ವಾಟ್ಸಾಪ್ ಲೇಟೆಸ್ಟ್ ವರ್ಸನ್ ಡೌನ್‌ಲೋಡ್‌ ಮಾಡಿ ವೀಡಿಯೊ ಕರೆ ಫೀಚರ್ ಪಡೆಯುವುದು ಹೇಗೆ?

Written By:

ವಿಶಾಲ ಸಂಖ್ಯೆಯ ಜನರು ಬಳಸುವ ವಾಟ್ಸಾಪ್ ಆಪ್‌ ಇತ್ತೀಚೆಗಷ್ಟೆ ವೀಡಿಯೊ ಕರೆ ಫೀಚರ್ ಅನ್ನು ಬಿಡುಗಡೆಗೊಳಿಸಿದೆ. ಆದರೆ ವಾಟ್ಸಾಪ್‌ ಬಳಸುವ ಬಹುಸಂಖ್ಯಾತರು ಮಾತ್ರ ಆಪ್‌ನಲ್ಲಿ ವೀಡಿಯೊ ಕರೆ ಫೀಚರ್‌ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ಹೇಳುತ್ತಿದ್ದಾರೆ.

ವೀಡಿಯೊ ಕರೆ ಫೀಚರ್‌ ವಾಟ್ಸಾಪ್‌ನ ಅಧಿಕೃತ ಆಪ್‌ನಲ್ಲಿ ಬಳಸಲು ಸಾಧ್ಯವಿಲ್ಲ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬೀಟಾ ವರ್ಸನ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಗಿಜ್‌ಬಾಟ್‌ನಲ್ಲಿ ಇತ್ತೀಚೆಗಷ್ಟೆ ವಾಟ್ಸಾಪ್‌ ಅಪ್‌ಡೇಟೆಡ್ APK v2.16.318 ವರ್ಸನ್‌ನಲ್ಲಿ ವೀಡಿಯೊ ಕರೆ ಫೀಚರ್‌ ಅನ್ನು ಉತ್ತಮವಾಗಿ ಬಳಸಬಹುದು ಎಂದು ಹೇಳಿದ್ದೆವು. ಆದರೆ APK v2.16.318 ವರ್ಸನ್ ಆಪ್‌ ಡೌನ್‌ಲೋಡ್‌ ಮತ್ತು ವೀಡಿಯೊ ಕರೆ ಫೀಚರ್‌ ಬಳಸುವಲ್ಲಿ ಹಲವು ಸಮಸ್ಯೆಗಳು ಇರುವ ಬಗ್ಗೆ ಹಲವರು ದೂರು ನೀಡಿದ್ದರು. ಆದ್ದರಿಂದ ಇಂದಿನ ಲೇಖನದಲ್ಲಿ ಸುಲಭವಾಗಿ ಲೇಟೆಸ್ಟ್ ವಾಟ್ಸಾಪ್‌(WhatsApp) ಆಪ್ ಡೌನ್‌ಲೋಡ್‌ ಮಾಡಿ ವೀಡಿಯೊ ಕರೆ ಬಳಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ ಮೆಸೇಂಜರ್ 2.16.318 ಆಪ್‌ ಡೌನ್‌ಲೋಡ್‌

ವಾಟ್ಸಾಪ್‌ ಮೆಸೇಂಜರ್ 2.16.318 ಆಪ್‌ ಡೌನ್‌ಲೋಡ್‌

ವಾಟ್ಸಾಪ್ ಇದವರೆಗೂ ತನ್ನ ಅಧಿಕೃತ ಆಪ್‌ಗೆ ವೀಡಿಯೊ ಕರೆ ಫೀಚರ್‌ ಅನ್ನು ಬಿಡುಗಡೆ ಮಾಡಿಲ್ಲ. ವೀಡಿಯೊ ಕರೆ ಫೀಚರ್‌ ಎಂಜಾಯ್‌'ಗಾಗಿ ಬಳಕೆದಾರರು ವಾಟ್ಸಾಪ್‌ ಮೆಸೇಂಜರ್ 2.16.318 APK ಅನ್ನು '9 Apps Apk Downloader' ಸಹಾಯದಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಆಪ್‌ ಇನ್‌ಸ್ಟಾಲ್‌ ಮಾಡಿ

ಆಪ್‌ ಇನ್‌ಸ್ಟಾಲ್‌ ಮಾಡಿ

ಆಪ್‌ ಡೌನ್‌ಲೋಡ್ ಆಗಲು ಕೆಲವು ಸಮಯ ತೆಗೆದುಕೊಳ್ಳಬಹುದು. ನಂತರ ಇನ್‌ಸ್ಟಾಲ್‌ ಮಾಡಿ ಬೀಟಾ ಆಪ್‌ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಓಪನ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ವೀಡಿಯೊ ಐಕಾನ್‌ ಮೇಲೆ ಕ್ಲಿಕ್ ಮಾಡಿ

ವೀಡಿಯೊ ಐಕಾನ್‌ ಮೇಲೆ ಕ್ಲಿಕ್ ಮಾಡಿ

ಆಪ್‌ ಓಪನ್‌ ಮಾಡಿದ ನಂತರ, ಮೊಬೈಲ್ ಸ್ಕ್ರೀನ್ ಟಾಪ್‌ನಲ್ಲಿ ಕಾಣುವ ವೀಡಿಯೊ ಐಕಾನ್ ಮೇಲೆ ಕ್ಲಿಕ್‌ ಮಾಡಿ. ನಂತರ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ವೀಡಿಯೊ ಕರೆ ಮಾಡಬಹುದು.

ನಿಮ್ಮ ಕಾಂಟ್ಯಾಕ್ಟ್‌ಗಳು ವಾಟ್ಸಾಪ್‌ ಮೆಸೇಂಜರ್ 2.16.318 ಆಪ್‌ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ

ನಿಮ್ಮ ಕಾಂಟ್ಯಾಕ್ಟ್‌ಗಳು ವಾಟ್ಸಾಪ್‌ ಮೆಸೇಂಜರ್ 2.16.318 ಆಪ್‌ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ

ವೀಡಿಯೊ ಕರೆ ಫೀಚರ್‌ ಬಳಸಲು ನಿಮ್ಮ ಕಾಂಟ್ಯಾಕ್ಟ್‌ಗಳು ಸಹ ವಾಟ್ಸಾಪ್‌ ಮೆಸೇಂಜರ್ 2.16.318 ಬೀಟಾ ವರ್ಸನ್‌ ಆಪ್‌ ಹೊಂದಿರಬೇಕು. ಆದ್ದರಿಂದ ಈ ಆಪ್‌ ಹೊಂದಿರುವ ಬಗ್ಗೆ ಖಚಿತಪಡೆದುಕೊಳ್ಳಿ. ಇತರೆ ವರ್ಸನ್ ಆಪ್‌ ಬಳಸುತ್ತಿದ್ದಲ್ಲಿ ಅವರಿಗೆ ವೀಡಿಯೊ ಕರೆ ಮಾಡಲು ಸಾಧ್ಯವಾಗುವುದಿಲ್ಲ.

ಅಡಚಣೆ ತಡೆಯಲು ಸ್ಥಿರ ಇಂಟರ್ನೆಟ್ ಕನೆಕ್ಷನ್ ಹೊಂದಿರಿ

ಅಡಚಣೆ ತಡೆಯಲು ಸ್ಥಿರ ಇಂಟರ್ನೆಟ್ ಕನೆಕ್ಷನ್ ಹೊಂದಿರಿ

ವಾಟ್ಸಾಪ್ ಮೆಸೇಂಜರ್ ಆಪ್ 2.16.318 ಆಪ್ ಇನ್‌ಸ್ಟಾಲ್ ಆದ ನಂತರವು ಸಮಸ್ಯೆ ಎದುರಿಸುತ್ತಿದ್ದಲ್ಲಿ, ಹಿಂದೆ ಹೋಗಿ ಇಂಟರ್ನೆಟ್ ಸಂಪರ್ಕದ ಬಗ್ಗೆ ಚೆಕ್‌ ಮಾಡಿ. ಉತ್ತಮ ಇಂಟರ್ನೆಟ್ ಸಂಪರ್ಕ ಅತ್ಯಗತ್ಯ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How to Download Latest Version of WhatsApp and Enjoy Video Calling. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot