ಸರಳ ವಿಧಾನದಲ್ಲಿ ವಿಂಡೋಸ್ 10 ಟೆಕ್ನಿಕಲ್ ಪ್ರಿವ್ಯೂ ಸ್ಥಾಪನೆ

By Shwetha
|

ವಿಂಡೋಸ್ 10 ಅಧಿಕೃತವಾಗಿ ಘೋಷಿಸಲ್ಪಟ್ಟಿದೆ. ಸ್ಟಾರ್ಟ್ ಮೆನು ಮೊದಲಾದ ಅದ್ಭುತ ವಿಶೇಷತೆಗಳನ್ನು ಒಳಗೊಂಡು ವಿಂಡೋಸ್ 10 ತನ್ನ ಉದಯವನ್ನು ಭರ್ಜರಿಯಾಗಿ ಆರಂಭಿಸಿದೆ. 2015 ರ ಮಧ್ಯಭಾಗದಲ್ಲಿ ಹೊಸ ಆಪರೇಟಿಂಗ್ ಸಿಸ್ಟಮ್ ಸಂಪೂರ್ಣವಾಗಿ ಮಾರಾಟಕ್ಕೆ ಲಭ್ಯವಾಗಲಿದೆ.

ಇದನ್ನೂ ಓದಿ: ಹೊಸ ಫೋನ್ ಖರೀದಿಗೆ ಸಹಾಯಕವಾಗಿರುವ ಸರಳ ಸಲಹೆಗಳು

ಆದರೀಗ ವಿಂಡೋಸ್ 10 ನ ಪ್ರಿವ್ಯೂ ಆವೃತ್ತಿಯನ್ನು ನಿಮ್ಮ ಸಿಸ್ಟಮ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರ ಪ್ರಿವ್ಯೂ ವಿಂಡೋಸ್ 8 ನಂತಿರದೆ ಮೈಕ್ರೋಸಾಫ್ಟ್ ಇಂಜಿನಿಯರ್‌ಗಳೊಂದಿಗೆ ದೋಷವನ್ನು ನಿವಾರಿಸಿಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ ಮತ್ತು ಇದರ ಕುರಿತು ಪ್ರತಿಕ್ರಿಯೆಯನ್ನು ಕೂಡ ನಿಮಗೆ ನೀಡಬಹುದಾಗಿದೆ. ಈ ಪ್ರೊಗ್ರಾಮ್ ಅನ್ನು ಇನ್‌ಸ್ಟಾಲ್ ಮಾಡುವ ಮುನ್ನ ಎಕ್ಸ್‌ಪರಿಮೆಂಟಲ್ ಮತ್ತು ಪೂರ್ವ ಪ್ರಿ ರಿಲೀಸ್ ಸಾಫ್ಟ್‌ವೇರ್ ಅನ್ನು ಪ್ರೊಗ್ರಾಮ್ ಸರ್ವೀಸ್ ಒಳಗೊಂಡಿರುವುದು ಕಡ್ಡಾಯವಾಗಿದೆ. ಇನ್‌ಸ್ಟಾಲ್ ಅನ್ನು ಆರಂಭಿಸುವ ಮುನ್ನ ಎಲ್ಲಾ ಡೇಟಾವನ್ನು ಬ್ಯಾಕಪ್‌ ಮಾಡಿಕೊಳ್ಳುವುದು ಅತ್ಯವಶ್ಯವಾಗಿದೆ.

ಇದನ್ನೂ ಓದಿ: ಇಂಟರ್ನೆಟ್ ಅನ್ನು ಇನ್ನಷ್ಟು ವೇಗಗೊಳಿಸುವ ತಂತ್ರಗಳಿವು

ವಿಂಡೋಸ್ 10 ಟೆಕ್ನಿಕಲ್ ಪ್ರಿವ್ಯೂ ಇಂಗ್ಲೀಷ್, ಚೈನಾ, ಬ್ರಜಿಲ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಲಭ್ಯವಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ವಿಂಡೋಸ್ 10 ನ ಪ್ರಿವ್ಯೂವನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂಬುದನ್ನು ಅರಿತುಕೊಳ್ಳೋಣ

ಇದನ್ನೂ ಓದಿ: ನಿಮ್ಮ ಲ್ಯಾಪ್‌ಟಾಪ್‌ನ ಕಾಳಜಿಯನ್ನು ಹೀಗೆ ಮಾಡಿ

#1

#1

preview.windows.com ಗೆ ಹೋಗಿ ಅಲ್ಲಿ ಗೆಟ್ ಸ್ಟಾರ್ಟೆಡ್ ಬಟನ್ ಅನ್ನು ಕ್ಲಿಕ್ ಮಾಡಿ ಇದು ನಿಮಗೆ ವಿಂಡೋಸ್ 10 ತಾಂತ್ರಿಕ ಪ್ರಿವ್ಯೂಗೆ ಅನುಮತಿಸುತ್ತದೆ.

#2

#2

ನಿರ್ದಿಷ್ಟವಾದ ಮೈಕ್ರೋಸಾಫ್ಟ್ ಖಾತೆಯನ್ನು ಬಳಸಿಕೊಂಡು ನೋಂದಾಯಿಸಿ ಮತ್ತು ಲಾಗಿನ್ ಆಗಿ.

#3

#3

ನೋಂದಾವಣೆಯನ್ನು ಪೂರ್ತಿಗೊಳಿಸಿದ ನಂತರ, ವಿಂಡೋಸ್ 10 ಟೆಕ್ನಿಕಲ್ ಪ್ರಿವ್ಯೂ ಡೌನ್‌ಲೋಡ್‌ಗೊಳ್ಳು ಪ್ರಾರಂಭವಾಗುತ್ತದೆ. ಪರದೆಯಲ್ಲಿರುವ ಸೂಚನೆಯನ್ನು ಅನುಸರಿಸಿ ವಿಂಡೋಸ್ 10 ಟೆಕ್ನಿಕಲ್ ಪ್ರಿವ್ಯೂವನ್ನು ಡೌನ್‌ಲೋಡ್ ಮಾಡಿ.

ಸೂಚನೆ: ನಿಮ್ಮ ಪಿಸಿಯಲ್ಲಿ ವಿಂಡೋಸ್‌ನ ಯಾವ ಆವೃತ್ತಿ ಚಾಲನೆಯಾಗುತ್ತಿದೆ ಎಂಬುದು ನಿಮಗೆ ತಿಳಿದಿರದಿದ್ದರೆ ಮೈ ಕಂಪ್ಯೂಟರ್‌ನಲ್ಲಿ ಬಲಕ್ಕೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಪ್ರಾಪರ್ಟೀಸ್ ಆಯ್ಕೆ ಮಾಡಿ. ವಿಂಡೋಸ್ ಎಡಿಶನ್ ಮಾಹಿತಿ 32-ಬಿಟ್ ಅಥವಾ 64 ಬಿಟ್ ಪ್ರೊಸೆಸರ್ ಕಂಡುಬರುತ್ತದೆ.

#4

#4

ಈ ಕೆಳಗಿನ ಲಿಂಕ್‌ಗಳ ಮೂಲಕ ವಿಂಡೋಸ್ 10 ಟೆಕ್ನಿಕಲ್ ಪ್ರಿವ್ಯೂವನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
Download Windows 10 English 32-bit (2.9GB)
Download Windows 10 English 64-bit (3.8GB)
Download Windows 10 English UK 32-bit (2.94GB)

#5

#5

ಟೆಕ್ನಿಕಲ್ ಪ್ರಿವ್ಯೂನ ಉತ್ಪನ್ನ ಕೀ (ಪ್ರೊಡಕ್ಟ್ ಕೀ) ಅನ್ನು ಬರೆಯಿರಿ: NKJFK-GPHP7-G8C3J-P6JXR-HQRJR

#6

#6

ವಿಂಡೋಸ್ 10 ಟೆಕ್ನಿಕಲ್ ಪ್ರಿ ವ್ಯೂಗಾಗಿ ಸಿಸ್ಟಮ್ ಅವಶ್ಯಕತೆಗಳು
ಪ್ರೊಸೆಸರ್ : 1GHz ಅಥವಾ ಅದಕ್ಕಿಂತಲೂ ವೇಗದ್ದು
RAM: 1 ಜಿಬಿ (32-bit) ಅಥವಾ 2ಜಿಬಿ (64-bit)
ಹಾರ್ಡ್ ಡಿಸ್ಕ್ ಸ್ಪೇಸ್: 16 ಜಿಬಿ
ಗ್ರಾಫಿಕ್ ಕಾರ್ಡ್: ಮೈಕ್ರೋಸಾಫ್ಟ್ ಡೈರೆಕ್ಟ್ ಎಕ್ಸ್ 9 ಗ್ರಾಫಿಕ್ಸ್ ಡಿವೈಸ್ ಜೊತೆಗೆ WDDM ಡ್ರೈವರ್

Best Mobiles in India

English summary
This article tells about How To Download and Install Windows 10 Technical Preview.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X