿ ಪೂರ್ಣ ಮಾಹಿತಿ !!

Written By:

ಎಲ್ಲರಿಗೂ ಒಂದು ವೆಬ್‌ಸೈಟ್ ತೆರೆಯುವ ಆಸೆ ಇರುತ್ತದೆ. ಇನ್ನು ಸ್ವಂತ ಏನಾದರೂ ಬ್ಯುಸಿನೆಸ್ ನಡೆಸುತ್ತಿದ್ದರೆ ಜನರಿಗೆ ಮಾಹಿತಿ ತಲುಪಿಸಲು ಒಂದು ವೆಬ್‌ಸೈಟ್‌ ಬೇಕೆ ಬೇಕು ಅಲ್ಲವೇ.? ಹಾಗಾಗಿ, ನಿಮ್ಮದೇ ವೆಬ್‌ಸೈಟ್ ತೆರೆಯಲು ಬೇರೆಡೆ ಎಲ್ಲಿಯೇ ಹೋಗದೇ, ಕಡಿಮೆ ಹಣದಲ್ಲಿ ನೀವೆ ತೆರೆಯಬಹುದು.!!

ಓದಿರಿ: ಸ್ವಿಚ್‌ಆಫ್ ಮಾಡಿ ಚಾರ್ಜ್‌ಗೆ ಹಾಕಿದರೆ ಮೊಬೈಲ್ ಸ್ಪೋಟವಾಗುವುದಿಲ್ಲವೇ?

ಹೌದು, ಒಂದು ವೆಬ್‌ಸೈಟ್ ಪ್ರಾರಂಭಿಸುವುದು ನಿಜವಾಗಿಯೂ ಕಷ್ಟವೇನಲ್ಲ. ನಿಮಗೆ ಆನ್‌ಲೈನ್‌ ಪ್ರಪಂಚದ ಬಗ್ಗೆ ಸ್ವಲ್ಪವೇ ಮಾಹಿತಿ ಗೊತ್ತಿದ್ದರೂ ಸಹ ನಿಮ್ಮ ವೆಬ್‌ಸೈಟ್ ತೆರೆಯುವುದು ಬಹಳ ಸುಲಭ.! ಹಾಗಾಗಿ, ಸ್ವಂತ ವೆಬ್‌ಸೈಟ್‌ ತೆರೆಯುವುದು ಹೇಗೆ? ಆರಂಭಿಸುವ ಹಂತದಲ್ಲಿ ನಿರ್ವಹಿಸಬೇಕಾಗಿರುವ ಕಾರ್ಯಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುಆರ್​ಎಲ್ ಪಡೆದುಕೊಳ್ಳಿರಿ.

ಯುಆರ್​ಎಲ್ ಪಡೆದುಕೊಳ್ಳಿರಿ.

ನಮ್ಮದೇ ವೆಬ್‌ಸೈಟ್ ರೂಪಿಸಿಕೊಳ್ಳಲು ಹೊರಟಾಗ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಆಯ್ಕೆಯ ವಿಳಾಸ, ಅಂದರೆ ಯುಆರ್​ಎಲ್ ಪಡೆದುಕೊಳ್ಳುವುದು. ( ಉದಾ: WWW.myplan.com) ಯುಆರ್​ಎಲ್​ಗಳನ್ನು ಒದಗಿಸುವ ಸಂಸ್ಥೆಗಳು ಹಲವಿದ್ದು, ನಮಗೆ ಬೇಕಾದ ವಿಳಾಸವನ್ನು ವರ್ಷಕ್ಕೆ ಇಂತಿಷ್ಟು ಎಂದು ಶುಲ್ಕ ಪಾವತಿಸುವ ಮೂಲಕ ಯುಆರ್​ಎಲ್​ಗಳನ್ನು ಪಡೆದುಕೊಳ್ಳಬಹುದು. ಯುಆರ್​ಎಲ್​ಗಳನ್ನು ಗೂಗಲ್ ಕ್ಲೌಡ್, ಸ್ಕೈನೋವಾ ಮತ್ತು ವಿಕ್ಸ್ ಮುಂತಾದ ಸಂಸ್ಥೆಗಳು ಒದಗಿಸುತ್ತವೆ.

ಯುಆರ್​ಎಲ್ ಪಡೆಯಲು ಹಣವೆಷ್ಟು?

ಯುಆರ್​ಎಲ್ ಪಡೆಯಲು ಹಣವೆಷ್ಟು?

ಯುಆರ್​ಎಲ್​ಗಳನ್ನು ಒದಗಿಸುವ ಸಂಸ್ಥೆಗಳಾದ ಗೂಗಲ್ ಕ್ಲೌಡ್, ಸ್ಕೈನೋವಾ ಮತ್ತು ವಿಕ್ಸ್ ಮುಂತಾದ ಸಂಸ್ಥೆಗಳು ನೂರು ರೂಪಾಯಿಗಳಿಂದ ಸಾವಿರಗಳವರೆಗೂ ಹಣವನ್ನು ಪಡೆಯುತ್ತವೆ. ಇನ್ನು ಕೆಲವೊಮ್ಮೆ ಉಚಿತವಾಗಿಯೂ ಯುಆರ್​ಎಲ್​ಗಳನ್ನು ಪಡೆಯಬಹುದು.!!

ವೆಬ್​ಪೇಜ್ ರೂಪಿಸಿ( ಹೋಸ್ಟಿಂಗ್)

ವೆಬ್​ಪೇಜ್ ರೂಪಿಸಿ( ಹೋಸ್ಟಿಂಗ್)

ಯುಆರ್​ಎಲ್ ವಿಳಾಸ ಪಡೆದುಕೊಂಡ ಮೇಲೆ ವೆಬ್‌ಸೈಟ್ ನಿರ್ವಿುಸಬೇಕು. ವೆಬ್‌ಸೈಟ್ ಪೇಜ್ ತೆರೆದ ನಂತರ ಟೂಲ್ಸ್ ಬಾಕ್ಸ್‌ನಲ್ಲಿ ನಿಮಗೆ ಬೇಕಾದಂತೆ ವೆಬ್​ಪೇಜ್ ರೂಪಿಸಿಕೊಳ್ಳಬಹುದು. ಇದಕ್ಕೆ ಹೋಸ್ಟಿಂಗ್ ಎಂದು ಕರೆಯುತ್ತಾರೆ. ಹೋಸ್ಟಿಂಗ್ ಸೇವೆಗೂ ಹಣ ನೀಡಬೇಕಾಗುತ್ತದೆ. ಜಾಲತಾಣದಲ್ಲಿ ಎಷ್ಟು ಪ್ರಮಾಣದ ಮಾಹಿತಿ ಇದೆ, ಎಷ್ಟು ಜನ ಭೇಟಿ ನೀಡುತ್ತಾರೆ ಎನ್ನುವುದರ ಮೇಲೆ ನಂತರ ದರ ವಿಧಿಸಲಾಗುತ್ತದೆ.

ಅಗತ್ಯವಾದ ತಂತ್ರಾಂಶಗಳನ್ನು ಪಡೆಯುವುದು ಹೇಗೆ?

ಅಗತ್ಯವಾದ ತಂತ್ರಾಂಶಗಳನ್ನು ಪಡೆಯುವುದು ಹೇಗೆ?

ಸಾಮಾನ್ಯವಾಗಿ ನಮ್ಮ ವೆಬ್‌ಸೈಟ್‌ಗೆ ಬೇಕಾದಷ್ಟು ಜಾಗ, ಅಗತ್ಯವಾದ ತಂತ್ರಾಂಶಗಳು, ಇಮೇಲ್ ವ್ಯವಸ್ಥೆ ಮೊದಲಾದವನ್ನೆಲ್ಲ ಯುಆರ್​ಎಲ್ ಸಂಸ್ಥೆಗಳೇ ಒಸಗಿಸುತ್ತವೆ. ನಿಮಗೆ ಇನ್ನು ಹೆಚ್ಚಿನ ತಂತ್ರಾಂಶಗಳನ್ನು ಪಡೆಯುವ ಇಚ್ಚೆ ಇದ್ದಲ್ಲಿ. ಯುಆರ್​ಎಲ್​ಗಳನ್ನು ಒದಗಿಸುವ ಸಂಸ್ಥೆಗಳ ಮೂಲಕ ಪಡೆಯಬಹುದುದಾಗಿದೆ. ಇವು ವೆಬ್‌ಸೈಟ್ ಪ್ರಾರಂಭಿಸಲು ತಿಳಿಯಬೇಕಾದ ವಿಷಯಗಳಾಗಿದ್ದು, ಮುಂದಿನ ಲೇಖನದಲ್ಲಿ ವೆಬೈಸೈಟ್ ತೆರೆಯುವ ಹಂತಗಳನ್ನು ತಿಳಿಸಿಕೊಡುತ್ತೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Sign in to Google Sites with your Google Account. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot