Subscribe to Gizbot

ವಾಟ್ಸಾಪ್ ಹ್ಯಾಕ್ ಮಾಡಿ, ಸ್ನೇಹಿತರ ಮೆಸೇಜ್, ಫೋಟೋ, ವೀಡಿಯೊ ಆಕ್ಸೆಸ್ ಹೇಗೆ?

Written By:

ನನ್ನ ಗೆಳೆಯ ತುಂಬ ಬದಲಾಗಿದ್ದಾನೆ, ನನ್ನ ಗೆಳತಿ ತುಂಬ ಬದಲಾಗಿದ್ದಾಳೆ. ಯಾವಾಗ ನೋಡು ಆನ್‌ಲೈನ್‌ನಲ್ಲಿ ಇರ್ತಾನೆ ಅಂತ ಹುಡುಗಿ, ಆನ್‌ಲೈನ್‌ನಲ್ಲಿ ಇರ್ತಾಳೆ ಅಂತ ಹುಡುಗ. ವಾಟ್ಸಾಪ್‌ನಲ್ಲಿ ಯಾರ್ ಜೊತೆ ಇಷ್ಟೊಂದು ಚಾಟ್‌ಮಾಡ್‌ತಿದ್ದಾನೋ/ ಚಾಟ್‌ಮಾಡ್‌ತಿದ್ದಾಳೋ ಗೊತ್ತಿಲ್ಲವಲ್ಲ. ಈ ರೀತಿ ಹಲವು ಹುಡುಗ, ಹುಡುಗಿಯರು, ಸ್ನೇಹಿತರು, ಗಂಡ-ಹೆಂಡತಿ, ಅಣ್ಣ-ತಮ್ಮ, ತಂಗಿ-ಅಕ್ಕ ಎಲ್ಲರ ನಡುವೆ ಈ ರೀತಿಯ ಸಂಶಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಒಂದು ರೀತಿಯಲ್ಲಿ ದೊಡ್ಡ ಮಟ್ಟದಲ್ಲೇ ಈ ವಿಷಯ ಎಲ್ಲರೊಳಗೆ ಸೌಂಡ್ ಮಾಡುತ್ತಿರುತ್ತದೆ..

ವಾಟ್ಸಾಪ್ ಲೇಟೆಸ್ಟ್ ವರ್ಸನ್ ಡೌನ್‌ಲೋಡ್‌ ಮಾಡಿ ವೀಡಿಯೊ ಕರೆ ಫೀಚರ್ ಪಡೆಯುವುದು ಹೇಗೆ?

ಅಂದಹಾಗೆ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ಸ್ನೇಹಿತರ ಮೆಸೇಜ್‌, ಫೋಟೋ, ವೀಡಿಯೊಗಳ ಆಕ್ಸೆಸ್‌ ಅನ್ನು, ಸ್ನೇಹಿತರಿಗೆ ತಿಳಿಯದಂತೆ ಪಡೆಯಬಹುದು. ಆದರೆ ಹ್ಯಾಕ್‌ ಮಾಡುವುದು ಹೇಗೆ ಎಂದು ತಿಳಿಸುವ ಮೊದಲು ಒಂದು ಮಾಹಿತಿಯನ್ನು ಖಚಿತಪಡಿಸಲು ಬಯಸುತ್ತೇವೆ. ಇತರರ ವಾಟ್ಸಾಪ್‌ ಖಾತೆಗಳನ್ನು ಅನುಮತಿ ಇಲ್ಲದೇ ಹ್ಯಾಕ್‌ ಮಾಡುವುದು, ಹೆಚ್ಚಿನ ಮಟ್ಟದಲ್ಲಿ ಅನೈತಿಕವು ಹಾಗೂ ಸಮಸ್ಯೆಯ ಚಟುವಟಿಕೆ ಆಗಿದೆ. ಆದರೆ ಸ್ನೇಹಿತರ ಖಾತೆಗಳನ್ನು ಅನುಮತಿ ಮೇರೆಗೆ, ಕಾರಣಗಳ ನಿಮಿತ್ತ ಹ್ಯಾಕ್‌ ಮಾಡಬಹುದು. ಆದರೆ ಗಿಜ್‌ಬಾಟ್‌ ಈ ಮಾಹಿತಿಯಿಂದ ಜರುಗುವ ಯಾವುದೇ ರೀತಿಯ ಘಟನೆಗಳಿಗೆ ಜವಾಬ್ದಾರಿ ಆಗಿರುವುದಿಲ್ಲ.

ವಾಟ್ಸಾಪ್‌(WhatsApp) ಖಾತೆ ಹ್ಯಾಕ್ ಮಾಡಿ, ಫೋಟೋ, ಮೆಸೇಜ್‌, ವೀಡಿಯೊಗಳ ಆಕ್ಸೆಸ್ ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಆಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ. ಇದಕ್ಕೆ ಕಾರಣ ತಿಳಿದಿರಬಹುದು. ಮುಂದೆ ಓದಿರಿ.

ನಿಮ್ಮ ಸ್ನೇಹಿತರ ಮ್ಯಾಕ್‌ (ಮೀಡಿಯಾ ಆಕ್ಸೆಸ್ ಕಂಟ್ರೋಲ್) ವಿಳಾಸ ಪಡೆಯಿರಿ

ನಿಮ್ಮ ಸ್ನೇಹಿತರ ಮ್ಯಾಕ್‌ (ಮೀಡಿಯಾ ಆಕ್ಸೆಸ್ ಕಂಟ್ರೋಲ್) ವಿಳಾಸ ಪಡೆಯಿರಿ

ನಿಮ್ಮ ಸ್ನೇಹಿತರ ವಾಟ್ಸಾಪ್ ಖಾತೆ ಹ್ಯಾಕ್ ಮಾಡಲು, ನಿಮ್ಮ ಸ್ನೇಹಿತರ ಸ್ಮಾರ್ಟ್‌ಫೋನ್ ಮ್ಯಾಕ್‌ ವಿಳಾಸವನ್ನು ತಿಳಿದುಕೊಳ್ಳಿ. ಮ್ಯಾಕ್‌ ವಿಳಾಸ ಪಡೆಯಲು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ Settings>>About Phone>>Status>>WiFi MAC address ಗೆ ಹೋಗಿ. ನಿಮ್ಮ ಸ್ನೇಹಿತರು ಆಪಲ್ ಐಫೋನ್ ಬಳಸುತ್ತಿದ್ದಲ್ಲಿ Settings>>General>>About>>WiFi address.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಮ್ಯಾಕ್‌ ವಿಳಾಸ ತಿಳಿದುಕೊಳ್ಳಿ.

ನಿಮ್ಮ ಸ್ಮಾರ್ಟ್‌ಫೋನ್ ಮ್ಯಾಕ್‌ ವಿಳಾಸ ತಿಳಿದುಕೊಳ್ಳಿ.

ನಂತರದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಮ್ಯಾಕ್‌ ವಿಳಾಸವನ್ನು ತಿಳಿದುಕೊಳ್ಳಿ. ಮೇಲೆ ತಿಳಿಸಿದ ಹಂತಗಳನ್ನೇ ನಿಮ್ಮ ಸ್ಮಾರ್ಟ್‌ಫೋನ್ ಮ್ಯಾಕ್‌ ವಿಳಾಸ ತಿಳಿಯಲು ಫಾಲೋ ಮಾಡಿ.

ನಿಮ್ಮ ಡಿವೈಸ್‌ ಮ್ಯಾಕ್‌ ವಿಳಾಸದಲ್ಲಿ, ನಿಮ್ಮ ಸ್ನೇಹಿತರ ಮ್ಯಾಕ್‌ ವಿಳಾಸವನ್ನು ಫಿಲ್ ಮಾಡಿ

ನಿಮ್ಮ ಡಿವೈಸ್‌ ಮ್ಯಾಕ್‌ ವಿಳಾಸದಲ್ಲಿ, ನಿಮ್ಮ ಸ್ನೇಹಿತರ ಮ್ಯಾಕ್‌ ವಿಳಾಸವನ್ನು ಫಿಲ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಮ್ಯಾಕ್ ವಿಳಾಸದ ಸ್ಥಳದಲ್ಲಿ, ನಿಮ್ಮ ಸ್ನೇಹಿತರ ಸ್ಮಾರ್ಟ್‌ಫೋನ್‌ನ ಮ್ಯಾಕ್‌ ವಿಳಾಸವನ್ನು ಟೈಪಿಸಿ. ನಂತರದಲ್ಲಿ ನಿಮ್ಮ ಸ್ನೇಹಿತರ ಡಿವೈಸ್‌ ಆಕ್ಸೆಸ್ ಪಡೆಯಬಹುದು.

ಮ್ಯಾಕ್‌ ವಿಳಾಸ ಬದಲಿಸುವುದು ಹೇಗೆ ಎಂದು ತಿಳಿಯಲು ಕ್ಲಿಕ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ಗೆ ವಾಟ್ಸಾಪ್‌ ಆಪ್‌ ಡೌನ್‌ಲೋಡ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ಗೆ ವಾಟ್ಸಾಪ್‌ ಆಪ್‌ ಡೌನ್‌ಲೋಡ್‌ ಮಾಡಿ

ಅಂತಿಮವಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ವಾಟ್ಸಾಪ್‌ ಆಪ್ ಅನ್ನು ಡೌನ್‌ಲೋಡ್ ಮಾಡಿ. ನಂತರ ವಾಟ್ಸಾಪ್‌ ಆಪ್‌ ಇನ್‌ಸ್ಟಾಲ್‌ ಮಾಡುವಾಗ ವೆರಿಫಿಕೇಶನ್ ಕೋಡ್‌ ನಿಮ್ಮ ಸ್ನೇಹಿತರ ಸ್ಮಾರ್ಟ್‌ಫೋನ್‌ಗೆ ಸೆಂಟ್‌ ಆಗುತ್ತದೆ. ಆ ಕೋಡ್‌ ಅನ್ನು ಎಂಟರ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ದಟ್ಸ್‌ ಇಟ್. ನಂತರ ನೀವು ನಿಮ್ಮ ಸ್ನೇಹಿತರ ಮೆಸೇಜ್‌, ಇಮೇಜ್‌, ವೀಡಿಯೊಗಳನ್ನು ಯಶಸ್ವಿಯಾಗಿ ನಿಮ್ಮ ಡಿವೈಸ್‌ಗಳಲ್ಲಿ ನೋಡಬಹುದು.

ಸೂಚನೆ: ಈ ಹ್ಯಾಕ್ ಟಿಪ್ಸ್‌ಗಳು ವಾಟ್ಸಾಪ್‌ನ ಲೇಟೆಸ್ಟ್ ವರ್ಸನ್‌ನಲ್ಲಿ ಅಭಿವೃದ್ದಗೊಂಡ ಸೆಕ್ಯುರಿಟಿ ಟೂಲ್‌ಗಳಿಂದ ವರ್ಕ್‌ ಆಗುವುದಿಲ್ಲ. ಅಲ್ಲದೇ ಈ ಹ್ಯಾಕ್‌ ಟಿಪ್ಸ್‌ಗಳನ್ನು ಅನೈತಿಕ ಮತ್ತು ಅಕ್ರಮ ಉದ್ದೇಶಗಳಿಗೆ ಬಳಸಬಾರದು. ಸಮಸ್ಯೆ ಕಾದಿಟ್ಟ ಬುತ್ತಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Hack WhatsApp to Get Access to Your Friend's Messages, Photos, and Videos. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot