ಜಿಯೋ ಉಚಿತ ಆಫರ್ ಮತ್ತೆ 3 ತಿಂಗಳು! ಪ್ರೈಮ್ ಸಮಯ ಹೆಚ್ಚಳ! ಸಮ್ಮರ್ ಆಫರ್!! ಇನ್ನೇನು??

Written By:

ಟೆಲಿಕಾಂ ಕ್ಷೇತ್ರಕ್ಕೆ ಮತ್ತೆ ಶಾಕ್ ನೀಡಿರುವ ಅಂಬಾನಿ ಜಿಯೋ ಉಚಿತ ಆಫರ್ ಅನ್ನು ಮತ್ತೆ ಮುಂದುವರೆಸಿದ್ದಾರೆ.!! ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅಂಬಾನಿ ಜಿಯೋ ಗ್ರಾಹಗಕರಿಗೆ ಮಗದೊಂದು ಆಫರ್ ಬಿಡುಗಡೆ ಮಾಡಿದ್ದು, ಜಿಯೋ ಗ್ರಾಹಕರು ಮತ್ತೆ 3 ತಿಂಗಳ ಸೇವೆಯನ್ನು ಬಹುತೇಕ ಉಚಿತವಾಗಿ ಪಡೆಯಬಹುದಾಗಿದೆ.!!

ಓದಿರಿ: ಜಿಯೋ ಸಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ಈಗಾಗಲೇ ಆರು ತಿಂಗಳು ಉಚಿತ ಆಫರ್ ನೀಡಿರುವ ಅಂಬಾನಿ ಜಿಯೋ ಉಚಿತ ಆಫರ್ ಅನ್ನು ಮತ್ತೆ ಮುಂದುವರೆಸಿದ್ದು, ಮಾರ್ಚ್ 31 ಕ್ಕೆ ಕೊನೆಯಾಗುತ್ತಿದ್ದ ಜಿಯೋ ಪ್ರೈಮ್ ಮೆಂಬರ್‌ಶಿಪ್ ರೀಚಾರ್ಜ್ ಕಾಲಾವಕಾಶವನ್ನು ಸಹ ಹೆಚ್ಚಿಸಿದ್ದು, ಏಪ್ರಿಲ್ 15 ನೇ ತಾರೀಖಿನವರೆಗೂ ಪ್ರೈಮ್ ಮೆಂಬರ್‌ಶಿಪ್ ರೀಚಾರ್ಜ್ ಕಾಲಾವಕಾಶ ಮುಂದುವರೆಸಿದ್ದಾರೆ.!!

ಓದಿರಿ: ಜಿಯೋಗೆ ಸೆಡ್ಡು...200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್!!

ಇಷ್ಟೇ ಅಲ್ಲದೇ ಅಂಬಾನಿ "ಸಮ್ಮರ್ ಆಫರ್" ಸಹ ಪ್ರಕಟಿಸಿದ್ದು. ಜಿಯೋವಿನ ಮುಂದಿನ ಸೇವೆಗಳು ಹೇಗಿವೆ.? ಮತ್ತೆ ಎಷ್ಟು ದಿವಸಗಳ ಕಾಲ ಉಚಿತ ಆಫರ್ ಮುಂದುವರೆಯುತ್ತದೆ.? ಎಂಬುದರ ಫುಲ್ ಡೀಟೆಲ್ಸ್ ಕೆಳಗಿನ ಸ್ಲೈಡರ್‌ಗಳಲ್ಲಿದ್ದು, ಅವುಗಳು ಯಾವುವು ಎಂಬುದನ್ನು ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಪ್ರೈಮ್ ಮೆಂಬರ್‌ಶಿಪ್!!

ಜಿಯೋ ಪ್ರೈಮ್ ಮೆಂಬರ್‌ಶಿಪ್!!

ಏಪ್ರಿಲ್ 15 ನೇ ತಾರೀಖಿನವರೆಗೂ ಪ್ರೈಮ್ ಮೆಂಬರ್‌ಶಿಪ್ ರೀಚಾರ್ಜ್ ಕಾಲಾವಕಾಶವನ್ನು ಅಂಬಾನಿ 15 ದಿವಸಗಳ ಕಾಲ ಹೆಚ್ಚಿಸಿದ್ದು, ಯಾರು ಇನ್ನು ಪ್ರೈಮ್ ಮೆಂಬರ್‌ಶಿಪ್ ಪಡೆದಿಲ್ಲವೂ ಅಂತವರಿಗಾಗಿ ಮತ್ತೆ ಆಫರ್ ನೀಡಿದ್ದಾರೆ. ಈ 15 ದಿವಸಗಳಲ್ಲಿ ಪ್ರೈಮ್ ಮೆಂಬರ್‌ಶಿಪ್ ಪಡೆಯದಿದ್ದರೆ ಗ್ರಾಹಕರು ಜಿಯೋವಿನ ಪ್ರಮುಖ ಆಫರ್‌ಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.!!

ಏನಿದು ಸಮ್ಮರ್ ಆಫರ್?

ಏನಿದು ಸಮ್ಮರ್ ಆಫರ್?

ಮತ್ತೆ ಇತರೆ ಟೆಲಿಕಾಂಗಳಿಗೆ ಸೆಡ್ಡು ಹೊಡೆದಿರುವ ಅಂಬಾನಿ ಹ್ಯಾಪಿ ನ್ಯೂ ಇಯರ್ ಆಫರ್ ನಂತರ "ಸಮ್ಮರ್ ಆಫರ್" ಪ್ರಕಟಿಸಿದ್ದು, 303 ರೂಪಾಯಿಗೂ ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಮತ್ತೆ ಮೂರು ತಿಂಗಳು ಜಿಯೋ ಸೇವೆಯನ್ನು ಉಪಯೋಗಿಸಬಹುದಾದ ಆಫರ್ ನೀಡಿದ್ದಾರೆ.!!

ತಿಂಗಳಿಗೆ 101 ರೂಪಾಯಿ.!!

ತಿಂಗಳಿಗೆ 101 ರೂಪಾಯಿ.!!

ಜಿಯೋವಿನ ಸಮ್ಮರ್ ಆಫರ್ ಪ್ಲಾನ್ ಮೂಲಕ ಜಿಯೋ ಗ್ರಾಹಕ ತಿಂಗಳಿಗೆ 101 ರೂಪಾಯಿಯಲ್ಲಿ ಪ್ರತಿ ತಿಂಗಳು ಅನ್‌ಲಿಮಿಟೆಡ್ ಕಾಲ್, ಮತ್ತು ಪ್ರತಿ ದಿವಸ ಒಂದು ಜಿಬಿ ಡೇಟಾ ಪಡೆಯಲಿದ್ದಾರೆ,ಹಾಗಾಗಿ, ಜಿಯೋವಿನ ಸಮ್ಮರ್ ಆಫರ್ ಪ್ಲಾನ್ ಎಲ್ಲಾ ಟೆಲಿಕಾಂಗಳಿಗೂ ಕಂಟಕವಾಗಿ ಬದಲಾಗಿದೆ.

ಈಗಾಗಲೇ ಪ್ರೈಮ್ ರೀಚಾರ್ಜ್ ಮಾಡಿಸಿದ್ದರೆ.!!?

ಈಗಾಗಲೇ ಪ್ರೈಮ್ ರೀಚಾರ್ಜ್ ಮಾಡಿಸಿದ್ದರೆ.!!?

ಈಗಾಗಲೇ ಪ್ರೈಮ್ ರೀಚಾರ್ಜ್ ಮಾಡಿಸಿದ್ದರೆ ಜಿಯೋ ಗ್ರಾಹಕರು ಏಪ್ರಿಲ್ 15 ನೇ ತಾರೀಖಿನವರೆಗೂ ಜಿಯೋ ಉಚಿತ ಸೇವೆಯನ್ನು ಬಳಕೆ ಮಾಡಬಹುದಾಗಿದೆ. 15 ದಿವಸಗಳ ನಂತರ ಜಿಯೋವಿನ ಸಮ್ಮರ್ ಆಫರ್‌ ರೀಚಾರ್ಜ್ ಮಾಡಿಸಿದರೆ ಮತ್ತೆ ಮೂರು ತಿಂಗಳು ಜಿಯೋ ಜೊತೆ ಜಿಂಗಾಲಾಲ!!

ಪ್ರೈಮ್ ರೀಚಾರ್ಜ್ ಮಾಡಿಸದಿದ್ದರೆ?

ಪ್ರೈಮ್ ರೀಚಾರ್ಜ್ ಮಾಡಿಸದಿದ್ದರೆ?

ಪ್ರೈಮ್ ಮೆಂಬರ್‌ಶಿಪ್ ರೀಚಾರ್ಜ್ ಕಾಲಾವಕಾಶವನ್ನು ಅಂಬಾನಿ 15 ದಿವಸಗಳ ಕಾಲ ಹೆಚ್ಚಿಸಿದ್ದು, ಯಾರು ಪ್ರೈಮ್ ಮೆಂಬರ್‌ಶಿಪ್ ಪಡೆಯುವುದಿಲ್ಲವೂ ಅವರು ಈ ಸಮ್ಮರ್ ಆಫರ್ ಪ್ಲಾನ್‌ಗೆ ಅರ್ಹವಿರುವುದಿಲ್ಲ!!

ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Prime plan last date extended to April 15.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot