ನಿಮ್ಮ ಆಧಾರ್ ಕಾರ್ಡ್‌ನಿಂದ ಎಷ್ಟು ಸಿಮ್‌ ಪಡೆಯಬಹುದು ಗೊತ್ತೆ?

|

ಹೊಸ ಸಿಮ್‌ ಕಾರ್ಡ್‌ ಖರೀದಿಸುವುದು ಈಗ ಕಷ್ಟದ ಕೆಲಸವೇನಲ್ಲ. ಆದರೆ ಸಿಮ್ ಪಡೆಯಲು ಆಧಾರ್ ಕಾರ್ಡ್‌ ಅಗತ್ಯ ಇದೆ. ಗ್ರಾಹಕರು ಆಧಾರ್ ಕಾರ್ಡ್‌ ನೀಡುವ ಮೂಲಕ ಸಿಮ್‌ ಕಾರ್ಡ್‌ ಅನ್ನು ಪಡೆಯಬಹುದಾಗಿದೆ. ಈಗಾಗಲೇ ಆಧಾರ್ ಕಾರ್ಡ್‌ ನೀಡಿ ಸಿಮ್ ಖರೀದಿಸಿದ್ದೇನೆ ಮತ್ತೆ ಹೊಸ ಸಿಮ್ ಕೊಡುತ್ತಾರಾ?, ಒಂದು ಆಧಾರ್ ಕಾರ್ಡ್‌ನಿಂದ ಎಷ್ಟು ಸಿಮ್ ಕಾರ್ಡ್ ಪಡೆಯಬಹುದು? ಇಂತಹ ಪ್ರಶ್ನೇಗಳು ಕೆಲವರಲ್ಲಿ ಮೂಡಿರುತ್ತವೆ.

ಅಧಾರ್

ಹೌದು, ಸಿಮ್ ಖರೀದಿಸಲು ಅಧಾರ್ ಕಾರ್ಡ್‌ ಅಗತ್ಯ ಸರಿ. ಆದರೆ ಒಂದು ಅಧಾರ್ ಕಾರ್ಡ್‌ನಿಂದ ಎಷ್ಟು ಸಿಮ್ ಪಡೆಯಬಹುದು ಎಂಬುದರ ಬಗ್ಗೆ ಅನೇಕರಿಗೆ ಗೊತ್ತಿರುವುದಿಲ್ಲ. ಹಾಗಾದರೇ ಟ್ರಾಯ್ ಪ್ರಕಾರ ಒಂದು ಆಧಾರ್ ಕಾರ್ಡ್‌ಗೆ ಎಷ್ಟು ಸಿಮ್ ಪಡೆಯಬಹುದು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಎಷ್ಟು ಸಿಮ್ ಪಡೆಯಬಹುದು?

ಎಷ್ಟು ಸಿಮ್ ಪಡೆಯಬಹುದು?

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಪ್ರಕಾರ, ಒಂದು ಆಧಾರ್ ಕಾರ್ಡ್‌ನೊಂದಿಗೆ ಒಟ್ಟು 18 ಸಿಮ್ ಕಾರ್ಡ್‌ಗಳನ್ನು ಪಡೆಯಬಹುದಾಗಿದೆ. ಈ ಮೊದಲು ಟ್ರಾಯ್ ಯ ನಿಯಮಗಳ ಪ್ರಕಾರ, ಒಂದು ಆಧಾರ್ ಕಾರ್ಡ್‌ನೊಂದಿಗೆ ಒಟ್ಟು 9 ಸಿಮ್ ಕಾರ್ಡ್‌ಗಳನ್ನು ಪಡೆಯಬಹುದಿತ್ತು. ಆದರೆ ಟ್ರಾಯ್ ಸಿಮ್ ಪಡೆಯುವ ಮಿತಿ ಹೆಚ್ಚಿಸಿದೆ. ಹೀಗಾಗಿ ಗ್ರಾಹಕರು 18 ಸಿಮ್ ಪಡೆಯಬಹುದು.

ಆಧಾರ್ ನೊಂದಿಗೆ ಎಷ್ಟು ಮೊಬೈಲ್‌ ನಂಬರ್ ಲಿಂಕ್ ಆಗಿವೆ ಚೆಕ್‌ ಮಾಡಿ

ಆಧಾರ್ ನೊಂದಿಗೆ ಎಷ್ಟು ಮೊಬೈಲ್‌ ನಂಬರ್ ಲಿಂಕ್ ಆಗಿವೆ ಚೆಕ್‌ ಮಾಡಿ

ಆಧಾರ್ ಸಂಖ್ಯೆಯೊಂದಿಗೆ ಎಷ್ಟು ಮೊಬೈಲ್ ನಂಬರ್ ಗಳನ್ನು ಲಿಂಕ್ ಮಾಡಲಾಗಿದೆ ಎಂದು ಗ್ರಾಹಕರು ತಿಳಿಯಬಹುದಾಗಿದೆ. ಈ ಮೂಲಕ ಬಳಕೆದಾರರು ಆಧಾರ್ ನಂಬರ್ ಅನ್ನು ಎಲ್ಲಿಯೂ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರ ವಹಿಸಬಹುದು.

ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ನಂಬರ್‌ಗಳು ಲಿಂಕ್ ಆಗಿವೆ ತಿಳಿಯಲು ಹೀಗೆ ಮಾಡಿ:

ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ನಂಬರ್‌ಗಳು ಲಿಂಕ್ ಆಗಿವೆ ತಿಳಿಯಲು ಹೀಗೆ ಮಾಡಿ:

ಹಂತ 1. ಮೊದಲು ಅಧಿಕೃತ ಆಧಾರ್ UIDAI ವೆಬ್‌ಸೈಟ್‌ ತೆರೆಯಿರಿ.
ಹಂತ 2. ನಂತರ ನೀವು ಮುಖಪುಟದಲ್ಲಿ ಗೆಟ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3. ಇದರ ನಂತರ ಡೌನ್‌ಲೋಡ್ ಆಧಾರ್ ಕ್ಲಿಕ್ ಮಾಡಿ.
ಹಂತ 4. ತದ ನಂತರ ಇಲ್ಲಿ ನೀವು View More ಆಯ್ಕೆಯನ್ನು ನೀಡುತ್ತೀರಿ
ಹಂತ 5. ಆ ನಂತರ ನೀವು ಆಧಾರ್ ಆನ್‌ಲೈನ್ ಸೇವೆಗೆ ಹೋಗಿ ಆಧಾರ್ ದೃಢೀಕರಣ ಇತಿಹಾಸಕ್ಕೆ ಹೋಗಿ.
ಹಂತ 6. ಈಗ ಇಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಲ್ಲಿ Where can a resident chech/ Aadhaar Authentication History ಯಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಧಾರ್

ಹಂತ 7. ಆಗ ಹೊಸ ಇಂಟರ್ಫೇಸ್ ನಿಮ್ಮ ಮುಂದೆ ತೆರೆಯುತ್ತದೆ.
ಹಂತ 8. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ. ಈಗ ನಿಮ್ಮ ಸಂಖ್ಯೆಗೆ OTP ಕಳುಹಿಸು ಕ್ಲಿಕ್ ಮಾಡಿ.
ಹಂತ 9. ಆಗ ನೀವು ಆಲ್ ಆನ್ ದೃಢೀಕರಣ ಪ್ರಕಾರವನ್ನು ಆಯ್ಕೆ ಮಾಡಿ.
ಹಂತ 10. ನೀವು ಅದನ್ನು ನೋಡಲು ಬಯಸುವ ಕಾರಣ ಇಲ್ಲಿ ನೀವು ಸಂಖ್ಯೆಯನ್ನು ನಮೂದಿಸಿ.
ಹಂತ 11. ಆಗ ನೀವು ಎಷ್ಟು ದಾಖಲೆಗಳನ್ನು ನೋಡಲು ಬಯಸುತ್ತೀರಿ ಎಂಬುದನ್ನು ನಮೂದಿಸಿ.
ಹಂತ 12. ಆಗ ನೀವು OTP ನಮೂದಿಸಿ ಮತ್ತು ವೆರಿಫೈ OTP ಕ್ಲಿಕ್ ಮಾಡಿ.
ಹಂತ 13. ಇದರ ನಂತರ ಹೊಸ ಇಂಟರ್ಫೇಸ್ ನಿಮ್ಮ ಮುಂದೆ ತೆರೆಯುತ್ತದೆ.

Most Read Articles
Best Mobiles in India

English summary
How many SIMs can you get from your Aadhaar card.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X