Subscribe to Gizbot

ಯಾವುದೇ ಸಾಫ್ಟ್‌ವೇರ್ ಇಲ್ಲದೆಯೂ ಫೋಟೋ ಎಡಿಟ್ ಮಾಡುವುದು ಹೇಗೆ..?

Written By:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಫೋಟೋ ಎಡಿಟ್ ಮಾಡುವ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಅದರೆ ಕಂಪ್ಯೂಟರ್ ನಲ್ಲಿ ನೀವು ಪೋಟೋಗಳನ್ನು ಎಡಿಟ್ ಮಾಡಲು ಫೋಟೋ ಶಾಪ್ ಇಲ್ಲವೇ ಇತರೆ ಯಾವುದಾದರು ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಆದರೆ ಯಾವುದೇ ಸಾಫ್ಟ್‌ವೇರ್ ಇಲ್ಲವೇ ಫೋಟೋ ಎಡಿಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವಾಗಿದೆ.

ಯಾವುದೇ ಸಾಫ್ಟ್‌ವೇರ್ ಇಲ್ಲದೆಯೂ ಫೋಟೋ ಎಡಿಟ್ ಮಾಡುವುದು ಹೇಗೆ..?

ಇಂದಿನ ದಿನದಲ್ಲಿ ಆನ್‌ಲೈನಿನಲ್ಲಿಯೇ ಅದ್ಬುತವಾಗಿ ಫೋಟೋಗಳನ್ನು ಎಡಿಟ್ ಮಾಡುವ ವೆಬ್‌ ತಾಣಗಳು ಲಭ್ಯವಿದೆ. ಫೋಟೋ ಶಾಪ್ ಬಳಕೆ ಮಾಡುವುದು ನಿಮಗೆ ತಿಳಿಸಿದ್ದರೇ, ನೀವು ಆನ್‌ಲೈನಿನಲ್ಲಿ ಫೋಟೋಗಳನ್ನು ಸುಲಭವಾಗಿ ಎಡಿಟ್ ಮಾಡಬಹುದಾಗಿದೆ. ಇದಕ್ಕಾಗಿಯೇ ನಿಮಗೆ ಹಲವು ಆಯ್ಕೆಗಳು ಲಭ್ಯವಿದೆ. ಅವುಗಳ ಕುರಿತ ಮಾಹಿತಿಯೂ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೋಟೊಟರ್:

ಪೋಟೊಟರ್:

ಸ್ಮಾರ್ಟ್‌ಫೋನಿನಲ್ಲಿ ಆಪ್ ಬಳಕೆ ಮಾಡಿಕೊಳ್ಳುವ ಮಾದರಿಯಲ್ಲಿಯೇ ವೆಬ್‌ನಲ್ಲಿಯೂ ಸರ್ಚ್ ಮಾಡಿ ಫೋಟೋಗಳನ್ನು ಎಡಿಟ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅಗತ್ಯತೆ ಇರುವುದಿಲ್ಲ ಎನ್ನಲಾಗಿದೆ. ಸುಲಭವಾಗಿ ಮತ್ತು ವೇಗವಾಗಿ ಎಡಿಟ್ ಮಾಡಬಹುದಾಗಿದೆ.

ಪಿಕ್ಸಲ್ ಎಡಿಟರ್:

ಪಿಕ್ಸಲ್ ಎಡಿಟರ್:

ಇದಲ್ಲದೇ ಸ್ಮಾರ್ಟ್‌ಫೋನಿನಲ್ಲಿ ಆಪ್ ಮಾದರಿಯಲ್ಲಿ ಕಾಣಿಸಿಕೊಂಡಿರುವ ಪಿಕ್ಸಲ್ ಎಡಿಟರ್ ವೆಬ್ ಆವೃತ್ತಿಯೂ ಲಭ್ಯವಿದೆ. ನಿಮ್ಮ ಕಂಪ್ಯೂಟರ್ನಲ್ಲಿ ವೆಬ್ ನಲ್ಲಿ ಫೋಟೋಗಳನ್ನು ಎಡಿಟ್ ಮಾಡುವ ಅವಕಾಶವನ್ನು ಇದು ಮಾಡಿಕೊಡಲಿದೆ. ಇದಕ್ಕಾಗಿ ನೀವು ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ.

ಬಿ ಫನ್ಕಿ ಫೋಟೋ ಎಡಿಟರ್:

ಬಿ ಫನ್ಕಿ ಫೋಟೋ ಎಡಿಟರ್:

ಇದು ಸಹ ಸುಲಭವಾಗಿ ಫೋಟೋ ಎಡಿಟ್ ಮಾಡಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ನೀಡಲಿದೆ. ಇದು ಸಹ ಉಚಿತ ಸೇವೆಯನ್ನು ನೀಡಲಿದ್ದು, ಯಾವ ಸಮಯದಲ್ಲಿ ಬೇಕಾದರು ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ.

ಪಿಕ್ ಮಂಕಿ:

ಪಿಕ್ ಮಂಕಿ:

ಆನ್‌ಲೈನಿನಲ್ಲಿ ನಿಮ್ಮ ಫೋಟೋವನ್ನು ಎಡಿಟ್ ಮಾಡಿಕೊಳ್ಳಲು ಇರುವ ಉತ್ತಮ ಸೇವೆಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ತ್ವರಿತವಾಗಿ ಫೋಟೋ ಎಡಿಟ್ ಮಾಡಬಹದಾಗಿದೆ. ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ.

ಪೋಟೋ ಜೆಟ್:

ಪೋಟೋ ಜೆಟ್:

ಇದು ಫೋಟೋಗಳನ್ನು ಉತ್ತಮವಾಗಿ ಎಡಿಟ್ ಮಾಡಲಿದ್ದು, ಹೆಚ್ಚಿನ ಆಯ್ಕೆಗಳನ್ನು ನೀಡಲಿದೆ. ಇದರಲ್ಲಿ ಫೋಟೋಗಳನ್ನು ಹೆಚ್ಚು ಸರಳವಾಗಿ ಎಡಿಟ್ ಮಾಡಿಕೊಳ್ಳಬಹುದಾಗಿದೆ ಮತ್ತು ಸಮಯವನ್ನು ಉಳಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to view all photos, pages, comments and posts you liked on Facebook (KANNADA)

ಓದಿರಿ: ಸ್ಮಾರ್ಟ್‌ ಕ್ಯಾಮೆರಾ ನಿರ್ಮಿಸಲು ಮುಂದಾದ ಶಿಯೋಮಿ: ದೊಡ್ಡ ಕಂಪನಿಗೆ ಗಾಳ ಹಾಕಿದೆ...!

English summary
How To Edit Pictures On PC Without Any Software. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot